ಸೋಷಿಯಲ್ ಮೀಡಿಯಾ ಕಮೆಂಟ್ಸ್ ಗಳಿಂದ ಧರ್ಮವು ಉದ್ಧಾರ ವಾಗದು. ಅದರಿಂದ ದೂರವಿರಿ

ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು


ಜೂನ್ ಹದಿನಾಲ್ಕರ ದಿನ ಬೆಳಗಾಗುತ್ತಲೇ ಲಂಡನ್ ನಗರದಾದ್ಯಂತ ಮೊಳಗಿದ ಶಬ್ದ " ಥ್ಯಾಂಕ್ಸ್ ಟು ರಮದಾನ್ ಥ್ಯಾಕ್ಸ್ ಟು ಮುಸ್ಲಿಮ್ ''

ಹೌದು ಮುಂಜಾವಿನ ಸಮಯ ಲಂಡನಿನ ಗ್ರೆನ್ಫಲ್ ಬ್ರಹತ್ ವಸತಿ ಸಮುಚ್ಚಯದಲ್ಲಿ ನೂರಾರು ಮಂದಿ  ಸುಖ ನಿದ್ದೆಯಲ್ಲಿದ್ದರು.ಕಟ್ಟಡಕ್ಕೆ ಬೆಂಕಿ ಬಿದ್ದು ಧಗಧಗ ಉರಿಯುತ್ತಿದ್ದರೂ ಯಾರಿಗೂ ಗೊತ್ತಾಗಲಿಲ್ಲ.ಪಕ್ಕದಲ್ಲಿರುವ ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಹೊರ ಬರುತ್ತಿರುವ ಮುಸ್ಲಿಂ ಯುವಕರು ಬೆಂಕಿಯನ್ನು ಕಂಡದ್ದೇ ತಡ ವಸತಿಯತ್ತ ಧಾವಿಸಿ ಆಲಾರಂ ಹೊಡೆದು ಬೊಬ್ಬೆ ಹಾಕಿ ಎಬ್ಬಿಸಿದರು  ಅರ್ಧ ನಿದ್ದೆಯಿಂದ್ದೆದ್ದು ಗಾಬರಿಯಿಂದ ಬರುವ ಜನರ ಉಳಿಸಿಕೊಳ್ಳಲು ನೆರವಾದರು.ಆದರೂ ಅಷ್ಟರಲ್ಲೇ ಹನ್ನೆರಡು ಜೀವಗಳು ಬೆಂಕಿಗೆ ಅಹುತಿಯಾಗಿತ್ತು.ಬದುಕುಲಿದವರು
ಅವಾಗ ತೆಗೆದ ಉದ್ಗಾರವೇ ರಮದಾನಿಗೂ ಮುಸ್ಲಿಮರಿಗೂ ಹೃದಯ ತುಂಬಿದ ಕೃತಜ್ಞತೆಯ ಸುರಿಮಳೆ.
ಲಂಡನಿಗೆ ಲಂಡನೇ ಎದ್ದು ನಿಂತು ಗೌರವ ಕೊಟ್ಟಿತು.
ಬೆಳಗ್ಗಿನ ಆದಾನ್ (ಬಾಂಗ್)ಯಾರಿಗೂ ಕಿರಿಕಿರಿಯಾಗಲಿಲ್ಲ ಅದು ಜೀವ ಉಳಿಸಿದ ಧ್ವನಿಯಾಯಿತು.
ಇಂತಹಾ ಜನ ಜಗ ಮೆಚ್ಚುವ ಕಾರ್ಯ ಮುಸ್ಲಿಮರು ಮಾಡಬೇಕು.ಅಲ್ಲಾಹನು ಹೇಳುತ್ತಾನೆ ಒಳಿತನ್ನು ಮಾಡಿದವನಿಗೆ ಒಳಿತಿನ ಪ್ರತಿಫಲ ವಿದೆ.ಅದಕ್ಕಿಂತ ಜಾಸ್ತಿ (ಅಲ್ಲಾಹನ ದರ್ಶನ ವೂ) ಇದೆ  ಪ್ರಯಾಸ ಮತ್ತು ಅಪಮಾನ ಅವರ ಮುಖದಲ್ಲಿ ಆವರಿಸದು. ಅವರು ಸ್ವರ್ಗದಲ್ಲಿ ಕಾಲಕಾಲದಲ್ಲಿ ವಾಸಮಾಡುವರು.(ಯೂನುಸ್ 26:27
ಕೆಲವು ಮುಖ ಗಳು ಪ್ರಸನ್ನವೂ ಅಲ್ಲಾಹನ ನ್ನು ನೋಡುತ್ತಿರುತ್ತದೆ ಅಲ್ ಖಿಯಾಮ 23
ಒಳಿತು ಕೆಡುಕು ಸರಿಸಮಾನವಲ್ಲ. ಒಳಿತಿನಿಂದ ಕೆಡುಕನ್ನು ತಡೆಯಿರಿ. ಅವಾಗ ನಿನ್ನ ಮತ್ತು ಆತನ ಮದ್ಯೆ ವೈರ ವಿದ್ದರೂ ಪರಸ್ಪರ ಆಪ್ತ ಮಿತ್ರರಾಗುವಿರಿ.
ಮುಸಲ್ಮಾನ ಯಾವತ್ತು ಕೆಡುಕನ್ನು ಮಾಡಲಾರನು. ಒಂದು ವೇಳೆ ಆತ ಮಾಡಿದರೆ ಆತ ನೈಜ ಮುಸಲ್ಮಾನನೂ ಆಗಲಾರ.
ರಸೂಲರು ಹೇಳುತ್ತಾರೆ ಎಲ್ಲರೂ ಪ್ರತಿದಿನ ದಾನ ಮಾಡಬೇಕು.
ಆಗ ಅಬೂದರ್ರ್  ( )ಪ್ರಶ್ನೆ ಮಾಡುತ್ತಾರೆ ಎಲ್ಲಿಂದ ನಾವು ದಾನ ಮಾಡೋದು? ನಮ್ಮಲ್ಲಿ ಸೊತ್ತು ಇಲ್ಲವಲ್ಲಾ.?
ರಸೂಲರು () ಉತ್ತರಿಸುತ್ತಾರೆ,
ಅಲ್ಲಾಹನನ್ಮು ಸ್ತುತಿಸಿವುದು,ಪಶ್ಚಾತ್ತಾಪ ಪಡೋದು,ಒಳತಿನ ಉಪದೇಶ ಮಾಡೋದು ,ಕೆಡುಕನ್ನು ತಡೆಯೋದು,ದಾರಿ ಯಲ್ಲಿರುವ ಮುಳ್ಳು ಕಲ್ಲನ್ನು ತೆಗೆಯೋದು,ಕಣ್ಣು ಕಾಣಿಸಿದ ವ್ಯಕ್ತಿಗೆ ದಾರಿ ತೋರೋದು,ಮೂಕ ಕಿವುಡನನ್ನು ತಾಳ್ಮೆಯಿಂದ ಆಲಿಸುವುದು,ಬಲಿಷ್ವವಾದ ಕಾಲುಗಳಿಂದ ಅಸಹಾಯಕನ ಸಹಾಯಕ್ಕೆ ಶ್ರಮಿಸುವುದು,ಗಟ್ಟಿ ರಟ್ಟೆಯನ್ನು ದುರ್ಬಲರ ರಕ್ಷಣೆಗೆ ಉಪಯೋಗಿಸೋದು.ಇದು ನಿಮ್ಮಿಂದ ಮಾಡಬಹುದಾದ ದಾನವಾಗಿದೆ.(ನಸಾಯಿ: ಕಿತಾಬುಲ್ ಕುಬ್ರಾ)
ರಸೂಲರು ವಿವರಿಸುತ್ತಾರೆ,
ಜನರಿಗೆ ಹೆಚ್ಚು ಉಪಕಾರ ಮಾಡುವವನು ಅಲ್ಲಾಹನಿಗೆ ಇಷ್ಟಪಟ್ಟವನಾಗಿರುತ್ತಾನೆ.ಅಲ್ಲಾಹನಿಗೆ ಅತ್ಯಂತ ಇಷ್ಟಪಟ್ಟ ಕರ್ಮ ಒಬ್ಬರಿಗೆ ಸಂತಸವನ್ನು ಕೊಡುವುದಾಗಿದೆ.ಆತನ ತೊಂದರೆ ನೀಗಿಸೋದು ಅಥವಾ ಸಾಲ ತೀರಿಸೋದು,ಇಲ್ಲವೇ ಹಸಿವನ್ನು ನೀಗಿಸೋದು.ನನ್ನ ಮಸೀದಿಯಲ್ಲಿ ಒಂದು ತಿಂಗಳು ಇಅ್ ತಿಕಾಫ್ (ಭಜನೆ) ಕೂರುವುದರ ಬದಲು ಒಬ್ನನ ಸಹಾಯಕ್ಕಾಗಿನಡೆಯುವುದು ನನಗಿಷ್ಟವಾಗಿದೆ.ಕೋಪವನ್ನು ಸಹಿಸಿದರೆ ಅಲ್ಲಾಹನು ತನ್ನ ನ್ಯೂನತೆಗಳನ್ನು ಮರೆಮಾಚುತ್ತಾನೆ.ಕ್ರೋಧವನ್ನು ತಡೆದರೆ ಹೃದಯ ದಲ್ಲಿ ಅಲ್ಲಾಹನು ತೃಪ್ತಿ ಯನ್ನು ಕೊಡುತ್ತಾನೆ. ಮಿತ್ರನ ಆವಶ್ಯಕತೆ ಗಾಗಿ ನಡೆದರೆ ನರಕದ ಮೇಲಿನ ಸ್ವೀರಾತ್ (ಸೇತುವೆ)ಯನ್ನು ದಾಟುವಾಗ ಕಾಲುಗಳನ್ನು ಬಲಪಡಿಸುತ್ತಾನೆ.ಕೆಟ್ಟ ಸ್ವಭಾವ ಜೇನು ತುಪ್ಪ ದಲ್ಲಿ ಹುಳಿ ಹಿಂಡಿದಂತೆ ಪುಣ್ಯವನ್ನು ಹಾಳುಮಾಡುತ್ತದೆ
ನಮ್ಮಲ್ಲಿ ಹಲವರು ಮೇಲಿಂದಮೇಲೆ ಉಂರ ಯಾತ್ರೆ ಕೈಗೊಳ್ಳುತ್ತಾರೆ ಆದರೆ ತನ್ನ ಗಮನಕ್ಕೆ ಬಂದ ಯಾವದೇ ಅಸಹಾಯಕರಿಗಾಗಲಿ ಅನಾಥರಿಗಾಗಲಿ ಚಿಕ್ಕಾಸು ಸಹಾಯ ಮಾಡಲರರು ಆದರೆ ಮದೀನ ಮಸೀದಿಯಲ್ಲಿ,ರೌಳಾ ಶರೀಪಿನಲ್ಲಿ ತಂಗಲು ಸಾಹಸವನ್ನೇ ಮಾಡುತ್ತಾರೆ.
ಹಝ್ರತ್ ಸಿದ್ದೀಖ್ () ರವರು ಗೋತ್ರದ ಮಂದಿಗೆ ಹಾಲು ಕರೆದು ಕೊಡುತ್ತಿದ್ದರು.ಖಲೀಫ ಸ್ಥಾನ ವನ್ನು ಅಲಂಕರಿಸಿದಾಗ ಗೋತ್ರದ ಮಹಿಳೆಯು ನೀವು ಈಗ ಖಲೀಫರಾಗಿರುವಿರಿ ಆದ್ದರಿಂದ ನೀವು ಇನ್ನುಮುಂದೆ ಇದನ್ನು ನಿಲ್ಲಿಸಬೇಕೆಂದು ಹೇಳುತ್ತಾರೆ.
ಅದಕ್ಕುತ್ತರವಾಗಿ ಖಲೀಫಾ ಹೇಳುತ್ತಾರೆ ನನಗೆ ಸಿಕ್ಕ ಸ್ಥಾನ ನನ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ!.
 ಸ್ವಹಾಬಿಗಳಾದ ಅಬೂ ವಾಯಿಲ್ () ನೆರೆಯ ಅಸಹಾಯಕ ವೃದ್ದೆಯರಿಗೆ ಅತ್ಯಾವಶ್ಯಕ ವಸ್ತುಗಳನ್ನು ತಲುಪಿಸುತ್ತಿದ್ದರು.
ಪ್ರವಾದಿ ಮೊಮ್ಮಗ ಹಝ್ರತ್ ಹುಸೈನ್ () ಮಗನಾದ ಅಲಿಯ್ಯಿ ( )ಸಯ್ಯಿದ್ ಕುಟುಂಬ ನಾಯಕರು ಮನೆಯಲ್ಲಿ ರೊಟ್ಟಿ ಯನ್ನು ಮಾಡಿ ರಾತ್ರಿ ಹೊತ್ತಲ್ಲಿ ಯಾರಿಗೂ ತಿಳಿಯದಂತೆ ಹಸಿದವರ ಮತ್ತು ಬಡವರ ಮನೆ ತಟ್ಟಿ ಆಹಾರ ಕೈ ಗಿಟ್ಡು ಬರುತ್ತಿದ್ದರು .ಅದು ಯಾರು ಎಂದು ಯಾರಿಗೂ ತಿಳಿದಿರಲಿಲ್ಲ.ಅವರ ಮರಣದ ಮರುದಿನ ರೊಟ್ಟಿ ಕಟ್ಟು ಕಾಣದಾದಾಗ ಗೊತ್ತಾದದ್ದು ತಮಗೆ ಅನ್ನ ಕೊಡುತ್ತಿದ್ದವರು ಮಹಾನುಭಾವರೆಂದು.
ರಮಾಳಾನಿನ ಪ್ರಯುಕ್ತ ಅನೇಕ ರಿಲೀಫ್ ಗಳು ನಡೆಯುತ್ತಲಿದೆ.ನಮ್ಮ ಚೊಕ್ಕಬೆಟ್ಡುವಿನಲ್ಲೇ  ಎಸ್ ಎಸ್ ಗ್ರೂಪ್ ನವರು ನೂರಾರು ರಂಝಾನ್ ಕಿಟ್ ವಿತರಿಸಿದ್ದಾರೆ.ನಮ್ಮ ಊರಿನ
ಬೇರೆ ಉದ್ಯಮಿಗಳೂ ಊರಿನ ಹೊರಗೆ ಹಳ್ಳಿ ಪ್ರದೇಶದಲ್ಲಿ ಅತ್ಯಂತ ಬಡ ಕುಟುಂಬಗಳಿಗೆ ಬೆಳ್ತಂಗಡಿ ,ಚಾರ್ಮಾಡಿ ಕಡೆ ಸದ್ದಿಲ್ಲದೇ ಕಿಟ್ ವಿತರಣೆ ಮಾಡಿದ್ದಾರೆ.ಮಂಗಳೂರಿನ ಪ್ರಸಿದ್ದ ಸೇವಾ ಸಂಸ್ಥೆ ಟ್ಯಾಲೆಂಟ್ ಆಸ್ಪತ್ರೆಯ ಲ್ಲಿರುವ ರೋಗಿಗಳಿಗೆ ವಸ್ತ್ರ ವಿತರಣೆ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ಯಾವುದೇ ಪ್ರಚಾರ ಬಯಸದ ಇಂತಹಾ ಕಾರ್ಯಗಳು ಇಸ್ಲಾಮಿಗೆ ಹೆಚ್ಚು ಗೌರವ ತರುವಂತಹುದಾಗಿದೆ.
ವಿಷಾದ ವಿಚಾರವೇನೆಂದರೆ ಸೋಷಿಯಲ್ಲಿ ಮೀಡಿಯಾಗಳಲ್ಲಿ ಅನೇಕ ಮಂದಿ ಅಶ್ಲೀಲ ಬೈಗುಳ, ತೀರಾ ಕೆಲಮಟ್ಟದ ಕಮೆಂಟ್ಸಗಳನ್ನು ಹರಿಯಬಿಡೋದು ರೂಢಿಯಾಗಿಸಿದ್ದಾರೆ ಅದು ಯಾವತ್ತೂ ಇಸ್ಲಾಮಿಗೆ ಶೋಭೆಯಲ್ಲ.ಯಾರೋ ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ಏನೆಲ್ಲಾ ಗೀಚಿದರೆ ಅನ್ಯ ಕೋಮಿನ ಸುಸಂಸ್ಕೃತ ಮಂದಿ ಇಸ್ಲಾಮನ್ನು ತಪ್ಪಾಗಿ ಅರ್ಥೈಸಬಹುದು.
ಅದು ಇಸ್ಲಾಮಿನ ಸಂಸ್ಕಾರವೆಂದು ತಿಳಿಯಲೂ ಬಹುದು.
ಯಾವ ಧರ್ಮದವರಾಗಲಿ ಕೆಡುಕು ದ್ವೇಷ ಮೂಲಕ ಅವರ ಧರ್ಮವನ್ನು ಜಾಗ್ರತಿ ಮಾಡಲಾರರು.ಧರ್ಮಜಾಗ್ರತಿ ನಂಬಿಕೆಯಿಂದ ಮಾತ್ರ ಬಾಳುತ್ತದೆ ಅದನ್ನು ಬಲವಂತವಾಗಿ ಹೇರಲಾಗದು.ಹಾಗೇನಾದರೂ ಮಾಡಿದರೆ ಅದು ಹೆಚ್ಚು ಕಾಲ ಬಾಳಿಕೆಯೂ ಬಾರದು.
ಮಹನೀಯರು ತೋರಿದ ಆದರ್ಶ ನಮ್ಮದಾಗಬೇಕು. ಹಝ್ರತ್ ನಿಝಾಮುದ್ದೀನ್ ( )ರಾತ್ರಿಯಲ್ಲಿ ದೆಹಲಿಯ ಬೀದಿ ಬದಿ ಚಳಿಗೆ ನಡುಗುವ ಮಂದಿಯ ಬಾಯಿಗೆ ರೊಟ್ಡಿ ತುಂಡನ್ನು ಇಟ್ಡು ಬರುತ್ತಿದ್ದರು.ಹಝ್ರತ್ ನಿಝಾಮುದ್ದೀನ್ ರೈಲು,ಊರು ಸುಪರಿಚಿತವಾಗಿದೆ. ಅದೇ ಹೆಸರಲ್ಲಿ  ದೆಹಲಿಯ ಪಕ್ಕದಲ್ಲಿ ಪ್ರಸಿದ್ದ ದರ್ಗಾವೂ ಇದೆ.   ಹೆಸರು ಭಾರತದ ಸುಂದರ ಇತಿಹಾಸದಲ್ಲಿ ಅಮರ ನಾಮವಾಗಿದೆಶಹೀದೇ ಮಿಲ್ಲತ್ ಪತಹ್ ಅಲಿ ಟಿಪ್ಪೂ ದೇವಸ್ಥಾನ ದ್ವಂಸಕರನ್ನು ಮಟ್ಟಹಾಕಿದ್ದು ಚರಿತ್ರೆಯ ಭಾಗ.ಅವರು ಭಕ್ತಿಯಲ್ಲೂ ಕಮ್ಮಿ ಇರಲಿಲ್ಲ.ಮಸೀದಿಯ ಉದ್ಘಾಟನೆಯನ್ನು ಮಂಜಾವಿನ ಸುಬಹಿ ನಮಾಜು ಖಳಾ ಆಗದವರು  ನಿರ್ವಹಿಸಬೇಕೆಂಬ ಷರತ್ತಿಗೆ ಟಿಪ್ಪೂ ಸುಲ್ತಾನ್ ಅವರಲ್ಲದೇ ಬೇರೆ ಯಾರೂ  ಅಲ್ಲಿ ಇರಲಿಲ್ಲ.ಭಾರತದ ಚರಿತ್ರೆಯಲ್ಲಿ ಸಾತ್ವಿಕ ಅವುಲಿಯಾರ ಪಾತ್ರ ಮಹತ್ತರವಾದದ್ದು. ದಾರಿಯೇ ದೇಶದಲ್ಲಿ ಶಾಂತಿ ಸಮಾಧಾನ ನೆಮ್ಮದಿ ಯನ್ನು ತರಬಲ್ಲುದು.ಅದೆಲ್ಲವೂ ಪ್ರವಾದಿ ಮತ್ತು ಅನುಚರರ ಮಾರ್ಗವಾಗಿದೆ.
ಹಝ್ರತ್ ಉಮರ್ ರವರು ಜನರ ಅಹವಾಲು ಅರಿಯಲು ಹೊರಟಿದ್ದರು ಮದ್ಯರಾತ್ರಿಯಲ್ಲಿ.
ದೂರದಲ್ಲಿ  ಬೆಂಕಿಯನ್ನು ಕಂಡು ಅಲ್ಲಿಗೆ ತೆರಳುತ್ತಾರೆಹೆಂಗಸೊಬ್ಬಳು ಹಸಿವಿಗೆ ಮಕ್ಕಳಿಗೆ ಏನನ್ನೂ ಕೊಡಲಾಗದೇ ಕಂಗಾಳಾಗಿ ಬರೀ ನೀರು ಕಾಯಿಸುತ್ತಾ ಮಕ್ಕಳು ನಿದ್ದೆ ಹೋಗಳೆಂದು ಕಾಯುತ್ತಿದ್ದಳು.
ಇದನ್ನು ಕಂಡ ಖಲೀಫಾ ಮನ ಕರಗಿತು.ಸೀದಾ ಮನೆಗೆ ಬಂದು ರಾತ್ರಿಯ ಹೊತ್ತಿನಲ್ಲಿ ರೊಟ್ಟಿಯ ಕಟ್ಟನ್ನು ಎತ್ತಿ ಹಸಿದಿರುವ  ಮಕ್ಕಳ ಕಡೆ ಹೋಗುತ್ತಾರೆ. ಮಕ್ಕಳ ಹೊಟ್ಟೆ ತುಂಬಾ ತಿಂದು ನಗುವತ್ತಿರುವ ಆನಂದವನ್ನು ಕಂಡು ಮರಳುತ್ತಾರೆ.
 ಇಂತಹಾ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ನಾವು ಪ್ರಕಟಗೊಳಿಸಬೇಕಾಗಿದೆ.ಆದ್ದರಿಂದ  ಸೋಷಿಯಲ್ ಕಮೆಂಟ್ಸ್ ಗಳಿಂದ ಸಮುದಾಯದ ಎಲ್ಲರೂ ದೂರವಿರಬೇಕೆಂದು ಬಯಸುತ್ತೇನೆ.ಅದರಿಂದ ಧರ್ಮಕ್ಕೆ ಯಾವ ಲಾಭವೂ ಸಿಗದು.

ಮುಸಲ್ಮಾನನ ಮೌಲ್ಯ ಏರುವುದು ವಿನಯ ಮತ್ತು ಜನಸೇವೆಯಿಂದಾಗಿದೆ. ಹಾಗೇ ಯೋಗ್ಯತೆ ಜಾಸ್ತಿಯಾಗುವುದು ಅಲ್ಲಾಹನನ್ನು ಮತ್ತು ಜನರನ್ನು ಅರಿತುಕೊಂಡಾಗ ಮಾತ್ರವಾಗಿದೆ.

ಜಗದೊಡೆಯನ ದಾಸನಾಗು ಜಗವೆಲ್ಲವೂ ಅವನದೇ.ಒಡೆಯನ ಎಲ್ಲವೂ ದಾಸನಿಗೆ ಸಲ್ಲುತ್ತದೆ. ಆಗ ಜಗವೇ ನಿನ್ನದು

ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ (ಕೊಯ್ಯೂರು) ಚೊಕ್ಕಬೆಟ್ಟು

ನಾವು ಯಾವತ್ತಾದರು ಸಂಕಟದಲ್ಲಿ ಸಿಕ್ಕಿಹಾಕಿಕೊಂಡಾಗ ನಮ್ಮ ಸಹಾಯಕ್ಕೆ ಬಂದವರನ್ನು ನಾವು ಮರೆಯೋದು ಕಮ್ಮಿ..ವಾಹನ ಅಪಘಾತ ನಡೆದಾಗ,ಅಥವಾ ಕೆಟ್ಟು ನಿಂತಾಗ,ಇಲ್ಲವೇ ಪರ್ಸ್ ಮರೆತು ಬಸ್ಸಲ್ಲಿ ಟಿಕೇಟಿನ ಹಣ ಕೊಡಲು ಪರದಾಡಿದಾಗ,ರಾತ್ರೋರಾತ್ರಿ ತುಂಬು ಗರ್ಭಿಣಿ ಯನ್ನು ಅಥವಾ ಹೃದಯಾಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸುವ ಸಂದರ್ಭ ಬಂದಾಗ ಸಹಾಯಕ್ಕೆಂದು ಬಂದವರನ್ನು ನಾವು ಸದಾ ನೆನೆಯುತ್ತೇವೆ. ಅವರನ್ನು ಫ್ಯಾಮಿಲಿ ಫ್ರೆಂಡ್ ಗಳಾಗಿ ಒಡನಾಟ ಇಟ್ಟು ಕೊಂಡಿರುತ್ತೇವೆ.
ಆದರೆ ತಾಯಿಯ ಹೊಟ್ಟೆಯ ಕತ್ತಲಲ್ಲಿ ನಮ್ಮನ್ನು ಸೃಷ್ಟಿಸಿ ಕುಂದುಕೊರತೆಗಳಿಲ್ಲದೇ ಸುರಕ್ಷಿತವಾಗಿ ಭೂಮಿಗೆ ತಂದು, ಅನ್ನ,ಆರೈಕೆ,ಆಸರೆ,ಪ್ರೀತಿ ಕರುಣೆ ಕೊಡುವ ಹೆತ್ತವರನ್ನೂ ನೀಡಿ, ಬೆಳೆಸಿ ಆರೋಗ್ಯ,ಶಕ್ತಿ ಸೊತ್ತು ಎಲ್ಲವನ್ನೂ ದಯೆಪಾಲಿಸಿದ ಅಲ್ಲಾಹನನ್ನು ನಾವು ಎಷ್ಟು ನೆನಪಿಸಿಕೊಳ್ಳುತ್ತೇವೆ?

ನೆಬಿಯವರಲ್ಲಿ ನಿಮಗೆ ಉತ್ತಮ ಮಾದರಿ ಇದೆ ಎಂದು ಕುರಾನ್ ಹೇಳುತ್ತದೆ

 ರಸೂಲ್ ಸ ರವರ ಬದುಕಿನ ಕೆಲವು ಘಟನೆಗಳನ್ನು ಅವಲೋಕಿಸಿದಾಗ !

ಹಝ್ರತ್ ಪ್ರವಾದಿ (ಸ) ಕಾಲುಗಳೆರಡೂ ಬಾತುಕೊಂಡು ನೋಯುತ್ತಿದ್ದರೂ ರಾತ್ರಿ ಹೊತ್ತಲ್ಲಿ ಪ್ರಾರ್ಥನೆ ಯಲ್ಲಿ ನಿರತರಾಗಿದ್ದರು.
ಇದನ್ನು ಪ್ರಶ್ನಿಸಿದ ಬೀವಿ ಆಯಿಷಾ (ರ)ರೊಂದಿಗೆ ನಬಿ (ಸ)ಉತ್ತರಿಸದ್ದು !
ನಾನು ಅಲ್ಲಹನಿಗೆ ಕೃತಜ್ಞತೆ ತೋರುವ ದಾಸನಾಗಬೇಡವೇ?

ಉಹುದು ಪರ್ವತ ದಷ್ಟು ಬಂಗಾರವು ನನ್ನಲ್ಲಿದ್ದು ಮೂರು ದಿನಗಳು ಕಳೆದಾಗ ಸಾಲ ಕೊಡಲು ತೆಗೆದಟ್ಟದ್ದಲ್ಲದ ಒಂದೇ ಒಂದು ದೀನಾರ್ ನನ್ನ ಬಳಿ ಉಳಿದು ಕೊಳ್ಳುವುದನ್ನು ನಾನು ಇಷ್ಟ ಪಡುವುದಿಲ್ಲ.

ಅಬು ದರ್ ದಾಃ ಹೇಳುತ್ತಾರೆ:
ನಾವು  ರಸೂಲರೊಂದಿಗೆ ಯಾತ್ರೆಯಲ್ಲಿದ್ದೆವು. ಬಿಸಿಲಿನ ತಾಪಕ್ಕೆ ನಮ್ಮ ಕೈಯನ್ನು ರಸೂಲರ ತಲೆ ಮೇಲೆ ಇಡುತ್ತಿದ್ದೆವು.ನಮ್ಮಲ್ಲಿ ಯಾರೂ ಉಪವಾಸ ಮಾಡದಿದ್ದರೂ ರಸೂಲರು ಉಪವಾಸವಿದ್ದರು
ಅಲಿಯ್ಯಿ (ರ) ಹೇಳುತ್ತಾರೆ:
ಬದ್ರ್ ಯುದ್ಧ ವೇಳೆ ನಮ್ಮಲ್ಲಿ ಎಲ್ಲರೂ ನಿದ್ದೆಗೆ ಜಾರಿದ್ದರು. ರಸೂಲರು (ಸ) ಒಂದು ಮರದ ಕೆಳಗೆ ನಮಾಜು ಮಾಡುತ್ತಾ ಅತ್ತು ಪ್ರಾರ್ಥಿಸುತ್ತಿದ್ದರು.
ಆಯಿಷಾ ಬೀವಿ ವಿವರಿಸುತ್ತಾರೆ:
ರಾತ್ರಿ ಹನ್ನೊಂದು ರಕಾತ್ತು ನಮಾಜು ಮಾಡುತ್ತಿದ್ದರು.ಒಂದು ಸುಜೂದಿನಲ್ಲಿ ಸುಮಾರು ಐವತ್ತು ಆಯತ್ತುಗಳನ್ನು ಓದುವಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದ್ದರು.

ಒಂದು ದಿನ ಹಸಿದಾಗ ಕಲ್ಲೊಂದನ್ನು ಹೊಟ್ಟೆಯ ಭಾಗದಲ್ಲಿ ಕಟ್ಟಿ ಹೇಳುತ್ತಾರೆ ಈ ಲೋಕದಲ್ಲಿ ಸುಖ ಜೀವನ ನಡೆಸಿದ ಅನೇಕ ಮಂದಿ ಅಂತ್ಯ ದಿನದಲ್ಲಿ ಹಸಿದವರಾಗಿರುತ್ತಾರೆ
ನೆಬಿ ಹೇಳುತ್ತಾರೆ ನಾನು ಹೆಚ್ಚು ಅಲ್ಲಾಹನನ್ನು ಭಯಪಡುವವನೂ ಭಯ ಭಕ್ತಿ ತೋರುವವನಾಗಿದ್ದೇನೆ.
ರಸೂಲರು  ಅಲ್ಲಾಹನಿಗೆ ಒಳ್ಳೆಯ ದಾಸನಾಗುವ ವಿಧಾನವನ್ನು ತೋರಿಕೊಟ್ಟಿದ್ದಾರೆ.
ಕುರಾನ್ ಹೇಳುತ್ತದೆ.
ಈಸಾ (ಅ) ಮತ್ತು ಮಲಕ್ಕುಗಳು ಅಲ್ಲಾಹನ ದಾಸನಾಗಲು ಲಜ್ಜೆ ಪಡುವುದಿಲ್ಲ.
ಒಟ್ಟಿನಲ್ಲಿ ನಾವು ಅಲ್ಲಾಹನ ದಾಸನಾಗಬೇಕಾಗಿದೆ.
ಅಲೆಕ್ಸಾಂಡರ್ ಯಾತ್ರೆಯಲ್ಲಿ ಫಕೀರನೊಬ್ಬ ಎದುರಾಗುತ್ತಾನೆ. ಏನಾದರೂ ಆವಶ್ಯಕತೆ ಇದ್ದರೆ ಹೇಳಿರಿ ಎಂದ ರಾಜ.
ಆಗ ನನಗೆ ಬೇಕಾದ್ದು ನಿನಗೆ ನೀಡಲು ಸಾಧ್ಯವೇ? ಎಂದಾಗಿತ್ತು ಫಕೀರನ ಪ್ರಶ್ನೆ.ರಾಜ ತಬ್ಬಿಬ್ಬಾದದನ್ನು ನೋಡಿ ಫಕೀರ ಹೇಳ್ತಾನೆ
ನೀನು ಕಾಡಲ್ಲಿ ಆಕಸ್ಮಿಕವಾಗಿ ಒಂಟಿಯಾದರೆ ಅಲ್ಲಿಂದ ಹೊರ ಬರಲು ಅಸಾದ್ಯವಾಗಿ ಬಾಯಾರಿ ಇನ್ನೇನು ಸತ್ತು ಹೋಗುತ್ತೇನೆ ಎಂಬ ಸ್ಥಿತಿ ತಲುಪಿದಾಗ ಸಾಮ್ರಾಜ್ಯದ ಒಡೆಯನಾದ ನಿನಗೂ ನೀರನ್ನು ಪಡೆಯಲಾಗದು. ಆ ಸಂದರ್ಭದಲ್ಲಿ ಒಂದು ಲೋಟ ನೀರಿಗೆ ನಿನ್ನ ಜೀವ ಉಳಿಸಲು ಎಲ್ಲವನ್ನೂ ತ್ಯಾಗ ಮಾಡುವೆ.ಆದರೆ ಲಕ್ಷಾಂತರ ಜೀವಗಳ ರಕ್ತ ಹರಿಸಿ ಪಡೆದ ಅಧಿಕಾರಕ್ಕೆ ಒಂದು ಲೋಟ ನೀರಿನ ಬೆಲೆ ಇರೋದಿಲ್ಲ.ಆದ್ದರಿಂದ ನೀನು ಅಲ್ಲಾಹನ ದಾಸನಾಗು ಆಗ ಜಗತ್ತೆಲ್ಲವೂ ನಿನ್ನ ಒಡೆಯನದು.ನಿನ್ನ ಯಜಮಾನನದ್ದು ನಿನಗೆ ಸೇರಿದ್ದು.
ಹೌದು ಜಗತ್ತಿನಲ್ಲಿರುವ ಎಲ್ಲವೂ ಅಲ್ಲಾಹನದು.ಹನಿ ನೀರು,ರಕ್ತ,ಪ್ರಾಣವಾಯು, ನಮ್ಮದಲ್ಲ ಇರುವೆಯ ಜೀವನವನ್ನೂ ನಮ್ಮಿಂದ ಕೊಡಲಾಗದು.
ಅಲ್ಲಾಹನು ತನ್ನ ದಾಸನಿಗಾಗಿ ಕಾಯುತ್ತಾನೆ. ಅವನೆಷ್ಟೇ ತಪ್ಪು ಮಾಡಿದರೂ ಸರಿ.ಅಲ್ಲಹನು ಹೇಳುತ್ತಾನೆ,
ನಾನು ನನ್ನ ದಾಸನ ಭಾವನೆಯಂತೆ ಒಳಿತಾದರೆ ಆತನಿಗೇ ಒಳಿತು.ಕೆಡುಕಾದರೆ ಆತನಿಗೇ ಕೆಡುಕು.
ಇಮಾಂ ಶಾಫೀ ಹೇಳುತ್ತಾರೆ ಪ್ರೀತಿಸುವವನು ಪ್ರೀತಿದವನನ್ನು ಅನುಸರಿಸುತ್ತಾನೆ.
ಅಲ್ಲಾಹನು ಹೇಳ್ತಾನೆ ಸತ್ಯವಿಶ್ವಾಸಿಗಳು ಅಲ್ಲಾಹನನ್ನು ತೀವ್ರವಾಗಿ ಪ್ರೀತಿಸುತ್ತಾರೆ.
ಎಷ್ಟೇ ದೊಡ್ಡ ಪಾಪಿಯನ್ನೂ ಅಲ್ಲಾಹನು ಪಾಪಮುಕ್ತಿ ಕೊಟ್ಟು ಪ್ರೀತಿಸುತ್ತಾನೆ.
ಅಲ್ಲಾಹನು ಹೇಳುತ್ತಾನೆ,
 ನನ್ನ ದಾಸ ಒಂದು ಗೇಣು ಹತ್ತಿರ ಬಂದರೆ ನಾನು ಒಂದಡಿ ಹತ್ತಿರವಾಗುವೆ.ಒಂದಡಿ ಹತ್ತಿರ ಬಂದರೆ ಒಂದು ಮಾರುದ್ದ ನಾನು ಹತ್ತಿರವಾಗುವೆ.ಆತ ನಡೆಯುವ ಕೊಂಡು ಬಂದರೆ ನಾನು ಓಡಿಕೊಂಡು ಆತನ ಬಳಿ ಹೋಗುವೆ
ಅಲ್ಲಾಹನ ಬಳಿ ಪಶ್ಚಾತ್ತಾಪ ಪಟ್ಟು ಮರಳುವ ದಾಸನನ್ನು ಅಲ್ಲಾಹನು ಹೆಚ್ಚು ಪ್ರೀತಸುತ್ತಾನೆ.
ಸಹರ ಮರುಭೂಮಿಯಂತ ಮರಳುಗಾಡಿನಲ್ಲಿ ಒಂಟೆಯನ್ನು ಕಳಕೊಂಡವನು ನಂತರ ಅದು ಕಾಣಸಿಕ್ಕಾಗ ಸಂತೋಷದಿಂದ. ಅಲ್ಲಾಹನೇ ನಾನು ನಿನ್ನ ಪಾಲಕ ನೀನು ನನ್ನ ದಾಸ.ಸಂತೋಷದ ಅಮಲಿನಲ್ಲಿ ಬಾಯ್ತಪ್ಪಿನಿಂದ ಹೇಳುವಂತಾ ಕ್ಷಣ.ಇದಕ್ಕಿಂತಲೂ ಹೆಚ್ಚು ಸಂತೋಷ ಅಲ್ಲಾಹನಿಗಿದೆ, ಆತನ ದಾಸ ತೌಬಾದೊಂದಿಗೆ ಮರಳಿದಾಗ.(ಹದೀಸು)
ನೂರು ಮಂದಿಯನ್ನು ಕೊಂದು ಪ್ರಾಯಶ್ಚಿತ್ತ ಕ್ಕಾಗಿ ಹೊರಟ ವ್ಯಕ್ತಿಯನ್ನು ಸ್ವರ್ಗ ಸೇರಿಸಲು ಭೂಮಿಯನ್ನೇ ಹತ್ತಿರವಾಗಿಸಿದ ಘಟನೆ ಹದೀಸಿನಲ್ಲಿದೆ.ಅಂತ್ಯದಿನದಲ್ಲಿ ನರಕ ಸೇರಿದ ಅಸಂಖ್ಯಾತ ಮಂದಿಯನ್ನು ರಸೂಲರು (ಸ) ಶಪಾಅತ್ತಿನಿಂದ ರಕ್ಷಿಸುತ್ತಾರೆ.ಹಾಗೇ ಮಲಕ್ಕುಗಳು, ಪ್ರವಾದಿಗಳು, ಸತ್ಯವಿಶ್ವಾಸಿಗಳು ಎಲ್ಲರೂ ಸಾಧ್ಯವಾದಷ್ಟು ಮಂದಿಯನ್ನು ರಕ್ಷಿಸುತ್ತಾರೆ. ಕೊನೆಗೆ ಅಲ್ಲಾಹನು ಒಂದು ವರ್ಗವನ್ನು ನರಕದಿಂದ ಹೊರತೆಗೆಯುತ್ತಾನೆ. ಅವರು ನರಕದಲ್ಲಿ  ಭಯಾನಕ ಶಿಕ್ಷೆಯ ಕಾರಣ ಸುಟ್ಟು ಕರಕಲಾಗಿ ಇದ್ದಿಲಿನಂತಾಗಿರುತ್ತಾರೆ.ಅವರನ್ನು ಸ್ವರ್ಗದ ನದಿಯಲ್ಲಿ ಮುಳುಗಿಸಿದಾಗ ಅವರಲ್ಲಿದ್ದ ಕುರೂಪವೆಲ್ಲಾ ಹೋಗಿ ಮುತ್ತಿನಂತೆ ಹೊಳೆಯುತ್ತಾರೆ.ನರಕ ವಿಮೋಚಿತರು ಎಂಬ ಹೆಸರು ಅವರಿಗಿರುತ್ತದೆ.
ನಂತರ ಅಲ್ಲಾಹನು ಹೇಳುತ್ತಾನೆ ನಿಮಗೇನು ಬೇಕೋ ಅದನ್ನು ಪಡೆದು ಸ್ವರ್ಗದಲ್ಲಿ ಸುಖವಾಗಿರಿ.
ಇದು ಅಲ್ಲಾಹನು ತನ್ನ ದಾಸನಿಗೆ ತೋರುವ ಔದಾರ್ಯವಾಗಿರುತ್ತದೆ.
ನಾವು ಅಲ್ಲಾಹನ ಉತ್ತಮ ದಾಸರಾಗೋಣ.
ಅಹ್ಸನ್

"ನಂಡೆ ಪೆಂಙಳ್" ಮಾದರಿ ನಡೆಯಲಿ "ನಮ್ಮ ಜಮಾಅತ್" ಅಭಿಯಾನ

  • ಕೆ.ಎಂ..ಕೊಡುಂಗಾಯಿ 

ತ್ತೇ "ನಂಡೆ ಪೆಂಙಳ್" !
ಬಾರಿ ಬರೆಯಲು ಬಹಳಷ್ಟು ವಿಷಯಗಳಿತ್ತು ಆದರೆ ಮತ್ತೊಮ್ಮೆ "ನಂಡೆ ಪೆಂಙಳ್" ಬಗ್ಗೆಯೇ ಬರೆಯಬೇಕೆನಿಸಿತು.ಎಷ್ಟು ಜನರಿಗೆ ಇಷ್ಟವಾಗುತ್ತೋ ಗೊತ್ತಿಲ್ಲ, ಆದರೆ ನೀವೇನಾದರೂ ಎಲ್ಲಾದರೂ "ನಂಡೆ ಪೆಂಙಳ್" ಅಭಿಯಾನದಲ್ಲಿ ಭಾಗವಹಿಸಿದ್ದರೆ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನವರು ನಡೆಸುವ ಬಗೆಗಿನ ಮಾಹಿತಿ ಶಿಬಿರದಲ್ಲಿ ಭಾಗವಹಿಸಿದ್ದರೆ ಖಂಡಿತಾ ನಿಮ್ಮ ಕಂಗಳು ತುಂಬಿ ಹರಿದಿರಬಹುದು. ನಮ್ಮ ಸಮಾಜದ ಅದೆಷ್ಟೋ ಹೆಣ್ಮಕ್ಕಳ ದುರಂತ ಕಥೆಗಳನ್ನು ಕೇಳಿಸಿಕೊಂಡು ನಿಂತಲ್ಲೇ ಅರೆಕ್ಷಣ ಕಲ್ಲಾಗಿರಬಹುದು.!

ನನ್ನ ಮಗಳು


  • ಮೌಲಾನಾ ಯು.ಕೆ ಚೊಕ್ಕಬೆಟ್ಟು

ತವರಿಗೆ ಬಂದ ಮಗಳು ಮೊದ ಮೊದಲು ಮನಬಿಚ್ಚಿ ಉತ್ಸುಕತೆಯಿಂದ ಮಾತನಾ ಡುತ್ತಿದ್ದಳು ಇದೀಗ ಮಾತಿಗೆ ಏನೋ ತಡೆ ಇರುವಂತೆ ಭಾಸವಾಗುತ್ತದೆ. ಮನಸ್ಸಿನಲ್ಲೂ ಮಾತಿನಲ್ಲೂ ಏನನ್ನೋ ಅಡಗಿಸುವಂತಿದೆ.ಅಗೋಚರವಾದ ಏನೋ ನಿರ್ಲಕ್ಷ್ಯ ಭಾವ ಮನೆ ಮಾಡಿದಂತಿದೆ. ತಂದೆಯ ಮನಸ್ಸು ಚಿಂತೆಯ ಚಿತೆಯಲ್ಲಿ ನರಲಾಡ ತೊಡಗಿತು. ಹೆಣ್ಣುಮಕ್ಕಳು ಮನೆಯ ಐಶ್ವರ್ಯ, ಶುಭ, ಸಂಪತ್ತು ಅಂತೆಲ್ಲಾ ಹೇಳ್ತಾರೆ. ಹೌದು ಮನೆಯಲ್ಲಿ ಎಲ್ಲರಿಗೂ ಸುಪ್ರೀಂ ಅವಳೇ ಆಗಿದ್ದಳು.ಮನೆಮಂದಿಯ ಲವಲವಿಕೆಗೆ ಅವಳೇ ಕಾರಣಳಾಗಿದ್ದಳು. ಪ್ರತಿಯೊಂದನ್ನು ನೀಟಾಗಿ ನಿರ್ವಹಣೆ ಮಾಡುತ್ತಿದ್ದ ಕಾರಣ ಅವಳು ಮನೆಯನ್ನು ಸ್ವರ್ಗವಾಗಿ ಬದಲಿಸಿದ್ದಳು.ಅವಳ ಜಾಣ್ಮೆ ತಾಳ್ಮೆ, ಕೋಪ ತಾಪ, ನಲಿ ಕಲಿ ಎಲ್ಲವೂ ಅತ್ಯಾಕರ್ಷಕವಾಗಿತ್ತು. ಒಟ್ಡಿನಲ್ಲಿ ಮನೆ ತುಂಬಿದ ಮಗಳಾಗಿ ವಿಜ್ರಂಭಿಸುತ್ತಿದ್ದ ಕಾಲ ಒಮ್ಮೆಲೆ ತಂದೆಯ ಹೃದಯವನ್ನು ಹಿಡಿದೆಳೆದಂತಾಯಿತು.
ಮಗಳ ಮನದಲ್ಲಿ ಮಂದಹಾಸದ ನಗು ಕಾಣೆಯಾಗಿದೆ. ಉಬ್ಬಿ ಬರುವ ದುಃಖ ವನ್ನು ಅದುಮಿ ಹಿಡಿದ ಹಾಗೇ ಕಾಣುತ್ತಲಿದೆ. ತುಂಟಾಟ, ತಮಾಷೆ ಚೇಷ್ಟೆಗಳೆಲ್ಲಾ ಮಾಯ!