"ನಂಡೆ ಪೆಂಙಳ್" ಮಾದರಿ ನಡೆಯಲಿ "ನಮ್ಮ ಜಮಾಅತ್" ಅಭಿಯಾನ

  • ಕೆ.ಎಂ..ಕೊಡುಂಗಾಯಿ 

ತ್ತೇ "ನಂಡೆ ಪೆಂಙಳ್" !
ಬಾರಿ ಬರೆಯಲು ಬಹಳಷ್ಟು ವಿಷಯಗಳಿತ್ತು ಆದರೆ ಮತ್ತೊಮ್ಮೆ "ನಂಡೆ ಪೆಂಙಳ್" ಬಗ್ಗೆಯೇ ಬರೆಯಬೇಕೆನಿಸಿತು.ಎಷ್ಟು ಜನರಿಗೆ ಇಷ್ಟವಾಗುತ್ತೋ ಗೊತ್ತಿಲ್ಲ, ಆದರೆ ನೀವೇನಾದರೂ ಎಲ್ಲಾದರೂ "ನಂಡೆ ಪೆಂಙಳ್" ಅಭಿಯಾನದಲ್ಲಿ ಭಾಗವಹಿಸಿದ್ದರೆ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನವರು ನಡೆಸುವ ಬಗೆಗಿನ ಮಾಹಿತಿ ಶಿಬಿರದಲ್ಲಿ ಭಾಗವಹಿಸಿದ್ದರೆ ಖಂಡಿತಾ ನಿಮ್ಮ ಕಂಗಳು ತುಂಬಿ ಹರಿದಿರಬಹುದು. ನಮ್ಮ ಸಮಾಜದ ಅದೆಷ್ಟೋ ಹೆಣ್ಮಕ್ಕಳ ದುರಂತ ಕಥೆಗಳನ್ನು ಕೇಳಿಸಿಕೊಂಡು ನಿಂತಲ್ಲೇ ಅರೆಕ್ಷಣ ಕಲ್ಲಾಗಿರಬಹುದು.!

ಮೊನ್ನೆ ಪುತ್ತೂರಿನಲ್ಲಿ "ನಂಡೆ ಪೆಂಙಳ್" ಅಭಿಯಾನ ಸಂಘಟಿಸಲಾಗಿತ್ತು. ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ರಫೀಕ್ ಮಾಸ್ಟರ್ರವರು, ಅವರ ತಂಡ ನಡೆಸಿದ ಸಮೀಕ್ಷೆಯಲ್ಲಿ ಅವರು ಕಂಡುಕೊಂಡ ವಯಸ್ಸು ಮೂವತ್ತು ದಾಟಿಯೂ ಮದುವೆಯಾಗದೆ ಕೊರಗುತ್ತಿರುವ ಅದೆಷ್ಟೋ ಹೆಣ್ಮಕ್ಕಳ ಕಥೆ ಹೇಳಿದರು. ಪೈಕಿ ವಯಸ್ಸು ಮೀರಿ ಮದುವೆಯ ಆಸೆ ಕೈಬಿಟ್ಟು ಕಡೆಗೆ ಕನಸುಗಳೇ ಕರಟಿಹೋದ ಹೆಣ್ಮಕ್ಕಳ ಸ್ಟೋರಿಯೂ ಇತ್ತು.ಮದುವೆಯ ಕನಸನ್ನು ಕೊನೆಯವರೆಗೂ ಉಳಿಸಿಕೊಂಡು ಧರ್ಮದ ಚೌಕಟ್ಟಿನಡಿ ಬಾಳಿ ಶುದ್ಧವಾಗಿ ಬದುಕಿ ಕಡೆಗೆ ಆಸೆ ಆಕಾಂಕ್ಷೆಗಳಿಗೆ ತಿಲಾಂಜಲಿ ಹಾಡಿ ಟೆನ್ಶನ್ಗೆ ಬಿದ್ದು ರೋಗಕ್ಕೆ ತುತ್ತಾಗಿ ಕೊನೆಯುಸಿರೆಳೆದವರ ದುರಂತ ಕಥೆಯೂ ಇತ್ತು.! "ಆದರೆ ಮದುವೆಯಾಗಿ ಎಲ್ಲಾ ಸುಖ, ಸಂತಸಗಳನ್ನು ಪಡೆದ ನಾವು ನಮ್ಮ ಸಮಾಜದ "ಪೆಂಙಳ್" (ಸಹೋದರಿ)ಗೆ ಮಾಡಿದ ಸಹಾಯವೇನು? ಅವಳ ಕಣ್ಣೀರು, ಕರಟಿದ ಕನಸು, ಬತ್ತಿದ ಬಯಕೆ, ಅಮುಕಿ ಹಾಕಲ್ಪಟ್ಟ ಆಸೆ, ಆಕಾಂಕ್ಷೆಗಳ ಬಗ್ಗೆ ನಾವು ಯೋಚಿಸಿದ್ದು ಇದೆಯಾ? ಯೋಚಿಸಬೇಡವೇ ಅದು ನಮ್ಮ ಜವಾಬ್ದಾರಿ ಅಲ್ಲವೇ? ಏಕೆ ಪ್ರತಿ ಮೊಹಲ್ಲಾದಲ್ಲಿ ಮಸೀದಿಯನ್ನು ಕೇಂದ್ರವಾಗಿಟ್ಟುಕೊಂಡು ಇಂತಹ ದುರಂತಗಳ ಹಾಗೂ ಸಮಾಜದ ಶೋಚನೀಯ ಅವಸ್ಥೆಯ ಬಗ್ಗೆ ಚೆರ್ಚಿಸಿ ಪರಿಹಾರ ಕಾಣಬಾರದು? ಉಲಮಾ- ಉಮಾರ ನಾಯಕರಿಗೆ ಜವಾಬ್ದಾರಿ ಇಲ್ಲವೇ? ನಾವೆಲ್ಲ ಬಗ್ಗೆ ಯೋಚಿಸಿ ಕಾರ್ಯೋನ್ಮುಖರಾದರೆ ಖಂಡಿತಾ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ." ಹೀಗೆ ಸಮಾಜವನ್ನು ಎಚ್ಚರಿಸುವ, ಬದಲಾಯಿಸುವ ಕಳಕಳಿಯ ಅಭಿಯಾನ, ಭಾಷಣ ನಿಜಕ್ಕೂ ಕಣ್ಣೀರು ತರಿಸಿತು. ಅಲ್ಲಿ ಭಾಗವಹಿಸಿದ ಪ್ರತಿ ಉಲಮಾ-ಉಮರಾ ನಾಯಕರು ಪ್ರತಿ ಜಮಾಅತ್ಗಳಲ್ಲೂ "ನಂಡೆ ಪೆಂಙಳ್" ಅಭಿಯಾನ ಸಂಘಟಿಸಿ ಸಮಾಜದಲ್ಲಿ ಬದಲಾವಣೆ ತರಬೇಕೆಂದು ಒಕ್ಕೊರಲಿನಿಂದ ಹೇಳುತ್ತಿದ್ದದ್ದು ಗಮನಾರ್ಹವಾಗಿತ್ತು.
ಅಲ್ಲ, ನೀವೇ ಹೇಳಿ ನಾವು ಮೊಹಲ್ಲಾಕ್ಕೊಂದು ಜಮಾಅತ್ ಗಳನ್ನು ಕಟ್ಟಿಕೊಂಡು ದೊಡ್ಡ ದೊಡ್ಡ ಜುಮಾ ಮಸ್ಜಿದ್ಗಳನ್ನು ನಿರ್ಮಿಸಿ ಏನಿಲ್ಲವೆಂದರೂ ಪ್ರತಿ ಶುಕ್ರವಾರ ಒಂದುಗೂಡುತ್ತೇವೆ. ಭರ್ಜರಿ ಮೀಟಿಂಗ್, ಸಭೆ, ಸಮಾರಂಭಗಳನ್ನೂ ನಡೆಸುತ್ತೇವೆ. ಆದರೆ ನಾವೆಷ್ಟು ಸಮಾಜದ ತಳಮಟ್ಟದ ಪ್ರಗತಿಯ ಚೆರ್ಚೆ ನಡೆಸಿದ್ದು ಇದೆ? ಬೇರೇನೂ ಬೇಡ ದೂರದ ಕಥೆ ಬಿಡಿ, ಪ್ರತಿ ಆಯಾ ಮೊಹಲ್ಲಾ- ಜಮಾಅತ್ ಪರಿಧಿಯಲ್ಲಿ ಪ್ರಗತಿಯ ಅಜೆಂಡಾ ಹಾಕಿಕೊಂಡು ನೊಂದವರ ಪಾಲಿಗೆ ಸಂಜೀವಿನಿಯಾದ ಕಥೆ ಎಷ್ಟಿದೆ? ಬಡ, ನಿರ್ಗತಿಗರ ಮದುವೆ, ಮನೆ, ಚಿಕಿತ್ಸೆ, ಮೊದಲಾದವುಗಳಿಗೆ ನೆರವಾದ ಕಥೆ ಎಷ್ಟಿದೆ? ಅವುಗಳಿಗೆಲ್ಲ ಎಲ್ಲೋ ಹೋಗಿ ಬೇಡಿಕೊಳ್ಳಿ ಎಂದು ಸಹಾಯರ್ಥ ಲೆಟರ್ ಹೆಡ್ ಬರೆದು ಕೊಟ್ಟದ್ದೇ ನಮ್ಮ ಜಮಾಅತ್ ಆಡಳಿತ ಸಮಿತಿಗಳ ದೊಡ್ಡ ಸಾಧನೆಯೆಂದು ಭಾವಿಸಿದ್ದವರಲ್ಲವೇ?
ಅಷ್ಟಕ್ಕೂ ಇನ್ನು ನಮ್ಮಲ್ಲಿ ಬಗ್ಗೆ ಚೆರ್ಚೆ ನಡೆದರೂ ಅದು ಕಾರ್ಯರೂಪಕ್ಕೆ ಬರುವುದು ಅಪರೂಪವಲ್ಲವೇ?
 ನೀವೇನೇ ಹೇಳಿ, ನಾವಿರುವುದೇ ಹಾಗೆ. ನಮ್ಮ ವಿಚಾರ, ಚರ್ಚೆಗಳೆಲ್ಲವೂ ಕೇವಲ ಘೋಷಣೆಗಳಿಗಷ್ಟೇ ಸೀಮಿತವೆಂದರೆ ತಪ್ಪಲ್ಲ.
ಬದಲಾಗಬೇಕು, ಒಗ್ಗಟ್ಟಾಗಬೇಕು, ರಾಜಕೀಯದಲ್ಲಿ ಒತ್ತಡ ಶಕ್ತಿಗಳಾಗಬೇಕು, ಸಿಗಬೇಕಾದ ಸವಲತ್ತುಗಳನ್ನು ಸರಕಾರದಿಂದ ಕೇಳಿ ಪಡೆಯಬೇಕು, ಎಲ್ಲಾ ಕ್ಷೇತ್ರಗಳಲ್ಲೂ ಮೇಲೇರಬೇಕು.... ಹೀಗೆ ವರೈಟಿ "ಬೇಕುಗಳ ಪಟ್ಟಿಯನ್ನು ಭಾಷಣ- ಬರಹ, ಚೆರ್ಚೆ, ಸಂವಾದಗಳಲ್ಲಾ ಕೇಳಿಸಿಕೊಂಡು ಸಾಕಾಗಿ ಬಿಟ್ಟಿದೆ. ಎಲ್ಲರೂ ಹೇಳುವುದು ಹೇಳುತ್ತಾ ಬಂದಿರುವುದು ಅದನ್ನೇ. ವಿಪರ್ಯಾಸ ವೆಂದರೆ ನಾವು ಮಾಡುವುದು ಮಾತ್ರ ಬೇರೆ. ಬದಲಾವಣೆಯ ಹತ್ತಿರಕ್ಕೂ ಸುಳಿಯಲ್ಲ, ಕಟ್ಟ ಬೇಕೆಂದವರೇ ಬಿರುಕು ಸೃಷ್ಟಿಸುತ್ತಾರೆ, ಪೂರಾ ಅಲುಗಾಡಿಸಿ ಬಿಡುತ್ತಾರೆ. ರಾಜಕೀಯವಾಗಿ ಒಂದಾಗಬೇಕೆಂದವರೇ ಚುನಾವಣೆ ಹತ್ತಿರಕ್ಕೆ ಬಂದರೆ ತಿರುಗಾ ಮುರುಗಾ. ಒಟ್ಟಾಗಿ ಹೋರಾಟ ನಡೆಸೋಣ ಎಂದವರೆ ಛಿದ್ರಛಿದ್ರ, ಮದುವೆ, ಮನೆಗೆ ನೆರವಾಗ ಬೇಕೆಂದವರೆ ಕಡೆ ತಲೆಕೂಡ ಹಾಕಲ್ಲ, ಮಾದರಿ ಜಮಾಅತ್ ಕಟ್ಟಬೇಕೆಂದವರಿಂದಲೇ ಎಲ್ಲದ್ದಕ್ಕೂ ವರಾತ. ಟೋಟಲಿ ಮಾತು ಮತ್ತು ಕೃತಿ ಮಧ್ಯೆ ಬಹು ದೊಡ್ಡ ಫರಾಕು. ಮಾತು-ಬರಹಕ್ಕಿಂತ ಕೃತಿ ಉಲ್ಟಾ. ಬದಲಾವಣೆಯ ಡೈಲಾಗು ಕೇವಲ ಜಪಕ್ಕೆ ಮಾತ್ರ ಸೀಮಿತ.!
ಪವಿತ್ರ ಕುರ್ಆನ್ ಹೇಳುತ್ತದೆ, ಯಾವೊಂದು ಸಮಾಜ ಸ್ವತಃ ಬದಲಾವಣೆ ಬಯಸದವರೆಗೂ ಬದಲಾಯಿಸಲು ಸಾಧ್ಯವಿಲ್ಲ.
ನೋಡಿ ಇದು ನಾವು ಅರ್ಥಮಾಡಿಕೊಂಡಿಲ್ಲ ಅದುವೇ ನಮ್ಮ ದುರಂತ. !
ಯಾವರೀತಿ ಮದೀನಾ ಮಸೀದಿ ಇಡೀ ಸಮಾಜದ ಪ್ರಗತಿಯ ಶಕ್ತಿಕೇಂದ್ರವಾಗಿತ್ತೋ ಅದೇ ತೆರನಾಗಿ ನಮ್ಮ ಮಸ್ಜಿದ್ಗಳು ನಮ್ಮ ಶಕ್ತಿಕೇಂದ್ರಗಳಾಗಬೇಕು. ಅಲ್ಲಿ ಸಮಾಜದ ಪ್ರಗತಿಯ ಚೆರ್ಚೆ ನಡೆಯಬೇಕು. ಸಮಸ್ಯೆಗಳಿಗೆ ಪರಿಹಾರ ಕಾಣಬೇಕು. ಅದು ನಮಗೆ ಪ್ರವಾದಿ (ಸಲ್ಲಲ್ಲಾಹು ಅಲೈವಸಲ್ಲಂ) ರವರು ಕಲಿಸಿಕೊಟ್ಟ ಮಾದರಿ ಹಾಗೂ ಆದರ್ಶಆಗಿರುತ್ತದೆ. ನಮ್ಮ ಪ್ರವಾದಿ ಪ್ರೇಮ ಮಸೀದಿಗಳಲ್ಲಿ ಕೇವಲ ಈದ್ ಮಿಲಾದ್ ಆಚರಣೆಗೆ ಮಾತ್ರ ಸೀಮಿತಗೊಳ್ಳಬಾರದು. ಸಮಾಜದ ಪ್ರಗತಿಗೂ ಅದು ವಿಸ್ತರಣೆಗೊಳ್ಳಬೇಕು.
ಇಷ್ಟಕ್ಕೂ ಕೆಲವೊಂದು ಮೊಹಲ್ಲಾ-ಜಮಾಅತ್ ಗಳು ಮಾದರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಇತ್ತೀಚೆಗೆ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗಳು ಲೌಕಿಕ ಹಾಗೂ ಷರೀಯತ್ ಕಾಲೇಜ್ ಗಳು, ಸಾಮೂಹಿಕ ವಿವಾಹಗಳು, ಶಿಕ್ಷಣಕ್ಕೆ ನೆರವು ಹೀಗೆ ಬಹಳಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ತಳಮಟ್ಟದಲ್ಲಿ ಸಮಾಜವನ್ನು ಮೇಲೆತ್ತುವ ಮಾದರಿ ಅಜೆಂಡಾಗಳೊಂದಿಗೆ ಕಾರ್ಯಪ್ರವೃತ್ತವಾಗಿರುವ ಜಮಾಅತ್ಗಳೂ ಇಲ್ಲದಿಲ್ಲ. ಇಂತಹ ಪ್ರಗತಿಪರ ಚಿಂತನೆಗಳು ನಮ್ಮಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಯನ್ನೂ ತಂದುಕೊಟ್ಟಿದೆ. ನಿಜಕ್ಕೂ ಇದು ಆಶಾದಾಯಕ ಬೆಳವಣಿಗೆಯಾಗಿದೆ.
ಅಂದಹಾಗೆ ಪವಿತ್ರ ರಂಝಾನ್ ಬಂದಿದೆ ಕಿಟ್ ವಿತರಣೆ, ದಾನ ಧರ್ಮ ಮತ್ತಿತರ ರಿಲೀಫ್ ಕಾರ್ಯಕ್ರಮಗಳು ಕೆಲವೆಡೆ ನಡೆಯುತ್ತದೆ ಇದು ಪ್ರತಿ ಮೊಹಲ್ಲಾಗಳಲ್ಲೂ ನಡೆಯಬೇಕು. ಜಮಾಅತ್ ವ್ಯಾಪ್ತಿಯ ಬಡ- ನಿರ್ಗತಿಕರನ್ನು ಗುರುತಿಸಿ ಅವರಿಗೆ ತಲುಪುವಂತೆ ಮಾಡಬೇಕು. ವ್ಯವಸ್ಥೆ ಆಯಾ ಮೊಹಲ್ಲಾಗಳಲ್ಲೇ ನಡೆಯಬೇಕು. ಇದೇರೀತಿ ಪ್ರತಿಮೊಹಲ್ಲಾಗಳಲ್ಲೂ ಜಮಾಅತ್ ಪ್ರತಿಯೊಂದು ಮನೆಗೆ ಆಡಳಿತ ಕಮಿಟಿಯವರು ಭೇಟಿ ನೀಡಿ ಸಮೀಕ್ಷೆ ನಡೆಸಿ, ಮಾಹಿತಿ ಸಂಗ್ರಹಿಸಿ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಕಾರ್ಯಪ್ರವೃತರಾದರೆ ಸಮಾಜ ಬದಲಾವಣೆ ಕಾಣುವುದು ಖಂಡಿತಾ. ಆಗ ಯಾವ "ಪೆಂಙಳ್" (ಸಹೋದರಿ)ಯೂ ಮದುವೆಯಾಗದೆ ಮನೆಯಲ್ಲೇ ಉಳಿಯಾಲಾರಾಳು.

ಏನಂತೀರಿ?

No comments:

Post a Comment