ಸಯ್ಯಿದ್ ಮದನಿ ಸೋಶಿಯಲ್ ಫ್ರಂಟ್ ಸಭೆಯಲ್ಲಿ ಮೊಳಗಿದ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು ಇವರ ಪ್ರಬುದ್ಧ ಮಾತುಗಳಲ್ಲಿ ಕೇಳಿ ಬಂದ ಮುತ್ತ ರತ್ನಗಳ ಸಂಗ್ರಹ

 
ವರದಿ "ಅಲ್ ಅಹ್ಸನ್" ಮಾಸಿಕ

  • ಧರ್ಮ ಕೇಂದ್ರಗಳು, ಕ್ಷೇತ್ರ ಮಠಗಳು ಮಾನವೀಯತೆಗಾಗಿ ಧ್ವನಿ ಎತ್ತಬೇಕಾಗಿದೆ.ಆ ಕಾರ್ಯ ವನ್ನು ಸಯ್ಯಿದ್ ಮದನಿ ತಂಙಲ್ ರವರ ಹೆಸರಲ್ಲಿ ಆರಂಭವಾಗಿರುವುದು ಶ್ಲಾಘನೀಯ
  • ಜಗತ್ತು ದೇವಾಲಯ,ಸರ್ವರಿಗೂ ಮಂಗಳವೆಂಬ ಶ್ಲೋಕ ದ ದ್ವನಿಯಂತೆ,ಜಗತ್ತಿನ ಒಬ್ಬ ವ್ಯಕ್ತಿಗೆ ನೀಡುವ ಬದುಕು ಇಡೀ ಜಗತ್ತಿಗೆ ನೀಡುವ ಬದುಕು ಎಂಬ ಕುರಾನಿನ ಸಂದೇಶದಂತೆ ಜಾತಿ ಬೇಧ  ಮೀರಿ ಈ ದ್ನನಿ ಮ್ಯಾನ್ಮಾರ್ ಗಾಗಿ ಮೊಳಗಿದೆ.
  • ಮೇಧಾವಿ ಅರವಿಂದರ ,ಮಹಾತ್ಮ ಗಾಂಧಿ ಯ ,ಸ್ವಾಮೀ ವಿವೇಕಾನಂದರ ಭಾರತದ ಧ್ವನಿ ನಮ್ಮ ಪ್ರಧಾನಿ ಮೂಲಕ ಮ್ಯಾನ್ಮಾರ್ ತಲುಪಲಿ ಆ ಮೂಲಕ ದೇಶದ ಘನತೆ ಎತ್ತಿ ಹಿಡಿಯಲಿ.
  •  "ನನ್ನ ಮ್ಯಾನ್ಮಾರಿನ ಆತ್ಮಸಾಕ್ಷಿಯ ನೋವು ಬವಣೆ ಮರೆಯಬೇಡಿ" ಎಂದು ಜೈಲಲ್ಲಿರುವಾಗ ಜಗತ್ತಿಗೆ ಕರೆ ನಿಡಿದ ಸೂಕಿ ಯಾಕೀಗ ಮೂಕಿ?
  • ೧೯೯೧ ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಕೊಟ್ಟಾಗ ನೋಬೆಲ್ ಅದಿಕಾರಿಗಳು ಹೇಳಿದ ಮಾತು ಜಗತ್ತಿನ ಸಂಬಂಧ ಕಡಿದುಕೊಂಡವರಿಗಾಗಿ ಮತ್ತು ಮಾನವೀಯತೆ ಗಾಗಿ ಕೊಡಲಾಗಿದೆ ಎಂದು ಆದರೆ ಅದು ಸೂಕಿಗೆ ಇಲ್ಲವಾಯಿತೆ?.
  •  ಜಗತ್ತಿನ ಕಟ್ಟ ಕಡೆಯ ಕಂಬನಿ ಒರೆಸಲು ಮತ್ತೆ ಮತ್ತೆ ಹುಟ್ಟಿ ಬರುವೆನೆಂಬ ಬುದ್ದ ನ ಹುಟ್ಟು ನರಭಕ್ಷಕ ರಾದ ಬುದ್ದ ಸನ್ಯಾಸಿಗಳಲ್ಲಿ ಅಲ್ಲ.ಅವನು ಇಂತಹಾ ಮಾನವೀಯತೆಗಾಗಿನ ಹೋರಾಟದಲ್ಲಿ ಮಾತ್ರ ಹುಟ್ಟುತ್ತಾನೆ.
  •  ಶಾಂತಿ ಯ ನೋಬೆಲ್ ಪ್ರಶಸ್ತಿ ಮ್ಯಾನ್ಮಾರಿನ ಮಕ್ಕಳ ರಕ್ತದಲ್ಲಿ ಮುಳುಗಿ ಕೆಂಪಾಗಿದೆ.
  • ಮ್ಯಾನ್ಮಾರಿನ ಬಾವಿ ನೀರಿನಲ್ಲಿ ,ಕಡಲಿನ ಮೀನಿನ ಮತ್ತು ಕಾಡಿನ ವನ್ಯ ಜೀವಿಗಳ ಹೊಟ್ಟೆಯಲ್ಲಿ ಹತ್ಯಾಕಾಂಡ ಕ್ಕೆ ಸಿಲುಕಿದ ಮಕ್ಕಳ ರಕ್ತ ಮತ್ತು ಮಾಂಸ ಮಾತ್ರವಿದೆ. ಅದರೂ ಪ್ರಾಣವನ್ನು ಉಳಿಸಿಕೊಂಡು ಬಂದ ನಿರಾಶ್ರಿತರಿಗೆ ಆಶ್ರಯ ಕೊಡಬಾರದೇಕೆ?
  •  ಬರ್ಮಾದ ಎರಡು ಕೋಟಿ ‌ವಲಸಿಗರು ಈ ದೇಶದಲ್ಲಿರುವಾಗ,ಮಾಜಿ ರಾಷ್ಟಪತಿ ಕೆ ಆರ್ ನಾರಾಯಣನ್ ಪತ್ನಿ ಬರ್ಮಾದ ವಲಸಿಗರಲ್ಲಿ ಸೇರಿ ಭಾರತದ ಎರಡನೇಯ ಪ್ರಜೆ ಆಗಬಹುದಾದರೆ ಯಾಕಿಲ್ಲಾ ಮ್ಯಾನ್ಮಾರಿನ ಮಕ್ಕಳಿಗೆ ರಕ್ಷಣೆ ,?
  •  ಭಯೋತ್ಪಾದನೆ ಹುಟ್ಟುವ ಮೊದಲೇ ಅಲ್ಲಿ ನರಹತ್ಯೆ ನಡೆದಾಗ ವಲಸೆ ಹೋಗುತ್ತಿದ್ದರು. ೧೯೪೩ ಮತ್ತು ೧೯೭೮ ಲಕ್ಷ ಲಕ್ಷ ಜನರನ್ನು ಮ್ಯಾನ್ಮಾರಿನ ಸರಕಾರ ಕೊಂದಿದೆ .೧೯೮೪ ರಲ್ಲಿ ಅವರ ಪೌರತ್ವ ರದ್ದುಗೊಳಿಸಿದೆ.ಅದರ ವಿರುದ್ಧ ಹೋರಾಡೋದು ಭಯೋತ್ಪಾದನೆಯೇ?
  • ಚೀನಾ ವಿರುದ್ಧ ಟಿಬೇಟ್, ಅಮೇರಿಕ ವಿರುದ್ಧ ವಿಯೆಟ್ನಾಂ, ಶ್ರೀಲಂಕಾ ವಿರುದ್ಧ ತಮಿಲರು ಹೋರಾಡಿದರೆ ಸ್ವ ರಕ್ಷಣೆಯ ಹೋರಾಟ! ಇಸ್ರೇಲ್ ವಿರುದ್ಧ ಜನ್ಮಭೂಮಿ ಗಾಗಿ ಪ್ಯಾಲಸ್ತೀನ್,ರಷ್ಯಾ ವಿರುದ್ದ ಚೆಚಿನ್ಯಾ,ಅಮೇರಿಕಾ ವಿರುದ್ಧ ಇರಾಕ್, ಮ್ಯಾನ್ಮಾರ್ ಸರಕಾರದ ವಿರುಧ್ಧ ಅರಕಾನರು ಪ್ರತಿರೋಧ ತೋರಿದರೆ ಭಯೋತ್ಪಾದನೆ ಆಗೋದು ಕಾಲದ ವ್ಯಂಗ್ಯ ಅಲ್ಲವೇ?
  • ಇದು ಮುಸಲ್ಮಾನರ ಮಾತ್ರ ಸಮಸ್ಯೆಯಲ್ಲ.ಮೋದಿಯವರೇ ನಮ್ಮ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮ್,ಇರಾನಿ,ಸುಷ್ಮಾ ರನ್ನು ಬಾಂಗ್ಲಾ ದ ಕುಟುಪಲಾಂಗ್ ‌ನಿರಾಶ್ರಿತ ಶಿಬಿರಕ್ಕೆ ಕಳುಹಿಸಿ ಅಲ್ಲಿ ಗಂಡನನ್ನು ಮತ್ತು ಸಂಬಂಧಿಕರನ್ನು ಕಳಕೊಂಡ ಅಕೀರಾ ದರ್ ಎಂಬ ಹಿಂದು ಹೆಣ್ಣುಮಗಳಿದ್ದಾಳೆ .ಅವರು ನಾಲ್ಕು ತಿಂಗಳ ಗರ್ಭಿಣಿ ಹೇಗೆ ಬುಧ್ಧ ಸನ್ಯಾಸಿಗಳಿಂದ ಬಚಬಾಗಿದ್ದು ಎಂದು ಹೇಳಬಹುದು.
  • ನಿರಾಶ್ರಿತ ರ ಜೀವಂತ ಸಾಕ್ಷಿ ದಲೈಲಾಮ ಹೇಳುತ್ತಾರೆ. ಬುದ್ದ ಬಂದರೆ ಮ್ಯಾನ್ಮಾರಿನ ಮಸ್ಲಿಮರ ಸಹಾಯಕ್ಕೆ ನಿಲ್ಲುತ್ತಿದ್ದ.ಹಾಗಾದರೆ ಮೋದೀಜಿ ಆ ಕೆಲಸ ನಿಮಗೆ ಮಾಡಬಹುದಲ್ವಾ?
  • ನೂರ ಇಪ್ಪತೈದು ಜನಕೋಟಿಯ,ಜಗತ್ತಿನ ಬಲಿಷ್ಟ ಡೆಮಾಕ್ರಸಿ ದೇಶದ, ಅತ್ಮಜ್ಞಾನ ವಿರುವ ಭಾರತದ ಪ್ರಾಧಾನಿ ನಿರಾಶ್ರಿತರಿಗಾಗಿ ರಾಜತಾಂತ್ರಿಕ ಸಂಧಾನ ಮಾಡಿದರೆ ಮಾತ್ರ ಶೋಭೆ ತರುವುದು.
  • ಯಾರೂ ಏನನ್ನೂ ಮಾಡದಿದ್ದರೆ ಮುಂದೆ ಪ್ರಕೃತಿ ವಿಕೋಪ ಮೇಲೆದ್ದು ಪ್ರಕೃತಿಯೇ ತ್ಸುನಾಮಿಯಾಗಿ ಸರ್ವ ನಾಶಮಾಡಿ ಪರಿಹಾರ ಮಾಡಬಹುದು, ಕುರಾನ್ ಎಚ್ಚರಿಸುತ್ತದೆ

ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳು ಲೂಟಿಯ ಅಡ್ಡೆಗಳಾಗುತ್ತಿರುವುದು ಜಗತ್ತಿನ ದುರಂತ.


ಮಿತಿಮೀರಿದ ಅನ್ಯಾಯ ಪ್ರಕೃತಿಯ ಮಹಾ ವಿಕೋಪಕ್ಕೆ ಕಾರಣವಾಗಬಹುದು 

ಭಾಷಣ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು.

   ವರದಿ "ಅಲ್ ಅಹ್ಸನ್" ಮಾಸಿಕ

     ಹಿಜರಿ ಹೊಸ ವರ್ಷ ಇಂದಿನಿಂದ ಆರಂಭವಾಗಿದೆ.ಮುಹರ್ರಮ್ ಹಿಜರಿಯ ಆರಂಭ ತಿಂಗಳು. ಈ ತಿಂಗಳ ವಿಶೇಷತೆಯನ್ನು ಕುರಾನ್ ಮತ್ತು ಹದೀಸು ಗಳಲ್ಲಿ ಧಾರಾಳವಾಗಿ ಕಾಣಬಹುದು.ಪ್ರವಾದಿ (ಸ) ರವರು ಈ ‌ಮಾಸ ಅಲ್ಲಾಹನ ಮಾಸವಾಗಿರುತ್ತದೆ.ರಂಝಾನ್ ನಂತರ ಉಪವಸಕ್ಕೆ ಯೋಗ್ಯವಾದ ಶ್ರೇಷ್ಠ ಮಾಸ.ಇಮಾಮ್ ಬುಖಾರಿ ರ  ವರದಿ ಮಾಡಿದ (೨೯೫೮) ಹದೀಸು ಹೀಗಿದೆ.ಅಬೂ ಬಕರತ್ ಹೇಳುತ್ತಾರೆ. ಒಂದು ವರ್ಷ ಹನ್ನೆರಡು ತಿಂಗಳಾಗಿರುತ್ತದೆ.ಅದರಲ್ಲಿ ನಾಲ್ಕು ನಿಷಿದ್ಧ ತಿಂಗಳುಗಳಿವೆ.ಮೂರು ಕ್ರಮವಾಗಿ  ದುಲ್ ಖಅದ್ ದುಲ್ ಹಜ್ಜ್ , ಮುಹರ್ರಂ, ಜುಮಾದ ಮತ್ತು  ಶಾಬಾನ್ ಮಧ್ಯವಿರುವ ಮುಳರ್ ರ ರಜಬ್.
ನಿಮ್ಮ ಶರೀರಗಳನ್ನು ಆ ತಿಂಗಳುಗಳಲ್ಲಿ ಅಕ್ರಮಿಸಬೇಡಿ
ಈ ಆಯತ್ತಿನ ವ್ಯಾಖ್ಯಾನದಲ್ಲಿ ಇಬ್ನು ಅಬ್ಬಾಸ್ (ರ) ಹೇಳುತ್ತಾರೆ ಎಲ್ಲಾ ತಿಂಗಳುಗಳಲ್ಲಿಯೂ ಅಕ್ರಮಿಸಬೇಡಿ.ಪ್ರತ್ಯೇಕವಾಗಿ ಈ ನಾಲ್ಕು ತಿಂಗಳಲ್ಲಿ ಅಕ್ರಮವೆಸಗಬೇಡಿ ಕಾರಣ ಪುಣ್ಯಗಳಿಗೆ ಪ್ರತಿಫಲವೂ ಹೆಚ್ಚು ಹಾಗೇ ಪಾಪಗಳಿಗೆ ಶಿಕ್ಷೆಯೂ ಅಧಿಕವಾಗಿರುತ್ತದೆ.ಇದೇ ಅಭಿಪ್ರಾಯವನ್ನು ಇಮಾಮ್ ಖತಾದಃ (ರ) ಹೇಳುತ್ತಾರೆ ನಂತರ ಮುಂದುವರೆಸಿ,ಅಲ್ಲಾಹನು ತನ್ನ ಸೃಷ್ಟಿಯಲ್ಲಿ ಪ್ರತ್ಯೇಕವಾಗಿ ಕೆಲವನ್ನು ಆಯ್ಕೆಮಾಡಿದ್ದಾನೆ.
ಮಲಕ್ಕುಗಳಲ್ಲಿ ಮತ್ತು ಜನರಲ್ಲಿ ಪ್ರವಾದಿಗಳನ್ನು,ಮಾತುಗಳಲ್ಲಿ ಆತನ ಸ್ಮರಣೆ ಯನ್ನು, ಭೂಮಿಯಲ್ಲಿ ಮಸೀದಿಗಳನ್ನು,ಮಾಸಗಳಲ್ಲಿ ರಮ್ಝಾನ್ ಮತ್ತು ಯುದ್ಧ ನಿಶಿಧ್ದವಾದ ತಿಂಗಳನ್ನು,ದಿವಸಗಳಲ್ಲಿ ಜುಮಾ ದಿನವನ್ನು, ರಾತ್ರಿಗಳಲ್ಲಿ ಲೈಲತುಲ್ ಖದರ್ ರಾತ್ರಿಯನ್ನು ಗೌರವಿಸಿದ್ದಾನೆ.ಆದ್ದರಿಂದ ಅಲ್ಲಾಹನು ಗೌರವಿಸಿದ್ದನ್ನು ಗೌರವಿಸಿ.ಬುದ್ದಿ ಮತ್ತು ವಿವೇಕ ಇರುವವರು ಆತನು ಗೌರವಿಸಿದ್ದನ್ನು ಗೌರವಿಸುತ್ತಾರೆ.
ಕುರಾನ್ ಹೀಗೆನ್ನುತ್ತದೆ.
ಅಲ್ಲಾಹನ ಧರ್ಮ ಚಿನ್ಹೆ ಗಳನ್ನು ಗೌರವಿಸಿ ಅದು ಹೃದಯದ ‌ಭಯಭಕ್ತಿಯಾಗಿದೆ.
ಮುಹರ್ರಂ ತ್ಯಾಗ ಮತ್ತು ವಿಜಯದ ದೃಢತೆಯನ್ನು ನಮಗೆ ನೀಡುತ್ತದೆ.
 ನೀವು ಅಕ್ರಮ ಎಸಗಬೇಡಿ ಎನ್ನುವುದು ಈ ತಿಂಗಳ ಪ್ರತ್ಯೇಕವಾದ ಆಹ್ವಾನವಾಗಿದೆ.

ಕಾಲ ಎಷ್ಡು ಕೆಟ್ಟಿದೆ ಎಂದರೆ ಸ್ವಂತ ತಾಯಿ ತನ್ನ ವ್ಯಸನಿ ಮಗನ ಲೈಂಗಿಗ ಕಿರುಕುಳ ತಾಳಲಾಗದೇ ಐವತ್ತು ಸಾವಿರ ಸುಪಾರಿ ಕೊಟ್ಟು  ಮಗನನ್ನು ಸಾಯಿಸುತ್ತಾಳೆ.
ಸಚ್ಚಾ ದೇರಾ ಸಮುಚ್ಚಯದಲ್ಲಿ ಸಿಕ್ಕಿದ್ದು ಬರೋಬ್ಬರಿ ಆರುನೂರು ಮಾನವ ಅಸ್ತಿಪಂಚರಗಳು ?ಅದೂ ದೇವರ ಹೆಸರಿನಲ್ಲಿ?
ಇನ್ನು ಮ್ಯಾನ್ಮಾರ್ ಹೆಸರು ಕೇಳುವಾಗ ಎದೆ ನಡುಗುತ್ತದೆ.ಅಲ್ಲಿಯ ಅಲ್ಪಸಂಖ್ಯಾತ ಜನ ತಮ್ಮ ಜೀವವನ್ನು ರಕ್ಷಿಸಲಾಗದೇ ಏನು ಮಾಡಬೇಕೆಂದೂ ತಿಳಿಯದೇ ಅಲೆದಾಡುವ ಅವಸ್ಥೆಯಲ್ಲಿದ್ದಾರೆ.ಬುದ್ದ ಸನ್ಯಾಸಿಗಳ ಅಥವಾ ಸೇನೆಯ ಕೈಗೆ ಸಿಕ್ಕರೆ ಜೀವಂತ ಸುಡುತ್ತಾರೆ.ದೇಹವನ್ನೇ ಛಿದ್ರ ಛಿದ್ರಗೋಳಿಸುತ್ತಾರೆ.ಮಣ್ಣಿನಲ್ಲಿ ಜೀವಂತ ಹೂಳುತ್ತಾರೆ. ರಕ್ಷಣಾತ್ಮಕವಾಗಿ ಓಡುತ್ತಾ ಜನರಿಂದ ತಪ್ಪಿಸಿಕೊಂಡರೆ ಒಂದೋ ನಫಿ ನದಿಗೆ ಬಿದ್ದು ಸಾಯಬೇಕು! ಅಥವ ಕಡಲಿಗೆ ಬೀಳಬೇಕು, ಕಡಲಿಗೆ ಬಿದ್ದರೆ ಒಂದೋ ಕಡಲುಗಳ್ಳರ ಸೆರೆ! ಇಲ್ಲವೇ ದೈತ್ಯ ಮೀನುಗಳಿಗೆ ಆಹಾರ! ಇವೆಲ್ಲವನ್ನೂ ಮೀರಿ ದಾಟಿ ಕಾಡು ಹತ್ತಿದರೆ ವನ್ಯ ಮೃಗಕ್ಕೆ ಬಲಿಯಾಗಬೇಕು! ಎಲ್ಲಾ ಮುಗಿದು ಹತ್ತಿರದ ದೇಶದ ತೀರ ತಲುಪಿದರೆ  ಅಲ್ಲಿಯ ಸೇನೆಯು  ಗನ್ನು ಹಿಡಿದು ಗುರಿಯಿಟ್ಟು ಕಾಯತ್ತಿರುತ್ತದೆ! ಇವರನ್ನು ಜನ ಕರೆಯೋದು ಭಯೋತ್ಪಾದಕರು!

ಹೀಗೇ ಅನ್ಯಾಯ ಮುಂದುವರಿದರೆ ಗಂಡಾಂತರ ತಪ್ಪಿದ್ದಲ್ಲ.ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮಹಾ ದುರಂತಕ್ಕೆ ಜನ ತುತ್ತಾಗಬಹುದು.
ಕುರಾನ್ ಎಚ್ಚರಿಸಿತ್ತದೆ.
ಅಕ್ರಮಿಗಳಲ್ಲಿ ಕೆಲವರನ್ನು ಮತ್ತೆ ಕೆಲವರ ಮೇಲೆ ಅಧಿಕಾರ ಚಲಾಯಿಸುವಂತೆ ಮಾಡುವೆವು,ಆ ಮೂಲಕ ಅವರಿಂದಲೇ ಅತಿಕ್ರಮಿಗಳನ್ನು ನಾಶ ಮಾಡುವೆವು.(ತಪ್ಸೀರು ಇಬ್ನು ಕಸೀರ್ (೩/೯೨)ಇದೇ ಆಯತ್ತಿನ ವ್ಯಾಖ್ಯಾನ ತಫ್ಸೀರ್ ರಾಝಿ ಯಲ್ಲಿ  ಹೀಗೇ ನೋಡಬಹುದು.
ಆಡಳಿತ ಅಧಿಕಾರಿಗಳು ಅಕ್ರಮಿಗಳಾದರೆ ಅವರ ಮೇಲೆ ಅಂತಹಾ ಅಕ್ರಮಿಗಳನ್ನೇ ಅಧಿಕಾರಿಗಳನ್ನಾಗಿ ಅಲ್ಲಾಹನು ಮಾಡುತ್ತಾನೆ (ತಫ್ಸೀರು ರ್ರಾಝಿ ೧೩/೨೯೪)

ಇಮಾಂ ಶಾಫಿ (ರ) ಕವಿತೆಯ ಸಾಲು ಜಗತ್ಪ್ರಸಿದ್ಧ ವಾಗಿದೆ.
"ನೀನು ಬಲಿಷ್ಟನಾಗಿದ್ದರೆ  ಯಾರಿಗೂ ಅನ್ಯಾಯ ಮಾಡಬೇಡ" "ಅನ್ಯಾಯ ಅದರ ಅಂತಿಮ ಫಲ ದುಖಃದೆಡೆಗೆ ಮರಳುತ್ತದೆ.'

ಅನ್ಯಾಯ ಕೊನೆಯಾಗಬೇಕೆನ್ನುದು ಆಯತ್ತಿನ ಸಂದೇಶ. ಸದಾ ಕಾಲದಲ್ಲಿಯೂ ನ್ಯಾಯ ,ಶಾಂತಿ ನೆಲೆಯಾಗಬೇಕಾಗಿದೆ.
ಕೌತುಕವೇ‌ನೆಂದರೆ ನಮ್ಮ ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳೇ ಲೂಟಿಯ ಅಡ್ಡೆಯಾಗಿದೆ.
ನಾನು ಖ್ಯಾತ ಡಾಕ್ಟರರೊಬ್ಬರ ಅದ್ಭುತ ಭಾಷಣ ಕೇಳಿದೆ.ಅವರ ಮಾತು ಕೇಳಿ ನನಗೆ ಅಚ್ವರಿ ಮತ್ತು ಗಾಬರಿ! ಡಾಕ್ಟರುಗಳು ಯಮನ ತಮ್ಮಂದಿರಂತೆ! ಯಮ ಜೀವ ಮಾತ್ರ ತಕೊಂಡು ಹೋಗ್ತಾನೆ.ಆದರೆ ವೈದ್ಯ ಹಣವನ್ನೂ ಒಯ್ತಾನಂತೆ
ಡಾಕ್ಟರುಗಳು ನಿಮ್ಮನ್ನು ಮಂಗ ಮಾಡ್ತಾರೆ?
(ನನಗಿದು ಸರಿ ಎಣಿಸಿತು ಒಂದು ನಾರ್ಮಲ್ ಹೆರಿಗೆ ಬಿಲ್ ೭೫,೦೦೦/-?ಒಂದು ದಿನದ ಮಗುವಿನ ಮದ್ದಿನ ಮಾತ್ರ ಚಾರ್ಜು ೧೨೦೦೦/-)
 ಟೆಸ್ಟು ಮೇಲೆ ಟೆಸ್ಟು ಚಕ್ಕಪ್ಪ್ ಮೇಲೆ ಚಕ್ಕಪ್ಪು  ಯಾಕೆ ?ಹಸಿದಾಗ ತಿನ್ನು, ಬಾಯಾರಿದಾಗ  ಕುಡಿ, ತಲೆ ಮೇಲೆ ಆಕಾಶ ಬೀಳದಿದ್ದರೆ ಸಾಯೋ ತನಕ ಬದುಕುತ್ತಿ?"
(i eat when i am hungry, i drink when i feel thirsty, if heaven does'nt fell down i will live till i die)
ದೇಹದ ಕ್ರಿಮಿ ಕೀಟಗಳನ್ನು ಕೊಲ್ಲಬಾರದು. ಈ ಮದ್ದಿನಿಂದ ಅದು ಸತ್ತು ಹೋಗಿದೆ.ಹಿಂದೆ ನಾವು ಉದ್ದುದ್ದ ಹುಳ ನೋಡುತ್ತಿದ್ದೆವು.
ಈಗ ಕ್ರಿಮಿ ಮಾಡಲು ಮದ್ದು ತಯಾರಾಗಿದೆ. ಅದು ಹೊಸ ಕಂಡು ಹಿಡಿತ . ಬೇರೆಯೊಬ್ಬನ ಮಲ! ಅದರ ಹಳದಿ ತೆಗೆದು ಅಮೇರಿಕದಲ್ಲಿ ಐದು ಡಾಲರಿಗೆ ಕ್ಯಾಪ್ಸೂಲ್ ಮಾಡಿ ಮಾರಲಾಗುತ್ತದೆ.ನಾಯಿ ಹೋಟ್ಟೆ ನೋವಾದರೆ ಹುಲ್ಲು ತಿನ್ನುತ್ತದೆ.ಆ ಅರಿವು ನಾಯಿಗಿದೆ . ಕೊಬ್ಬರಿ ಎಣ್ಣೆ ಮೇಲೆ  ಕೂತರೆ ನೊಣದ ಕಾಲಲ್ಲಿರೋ ಕ್ರಿಮಿ ಸಾಯ್ತಿತ್ತು.ಈ ಅರಿವು ನಮಗೂ ನಮ್ಮ ತಾತಂದಿರಿಗೂ ಇತ್ತು .ಯಾವತ್ತು ನಾವು ಡಿಗ್ರಿ ಕೋರ್ಸು ಮಾಡಿದೆವೋ ಆಗ ಅದೆಲ್ಲಾ ಹೊರಟು ಹೋಯ್ತು!. ಕೊನೆಗೆ ಆ ಡಾಕ್ಟರು ಹೇಳಿದ್ದು ಆರೋಗ್ಯಕ್ಕೆ ಇರೋ ಏಕ ಮಾರ್ಗ ಯಾರನ್ನೂ ದ್ವೇಷಿಸಬೇಡ.ಎಲ್ಲರನ್ನೂ ಪ್ರೀತಿಸು. ನೀನು ಸುಖವಾಗಿರಲು ವರ್ಷದಲ್ಲಿ ಎರಡು ದಿನವನ್ನು ಮರೆಯಬೇಕು. ಒಂದು ನಿನ್ನೆ.ಮತ್ತು ನಾಳೆ. ನಿನ್ನೆಗೆ ಕೊರಗಬೇಡ. ನಾಳೆಗೆ ಸಾಯಬೇಡ.ಏನೂ ಆಗಲ್ಲ ಅಗೋದು ಆಗಿಯೇ ಬಿಡುತ್ತದೆ.
ಆ ಡಾಕ್ಟರ್ ಯಾರು ಗೊತ್ತಾ. ಮಂಗಳೂರಿನ ಖ್ಯಾತ ವೈದ್ಯ ಬಿ ಎಂ ಹೆಗ್ಡೆ.
ಕುರಾನ್ ಎಚ್ಚರಿಸುತ್ತದೆ.
"ಅಲ್ಲಾಹನ ಭಯಾನಕ ಶಿಕ್ಷೆ ಎರಗುವ ಮೊದಲು ಅಲ್ಲಾಹನ ಕಡೆ  ಮರಳಿ"
(ಅಝ್ಝುಮರ್ : ೫೪)

SKSSFನ ಯಶಸ್ವಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿರವರ ಭಾಷಣದ ಮುಮುಖ್ಯಾಂಶಗಳು



  • ಎಸ್ ಕೆ ಎಸ್ ಎಸ್ ಎಫ್ ಗೆ ಸಮಸ್ತ ಉಲಮಾ ವಿದ್ವಾಂಸರ ಆಶೀರ್ವಾದ ಇರೋದ್ರಿಂದ ಧಾರ್ಮಿಕ ಸ್ವಾತಂತ್ರ್ಯ ಹೋರಾಡದಲ್ಲಿ ಸಫಲರಾಗುತ್ತೇವೆ
  • ಬ್ರಿಟೀಷರು ಭಾರತ ಬಿಡುವಾಗ ಐವತ್ತು ಗ್ರಾಮಗಳಿಗೆ ಕರೆಂಟ್ ಸವಲತ್ತು ಇರದಿದ್ದರೂ ದೇಶ ಚಂದ್ರ ಮಂಗಳದತ್ತ ದೃಷ್ಟಿ ಮಾಡಿದ್ದರೆ ಅದು ಮೂರು ವರ್ಷಗಳ ಸಾಧನೆ ಯಲ್ಲ
  • ಮೋದೀಜಿ ತಾವು ಬುಲೆಟ್ ರೈಲ್ ಬಿಡಿ, ರಾಕೆಟ್ ಹಾರಿಸಿ ಆದರೆ ಧಾರ್ಮಿಕ ಸ್ವಾತಂತ್ರ್ಯ ದ ಹಕ್ಕಿನ ಮೇಲೆ ಬುಲೆಟ್ ಬೇಡ.
  • ದೇಶದಲ್ಲಿ NOT IN MY NAME ಹೆಸರಲ್ಲಿ ಹೋರಾಟ ನಡೆಯಿತು. I AM GOURY ಹೆಸರಲ್ಲಿ ಪ್ರತಿಭಟನೆ ಆಯಿತು. ಆದರೆ ಧಾರ್ಮಿಕ  ಸ್ವಾತಂತ್ರ್ಯ ಕ್ಕೆ ದಕ್ಕೆಯಾದರೆ   WE ARE INDIAN ಘೋಷಣೆ ಯೊಂದಿಗೆ ಬ್ರಹತ್ ಹೋರಾಟ ಮಾಡುವೆವು.
  • 1947ರಲ್ಲಿ ಪ್ಯಾಲಸ್ತೀನ್  ಹೊತ್ತಿ ಉರಿದಾಗ ಜನ್ಮ ಭೂಮಿ ಕಳಕೊಂಡ ಪ್ಯಾಲಸ್ತೀನ್ ರ  ಪರ ದ್ವನಿ ಎತ್ತಿದ ಭಾರತದ ಆತ್ಮ ಮಹಾತ್ಮಾ ಗಾಂಧಿ!.
  • 1959 ರಲ್ಲಿ ಟಿಬೇಟ್ ಮೇಲೆ ಚೀನಾ ಯುದ್ದ ಸಾರಿದಾಗ ಧರ್ಮ ಗುರು ದಲೈ ಲಾಮ ಗೆ ಆಶ್ರಯ ಕೊಟ್ಟ ಭಾರತ ಪ್ರಧಾನಿ ನೆಹರು,!
  • 1972 ಬಾಂಗ್ಲಾ ವಿಮೋಚನೆ ಮಾಡಿದ ಭಾರತ ಪ್ರಧಾನಿ ಇಂದಿರಾ!,
  • 1982 ರಲ್ಲಿ ಶಾಂತಿ ಸೇನೆಯನ್ನು ಶ್ರೀಲಂಕಾ ಗೆ ಕಳುಹಿಸಿದ ಭಾರತದ ಪ್ರಧಾನಿ ರಾಜೀವ್ ಗಾಂಧಿ!,
  • ಚಕ್ಮಾ ,ಹಜೋಂಗಾ ಬುದ್ದ ,ಹಿಂದು ನಿರಾಶ್ರಿತರಿಗೆ ಪೌರತ್ವ ಕೊಟ್ಟ ಭಾರತದ ಫ್ರಧಾನಿ ಮೋದಿ!,ಆದರೆ ಮ್ಯಾನ್ಮಾರ್ ಮುಸ್ಲಿಂ ನಿರಾಶ್ರಿತರನ್ನು ಹೋರಹಾಕುತ್ತಿರುವ ಕೇಂದ್ರ ಸರಕಾರ!
  • ಶಾಂತಿಯ ನೋಬೆಲ್ ಪ್ರಶಸ್ತಿಯನ್ನು ಮ್ಯಾನ್ಮಾರ್ ರಿನಲ್ಲಿ ಹರಿಯುತ್ತಿರುವ ರಕ್ತ ದಲ್ಲಿ ಧಫನ್ ಮಾಡಿದ ಆಂಗ್ ಸೂಕಿ?
  • ಸ್ವಾಮಿ ವಿವೇಕಾನಂದ ರ ಚಿಕಾಗೊ ಭಾಷಣದಲ್ಲಿ ಮ್ಯಾನ್ಮಾರ್ ರಿನ ಹತ್ಯಾಕಾಂಡ ಮತ್ತು ಗುಂಪು ಹತ್ಯೆಯ ಅಸಹಿಷ್ನತೆಯನ್ನು  ಖಂಡಿಸಿದ್ದರೆ ಜಗ ಮಾನ್ಯತೆ ಬರುತ್ತಿತ್ತು
  • ಜಗತ್ತು ದೇವಾಲಯವೆಂದ ದೇಶ ಭಾರತ.ಆದರೆ ಯಾಕೆ ಮ್ಯಾನ್ಮಾರ್ ಗೆ ದಯೆಯ ಬಾಗಿಲು ತೆರೆಯುತ್ತಿಲ್ಲ?
  • ತ್ರಿವಳಿ ಯನ್ನು ಪಾರ್ಲಿಮೆಂಟಿನ ನಲ್ಲಿ ರದ್ದು ಮಾಡಿದರೆ ಅದು ನೋಟು ರದ್ದತಿ ಯಂತೆ ಕಳಪೆ ಕಾರ್ಯ ಮಾತ್ರವಾಗುವುದು
  • ಕಪ್ಪು ಹಣ ಬರಲಿಲ್ಲ ಪಿಂಕ್  ನೋಟು ಬಂತು,ಹಸಿರು ನೋಟು ಬಂತು,ಗ್ರೀನ್ ಬಂತು,ಮುಂದೆ ಬ್ಲಾಕ್ ಎಂಡ್ ವೈಟ್ ಬರಬಹುದು
  • ಭಾಷಣ ವಿರೋಧಾಭಾಸ ದೇವಾಲಯ ದ ಹೆಸರಲ್ಲಿ  ಅಧಿಕಾರ ಪಡೆದವರು ಆದರೆ ದೇವಾಲಯಕ್ಕಿಂತ ಶೌಚಾಲಯ ಮುಖ್ಯ ವಂತೆ.
  • ಗುಂಪು ಹತ್ಯೆ ನಡೆಯುತ್ತಿದ್ದರೂ ತಿನ್ನುವುದು ಮುಖ್ಯವಲ್ಲ ವಂತೆ
  • ಮಹಿಳೆಯರ ಬಗ್ಹೆ ಕಾಳಜಿ ತಂಬಾ ಅಂತೆ  ಆದರೆ ಗೌರಿ ಮನೆ ಬಾಗಿಲಲ್ಲಿ ಹೆಣವಾಗ್ತಾರೆ
  • ಸೆಕ್ಯೂಲರ್ ದೇಶದಲ್ಲಿ ಸಾಂವಿಧಾನಿಕವಾಗಿ ಧರ್ಮ,ಅಭಿವ್ಯಕ್ತಿ ಗೆ ಸ್ವಾತಂತ್ರ್ಯ ವಿರುವಾಗ ತ್ರಿವಳಿ ಹೇಗೆ ಅಪ್ರಸ್ತುತ?
  • ತ್ರಿವಳಿ ಪರಸ್ಪರ ಒಪ್ಪಕೊಂಡವರಿಗೆ ಮಾತ್ರ ಅಲ್ಲದವರು ಸಿವಿಲ್ ಕಾನೂನಿನ ಮೊರೆ ಹೋಗುವಾಗ ಬಹು ಕೋಟಿ ಮುಸ್ಲಿಮರ ಹಕ್ಕನ್ನು ಯಾಕೆ ಕಸಿಯಬೇಕು?
  • ಎರಡು ಕಡೆ ಒಪ್ಪಿಕೊಂಡಾಗ, ಹಾಗೇ ಅನೈತಿಕ ಸಂಬಂಧ  ಸಾಬಿತಾದ ಮೇಲೆ ಇಲ್ಲವೇ ಪತ್ನಿ ಪತಿಯನ್ನು ಮುಗಿಸಲು ಮುಂದಾದಾಗ ಯಾಕೆ ಕಾಯಬೇಕು?
  • ನಕಲಿ ಎನ್ ಕೌಂಟರ್ ನಡೆದಾಗ ಯಾರೂ ಪೋಲೀಸರ ಬಂದೂಕನ್ನು ನಿಶೇಧಿಸಲಿಲ್ಲ!
  • ಅಂಗರಕ್ಷಕ ರೇ ಪ್ರಧಾನಿಯನ್ನು ಕೊಂದಾಗ ಅಂಗರಕ್ಷರನ್ನು ಬೇಡವೆನ್ನಲಿಲ್ಲ!
  • ತುರ್ತು ನಿರ್ಗಮನ ಬಾಗಿಲನ್ನು ಯಾರೂ ಬೇಡ ವೆನ್ನಲಿಲ್ಲ ಹಾಗೇ ತ್ರಿವಳಿ
  • ಸಂತರು, ಮಹರ್ಷಿಗಳು, ಔಲಿಯಾಗಳು ಬೆಳೆಸಿದ ಪರ ಮತ ಸಹಿಷ್ಣುತೆ ಕಾಪಾಡೋಣ ನಾವೆಲ್ಲರೂ ಸಂವಿಧಾನ ವನ್ನು ಕಾಪಾಡೋಣ ಗಟ್ಟಿಯಾಗಿ ಹೇಳೋಣ "WE ARE INDIYAN"


REPORT AL AHSAN MONTHLY

ಜೀವ ರಕ್ಷಣಾ ಸೇವಾಕಾರ್ಯಗಳು ಗಡಿ ದಾಟಿ ಮ್ಯಾನ್ಮಾರಿನ ಸಂತ್ರಸ್ತರಿಗೆ ತಲುಪಲಿ

ಮರಣ ಮತ್ತು ರೋಗ ವನ್ನು ಬರೀ ಮದ್ದಿನಿಂದ ದೂರಮಾಡಲಾಗದು

ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಬಾಲಕ ಇಮ್ರಾಝಿನ ಮರಣವು ದಿಗ್ಭ್ರಮೆಯನ್ನುಂಟುಮಾಡಿದೆ. ಕದಿಕೆಯ ಮರಿಯಂ ಸಾಹಿರಾ ಒಂಬತ್ತು ವರ್ಷ ಪ್ರಾಯದ ಮಗುವಿನ ಆರೋಗ್ಯಕ್ಕಾಗಿ ವರ್ಷ ಪೂರ್ತಿ ಹೆಚ್ಚುಕಡಿಮೆ ಇಪ್ಪತ್ತೈದು ಲಕ್ಷ ಕ್ಕಿಂತಲೂ ಹೆಚ್ಚು ಖರ್ಚು ಮಾಡಿದರೂ ಮುದ್ದು ಮಗಳನ್ನು ಉಳಿಸಲಾಗಲಿಲ್ಲ.
ಬೋಳಾರದ ಹೆಣ್ಣು ಮಗಳು   ನಿಸ್ಮಿತ  ಮಗುವನ್ನು ಹೆತ್ತು ನಾಲ್ಕೈದು ದಿನಗಳಲ್ಲಿ ನಿಮೋನಿಯಕ್ಕೆ ತುತ್ತಾಗಿ ತೀರಿಕೊಳ್ಳುತ್ತಾಳೆ.
ಕೆಲವು ಮರಣಗಳು ನಮ್ಮನ್ನು ಇನ್ನಿಲ್ಲದಂತೆ ಘಾಸಿ ಗೊಳಿಸಿದರೆ ಮತ್ತೆ ಕೆಲವು ಮರಣಗಳು ಗಮನಕ್ಕೆ ಬಾರದೇ ನಡೆದು ಹೋಗುತ್ತದೆ.
ಇದಕ್ಕಿಂತಲೂ ದಯನೀಯ ಸ್ಥಿತಿ ಮಾರಕ ರೋಗಕ್ಕೆ ತುತ್ತಾಗಿ ಅಥವಾ ಅಪಘಾತಗಳಲ್ಲಿ ತೀವ್ರ  ಗಾಯಗೊಂಡು ಚಿಕಿತ್ಸೆಗಾಗಿ ಪರದಾಡುವವರದ್ದು.
ಇಂತಹಾ ಪರಿಸ್ತಿತಿ ಯಾರಿಗೂ ಬೇಡ ಎಂದು ಕೆಲವೊಮ್ಮೆ ಅಂದು ಕೊಂಡರೂ ಏನನ್ನೂ ಮಾಡಲಾಗದ ಸ್ಥಿತಿ?
ಇಲ್ಲಿ ನಮಗೆ ಕೆಲವೊಂದು ಕಾರ್ಯಗಳನ್ನು ಮಾಡಿ ರೋಗ ಮತ್ತು ಮರಣವನ್ನು ದೂರಮಾಡಬಹುದು ಎನ್ನುವುದು ಸಾತ್ವಿಕ ವಿಚಾರ.
ಪ್ರವಾದಿಗಳು ಹೇಳುತ್ತಾರೆ.
ವಿಧಿಯನ್ನು ಪ್ರಾರ್ಥನೆಯು ತಡೆಗಟ್ಟುತ್ತದೆ. ಸತ್ಕರ್ಮವು ಆಯುಷ್ಯವನ್ನು ವೃದ್ಧಿಸುವಂತೆ ಮಾಡುತ್ತದೆ.ಪಾಪಗಳಿಂದ ಅನ್ನಕ್ಕೆ ಕುತ್ತು ಬರುತ್ತದೆ.
ನಮ್ಮಲ್ಲಿರುವ ಕೊರತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದಿಲ್ಲ ಎನ್ನುವುದಾಗಿದೆ.
ರೋಗ ಬಂದ ಮೇಲೆ ಲಕ್ಷ ಖರ್ಚು ಮಾಡಲು ಮುಂದಾಗುತ್ತೇವೆ.ಮರಣ ಬಳಿಕ ದಾನ ಧರ್ಮ ಮಾಡುತ್ತೇವೆ.
ಮರಣ ಹೊಂದಿದವರ ಹೆಸರಲ್ಲಿ ಮಸೀದಿಯನ್ನೇ ಕಟ್ಟುವೆವು.
ಆದರೆ ಜೀವಿತಾವಧಿಯಲ್ಲಿ ಹಸಿದವನಿಗೆ ಅನ್ನ ಕೊಡುವ ಮನಸ್ಸಿಲ್ಲ.ಬದುಕಿರುವಾಗ ತಿರುಗಿ ನೋಡದವ ಮರಣದ ಸಮಯದಲ್ಲಿ ಕಣ್ಣೀರು ಹಾಕಿ ಏನು ಲಾಭ?
ನಮ್ಮ ಮುಂದೆ ನಿತ್ಯದ ಜೀವನಕ್ಕೆ ಪರದಾಡುವ ಮಂದಿ ಅನೇಕ ಇದ್ದಾರೆ.
ಮನೆ ಬೀಳುವ ಸ್ಥಿತಿ ಯಲ್ಲಿ!
ಸೋರುವ ಮಾಡು! ಹಾಳಾಗಿ ಹೋಗುವ ವಸ್ತುಗಳು,ಬೆಂಬಿಡದ ರೋಗಗಳು! ದಾರಿಯೇ ಕಾಣದ ರೀತಿಯಲ್ಲಿ ಬದುಕುವ ಮಂದಿ.
ನಾವೆಷ್ಟೇ ಶಕ್ತರೆಂದು ಎನಿಸಿದರೂ ಒಂದು ರೋಗ ನಮ್ಮನ್ನು ಅಲುಗಾಡಿಸಿ ಬಿಡುತ್ತದೆ.ಮತ್ತೆ ನಮಗೆ ಯಾರೊಂದಿಗೂ ಹಗೆತನ ಇರೋದಿಲ್ಲ.ಪೈಪೋಟಿ ಗೆ ಬೀಳೋದಿಲ್ಲ.
ನನಗೊಂದು ಕಥೆ ನೆನಪಾಗುತ್ತದೆ.ಒಂದೂರಲ್ಲಿ ರಾಜ ಆಡಳಿತ ವಿತ್ತು.ಆದರೆ ಅಲ್ಲಿ ಅಧಿಕಾರ ಅವಧಿ ಒಂದು ವರ್ಷ ಮಾತ್ರವಾಗಿತ್ತು. ಒಂದು ವರ್ಷದ ಮಟ್ಟಿಗೆ ಒಬ್ಬನನ್ನು ರಾಜನನ್ನಾಗಿ ಮಾಡಿ ನಂತರ ದೂರದ ದ್ವೀಪಿಗೆ ಬಿಟ್ಟು ಬರುವ ಸಂಪ್ರದಾಯ. ಅಲ್ಲಿ ಜನವಾಸವಿರಲಿಲ್ಲ. ಅಲ್ಲಿರುವ ಕ್ರೂರ ಪ್ರಾಣಿಗಳಿಗೆ ಆತ ಬಲಿಯಾಗುವುದು ಸಾಮಾನ್ಯ.  ಈ ಕಾರಣದಿಂದ ರಾಜನಾಗಿ ಆರಿಸಲ್ಪಟ್ಟವನು ತನ್ನ ಅಧಿಕಾರದ ಕೊನೆಯಲ್ಲಿ ಸಂಕಷ್ಟ ಎದುರಿಸುತ್ತಿದ್ದ ಒಮ್ಮೆ ಹಾಗೇ ರಾಜನಾದ ಒಬ್ಬ ಮೊದಲ ತಿಂಗಳಲ್ಲೇ ಆ ದ್ವೀಪಿಗೆ ಸೇನೆಯ ನ್ನು ಕಳಿಸಿ ಮೃಗಗಳನ್ನ
ಸಂಹರಿಸುತ್ತಾನೆ.ನಂತರ ಅಲ್ಲಿ ಬೇಕಾದ ಎಲ್ಲಾ ವ್ಯವಸ್ತೆಯ ನ್ನು ಮಾಡಿಕೊಳ್ಳುತ್ತಾನೆ.ವರ್ಷ ಮುಗಿಯುತ್ತಾ ಬಂದಾಗ ಯಾವ ಚಿಂತೆ ಇಲ್ಲದೇ ಆ ದ್ವೀಪಿಗೆ ಹೊರಡುತ್ತಾನೆ.
ಇದು ಕಥೆಯಾದರೂ  ವ್ಯಥೆ ಪಡದಿರಲು  ಪೂರ್ವ ತಯಾರಿಯಾಗಿ ಏನಾದರೂ ಮಾಡಬೇಕೆಂದನ್ನು ಇದು ಹೇಳಿಕೊಡುತ್ತದೆ.
ರೋಗ ,ಮರಣ ಬರುವ ಮೊದಲು ಪುಣ್ಯ ಮಾಡುವುದೂ ಆರೋಗ್ಯ ಕಾಪಾಡುವ ಭಾಗವಾಗಿ ಪ್ರವಾದಿಯವರು (ಸ) ವಿವರಿಸುತ್ತಾರೆ.
ಉತ್ತಮ ಕಾರ್ಯ ಪರರ ಸೇವೆ ಮುಂತಾದವುಗಳಿಂದ ನಮ್ಮ ಆರೋಗ್ಯ ವನ್ನು ಆಯುಷ್ಯವನ್ನೂ ಕಾಪಾಡಬಹುದು ಎನ್ನುವುದು ಪ್ರವಾದಿ ಮಾತು.
ದಾನವು ಅಲ್ಲಾಹನ ಕೋಪವನ್ನುತಣಿಸುತ್ತದೆ. ಕೆಟ್ಟ ಮರಣ ದಿಂದ ಕಾಪಾಡುತ್ತದೆ.
ದಾನದ ಮೂಲಕ ನಿಮ್ಮ ರೋಗಗಳಿಗೆ ಚಿಕಿತ್ಸೆ ಮಾಡಿ ಹದೀಸು
ನಮ್ಮ ಸುತ್ತಲೂ ಇರುವ ಅಸಹಾಯಕರಿಗೆ ,ರೋಗಗ್ರಸ್ತ ಜನರಿಗೆ ನಮ್ಮಿಂದ ಸಾಧ್ಯವಾದ ಸಹಕಾರ ತಲುಪಬೇಕಾಗಿದೆ.ಅದು ವರ್ಗ. ಪಂಗಡ, ಜಾತಿ, ಧರ್ಮ ,ಊರು ಕೇರಿ, ದೇಶ ದಾಟಿ ಮ್ಯಾನ್ಮಾರಿನ ನಿರಾಶ್ರಿತ ಜನರಿಗೂ ಮುಟ್ಟಬೇಕು.ಆ ಮೂಲಕ
ರೋಗ ,ಸಾವು ನೋವನ್ನು ಇನ್ನಷ್ಟು ದೂರ ಮಾಡೋಣ.

ವರದಿ ಅಲ್ ಅಹ್ಸನ್ ಮಾಸಿಕ

ಅಭಿವ್ಯಕ್ತಿಯನ್ನು ಗುಂಡಿನ ಮೂಲಕ ಹತ್ತಿಕ್ಕಲಾಗದು.ಯಾಕೆಂದರೆ ರಕ್ತ ಅಧ್ಯಾಯವನ್ನು ವಿಚಾರಕ್ರಾಂತಿಯು ಎಲ್ಲಾ ಕಾಲದಲ್ಲಿ ಸೋಲಿಸಿದ್ದೇ ಇತಿಹಾಸ.

ಬಲವಂತವಾಗಿ ಹೇರಿದ್ದು ಹೆಚ್ಚು ಕಾಲ ಬಾಳದು

ಭಾಷಣ :ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಅಭಿವ್ಯಕ್ತಿ ಯ ಬಗ್ಗೆ ಹೆಚ್ಚು ಗೌರವ ಕೊಡುವ ಧರ್ಮ ವಾಗಿದೆ ಇಸ್ಲಾಂ.
"ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ"(2:256) ಎಂದು ಕುರಾನ್ ಹೇಳುತ್ತದೆ.
ಸ್ವ ಇಚ್ಚೆಯಿಂದ ಅಲ್ಲದೇ ಯಾವನೇ ಒಬ್ಬನ ಇಸ್ಲಾಂ ಧರ್ಮ ಸ್ವೀಕಾರವನ್ನು ಪುರಸ್ಕರಿಸಲಾಗುವುದಿಲ್ಲ.ಇದು ಸಂಪೂರ್ಣ ಅಭಿವ್ಯಕ್ತಿ ಗೆ ಇಸ್ಲಾಂ ಕೊಟ್ಟ ಅಂಗೀಕಾರ ವಾಗಿದೆ.
ಪ್ರವಾದಿ( ಸ ) ರವರು ತನ್ನ ಚಿಕ್ಕಪ್ಪರಿಗೆ  ಅವರ ಕೊನೆಯ ಉಸಿರಿನ ತನಕ ಉಪದೇಶವನ್ನೇ ನೀಡಿದರು.ಹುದೈಬಿಯಾ ಸಂಧಾನ ಸಮಯ ವಿರೋಧಿ ಬಣದ ನಾಯಕ ಸುಹೈಲ್ ರವರು ಕಾರಾರು ಒಪ್ಪಂದ ಪತ್ರದಲ್ಲಿ *ಬಿಸ್ಮಿಲ್ಲಾಹಿ ಮತ್ತು ರಸೂಲುಲ್ಲಾ "ಎಂಬ ಎರಡು ಪದಗಳನ್ನು ತೆಗೆದು ಹಾಕಲು  ಹೇಳುತ್ತಾರೆ ಬದಲಿಗೆ ಬಿಸ್ಮಿಕಲ್ಲಾಹುಮ್ಮ ಎಂದೂ ಮುಹಮ್ಮದ್ ಬಿನ್ ಅಬ್ದುಲ್ಲಾಹಿ ಎಂದು  ಬರೆಯಲು ಅಪೇಕ್ಷಿಸುತ್ತಾರೆ.ಕಾರಣ ಇಷ್ಟೆ ನಿಮ್ಮನ್ನು ಅಲ್ಲಾಹನ ಪ್ರವಾದಿ ಎಂದು ನಾವು ಒಪ್ಪಿಕೊಂಡರೆ ನಮಗೂ ನಿಮಗೂ ಇರುವ ವ್ಯತ್ಯಾಸ ವೇನು? ಈ ಅಭಿಪ್ರಾಯವನ್ನು ರಸೂಲರು ಸಮ್ಮತಿಸುತ್ತಾರೆ. ಹಿಜರಿ ಆರನೆಯ ವರ್ಷ.ಅಹ್ಝಾಬ್ ಯುದ್ಧ ಬಳಿಕ ನಜಿದಿನ ಭಾಗಕ್ಕೆ ರಸೂಲರು ಸೈನ್ಯವನ್ನು ಕಳುಹಿಸುತ್ತಾರೆ.ಸೇನೆಯು ಮರಳಿ ಬರುವಾಗ ಬನೂ ಹನೀಫ್ ಗೋತ್ರ ನಾಯಕನನ್ನು ಸೆರೆ ಹಿಡಿದು ತರುತ್ತಾರೆ .ಪ್ರವಾದಿ ಕೆಳುತ್ತಾರೆ ಇದು ಯಾರೆಂದು ಗೊತ್ತಾ ?ಇದುವೇ ಸುಮಾಮತ್ ಇಬ್ನು ಉಸಾಲ್ !ಇವರನ್ನು ಚೆನ್ನಾಗಿ ಉತ್ತಮ ಸೆರೆಯಾಳಾಗಿ ನೋಡಿಕೊಳ್ಳಿ.ನಂತರ ತನ್ನ ಒಂಟೆಯ ಹಾಲನ್ನು ಕುಡಿಯಲು ನೆಬಿಯವರು ವ್ಯವಸ್ಥೆ ಗೊಳಿಸಿದ್ದರು.ಕೆಲ ದಿನಗಳ ಕಾಲ ಪ್ರವಾದಿಯವರು ಅವರಿಗೆ ಧರ್ಮದ ಬಗ್ಗೆ ಬೋಧನೆ ನೀಡುತ್ತಾರೆ.ಯಾವುದಕ್ಕೂ ಕಿವಿಗೊಡದ ಸುಮಾಮರನ್ನು ನೆಬಿಯವರು ಬಂಧನದಿಂದ ಮುಕ್ತಗೊಳಿಸುತ್ತಾರೆ.ಸೆರೆಯಿಂದ ಮುಕ್ತವಾದ ಸುಮಾಮ ಮಸೀದಿ ಬಳಿ ಇರುವ ಖರ್ಜೂರ ಮರ ಬಳಿ ಹೋಗಿ ಅಲ್ಲೆ ಇರುವ ನೀರಿನಲ್ಲ ಸ್ನಾನ ಮಾಡಿ ಸ್ವ ಇಚ್ಚೆಯಿಂದ ಮರಳಿ ಬಂದು ನಬಿ ಸಮ್ಮುಖದಲ್ಲಿ ಇಸ್ಲಾಮನ್ನು ಸ್ವೀಕರಿಸುತ್ತಾರೆ.

ಅನ್ಯವನ ಮೇಲೆ ಒತ್ತಡ ಹೇರದಂತೆ ಪ್ರತಿಯೊಬ್ಬರಿಗೂ ಅವರವರ ಅಭಿಮತವನ್ನು ಪ್ರಕಟಿಸುವ ಅವಕಾಶವಿದೆ.
ಅಂತಹಾ ಸ್ವಾತಂತ್ರ್ಯ ವನ್ನು ಪ್ರಬಲವಾಗಿ ಪ್ರತಿಪಾದಿಸಿದ ದೇಶ ನಮ್ಮದು.ಅದು ಸರ್ವರಿಗೂ ಸ್ವತಂತ್ರವಾಗಿ ಚಿಂತಿಸಲು ಮತ್ತು ಅದನ್ನು ಆಚರಿಸಲು ಅನುವು ಮಾಡಿ ಕೊಡುತ್ತದೆ. ದೇಶದ ಸಾಂವಿಧಾನಿಕ ಅಡಿಪಾಯವೂ ಅದಾಗಿದೆ.ಈ ಮಹತ್ವದ ಹಕ್ಕನ್ನು ಕಸಿದುಕೊಂಡು ಅಘೋಷಿತ ಸಿದ್ದಾಂತ ಗಳನ್ನು ಒಪ್ಪಿಕೊಂಡು ಸುಮ್ಮನಿರಬೇಕೆಂಬ ಸಂದೇಶಗಳನ್ನು ಕೆಲವು ಹಿತಾಸಕ್ತಿಗಳು ಬರ್ಬರತೆ ಯ ನೆರಳಲ್ಲಿ ಸಾರುತ್ತಿರುವುದನ್ನು ನಾವು ನೋಡುತ್ತಿದ್ದೇವೆ.ನಾರಿಯರಿಗೆ ವಿಶೇಷವಾದ ಸ್ಥಾನ ?ಪ್ರಾಣಿಗಳಿಗೆ ಪರಮವಾದ ಮಾನ ? ಅಭಿವ್ಯಕ್ತಿ ಗೆ ಕಾನೂನಿನ ರಕ್ಷೆ ?ಹೀಗಿದ್ದೂ ಪ್ರಾಣ ರಕ್ಷಾಣಾರ್ಥವಾಗಿ ಯಾವುದನ್ನು ಒಲ್ಲದ ಸವಕಲು ಜೀವವನ್ನು ನಿರ್ಭಯವಾಗಿ ಮನೆ ಬಾಗಿಲಲ್ಲೇ ಕೊಂದು ಹಾಕಲ್ಪಡುವಾಗ ನಷ್ಟವಾಗಿದ್ದು ಒಂದು ಜೀವ ಮಾತ್ರವಲ್ಲ. ಬದಲಾಗಿ ಈ ದೇಶದ ಜೀವಾಳವಾಗಿರು ಪ್ರಾಣವಾಯು ಅಭಿವ್ಯಕ್ತಿ ಯಾಗಿದೆ.ಈ ಗಾಯವು ಅಮೇರಿಕ,ಲಂಡನ್ ನಲ್ಲೂ ಚಲನವನ್ನುಂಟು ಮಾಡಿದೆ.ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ.ಅನ್ಯಾಯ ಅಕ್ರಮವನ್ಮು ಎದುರಿಸುವ ಮನೋ ಧೈರ್ಯ ಬಲವಾಗುತ್ತಿದೆ.ಅದು ಸಾವಿರಾರು ಹೋರಾಟಗಾರರನ್ನು ಸೃಜಿಸಲಿದೆ.
ಜಗತ್ತಿನಲ್ಲಿ ನಡೆದ ಮಾನವ ಹತ್ಯಾಕಾಂಡದ ಅಧ್ಯಾಯಗಳು ಒಂದಲ್ಲ ಎರಡಲ್ಲ.ಸಾವಿರಾರು !ಅದರೆ ಎಲ್ಲಾ ದೌರ್ಜನ್ಯ ದಬ್ಬಾಳಿಕೆಯನ್ನು ಸಹಿಸಿ ಎದ್ದು ನಿಲ್ಲಲು ಮಾನವ ಸಮಾಜಕ್ಕೆ ಸಾಧ್ಯವಾಗಿದ್ದು ಸಮಾಜದೊಳಗೆ ಜಾಗ್ರತವಾಗುವ ವೈಚಾರಿಕತೆಯ ಫಲವಾಗಿದೆ.ಅದಿಲ್ಲದೇ ಹೋಗಿದ್ದರೆ ಜಗತ್ತಿನಲ್ಲಿ ದುಷ್ಟರೇ ತುಂಬಿಕೊಳ್ಳುತ್ತಿದ್ದರು.ಜಗತ್ತಿನಲ್ಲಿ ಇರುವ ಎಲ್ಲಾ ಅತ್ಯಾಧುನಿಕ ಆಯುಧಗಳನ್ನು ಸೋಲಿಸುವ ಪರಿಣಾಮಕಾರಿ ಆಯುಧ ವಿಚಾರ ಕ್ರಾಂತಿ.ಅದು ದುರುಳ ದುಷ್ಟರನ್ನು ಮಣ್ಣು ಮುಕ್ಕಿಸಿದೆ.ಬಲವಂತವಾಗಿ ಹೇರಲ್ಪಡುವ ಯಾವುದೇ ನಂಬಿಕೆ, ವಿಶ್ವಾಸಗಳು ಬಹುಕಾಲ ಉಳಿಯದು.ಖ್ಯಾತ ಚಿಂತಕರೋರ್ವರ ಮಾತು ಅಕ್ಷರಶಃ ಸತ್ಯ.
"ನಾನು ಬದುಕಿರೋ ತನಕ ನಿನ್ನ ಅಭಿಪ್ರಾಯವನ್ನು ಒಪ್ಪಲಾರೆ . ಆದರೆ ಅದನ್ನು ಪ್ರಕಟಗೊಳಿಸಲು ನಿನಗಿರುವ ಹಕ್ಕಿನ ರಕ್ಷಣೆಗೆ ದೇಹದ ಹನಿ ರಕ್ತ ಇರೋ ತನಕ ಹೋರಾಡುವೆ.
ಬಹು ರೀತಿಯ ಸಂಸ್ಕೃತಿಯೇ ಧರ್ಮ ವೆನ್ನುವವರು ಸಾಮಾನ್ಯ ಜನರ ಅಭಿವ್ಯಕ್ತಿಯನ್ನೇ ಕಸಿಯಲು ತಂತ್ರ ರೂಪಿಸುವುದು ಎಷ್ಡು ಸರಿ.?ಇಸ್ಲಾಮಿನ ತತ್ವ ಪ್ರಕಾರ ಬಲವಂತವಾಗಿ ಯಾರನ್ನೂ ಮುಸ್ಲಿಂ ಆಗಿ ಮಾಡಲಾಗದು ಕಾರಣ ಯಾವನೇ ಒಬ್ಬನನ್ನು ಮುಸಲ್ಮಾನ ಎಂದು ಪರಿಗಣಿಸಬೇಕಾದರೆ ಆತ ಸ್ವಯಂ ಪ್ರೇರಿತನಾಗಿ ನಂಬಿ,ವಿಶ್ವಾಸವಿರಿಸಿ ನಾಲಗೆಯ ಮೂಲಕ ಹೇಳಲೇ ಬೇಕಾಗುತ್ತದೆ.
ಹೀಗೆ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸಿದ ಧರ್ಮವಾಗಿದೆ ಇಸ್ಲಾಂ.
ಆಕಾರಣಗಳಿಂದಲೇ ಅರಬ್ ದೇಶಗಳಲ್ಲಿ ಇಂದಿಗೂ ನಲುವತ್ತು ಲಕ್ಷ ಕ್ಕಿಂತಲೂ ಅಧಿಕ ಮುಸ್ಲಿಮೇತರರು ಜೀವನ ಸಾಗಿಸುತ್ತಿದ್ದಾರೆ.
ಅದೇ ರೀತಿ ಮುಸಲ್ಮಾನರು ಆಡಳಿತ ನಡೆಸಿದ ಪ್ರದೇಶಗಳಲ್ಲಿ ಶತಶತಮಾನಗಳಲ್ಲಿ ಪರಮತ ಸಹಿಷ್ಣುತೆಯ ಉದಾತ್ತ ಮಾದರಿ ಉಳಿದಿದೆ.ಅದೇ ಕಾರಣಕ್ಕಾಗಿ ಭಾರತವೆಂಬ ಬ್ರಹತ್ತಾದ ಸಮಗ್ರವಾಗ ಧರ್ಮ ನಿರಪೇಕ್ಷ ಸಂವಿಧಾನವನ್ನು ಮುಸಲ್ಮಾನರು ಎದೆಗಪ್ಪಿಕೊಂಡು ಗೌರವಿಸುತ್ತಾರೆ.ಎಲ್ಲಿ ಯಾರು ಪರರ ಅಭಿವ್ಯಕ್ತಿ ಯನ್ನು ಗೌರವಿಸುವುದಿಲ್ಲವೋ ಅಲ್ಲಿ ಗುಲಾಮತನದ ಮತ್ತು ಜಾತಿ ಬೇಧ ದ ಸಂಹಾರ ನಡೆಯುತ್ತದೆ.ಮ್ಯಾನ್ಮಾರ್ ನಲ್ಲಿ ನಡೆವ ಹತ್ಯಾಕಾಂಡ ಮತ್ತು ನಮ್ಮ ದೇಶದಲ್ಲಿ ನಡೆಯುವ ಅಸಹಿಷ್ಣುತೆಯ ಹತ್ಯೆಗಳು ಇದರ ಪರಿಣಾಮವಾಗಿದೆ.ದಲಿತ,ಅಲ್ಪಸಂಖ್ಯಾತ, ಮತ್ತು ವಿಚಾರವಾದಿಗಳ ಕೊಲೆಗಳು ಇದನ್ನು ಸಾಬೀತು ಪ‌ಡಿಸುತ್ತದೆ.

🌅 ವರದಿ ಅಲ್ ಅಹ್ಸನ್ ಮಾಸಿಕ

ನಕಲಿ ದೇವ ಮಾನವರ ವಂಚನೆಯನ್ನು ಬುಡ ಸಮೇತ ಕಿತ್ತೆಸೆದ ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಂ

ಇಪ್ಪತ್ತನಾಲ್ಕರ ಹೆಣ್ಣು ಮಗಳು ಕಿಟಕಿಯ ಮೂಲಕ ನನ್ನನ್ನು ರಕ್ಷಿಸಿ ಎಂದು ಸ್ವಂತ ಮನೆಯಿಂದ ಕೂಗಿ ಹೇಳುವ ಸ್ಥಿತಿಯಲ್ಲಿ ‌.....?

ಭಾಷಣ ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ 

ಬಕ್ರೀದ್ ಸಂದೇಶ


ಹಝ್ರತ್ ಇಬ್ರಾಹಿಂ(ಅ)ಮತ್ತು ಕುಟುಂಬದ ತ್ಯಾಗ, ಬಲಿದಾನಗಳ ಮಹೋನ್ನತ ಅಧ್ಯಾಯದ ಸ್ಮರಣೆ ಯಾಗಿದೆ ಈದುಲ್ ಅಝ್ಹಾ.
ಅಸ್ತಮಿಸುವ ನಕ್ಷತ್ರ, ಚಂದ್ರ,ಸೂರ್ಯ ಹಾಗೇ ಮಾನವ ನಿರ್ಮಿತ ರೂಪಗಳು ಹೆಚ್ಚೇಕೆ ಮಾನವನೇ ದೇವನಾಗಲಾರನೆಂಬ ಸತ್ಯವನ್ನು ಆಧಾರ ಸಮೇತ ಜಗತ್ತಿಗೆ ಸಾರಿದ ಏಕ ವ್ಯಕ್ತಿ ಸೇನೆಯ ಸಾಮ್ರಾಟ್ ಹಝ್ರತ್ ಇಬ್ರಾಹಿಂ (ಅ).
ದೇವದೂತರೆಲ್ಲರೂ ಹೇಳಿದ್ದು ನಾವು ಅಲ್ಲಾಹನ ದಾಸರು.ಯಾರೂ ದೇವನೆಂದೋ ದೇವ ಮಾನವನೆಂದೋ ವಾದಿಸಲಿಲ್ಲ.
ಎಲ್ಲಾ ಪ್ರವಾದಿಗಳು ಪ್ರತಿಪಾದಿಸಿದ ಕಾರ್ಯ ಏಕ ದೇವ ಸಿದ್ದಾಂತ ವಾಗಿತ್ತು.
ಅತ್ಯಾಧುನಿಕತೆಯ ಈ ಕಾಲದಲ್ಲೂ ಚೋಟಾ ಮನುಷ್ಯ ದೇವ ಮಾನವನೆಂದು ಪ್ರತಿ ಬಿಂಬಿಸೋದು ಅಸಹ್ಯವಾಗಿ ಕಾಣುತ್ತದೆ.ದಿನಕ್ಕೆ ಹದಿನೇಳು ಲಕ್ಷದಷ್ಟು ಸಂಪಾದನೆ ,ಐದು ಲಕ್ಷದಷ್ಟು ಅನುಯಾಯಿಗಳು ರಾಜಕೀಯದ ಬಿಗ್ ಡೀಲುಗಳು ?ನಡೆಸುವ ಗುರ್ಮಿತ್ ಬಾಬ ಕಡೆಗೂ ಜೈಲು ಪಾಲಾಗಿದ್ದು ಐತಿಹಾಸಿಕ ಸತ್ಯ.ಆ ಮೂಲಕ ಕೆಲವರ
ಅರಮನೆಯಗಳು ದೇವ ಆಸ್ಥಾನ ಆಗಿರದೇ ಅದು ಬರೀ ಮಾಂಸ ಉಪಚಾರದ ಕೋಣೆಗಳು ಮಾತ್ರವಾಗಿತ್ತೆಂದು ಬೆಳಕಿಗೆ ಬಂತು.ಹಾಗೇ ದೇವ ಮಾನವ ಮಾನ ಕಳೆದು ಮಾನವ ನ್ಯಾಯಾಲಯದಲ್ಲಿ ಅತ್ತು ಕುಸಿದು ಬಿದ್ದ.
ಎಲ್ಲಾ ರೀತಿಯ ಸಂಕಷ್ಟಗಳನ್ನು ಎದುರಿಸಿ ಇಬ್ರಾಹೀಂ (ಅ) ಜಯಶ್ರೀ ಯಾದರು.ಸಮಾಜ ಮತ್ತು ಸಾಮ್ರೂಜ್ಯ ಎದುರಾದರೂ  ಎದೆಗುಂದ‌‌‌‌‌‌‌‌‌‌‌‌‌‌‌ದೆ ಎದುರಿಸಿದರು.ಊರನ್ನು ಬಿಟ್ಟು ಮಡದಿ ಮಕ್ಕಳನ್ನು ತ್ಯಜಿಸಿ ಅಗ್ನಿಕುಂಡಗಳನ್ನೇ ಗೆದ್ದು ಪುತ್ರ ಕುತ್ತಿಗೆಗೆ ಖಡ್ಗವನ್ನಿಡಲು ಮುಂದಾದರು.ಇದು ಅಗ್ನಿ ಪರೀಕ್ಷೆ ಎಂದು ಕುರಾನ್ ಹೇಳಿತು.ಎಲ್ಲಾ ಪರೀಕ್ಷೆಗಳನ್ನು ಜಯಿಸದಾಗ ಜಗತ್ತಿಗೆ ಇಬ್ರಾಹೀಮರನ್ನು ಅಲ್ಲಾಹನು  ನಾಯಕನನ್ನಾಗಿಸಿದ.
ಇಬ್ರಾಹಿಮ್  (ಅ) ರನ್ನು ಅನುಸರಿಸಿದವರಿಗಿಂತ ಉತ್ತಮ ಧರ್ಮನಿಷ್ಟೆ  ಇರುವವ ಯಾರು ಎಂದು ಪ್ರಶ್ನಿಸಿದ.
ಒಮ್ಮೆ ಇಬ್ರಾಹೀಂ (ಅ)ಹೇಳುತ್ತಾರೆ ನಾನು ಅಗ್ನಿ ಕುಂಡ ದಲ್ಲಿದ್ದ ಏಳು ದಿನಗಳು ನನ್ನ ಜೀವನದ ಅತ್ಯಂತ ಶ್ರೇಷ್ಠವಾದ ಕಾಲವಾಗಿತ್ತು.ಹಾಗಾದರೆ ಅಧರ್ಮದ ವಿರುದ್ಧ ಹೋರಾಡುವ ಬದುಕು ಮಹೋನ್ನತ ವಾದುದು ಎಂದಾಗಿದೆ.
ಇದು ಇಂದಿಗೂ ಪ್ರಸ್ತುತ ವಾಗುತ್ತಲಿದೆ.ಜನರನ್ನು ಬೀದಿಗಳಲ್ಲಿ ಹೊಡೆದು ಕೊಲ್ಲುವುದು,ಆಸ್ಪತ್ರೆಯಲ್ಲಿ ನೂರಾರು ಮಕ್ಕಳು ಪ್ರಾಣ ಬಿಡೋದು ಚರ್ಚೆಯಾಗದೇ ತ್ರಿವಳಿ ತಲಾಕ್ ದೊಡ್ಡ ಸುದ್ದಿಯಾಗುತ್ತದೆ.ಕ್ರಿಕೆಟಿಗನೊಬ್ಬಕ್ರಿಕೇಟ್ ಅಂಗಳದಲ್ಲಿ ಮಕಾಡೆ ಮಲಗಿದ ಸುದ್ದಿ ಬಿತ್ತರವಾಗುವಾಗ ಬಾಂಗ್ಲಾ ಗಡಿಯಲ್ಲಿ ಮ್ಯಾನ್ಮಾರ್ ಮಣ್ಣಿನಲ್ಲಿ  ನೋಬೆಲ್ ಸೂಕಿಯ ದೇಶದಲ್ಲಿ, ಶಾಂತಿ ದೂತ ಬುದ್ಧನ ಅನುಯಾಯಿಗಳು ಜನರನ್ನು ಜೀವಂತ ಹೂಳುತ್ತಾರೆ,ಸುಡುತ್ತಾರೆ,ಕೈಕಾಲುಗಳನ್ನು ನಿರ್ಧಯವಾಗಿ ಕತ್ತರಿಸುತ್ತಾರೆ.ನಗ್ನವಾಗಿ ಮರಗಳಿಗೆ ಆಣಿ ಹೊಡೆದು ನೇತು ಹಾಕುತ್ತಾರೆ.ಅಸಂಖ್ಯಾತ ಜೀವಗಳು ಗದ್ದೆ ಪೊದೆಗಳಲ್ಲಿ ಪ್ರಾಣ ಬಿಟ್ಟರೆ.ಮತ್ತೆ ಅನೇಕ ಶವಗಳು ಬರ್ಮಾ ತೀರದಲ್ಲಿ ರಾಶಿ ಬೀಳುತ್ತದೆ.ಉಳಿದವರು ಇರೋ ಪ್ರಾಣ ಕೈಯಲ್ಲಿ ಹಿಡಿದು ಪಲಾಯನ ಮಾಡುತ್ತಿದ್ದರೆ ಎಲ್ಲಿಗೆ ಯಾಕೆ ?ಎಂದು ಗೊತ್ತುಗುರಿ ಇಲ್ಲ.ಕಡಲು ಸೇರಿದ ಅನೇಕರು ಮೀನಿಗೆ ಆಹಾರವಾಗಿಯೂ ಬಲಿಯಾಗುತ್ತಿದ್ದಾರೆ.ಕತ್ತರಿಸಲ್ಪಟ್ಟ ರುಂಡವನ್ನು ಕೆಲವರು ಹಿಡಿದು ಅಳುತ್ತಿದ್ದರೆ ಮತ್ತೆ ಕೆಲವರು ಛಿದ್ರ ಛಿದ್ರವಾದ ದೇಹದ ಮುಂದೆ ಅಸಹಾಯಕತೆ ಯ ಕಣ್ಣೀರನ್ನು ಸುರಿಸುತ್ತಿದ್ದಾರೆ
ಆದರೆ ಇದ್ಯಾವುದನ್ನು ಆಲಿಸಲು ಜಗತ್ತಿಗೆ ಕಿವಿಯಿಲ್ಲ.ಅದರೆ ಐಸಿಸ್ ಎಂಬ ಕಟ್ಟಾ ಮುಸ್ಲಿಂ ವಿರೋಧಿ ದುಷ್ಟಕೂಟವು ಮಸ್ಲಿಮರನ್ನು ಮತ್ತು ಮುಸ್ಲಿಂ ರಾಷ್ಟಗಳನ್ನು ಪವಿತ್ರ ಮದೀನವನ್ನು  ಟಾರ್ಗೇಟ್ ಮಾಡಿ ವಿದ್ವಂಸಕ ಕ್ರೌರ್ಯ ಮೆರೆಯತ್ತಾ ಇದ್ದರೂ ಅದನ್ನು ಮಸ್ಲಿಮರ ಮೇಲೆಯೇ ಹೊರಿಸಲಾಗುತ್ತಿದೆ.ಮತ್ತು ಹಾಗೇ ಚಿತ್ರಿಸಲಾಗುತ್ತಿದೆ.ಅದೇ ರೀತಿ
ನಮ್ಮಲ್ಲಿಯೂ ಸುಸೂತ್ರವಾಗಿ ಮುಸ್ಲಿಂ ವಿರುದ್ಧ ಕಾರ್ಯ ತಂತ್ರ ಜರುಗುತ್ತಲೇ ಇದೆ.ಹಿಂದೆ ರಾಜರುಗಳ ಕಾಲದಲ್ಲಿ ನಡೆದಿತ್ತೆಂಬ ಕ್ರೌರ್ಯ ಕ್ಕೆ ಇಂದಿನ ಕಾಲದಲ್ಲಿ ಪ್ರತಿಕಾರ ತೀರಿಸಲು ಮುಂದಾಗುವ ಮತಾಂಧರು,ಶಿಕ್ಷಣವನ್ನೂ ಮತೀಯ ವಿಷದಲ್ಲಿ ಮುಳುಗಿಸಲು ಹವಣಿಸುವವರು,ಧಾರ್ಮಿಕ ಸ್ವಾತಂತ್ರ್ಯ ವನ್ನೂ ಕಿತ್ತೆಸೆಯಲು ಕುತಂತ್ರ ಹೆಣೆಯುವ ಕಂತ್ರಿಗಳು, ಎಲ್ಲರೂ ಸೇರಿ ಮುಸ್ಲಿಮ್ ಸಮುದಾಯವನ್ನು ದುರ್ಬಲಗೊಳಿಸುವುದರಲ್ಲೇ ಮುಳುಗಿದ್ದಾರೆ.ಅದರ ಭಾಗವಾಗಿದೆ ಆಗಾಗ ಏಕನೀತಿ ಕಾನೂನಿನ ಅಪಸ್ವರದ ದ್ವನಿ ಕೇಳಿ ಬರುವುದು. ಅದು ಇದೀಗ ತ್ರಿವಳಿ ಹಾವಳಿ ಮೂಲಕ ಮತ್ತೆ ಸುದ್ದಿಯಾಗಿದೆ.ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಅಪರಾಧಿಯನ್ನಾಗಿಸಲು ಬಳಸುವ ಇನ್ನೊಂದು ಆಪಾದನೆ ಯಾಗಿದೆ ಲವ್ ಜಿಹಾದ್ ?
ಅನ್ಯ ಹೆಣ್ಣಿನ ಬಗ್ಗೆ ಅಪಾರ ಎಚ್ಚರಿಕೆ ವಹಿಸಿದ ಧರ್ಮವಾಗಿದೆ ಇಸ್ಲಾಂ.ಸ್ವಧರ್ಮಿಯ ಹೆಣ್ಣಿನೊಂದಿಗೂ ಒಂಟಿಯಾಗುವುದನ್ನು ಅನೈತಿಕವೆಂದು ಅದು ವಿಧಿಸುತ್ತದೆ.ಕಣ್ಣೆತ್ತಿ ನೋಡುವುದನ್ನು ಅನಾಚಾರವಾಗಿ ಕಾಣುತ್ತದೆ.ಸ್ವಂತ ಗಂಡನ ಸಹೋದರರೊಂದಿಗೂ ಇದನ್ನು ನಿಶೇಧಿಸುತ್ತದೆ.ಅದನ್ನು "ಮರಣ" ವೆಂದ ರಸೂಲರು ಅನ್ಯ ಹೆಣ್ಣಿನ ಕಡೆ ತಿರುಗಿ ನೋಟ ಬೀರುವುದು ಪಿಶಾಚಿನ ವಿಷಯುಕ್ತ ಬಾಣವೆನ್ನುತ್ತಾರೆ. ಮದುವೆ ಎಂಗೇಜ್ ಮೆಂಟ್ ನಡೆದ ಮೇಲೂ ಭಾವಿ ಪತ್ನಿಯಾಗುವವಳೊಂದಿಗೆ ಮಾತುಕತೆಯನ್ನು ನಿಶೇಧಿಸುತ್ತದೆ.
ದೇಹ ಮಚ್ಚಲು ಅವಕಾಶವಿಲ್ಲದ ,ಮೊಲೆಯುಣಿಸಲು ಹಕ್ಕು ಪಡೆಯಬೇಕಾದರೆ ತೆರಿಗೆ ಪಾವತಿಸಬೇಕಾದ ಹೆಂಗಸರಿಗೆ ಮಾನ ಮುಚ್ಚಲು ಅವಕಾಶ ಮಾಡಿಕೊಟ್ಟ ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ ಸ್ಮರಣೀಯ ರಾಗುತ್ತಾರೆ.

ಯಾವ ವಿಷಮ ಸ್ಥಿತಿಯಲ್ಲಿಯೂ ಅಪರಾಧವನ್ನು ಸಕ್ರಮ ಮಾಡುವ ಯಾವುದೇ ವಿಧಿ ಇಸ್ಲಾಮಿನಲ್ಲಿ ಇಲ್ಲ.ಹಾಗಿರುವಾಗ ಹೇಗೆ ಅನ್ಯ ಮತೀಯ ಹುಡುಗಿಯರನ್ನು ದುರುದ್ದೇಶದಿಂದ ವಂಚಿಸಲು ಸಾಧ್ಯ? ಅದೂ ಧರ್ಮದ ಹೆಸರಿನಲ್ಲಿ!
ಕಣ್ಣೂರಿನ ಎರಡು ಮಕ್ಕಳ ತಾಯಿಯನ್ನು ಪರ ಪುರುಷನ ಜೊತೆ ತೆರಳಲು ಕೋರ್ಟು ಅನುಮತಿಸುತ್ತದೆ.ಕಂದಮ್ಮಗಳು ತನ್ನ ಸಾರಿಯನ್ನು ಹಿಡಿದೆಳೆದಾಗಲೂ ಯಾರಿಗೂ ಅದು ಅಸಹ್ಯವಾಗಿ ಕಾಣಲಿಲ್ಲ.ಆದರೆ ವಿದ್ಯಾವಂತೆಯಾದ ಇಪ್ಪತ್ತನಾಲ್ಕರ ಹರೆಯದ ಹಾದಿಯ ಅನ್ನುವ ವೈದ್ಯೆ ಸ್ವಯಂ ಪ್ರೇರಿತಳಾಗಿ ಮತಾಂತರಗೊಂಡಿದ್ದೇನೆಂದು ಹೇಳುತ್ತಾಳೆ,ನಂತರ ಅದು ಸಂಬಂಧವಾಗಿ ಎಲ್ಲಾ ತಪಾಸಣೆಗೆ ಸಹಕರಿಸುತ್ತಾಳೆ,ಆದರೂ ಅರೇಂಜ್ಡ್ ಮದುವೆಯನ್ನು ರದ್ದುಮಾಡಿ ಹೆತ್ತವರ ಸುಪರ್ದಿಗೆ ಒಪ್ಪಿಸಲಾಗುತ್ತದೆ.ಅಲ್ಲಿಂದಲೂ ತನ್ನನ್ನು ಕಾಣಲು ಬಂದವರೊಂದಿಗೆ ಕಿಟಕಿ ಮೂಲಕ ಇಲ್ಲಿಂದ ನನ್ನನ್ನು ರಕ್ಷಿಸಿ ಎಂದು ಗೋಗರೆಯುತ್ತಾಳೆ.ಇದು ಡಿಜಿಟಲ್ ಇಂಡಿಯಾ ಎಂದು ಕರೆಯುವ ದೇಶದ ಸಂಪೂರ್ಣ ಸಾಕ್ಷರತೆ ಹೊಂದಿದ ಕೇರಳದ ಕಥೆ.
ಗೋವಿನ ಹೆಸರಲ್ಲಿ ನರಹತ್ಯೆಯನ್ನು ಸಕ್ರಮಗೊಳಿಸುವ ಮಂದಿ ಅರಿತಿರಬೇಕು ಇಸ್ಲಾಮಿನ ಪ್ರಾವಾದಿಯ ಸಂದೇಶ.
ನಲುವತ್ತರಷ್ಟು ಸತ್ಕರ್ಮಗಳಿವೆ ಅದರಲ್ಲಿ ಮಹೋನ್ನತವಾದದ್ದು ಒಬ್ಬ ಮುಸ್ಲಿಮನು ಹಸುವನ್ನು ಸಾಕಿ ಅದು ಹಾಲು ಕೊಡುವಷ್ಟು ಕಾಲ ಬಡವ ದರಿದ್ರನ ಮನೆಯಲ್ಲಿ ಬಿಟ್ಡು ನಂತರ ಹಿಂಪಡೆಯುವುದು (ಹಸಿವಿಗೆ ಏನೂ ಸಿಗದೇ ಇದ್ದಾಗ ಆ ಹಸುವಿನ ಹಾಲು ಕುಡಿದು ಅವರು ಹಸಿವು ನೀಗಿಸಲಿ ಎನ್ನುವ ಉದ್ದೇಶದಿಂದ)ಇದಕ್ಕೆ ಸ್ವರ್ಗ ಪ್ರತಿಫಲವಾಗಿರುತ್ತದೆ.

 ಇಸ್ಲಾಮಿನಲ್ಲಿ ಎಲ್ಲಾ ಹಂತದಲ್ಲೂ ಸಾಮಾಜಿಕ ಸೇವೆ ಮುಖ್ಯವಾಗುತ್ತದೆ.ವೃದ್ಧೆಯ ಭಾರವನ್ನು ಹೊತ್ತುಕೊಂಡು ನಡೆದ ಪ್ರವಾದಿ ಜನಸೇವೆಯನ್ನು ಸ್ವರ್ಗದ ದಾರಿ ಎಂದರು.ಖಲೀಪರು ಹಾಲು ಕರೆದು  ಅಸಹಾಯಕರಿಗೆ ಕುಡಿಸುವ, ವೃದ್ಧರನ್ನು ಆರೈಕೆ ಮಾಡುವ ಮಾದರಿ ತೋರಿದ್ದರು.
ದುರ್ಬಲರಿಗೆ  ತುತ್ತು ಅನ್ನ ಹೊತ್ತು ನಡೆದ,ರಾತ್ರಿಹೊತ್ತಲ್ಲಿ ಯಾರಿಗೂ ತಿಳಿಯದೇ ಬಡವರ ಮನೆಯಲ್ಲಿ ಆಹಾರದ ಗಂಟನ್ನು ಇಟ್ಟು ಬರುತ್ತಿದ್ದ ಪ್ರವಾದಿ ಕುಟುಂಬದವರ ಬಗ್ಗೆ ಚರಿತ್ರೆಯಲ್ಲಿ ಉಲ್ಲೇಖವಿದೆ.ರಿಫಾಯಿ (ರ) ರವರು ನಾಯಿಯನ್ನು ಪರಿಪಾಲಿಸಿದರೆ ,ಹಝ್ರತ್ ನಿಝಾಮುದ್ದೀನ್ (ರ)ರವರು ಬೀದಿಯಲ್ಲಿದ್ದವರ ಬಾಯಿಗೆ ರೊಟ್ಟಿ
ಇಟ್ಟು ಬರುತ್ತಾರೆ.
ಹಝ್ರತ್ ಇಬ್ರಾಹೀಂ(ಅ) ಒಂಟಿಯಾಗಿ ಆಹಾರ ಸೇವಿಸುತ್ತಿರಲಿಲ್ಲ.ಜೊತೆಯಾಗಿ ಯಾರನ್ನಾದರೂ ಸೇರಿಸಲು ಎರಡು ಕಿ.ಲೋ ಮೀಟರ್ ಹುಡುಕಿ ಹೋಗುತ್ತಿದ್ದರು.ಅದರಿಂದ ಅವರಿಗೆ ಅಬು ಲ್ಲೈಫಾನ್ ಎಂಬ ಕೀರ್ತಿಯೂ ಬಂದಿತ್ತು.ಒಂದು ದಿನ ಅವರು ಮಾಡಿದ ದಾನ ಬರೋಬ್ಬರಿ ಸಾವಿರ ಆಡುಗಳು! ಮನ್ನೂರಷ್ಟು ದನಗಳು!ನೂರರಷ್ಟು ಒಂಟೆಗಳು! ಇದನ್ನು ಕಂಡು ದೇವದೂತರು ಅಚ್ಚರಿಪಟ್ಟಾಗ ಅವರು ಹೇಳಿದ ಮಾತು  ದೈವ ಇಚ್ಚೆಗಾಗಿ ನಾನು ನನಗೊಂದು ಮಗನಿದ್ದರೆ ಅವನನ್ನೂ ಬಲಿ ಕೊಡುವೆ.ಅದರ ಸಾಕ್ಷಾತ್ಕಾರವಾಗಿತ್ತು ಮಗನ ಬಲಿಗೆ ಮುಂದಾದದ್ದು.ಆದರೂ ಹಝ್ರತ್ ಇಬ್ರಾಹಿಮರ (ಅ) ಆತ್ಮ ಸಮರ್ಪಣೆಯ ,ಮನೋ ಧೈರ್ಯ ದ ಮುಂದೆ ಬಲಿಕೊಡಬೇಕಾಗಲಿಲ್ಲ .ಬದಲಿಗೆ ಸ್ವರ್ಗದ ಆಡನ್ನು ಜಿಬ್ರೀಲ್ (ಅ) ಕರೆ ತಂದರು.ಅದು ಹಾಬೀಲ್ ಸಮರ್ಪಿಸಿದ ಕುರ್ಬಾನಿಯಾಗಿತ್ತು.
ಆದರೆ ಈ ಹಬ್ಬ ಯಾರಿಗೆ ಅನ್ವಯ?
ಅಧರ್ಮ ಚಟುವಟಿಕೆ ಮಾಡುವವರಿಗೋ?
ಅಮಲು ಪದಾರ್ಥ ಸೇವಕರಿಗೋ?
ಅನೈತಿಕವಾಗಿ ನಡೆದಾಡುವವರಿಗೋ?
ಅಕ್ರಮ ಸಂಪಾದನೆ ಮಾಡುವವರಿಗೋ?
ಅನ್ಯಾಯದ ಮಾರ್ಗದಲ್ಲಿ ನಡೆವವರಿಗೋ?
ಕಣ್ಣೆದುರಲ್ಲೆ ಮನೆ,ನೆಲೆ ಇಲ್ಲದೇ ಅನಾರೋಗ್ಯ ಪೀಡಿತ ಸಂಕಟ ಪಡುವವರನ್ನು ತಿರುಗಿನೋಡದ ಮಾನ್ಯರಿಗೋ?

ವರದಿ ಅಲ್ ಅಹ್ಸನ್ ಮಾಸಿಕ