ಮಧುರ ದಾಂಪತ್ಯದ ಮೊದಲ ರಾತ್ರಿ

ಹತ್ತು ಹಲವು ಕನಸುಗಳನ್ನು ಹೊತ್ತುಕೊಂಡು, ಬದುಕಿನ ಅತ್ಯಂತ ಸಂತಸದ ಕ್ಷಣಕ್ಕೆ ಕಾಲಿರಿಸುವ ಶುಭ ಮುಹೂರ್ತವಾಗಿರುತ್ತದೆ ಪ್ರತಿಯೊಬ್ಬ ದಂಪತಿಗಳ ಸಾಲಿನ ಮೊದಲ ರಾತ್ರಿ. ಸಂಭ್ರಮ, ಸುಖ, ಸಮೃದ್ಧಿ ಸಮಾಲೋಚನೆಗಳ ಸಂಘರ್ಷ ಹೀಗೆ ವಿಭಿನ್ನ ಮುಖಗಳ ದಿಗ್ದರ್ಶನವೇ ಈ ವೈವಾಹಿಕ ಬದುಕಿನ ಫಸ್ಟ್ ನೈಟ್.
ಒಳಿತಿನಿಂದ ಕೂಡಿದ ಯಾವುದೇ ಕಾರ‍್ಯಗಳ ಪ್ರಾರಂಭವು ಅಲ್ಲಾಹನ ಸ್ಮರಣೆಯೊಂದಿಗೆ ಆಗಿರುವುದು ಮುಸ್ಲಿಂ ವಿಶ್ವಾಸಿಯ ಮಟ್ಟಿಗೆ ಅತ್ಯವಶ್ಯಕ. ಪ್ರಾರ್ಥನೆ, ಉದ್ದೇಶ ಸಾಪಲ್ಯದ ನಮಾಝ್ ಮೊದಲಾದವುಗಳು ಈ ಶುಭಕ್ಷಣದಲ್ಲಿ ನಡೆಸುವುದು ವೈವಾಹಿಕ ಬದುಕು ಪೂರ್ತಿ ಸುಖ ಸಮೃದ್ಧಿ, ಸಂತಸ, ಐಶ್ವರ್ಯ ಉಂಟುಮಾಡುವುದು.
ದಾಂಪತ್ಯ ಸಂಬಂಧ ಎಲ್ಲ ತೆರನಾದ ಭಿನ್ನತೆ, ಎಡರು ತೊಡರು, ಅಲುಗುಗಳಿಂದ ಮುಕ್ತವಾಗಿ ಯಾವುದೇ ಅಡೆತಡೆಗಳಿಲ್ಲದೆ ಬದುಕಿನ ಸಂಧ್ಯಾ ಕಾಲದ ವರೆಗೂ ಸುಖ, ಸೌಹಾರ್ದತೆಯೊಂದಿಗೆ ಹೆಚ್ಚು ಸುದೃಢವಾಗಿ ಭದ್ರವಾಗಿ ಸುಸೂತ್ರವಾಗಿ ಬರಕತ್ತು ನಿಹಮತ್ತುಗಳಿಂದ ಮುಂದುವರಿಯಲು ಸೃಷ್ಟಿಕರ್ತನಲ್ಲಿ ನಿಸ್ವಾರ್ಥ ಪ್ರಾರ್ಥನೆ ನಡೆಸಬೇಕು ಇಮಾಂ ಮಾಲಿಕ್(ರ) ರವರು ತಮ್ಮ ‘ಮುವತ್ತ್ತ’ ಎಂಬ ಗ್ರಂಥದಲ್ಲಿ ಈ ಬಗ್ಗೆ ವಿವರವಾಗಿ ಹೇಳಿದ್ದಾರೆ “ಅಲ್ಲಾಹನೇ ನನ್ನ ಸಂಗಾತಿಯಿಂದ ನನಗೂ ನನ್ನಿಂದ ನನ್ನ ಕುಟುಂಬಕ್ಕೂ ಬರಕತ್ತು ವರ್ಷಿಸು” ಎಂದು ಪ್ರಾರ್ಥಿಸಬೇಕು (ಬಿಗ್‌ಯಾ ೨೪೭)

ದಾಂಪತ್ಯ ಬದುಕನ್ನೇ ಪೂರಾ ಕದಲಿಸಿಬಿಡುವ ಹಲವು ಸಮಸ್ಯೆಗಳು ಕೆಲವೊಮ್ಮೆ ಮೊದಲ ರಾತ್ರಿಯಲ್ಲೇ ಉಂಟಾಗುವುದು. ಯಾವುದೇ ಸವಾಲು ತಾಪತ್ರಯಗಳು ಎದುರಾದರೂ ಎಲ್ಲವನ್ನೂ ಸಹನೆ ಹಾಗೂ ದೃಢಮನಸ್ಕನಾಗಿ ಎದುರಿಸಿ ಒಳಿತಿನ ಹಾದಿಯಲ್ಲಿ ಆದರ್ಶಮಯ ಸುಭದ್ರ ದಾಂಪತ್ಯ ಬದುಕು ಕಟ್ಟಲು ಪ್ರವಾದಿ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ರವರು ತೋರಿಸಿಕೊಟ್ಟ ಮಾದರಿಯನ್ನು ನಾವು ಪಾಲಿಸಬೇಕು. ಮೊದಲ ರಾತ್ರಿ ಶಯನ ಗೃಹಕ್ಕೆ ಪ್ರವೇಶಿಸುವಾಗ ಪತ್ನಿಗೆ ‘ಸಲಾಂ’ ಹೇಳುವುದು ಪ್ರವಾದಿ (ಸಲ್ಲಲ್ಲಾಹು ಅಲೈಹಿವಸಲ್ಲಂ) ರವರ ಸಹಿತ ಪೂರ್ವಕಾಲದ ಪುಣ್ಯತ್ಮರ ಬದುಕಿನ ರೂಢಿಯಾಗಿತ್ತು. ನವವೀ(ರ) ರವರು ಹೇಳುತ್ತಾರೆ. “ನಬಿ (ಸಲ್ಲಲ್ಲಾಹುಅಲೈಹಿವಸಲ್ಲಂ) ರವರು ತಮ್ಮ ಪತ್ನಿಯಂದಿರ ಶಯನಗೃಹ ಪ್ರವೇಶಿಸುವಾಗ ಸಲಾಂ ಹೇಳುವರು ಆಗ ಅವರು ಸಲಾಂಗೆ ಜವಾಬು ಕೊಡುತ್ತಿದ್ದರು” ಅದರ ಜೊತೆಗೆ ಮೊದಲ ರಾತ್ರಿ ವಧುವಿನ ತಲೆಯ ಮೇಲೆ ಕೈಯಿಟ್ಟು ‘ಬಿಸ್ಮಿ ಹೇಳಿ ನಂತರ ಅಲ್ಲಾಹನೇ ಇವಳ ಒಳಿತು, ಇವಳ ಸ್ವಭಾವ ಪ್ರಕೃತಿಯಲ್ಲಿರುವ ಒಳಿತು ಇವೆಲ್ಲವನ್ನು ನಿನ್ನೊಂದಿಗೆ ಯಾಚಿಸುತ್ತೇನೆ. ಇವಳ ಕೆಡುಕು ಸ್ವಭಾವ ಪ್ರಕೃತಿಯಲ್ಲಿರುವ ಕೆಡುಕು ಇವುಗಳಿಂದ ನಿನ್ನೊಂದಿಗೆ ಅಭಯ ಯಾಚಿಸುತ್ತೇನೆ” ಎಂದು ಪ್ರಾರ್ಥಿಸಬೇಕು (ಅಬೂದಾವುದ್, ಅಲ್‌ಅದ್‌ಕಾರ್ ೧೮೫)
ನಿಜಕ್ಕೂ ವಿವಾಹ ಸಂಭ್ರಮದ ಮೊದಲ ರಾತ್ರಿ ಪ್ರತಿಯೊಬ್ಬರ ಪಾಲಿನ ಅಮೃತ ಘಳಿಗೆಯಾಗಿದೆ. ದಾಂಪತ್ಯದ ಮಧುಹೀರುವ ಈ ವಿಶಿಷ್ಟ ರಾತ್ರಿಯ ದಂಪತಿಗಳ ನಿದ್ರೆಯು ಕೂಡ ವೈಶಿಷ್ಟ ಪೂರ್ಣವಾಗಿ ಇಸ್ಲಾಂ ಮತ್ತು ವಿಜ್ಞಾನ ವಿಶ್ಲೇಷಿಸಿದೆ. ಏಕೆಂದರೆ ಹೊಸತೊಂದು ಕೌಟುಂಬಿಕ ಬದುಕಿನ ಕನಸಿನ ಲೋಕದಲ್ಲಿ ತೇಳಾಡುತ್ತಾ ನೂರಾರು ಕಲ್ಪನೆ, ಯೋಜನೆಗಳನ್ನು, ಪ್ರೀತಿ ಪ್ರೇಮ ಪರಸ್ಪರ ಹಂಚಿಕೊಳ್ಳುವ ಅಮೃತ ಘಳಿಗೆ, ಕನಸು ತುಂಬಿದ ಸುಖನಿದ್ರೆ ಇದು ಭೂಮಿ ಮೇಲೆ ಇನ್ಯಾರಿಗೂ ಸಿಗದ ಅತ್ಯಮೂಲ್ಯ ಸಂಪತ್ತೆಂಬುದರಲ್ಲಿ ಎರಡು ಮಾತಿಲ್ಲ. ಪ್ರವಾದಿ (ಸಲ್ಲಲ್ಲಾಹು ಅಲೈಹಿವಸಲ್ಲಂ)ರವರು ಹೇಳುತ್ತಾರೆ; ಸತ್ಯ ವಿಶ್ವಾಸಿಗಳಾದ ಸಜ್ಜನರೊಂದಿಗೆ ಖಬರಿನಲ್ಲಿ ಮಲಕುಗಳು ಹೇಳುವುದು ಈ ರೀತಿಯಾಗಿದೆ ‘ನಂ ಕ ನೌಮತ್ತಿಲ್ ಅರೂಸ್ ನೀವು ಮದು ಮಗ ಮಲಗಿ ನಿದ್ರಿಸುವಂತೆ ನಿದ್ರೆ ಮಾಡಿರಿ.
ಒಟ್ಟಿನಲ್ಲಿ ಮೊದಲ ರಾತ್ರಿಯ ಅನುರಾಗದ ಅನುಭೂತಿ, ಸಂತಸ ಸಂಭ್ರಮ ಎಲ್ಲವೂ ವರ್ಣಾತೀತವೂ ಮಾಸದ ಆವೇಶವೂ ಆಗಿದೆ.
ಆದರೆ ಮೊದಲ ರಾತ್ರಿಯ ಕನಸಿನ ಕಲ್ಪನಾ ಲೋಕದಲ್ಲಿ ವಿಹರಿಸುವ ಅಮೃತಗಳಿಗೆಯಲ್ಲೂ ಅವೆಲ್ಲವನ್ನೂ ಧರ್ಮಕ್ಕಾಗಿ ತ್ಯಜಿಸಿ ಯುದ್ಧಭೂಮಿಗೆ ಹೊರಟ ಸಹಾಬಿವರ‍್ಯರಾದ ಹನ್‌ಳಲ(ರ)ರವರ ಕಥೆಯು ಮೊದಲ ರಾತ್ರಿಯ ಪ್ರತಿ ಕ್ಷಣಗಳ ಪಾವಿತ್ರ್ಯತೆ, ಪ್ರಾಮುಖ್ಯತೆಯು ನಮ್ಮನ್ನು ಬಡಿದೆಬ್ಬಿಸುತ್ತದೆ. ಹನ್‌ಳಲ(ರ)ರವರ ಮೊದಲ ರಾತ್ರಿ ಕಣ್ಣೀರಲ್ಲಿ ಮುಳುಗಿತ್ತು.
ಮೊದಲ ರಾತ್ರಿಯ ಸುಖಾನುಭವದಲ್ಲಿ ಮೈಮರೆಯುವ ಅನರ್ಘ್ಯ ಕ್ಷಣದಲ್ಲಿ ಅವೆಲ್ಲವನ್ನೂ ಧರ್ಮಕ್ಕಾಗಿ ತ್ಯಜಿಸಿ ಮರಣವನ್ನೇ ಸ್ವೀಕರಿಸಲು ಯುದ್ಧ ಭೂಮಿಗೆ ಹೊರಟು ಧೀರ ಇತಿಹಾಸ ಬರೆದ ಅನ್‌ಳಲ(ರ)ರವರಿಗೆ ಇನ್ಯಾರಿಗೂ ಸಿಗದಂತ ಉನ್ನತ ಸ್ಥಾನ ಪ್ರಾಪ್ತವಾಯಿತು. ಇಮಾಂ ಶಅರಾನಿ(ರ) ಹೇಳುತ್ತಾರೆ. ಅನ್‌ಳಲ(ರ)ರವರು ತಮ್ಮ ಮದುವೆಯ ದಿನ ಮೊದಲ ರಾತ್ರಿ ತಮ್ಮ ಸಂಗಾತಿಯೊಂದಿಗೆ ದೈಹಿಕ ಸಂಪರ್ಕದಲ್ಲಿ ಏರ್ಪಟ್ಟು ನಂತರ ಯುದ್ಧ ಭೂಮಿಗೆ ತೆರಳಿ ಶಹೀದ್ ಆದ್ದರಿಂದ ಅವರಿಗೆ ಹಿರಿಯ ಅಶುದ್ಧಿಯಿತ್ತು. ಬದುಕಿನ ಅಪೂರ್ವ ಸಂಭ್ರಮದ ಆ ದಿನ ಇಸ್ಲಾಮಿನ ವೈರಿಗಳು ಅನೀರಿಕ್ಷಿತ ಧಾಳಿ ನಡೆಸಿದ್ದರಿಂದ ಪ್ರವಾದಿ (ಸಲ್ಲಲ್ಲಾಹುಅಲೈಹಿವಸಲ್ಲಂ) ಮತ್ತು ಸಹಾಬಿಗಳು ವೈರಿಗಳ ಆಕ್ರಮಣವನ್ನು ಎದುರಿಸಲು ಯುದ್ಧ ಭೂಮಿಗೆ ಹೊರಟಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣ, ಸ್ನಾನ ಮಾಡಿಕೊಳ್ಳುವ ಸಮಯವನ್ನು ತೆಗೆದುಕೊಳ್ಳದೆ ಮದುವಣಗಿತ್ತಿಗೆ ಸಲಾಂ ಹೇಳಿ ನೇರವಾಗಿ ಯುದ್ಧ ಭೂಮಿಗೆ ದುಮುಕಿದರು ಅಲ್ಲೇ ವೈರಿಗಳೊಂದಿಗೆ ಧರ್ಮಕ್ಕಾಗಿ ಹೋರಾಡಿ ಕೊನೆಗೆ ಪ್ರಾಣವನ್ನು ಕೊಟ್ಟು ಹುತಾತ್ಮರಾದರು. ಮೊದಲ ರಾತ್ರಿಯ ಸಂಭ್ರಮವನ್ನೇ ಬದಿಗಿಟ್ಟು ಯುದ್ಧ ಭೂಮಿಗೆ ಧುಮುಕಿ ಹುತಾತ್ಮರಾದ ಆ ಪುಣ್ಯತ್ಮರ ಗೌರವಾಥs ಬಾನ ಲೋಕದಿಂದ ಇಳಿದು ಬಂದ ಮಾಲಕರುಗಳೇ ಅವರನ್ನೂ ಸ್ನಾನ ಮಾಡಿಸಿದರೆಂದು ಪ್ರವಾದಿ (ಸಲ್ಲಲ್ಲಾಹು ಅಲೈಹಿವಸಲ್ಲಂ) ರವರು ಘಂಟಾ ಘೋಷವಾಗಿ ಘೋಷಿಸಿದರು. ‘ಗಸೀಲುಲ್ ಮಲಾಇಕ’ (ಮಲಕುಗಳು ಸ್ನಾನ ಮಾಡಿಸಿದವರು) ಎಂಬ ಅಭಿದಾನ ಆ ಹುತಾತ್ಮರಿಗೆ ಸಿಕ್ಕಿತು
ಶಿಸ್ತು
ಬದುಕನ್ನು ಅರ್ಥಪೂರ್ಣಗೊಳಿಸಲು ಹಾಗೂ ಉಪಕಾರಪ್ರದಗೊಳಿಸಿರುವ ಒಂದು ಪ್ರಮುಖ ಅನಿವಾರ‍್ಯ ಘಟ್ಟವಾಗಿದೆ ವಿವಾಹ. ಮದುವೆ ಸಮಾರಂಭದ ದಿನ ಪೂರ್ತಿಯ ಬಳಲಿಕೆ, ಅಪರಿಚಿತ ಮುಖ, ನೂರಾರು ಟೆನ್ಶನ್‌ಗಳು ಮೊದಲ ರಾತ್ರಿಯ ಸಂಭ್ರಮಕ್ಕೆ ಒಂದಿಷ್ಟು ಅಡ್ಡಿಯಾಗಿ ಬಂದರೂ ವೈವಾಹಿಕ ಬದುಕಿನ ಶಿಸ್ತುಗಳನ್ನು ಕೈಬಿಡುವುದು ಒಳಿತಲ್ಲ. ಸ್ನಾನ ಮಾಡುವುದು, ಸುಗಂಧ ಬಳಸುವುದು, ಕೂದಲು ಬಾಚುವುದು, ಹಲ್ಲುಜ್ಜುವುದು, ವುಳೂಅ (ಅಂಗಶುದ್ಧಿ) ಮೊದಲಾದವು ಸತ್ಯ ವಿಶ್ವಾಸಿಗೆ ಇರಬೇಕು. ಪ್ರವಾದಿ (ಸಲ್ಲಲ್ಲಾಹು ಅಲೈಹಿವಸಲ್ಲಂ) ಹೇಳುತ್ತಾರೆ. ನೀವು ನಿಮ್ಮ ಪತ್ನಿಯ ಮುಂದೆ ಸ್ವಚ್ಛವಾಗಿ ಇರಬೇಕು. ಬನೂ ಇಸ್ರಾಈಲರು ಆ ತೆರನಾಗಿ ಮಾಡದ ಕಾರಣ ಅವರ ಪತ್ನಿಯಂದಿರು ವ್ಯಭಿಚಾರಿಗಳಾಗಿ ಬಿಟ್ಟರು (ಕಶ್‌ಫುಲ್ ಗುಮ್ಮ ೨/೧೦೧) ಸ್ವಚ್ಛವಾಗಿದ್ದುಕೊಂಡು ಪತಿಯ ಮುಂದೆ ಸೌಂದರ‍್ಯ ಪ್ರದರ್ಶಿಸುವುದು ಹೆಚ್ಚು ಪುಣ್ಯವುಳ್ಳದಾಗಿದೆ. ಅತಾಅಲ್(ರ) ಹೀಗೆ ಹೇಳುತ್ತಿದ್ದರು, "ನನ್ನ ಪತ್ನಿ ನನಗಾಗಿ ಸೌಂದರ‍್ಯವತಿಯಾಗುವಂತೆ ನಾನು ಕೂಡ ಅವಳಿಗಾಗಿ ಸುಂದರವಾಗಲು ಇಷ್ಟಪಡುತ್ತೇನೆ” (ಕಶ್‌ಫುಲ್‌ಗುಮ್ಮ ೨/೧೦೧).
ಮೊದಲ ರಾತ್ರಿಯಲ್ಲಿ ಹೇಳಬೇಕಾದ ಪ್ರಾರ್ಥನೆಗಳೊಂದಿಗೆ ನಮ್ಮ ಒಳ್ಳೆಯ ಉದ್ದೇಶಗಳ ಈಡೇರಿಕೆಗಾಗಿ ಎರಡು ರಕತ್ ಸುನ್ನತ್ ನಮಾಝ್ ಮಾಡಿ ನಂತರ ಹಮ್ದು, ಸಲಾತ್ ಹೇಳಿದ ನಂತರ ಪ್ರಾರ್ಥನೆ ನಡೆಸಬೇಕು.
ಯಹ್‌ಕೂಬ್‌ಬುನುಸ್ಸಯ್ಯಿದ್ ಅಲಿ(ರ) ಹೇಳುತ್ತಾರೆ. ವಧು ಮೊದಲ ರಾತ್ರಿ ಅತ್ಯಂತ ಒಳ್ಳೆಯ ವಸ್ತ್ರವನ್ನೇ ತೊಡಬೇಕು. ಸುರುಮ ಹಾಕುವುದು, ಕೂದಲು ಬಾಚುವುದು, ಕೈಗಳಿಗೆ ಮದರಂಗಿ ಹಾಕುವುದು, ಸುಗಂಧ ಬಳಸುವುದು, ಇಬ್ಬರೂ ಎರಡು ರಕತ್ ಸುನ್ನತ್ ನಮಾಝ್ ಮಾಡುವುದು ಆ ನಂತರ ಪತ್ನಿಯ ತಲೆಯಲ್ಲಿ ಕೈಯಿಟ್ಟು ಪ್ರಾರ್ಥನೆ ನಡೆಸುವುದು ಮೊದಲಾದವುಗಳು ಉತ್ತಮ ದಾಂಪತ್ಯಕ್ಕೆ ಅನಿವಾರ‍್ಯವಾಗಿದೆ (ಮಪಾತೀಹುಲ್ ಜಿನಾನ್ ೪೨೫)
ವೈವಾಹಿಕ ಬದುಕಿನಲ್ಲಿ ಪರಸ್ಪರ ಮನೋತೃಪ್ತಿ, ದಾಂಪತ್ಯ ಸುಖ, ಆಳವೇರಿದ ಅನಂತ ಸ್ನೇಹ ಸಂಬಂಧ ಮೊದಲಾದವುಗಳಿಗಾಗಿ ನಾವು ಮನದಾಳದಿಂದ ಪ್ರಾರ್ಥಿಸಬೇಕಾಗಿದೆ ವೈವಾಹಿಕ ಬದುಕಿನ ಮೊದಲ ರಾತ್ರಿ. ಸೈಖ್‌ಹೂಸೂಫ್‌ನಬ್‌ಹಾನಿ(ರ) ಹೇಳುತ್ತಾರೆ. ಶಾರೀರಿಕ ಸಂಪರ್ಕಕ್ಕಿಂತ ಸ್ವಲ್ಪ ಮುಂಚೆ ಅಲ್ಲಾಹನ ಶ್ರೇಷ್ಠ ನಾಮಗಳಾದ ಯಾನಾಫಿಯ (ಉಪಕಾರ ಮಾಡುವವನೇ) ಎಂದು ಹೇಳಿದರೆ ಅಡೆಚನೆಗಳಿಲ್ಲದ ಅಳವೇರಿದ ಅನಂತ  ಸ್ನೇಹ ದಾಂಪತ್ಯಕ್ಕೆ ಅದು ಕಾರಣ ವಾಗುವುದು (ಸಹುದ್ದಾರೈನ್ ೫೨೭)
ಪ್ರವಾದಿಯವರ ಪ್ರಥಮ ರಾತ್ರಿ
ಪ್ರೀತಿಯ ಪತ್ನಿ ಆಇಶಾ(ರ)ರವರೊಂದಿಗಿನ ಪ್ರವಾದಿಯವರ ಪ್ರಥಮ ರಾತ್ರಿಯ ಬಗ್ಗೆ ಆಇಶಾ(ರ)ರವರು ಸ್ಮರಿಸುವುದು ಈ ರೀತಿ, ಉಮ್ಮರೂಮಾನ ರಾಗಿದ್ದರು ನನ್ನನ್ನು ಮದುವಣಗಿತ್ತಿ’ಯಾಗಿ ಶೃಂಗರಿಸಿದ್ದು ನಂತರ ಅನ್ಸಾರಿಗಳಾದ ಮಹಿಳೆ ಮಣಿಗಳೊಂದಿಗೆ ಮತ್ತೆ ನನ್ನನ್ನು ಪ್ರವಾದಿಯವರ ಸನ್ನಿಧಿಗೆ ತಲುಪಿಸಿದರು. (ಮುಸ್‌ನದ್/೨೧೧).
ನಂತರ ಸಹ್‌ದ್‌ಬುನು ಉಬಾದ(ರ) ಒಂದು ಪಾತ್ರದಲ್ಲಿ ಹಾಲಿನೊಂದಿಗೆ ಬಂದರು. ಪ್ರವಾದಿಯವರು ಅದನ್ನು ಕುಡಿದು ಮಧುವಣಗಿತ್ತಿಯಾದ ನನ್ನತ್ತ ಚಾಚಿದರು. ಮೊದಲು ನಾಚಿಕೊಂಡ ನಾನು ನಂತರ ಅದನ್ನು ಕುಡಿದೆ (ಮಸ್‌ನದ್ ೬/೪೫೮)
ಮೊದಲ ರಾತ್ರಿ ಮಲಗುವ ಮೊದಲು ಹಣ್ಣು, ಹಾಲು ಕುಡಿಯುವುದು ಉತ್ತಮವೆಂದು ಆಧುನಿಕ ವಿಜ್ಞಾನವೂ ಹೇಳುವ ಈ ಕಾಲದಲ್ಲಿ ಪ್ರವಾದಿ ಯವರ ಕಾಲದ ಆ ಮಾದರಿ ಎಷ್ಟೆಂದು ಮಾದರಿಯಲ್ಲವೇ.
 ‘ನೀನು ನಿನ್ನ ಪತ್ನಿಯ ಬಾಯಿಗೆ ಹಾಕುವ ಆಹಾರ ಕೂಡ ನಿನಗೆ ಪುಣ್ಯ ಫಲವಿರುವುದಾಗಿದೆ.”

No comments:

Post a Comment