"ಕಾನೂನು ಮತ್ತು ಕೋರ್ಟುಗಳಿರೋದು ಅಮಾಯಕರನ್ನು ದಂಡಿಸಲು ಮತ್ತು ಅಪರಾಧಿಗಳನ್ನು ರಕ್ಷಿಸಲಿಕ್ಕಲ್ಲ."

🎤ಭಾಷಣ

ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು

🎆 ವರದಿ  "ಅಲ್ ಅಹ್ಸನ್ " ಮಾಸಿಕ

ದೆಹಲಿಯ ರಸ್ತೆಯಲ್ಲಿ ಚಾಲಕನೊಬ್ಬ ರಸ್ತೆ ದಾಟುತ್ತಿದ್ದಾಗ ವಾಹನವೊಂದು  ಡಿಕ್ಕಿ ಹೊಡೆದ ಕಾರಣ ಬಿದ್ದು ಒದ್ದಾಡುತ್ತಿದ್ದ .ಅಸಹಾಯಕ ಸ್ಥಿತಿ ಕಂಡು ಏಳಲಾರ ಎಂದು ಖಾತರಿ ಪಡಿಸಿಕೊಂಡು ದಾರಿಹೋಕ ಆತನ ಮೊಬೈಲನ್ನು ಮತ್ತು ಉಳಿದುಕೊಂಡಿದ್ದ ಹನ್ನೆರಡು ರುಪಾಯಿಯನ್ನೂ ಎಗರಿಸಿ ಹೊರಟು ಹೋಗ್ತಾನೆ.ಅವಕಾಶ ಸಿಕ್ಕರೆ ಕಬಳಿಸುವ ಗುಣ ಮನುಷ್ಯ ಬದುಕಿಗೆ ಸಮಂಜಸವೇ? ಬದುಕಿಗೆ ಅರ್ಥವಿಲ್ಲವೇ?

ಒಮ್ಮೆ ರಾಜನೊಬ್ಬ ತನ್ನ ಆಸ್ಥಾನ ವಿದ್ವಾಂಸರಿಗೆ ಸ್ಪರ್ಧೆಯೊಂದನ್ನು ಏರ್ಪಡಿಸುತ್ತಾನೆ . ಅದು  ಮನುಷ್ಯ ಜೀವನ ಚರಿತ್ರೆಯನ್ನು ಬರೆಯುವುದಾಗಿತ್ತು.ಅಪಾರ ಕೊಡುಗೆ ಸಿಗಬಹುದೆಂದು ವಿದ್ವಾಂಸರು  ನೂರಾರು ಗ್ರಂ‌ಥ ಗಳನ್ನು ಬರೆದು ತಂದರು.ಇದನ್ನು ಓದಿ ಮುಗಿಸಲು ಬದುಕು ಸಾಕಾಗದು ಇರೋದು ಒಂದು ಬದುಕು ಅದನ್ನು ಒಂದೇ ಗ್ರಂಥದಲ್ಲಿ ಸಂಕ್ಷಿಪ್ತವಾಗಿ ಬರೆದು ತನ್ನಿ ಎಂದು ರಾಜ ಹಿಂದಕ್ಕೆ ಕಳುಹಿಸುತ್ತಾನೆ. ನಂತರ ಒಂದು ಪುಸ್ತಕದಲ್ಲಿ ಬರೆದು ಪುನಃ ರಾಜನ ಮುಂದೆ ಹಾಜರುಪಡಿಸುತ್ತಾರೆ.ಆದರೆ ಅದು ಕೂಡಾ ಜಾಸ್ತಿ ಆಗಿದೆ ಇನ್ನಷ್ಟು ಕಡಿತಗೊಳಿಸಿ ಎಂದು ಕರೆ ಕೊಡುತ್ತಾನೆ.
ವಿದ್ವಾಂಸರು ತಮ್ಮ ಬುದ್ಧಿವಂತಿಕೆ ಉಪಯೋಗಿಸುತ್ತಾರೆ .ಮಾನವ ಚರಿತ್ರೆಯನ್ನು  ಒಂದು ಚೀಟಿಯಲ್ಲಿ ಬರೆದು ಲಕೋಟೆಯಲ್ಲಿ ಹಾಕಿ ಆಸ್ಥಾನಕ್ಕೆ ತಲುಪಿಸುತ್ತಾರೆ.ರಾಜ ಅಚ್ಚರಿಯಾಗುತ್ತಾನೆ .ಏನಿದು?ವಿದ್ವಾಂಸರು ಹೇಳುತ್ತಾರೆ. ಅದು ಮಾನವ ಚರಿತ್ರೆ!
ಆ ಚೀಟಿಯಲ್ಲಿ ಇಷ್ಟೇ ಇತ್ತು.
"ಮಾನವ ಹುಟ್ಟುತ್ತಾನೆ.ಅನುಭವಿಸುತ್ತಾನೆ.ಸತ್ತು ಹೋಗ್ತಾನೆ,"ವಿದ್ವಾಂಸರು ಹೇಳಿದರು ಇದುವೇ ಬದುಕು.
ನಮ್ಮ ನಿರೀಕ್ಷೆ ಯಂತೆ ಏನಾದರೂ ನಡೆಯುತ್ತದಾ? ನಾವು ಚಿಕ್ಕದರಲ್ಲಿ  ಆಟಕ್ಕಾಗಿ ಏನು ಬೇಕಾದರೂ ಬಿಡುತ್ತೇವೆ. ಊಟ,ಪಾಠ,ನಿದ್ದೆ ಎಲ್ಲವನ್ನೂ ಬಿಡುತ್ತೇವೆ. ಆಟದ ಕಾಲದಲ್ಲಿ ಬೇರೆ ಏನೂ ಕಾಣಲೇ ಇಲ್ಲ.ನಮ್ಮ ಆಲೋಚನಾ ಪರಿಧಿ ಚಿಕ್ಕದಾಗಿತ್ತು.ಮನೆ ಮಂದಿ ,ಮನೆ ಜಗಲಿ,ಶಾಲೆ,ಒಂದಿಷ್ಟು ಸ್ನೇಹಿತರು.ನಂತರ ಕಲಿಕೆ ಮುಗಿಯುತ್ತಿದ್ದಂತೆ ಅಥವಾ ಕಲಿಕೆ  ಬೇಡವೆಂದಾದರೆ  ನಿರೀಕ್ಷೆಗಳು ಬದಲಾಗುತ್ತದೆ.ಮತ್ತೆ ಸಂಪಾದನೆ ಮಾಡಬೇಕೆಂದು ಚಿಂತಿಸುತ್ತಾನೆ, ಹಾಗಾಗಬೇಕು ಹೀಗಾಗಬೇಕು.ಕನಸುಗಳು ಕನವರಿಕೆಗಳು! ನಂತರ ಹಲವು ಪ್ರಯತ್ನ ಮತ್ತು ಸಂಪಾದನೆ ಮಾಡಿದ ಮೇಲೆ ಸಂಸಾರಿ ಯಾಗಬೇಕೆಂದಾಯಿತು.ಹೆಣ್ಣಿನ ಹುಡುಕಾಟ ,ಮನಸ್ಸು. ಗರಿಗೆದರಿ ಹಾರಾಡುವ ಕನಸುಗಳು ಒಂದಿಷ್ಟು ದಿನ ಅದೂ ಮುಗೀತು.  ಸಂಸಾರಿಯಾಗುವಷ್ಟರಲ್ಲಿ ಸ್ನೇಹಿತರು   ದೂರವಾಗಿ ಬಿಡ್ತಾರೆ. ಕೆಲವು ವರ್ಷಗಳಲ್ಲಿ ಮರಿಮಕ್ಕಳು ಅಂತ ದುಡೀಯುತ್ತಾ ಇರುವಾಗ ನಂತರದ ಬದುಕು ಮಕ್ಕಳಿಗಾಗಿ ಮತ್ತು ಮನೆ ನಿಭಾಯಿಸೋದಕ್ಕೆ ಮೀಸಲಾಗುತ್ತದೆ .ಇಷ್ಟಾಗುವಾಗ ಸಹೋದರರು ಸಹೋದರಿಯರು ಮತ್ತು ಹತ್ತಿರವಿದ್ದವರೆಲ್ಲಾ ದೂರ ದೂರವಾಗ್ತಾರೆ.ತಂದೆ ತಾಯಿಯೂ ಅಪರೂಪವಾಗಿ ಹೋಗುತ್ತಾರೆ.ನಾವೀಗ ಮಕ್ಕಳ ಕಡೆ ಗಮನ ಕೊಡುತ್ತೇವೆ.ಮಕ್ಕಳು ದೊಡ್ಡವರಾಗುತ್ತಾ ಕ್ರಮೇಣ ನಮ್ಮನ್ನು ತಿರಸ್ಕರಿಸುತ್ತಾ ಬರುತ್ತಾರೆ .ಎನಾದರೂ ಸಂಪಾದನೆಯ ಉಳಿಕೆ ಇದ್ದರೆ ನಮ್ಮನ್ನು ಸ್ವಲ್ಪ ನೋಡಿಕೊಳ್ಳಬಹುದು.ಹೇಗಾದರೂ ನಾವೇ ನಮ್ಮ ಮಕ್ಕಳಿಗೆ ಭಾರವಾಗುವ ಸ್ಥಿತಿ ನಿರ್ರ್ಮಾಣವಾಗುತ್ತದೆ.ಇಂತಹಾ ಅವಗಣನೆಯ ಮತ್ತು ಅಸಹಾಯಕತೆಯ ಬದುಕಿಗಾಗಿ ಹಲವರೊಂದಿಗೆ ವೈರ,ಹಗೆ,ಪೈಪೋಟಿ, ಹಠ ಸಾದನೆ ಎಲ್ಲವೂ?ಈ ಹಟ ಸಾದನೆಗೆ ಅಧಿಕಾರ ,ಸಂಪತ್ತು,ಪ್ರಭಾವ ದುರುಪಯೋಗ ನಡೆಯುತ್ತದೆ.ಕಡೆಗೆ ನಮ್ಮ ದಿನ ಮುಗಿಯುತ್ತದೆ.ಈ ಬದುಕಿಗೇನು ಅರ್ಥ.ನಮ್ಮ ನಿರೀಕ್ಷೆಯಂತೆ ಯಾರು ಇರೋದಿಲ್ಲ ಅವರವರ ನಿರೀಕ್ಷೆಗಾಗಿ ಎಲ್ಲರೂ ಇರುತ್ತಾರೆ.
ಈ ಅತಂತ್ರ ಬದುಕಿಗಾಗಿ ನಾವು ನಮ್ಮ ಜೀವನವನ್ನೇ ಸವೆಸುತ್ತೇವೆ.ಆಟ,  ಸಂಪಾದನೆ, ಕುಟುಂಬ ಎಲ್ಲಾ ಮುಗಿವಾಗ ಏನೂ ಇಲ್ಲ. ಅರ್ಥ ಸಿಗದ ಒಂದಿಷ್ಟು ಕಾಲ!
ಮಾಡಿದ್ದು ಉಣ್ಣಲಾರದ ಸ್ಥಿತಿಯಲ್ಲಿ ಹೊರಟು ಹೋಗ್ತೇವೆ.ಜೊತೆಗೆ ಅನಾರೋಗ್ಯವೂ ಸತಾಯಿಸುತ್ತಿರುತ್ತದೆ.
ನನ್ನ ಇಚ್ಚೆಯಂತೆ ಆಗಬೇಕು.ನನಗೇ ಸಿಗಬೇಕು.ಸಿಗದೇ ಹೋದರೆ ಬೇರೆಯವರಿಗೆ ಸಿಗಬಾರದು.ಆಸೆ, ಅತಿಯಾಸೆ, ದುರಾಸೆ,ಅಸೂಯೆ ಹಗೆ, ಪೈಪೋಟಿ, ಲೂಟಿ, ಕೊಲೆ.ಕೊನೆಗೆ ಗಾಳಕ್ಕೆ ಸಿಕ್ಕ ಮೀನಿನಂತೆ ವಿಲವಿಲ ಒದ್ದಾಡಿ ಸಾಯಬೇಕಾಗುತ್ತದೆ.

ಬಯಲು ಪ್ರದೇಶದಲ್ಲಿ ಹದ್ದೊಂದು ಹಕ್ಕಿಯೊಂದನ್ನು ಬೇಟೆಯಾಡಿ ತನ್ನ ಎರಡು ಕಾಲುಗಳಿಂದ ಗಟ್ಟಿಯಾಗಿ ಅದುಮಿ ಹಿಡಿದಿತ್ತು.ಇದನ್ನು ಕಂಡ ಬೇರೆ ಎರಡು ಪಕ್ಷಿಗಳು ಹದ್ದಿನ ಮೇಲೆ ಎರಗುತ್ತಿತ್ತು ಆದರೂ ತನ್ನ ಬಲವಾದ ರೆಕ್ಕೆಗಳಿಂದ ರಕ್ಷಣೆ ಮಾಡುತ್ತಿತ್ತು. ನಂತರ ತನ್ನ ಕೊಕ್ಕಿನಿಂದ ಕುಕ್ಕಿ ತಿಂದು ಬಿಡುತ್ತದೆ. ಈ ಪ್ರಾಣಿಗಳಿಗಿಂತ ಮನುಷ್ಯ ಮಿಗಿಲಾಗುವುದು ಹೇಗೆ?.
ಜನ ಬಲ, ಹಣ ಬಲ,ರಟ್ಟೆ ಬಲ ಕಾಂಚನದ ಮುಂದೆ ಕಾನೂನು ತಲೆಬಾಗುತ್ತದೆ.ಪುರಾವೆಗಳು ಬದಲಾಗುತ್ತದೆ.ಜೈಲಿಗೆ ಹೋಗುವಾಗಲು ಹಾರ ತುರಾಯಿ ?ಬರುವಾಗಲೂ ಹಾರ ತುರಾಯಿ?.
ವಿಜಯದ ಸಂಕೇತ ಅಂತ ತೋರು ಬೆರಳು ಮತ್ತು ನಡು ಬೆರಳುಗಳನ್ನು ಎತ್ತಿ ಪ್ರದರ್ಶಿಸುತ್ತಾರೆ.ಯಾರು ಯಾರ ಮೇಲೆ ವಿಜಯ ಸಾಧಿಸುವುದು?
ಸತ್ಯದ ಮೇಲೆ ಅಸತ್ಯದ ಜಯವೋ?
ಕಾನೂನಿನ ಮೇಲೆ ಅನ್ಯಾಯದ ಜಯವೋ?
ಧರ್ಮದ ಮೇಲೆ ಅಧರ್ಮದ ಜಯವೋ?
ಸ್ವ ಇಚ್ಚೆಗಳು ಆತ್ಮದ ಮೇಲೆ ಹೆಚ್ಚು ಹೆಚ್ಚು ಗೆಲ್ಲಲಾರಂಭಿಸಿದೆ.ಸತ್ಯ ,ನ್ಯಾಯ ಧರ್ಮ ಸೋಲುತ್ತಿದೆ.ಆದರೆ ಅದು ಅವನತಿಯತ್ತ ಸಮಾಜವನ್ನು ಕೊಂಡೊಯ್ಯಲಿದೆ.
ಜಗತ್ತಿನಲ್ಲಿ ಹಲವು ರೀತಿಯಾಗಿ ಮಾನವ ಬದುಕು ಕಳೆದು ಹೋಗಿದೆ.ಸ್ವೇಚ್ಛಾಧಿಪತಿಗಳ ಕಾಲ.ದುಷ್ಟ ಅಹಂಕಾರಿ ರಾಜರುಗಳ ಕಾಲ.ದುರ್ಭಲರನ್ನು ದುಡಿಸಿಕೊಂಡ ಬಲಾಡ್ಯರ ಕಾಲ.ಆದರೆ ಇಂದು ಕಾಂಚಣ ಜಗತ್ತನ್ನುಆಳುವಂತಾಗಿದೆ.ನ್ಯಾಯಪೀಠ ಕಟ್ಟಲು ಖರ್ಚು ಇದೆ.(ಅ)ನ್ಯಾಯ ವಿಧಿ ಪಡೆಯಲು  ಕೂಡಾ ಖರ್ಚು ಮಾಡಬೇಕಾಗಿದೆ.ಅಪರಾಧ,ಅನ್ಯಾಯ,ಅತ್ಯಾಚಾರ ಯಾವುದು ಕಾಣೋದೇ ಇಲ್ಲ. ಹಣದ ಹೊಳೆಯಲ್ಲಿಅವೆಲ್ಲವೂ ಕೊಚ್ಚಿ ಹೋಗುತ್ತಿದೆ.ಕಾನೂನು ಮತ್ತು ಕೋರ್ಟುಗಳಿರೋದು ಅಮಾಯಕರನ್ನು ದಂಡಿಸಲು ಮತ್ತು ಅಪರಾಧಿಗಳನ್ನುರಕ್ಷಿವುದಕ್ಕೋ ? ಎಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ.ಸ್ವಾರ್ಥವು ಒಳಿತನ್ನು ಆಪೋಶನ ತೆಗೆದು ಕೊಳ್ಳುತ್ತಿದೆ.
ಒಂದಂತೂ ಸತ್ಯ.ಯಾರು ಏನೆಲ್ಲಾ ಮಾಡಿ ಕೂಡಿಟ್ಟದ್ದನ್ನು ಕಟ್ಟಿ ಕೊಂಡು ಹೊಗೋದಿಲ್ಲ .ಅದು ಇನ್ನೂ ಹಲವರನ್ನು ಕಚ್ಚಾಡಿಸಲು ಮಾತ್ರ ಪ್ರಯೋಜನವಾಗುತ್ತದೆ.
ನಾವು ನೀರೀಕ್ಷಿಸಿದವರಾರೂ ನಮ್ಮಜೊತೆ ಇರೋದಿಲ್ಲ.ಯಾರು ಯಾರನ್ನೂ ಬಯಸುವುದಿಲ್ಲ. ಸಂಪೂರ್ಣವಾಗಿ ನಮ್ಮನ್ನು ಬಯಸುವವನು ಅಲ್ಲಾಹನು ಮಾತ್ರ. ಆತನನ್ನು ಬಯಸುವವರು ಜನ ಹಿತ ಕಾಯುವರು.ಅವರು ಜನರನ್ನು ನೇರವಾಗಿ ಬಯಸುತ್ತಿಲ್ಲ ಬದಲಿಗೆ ಅಲ್ಲಾಹನಿಗಾಗಿ ಬಯಸುತ್ತಾರೆ.
ಅಲ್ಲಾಹನಿಗಾಗಿ ಯಾವನೊಬ್ಬ ಪ್ರೀತಿಸಿದರೆ ,ಕೋಪಿಸಿದರೆ,ಕೊಟ್ಟರೆ ,ತಡೆದರೆ,ಆತನ ಧರ್ಮವಿಶ್ವಾಸ ಪರಿಪೂರ್ಣಗೊಳ್ಳುತ್ತದೆ.(ಹದೀಸು)

ಅಲ್ ಅಹ್ಸನ್ ಮಾಸಿಕ

ಬುರ್ಖಾಧಾರಿ ಮುಸ್ಲಿಂ ಮಹಿಳೆಯರಿಗಿರುವ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇಂದಿನ ಡೋಂಗಿ ದೇಶ ಭಕ್ತರಿಗಿಲ್ಲ.

ಭಾಷಣ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು (ಕೊಯ್ಯೂರು)

ವೀರ ಇತಿಹಾಸದ ರೋಮಾಂಚಕ ಘಟನೆಗಳ ಚರಿತ್ರೆಯನ್ನು ಸ್ಮರಿಸುವ  ಸಂಭ್ರಮವೇ ಸ್ವಾತಂತ್ರ್ಯೋತ್ಸವದ ಸಂಭ್ರಮ.ಅದು ಶತಶತಮಾನಗಳಲ್ಲಿ ನಡೆದು ಬಂದ ವಿಸ್ತಾರವಾದ ಹೋರಾಟದ ಚರಿತ್ರೆ.ಬ್ರಿಟೀಷರು ದೇಶಗಳಲ್ಲಿ ಕಾಲೂರುವ ತನಕ ಪರಸ್ಪರ ಧರ್ಮಗಳ ಮಧ್ಯೆ ಸಂಘರ್ಷವಿರಲಿಲ್ಲ.
ಎಂಟು ನೂರು ವರ್ಷಗಳ ಕಾಲ ಮುಸ್ಲಿಮರು ದೇಶವನ್ನಾಳಿದ್ದರೂ ಮತೀಯ ಸಂಘರ್ಷದ ಯಾವುದೇ ಸಂಕಟಕ್ಕೆ ದೇಶ ಬಲಿಯಾಗಲಿಲ್ಲ.ವಂಚನೆಯ ಮೂಲಕ ವ್ಯಾಪಾರ ಕ್ಕಾಗಿ ಬಂದ ಆಂಗ್ಲೇಯರು ಅವರ ವ್ಯಾಪಾರ ಬುದ್ದಿಯನ್ನೇ ತೋರಿ ಹಿಂದು ಮುಸ್ಲಿಮ್ ಎಂಬ ಮತೀಯ ದೊಂಬಿಗೆ ಶಿಲಾನ್ಯಾಸವನ್ನು ಮಾಡಿಯೇ ಬಿಟ್ಟರು. ಮೂಲಕ ಮತೀಯ ಗಲಭೆಗಳ ಕರಾಳ ಅಧ್ಯಾಯದ ಪುಟಗಳು ತೆರೆದುಕೊಳ್ಳಲು ಆರಂಭವಾಯಿತು.
ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ರಾಜತಂತ್ರ ಕಾಲದಲ್ಲೂ ಒಂದಾದ ಮನಸ್ಸುಗಳನ್ನು ಒಡೆಯುವ ಮೂಲಕ ಕಾಲಕಾಲದಲ್ಲಿ ಹಿಂದು ಮುಸ್ಲಿಂ ಮಧ್ಯೆ ಆಳವಾದ ಕಂದಕವನ್ನು ಸೃಷ್ಟಿಸಲಾಯಿತು.
ಆದರೆ ಭಾರತ ಬಲಿಷ್ಟ ಪ್ರಜಾತಂತ್ರ ವ್ಯವಸ್ಥೆ, ಗಟ್ಟಿಯಾದ ಸಂವಿಧಾನ ಮತ್ತು  ಭಾರತೀಯ ಪ್ರಜ್ಞೆ ಎಲ್ಲಾ ಸಂಘರ್ಷವನ್ನು ಮೆಟ್ಟಿ ನಿಂತಿದೆ. ಆದರೆ ಅದೀಗ ಅಪಾಯದ ಅಂಚಿನಲ್ಲಿದೆ. ಪ್ರಬುದ್ಧ ಬಹುರೂಪತೆಯ ಭಾರತೀಯತೆಯನ್ನು ಉಳಿಸಲು  ಪರಸ್ಪರ ಕೂಡಿಬಾಳುವ ಸಂಕಲ್ಪ ಒಂದೇ ಪರಿಹಾರ. ಕಾರಣವಾಗಿ ಬಲಿಷ್ಟ ವಿದ್ಯಾರ್ಥಿ ಸಂಘಟನೆ ಎಸ್ಕೆ ಎಸ್ಸೆಸ್ಸಫ್ ಪ್ರತಿ ವಲಯ ಮಟ್ಟದಲ್ಲಿ ಬ್ರಹತ್ತಾದ ಕಾರ್ಯಕ್ರಮ ವನ್ನು ಆಯೋಜಿಸಿದೆ .ಅದುವೇ ಫ್ರೀಡಂ ಸ್ಕ್ವೇರ್.ಒಂದಾಗಿ ಬಾಳೋಣ ಸೌಹಾರ್ದ ಕಾಯೋಣ
ಎಂಬ ಘೋಷ ವಾಕ್ಯದಡಿ ಲಕ್ಷಾಂತರ ಮಂದಿ ಒಟ್ಟು ಸೇರಿ ಸಂಕಲ್ಪ ಕೈಗೊಳ್ಳಲಿದ್ದಾರೆ.
ಭಾರತದಂತಹಾ ಬಹುರೂಪತೆಯ ಪ್ರಜಾತಂತ್ರ ದೇಶದ ಶಕ್ತಿ ಭ್ರಾತೃತ್ವ, ಬಂಧುತ್ವ ಮಾತ್ರ.
ತೆ ಮುಸಲ್ಮಾನರಲ್ಲಿ ರಕ್ತಗತವಾದ ಸಂಗತಿ.ಸ್ವರಾಜ್ಯವನ್ನು ಪ್ರೀತಿಸುವ ವಿಚಾರದಲ್ಲಿ ಮುಹಮ್ಮದ್ ಪೈಗಂಬರರು( )ಅನನ್ಯ ಮಾದರಿಯಾಗಿದ್ದಾರೆ.
ನನ್ನನ್ನು ನನ್ನ ಊರಿನ ಜನ ಹೊರ ಹಾಕದೇ ಇರುತ್ತಿದ್ದರೆ ನಾನು ನಿನ್ನ ಬಿಟ್ಟು ಹೊಗುತ್ತಿರಲಿಲ್ಲ. ಎಂದು ಹಿಜರಿ ಸಮಯ ಅತ್ತು ಬಿಟ್ಟಿದ್ದರು.ನನ್ನೂರುನನ್ನ ಊರು ಎಂದು ಕನವರಿಸುತ್ತಿದ್ದರು. ಸಂದರ್ಭದಲ್ಲಿ
ಸ್ವರಾಜ್ಯದ ವಿಜಯವು ಮಹೋನ್ನತ ವಿಜಯವೆಂದು ಕುರಾನ್ ಘೋಷಿಸುತ್ತದೆ. ಕಾರಣಗಳಿಂದ ಸ್ವಂತ ಊರಿನೊಂದಿಗೆ ಅಚಲವಾದ ಭಕ್ತಿ ಸ್ನೇಹವನ್ನು ಕಾಲ,ದೇಶ ಬೇಧವಿಲ್ಲದೇ ಮುಸಲ್ಮಾನರು ತೋರಿಕೊಟ್ಟರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿದವರು ಮುಸ್ಲಿಮರಾಗಿದ್ದರು.ಹದಿನೇಳಯ ಶತಮಾನದ ತನಕ ಎಂಟುನೂರು ವರ್ಷಗಳ ಕಾಲ ಮುಸ್ಲಿಂ ಆಡಳಿತವಿದ್ದರೂ ಯಾರೂ ಸ್ವಾತಂತ್ರ್ಯ ಕ್ಕಾಗಿ ಧ್ವನಿ ಎತ್ತಲಿಲ್ಲ.
ಸ್ವಾತಂತ್ರ್ಯ ಮೊದಲ ಕಹಳೆ ಮೊಳಗಿದ್ದು ೧೫೨೫ ರಲ್ಲಿ .ವೀರ ಕಲಿಗಳಾದ ಕುಂಙಾಲಿ ಮರಕ್ಕಾರ್ ಕುಟುಂಬವೇ ಅದರ ಸಾರಥ್ಯ ವಹಿಸಿತ್ತು೧೭೫೮  ರಲ್ಲಿ ಬಂಗಾಳದ ನವಾಬ ಸಿರಾಜುದ್ದೌಲ ಬ್ರಿಟಿಷರ ವಿರುದ್ಧ ಹೋರಾಡಿದರೆ, ೧೭೫೮ ರಲ್ಲಿ ಬಹಾದ್ದೂರ್ ಷಾ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಾಯಕನಾಗಿ ಹೋರಾಡಿದರು.೧೭೬೧ ರಿಂದ ೧೭೯೯ ತನಕ ಹೋರಟದ ವರ್ಣರಂಜಿತ ಅಧ್ಯಾಯ ಬರೆದ ಹೈದರಲಿ ಟಪ್ಪು ಸುಲ್ತಾನ್ ಹೋರಾಟ. ೧೮೧೯ರಲ್ಲಿ   ವೆಳಿಯಂಗೋಡು ಉಮರ್ ಖಾಝಿ ಜೈಲು ಸೇರಿದ್ದು  ಭೂಕಂದಾಯ ನೀಡದ ಆರೋಪದಲ್ಲಿ ಆಗಿತ್ತು.ನನ್ನ ಮಣ್ಣಿನ ತೆರಿಗೆ ಪರಕಿಯರಾದ ನಿಮಗೆ ಯಾಕೆ ನೀಡಬೇಕು ?ಎಂಬ ವಾದವಾಗಿತ್ತು ಅವರದು."
"ಯೋಧರಿಗೊಂದು ಕೊಡುಗೆ(ತುಹ್ಪತುಲ್ ಮುಜಾಹಿದೀನ್)ಎಂಬ ಕೃತಿಯನ್ನು ಬರೆದು ಸಯ್ಯಿದ್ ಅಹ್ಮದ್ ಝೈನುದ್ದೀನ್ ಮಖ್ದೂಂ()ಸ್ವಾತಂತ್ರ್ಯ  ಹೋರಾಟಗಾರರನ್ನು ಹುರಿದುಂಬಿಸಿದ್ದರು.ಸಯ್ಯಿದ್ ಝೈನದ್ದೀನ್ ಅಲಿಯ್ಯಿ ಒಂದನೆಯವರು ಸತ್ಯ ವಿಶ್ವಾಸಿಗಳಿಗೆ  ಪ್ರೇರಣೆ (ತಹ್ರೀಲು ಅಹ್ಲಿಲ್ ಈಮಾನ್)ಎಂಬ ಕೃತಿಯನ್ನು ಬರೆದು ಸಾಹಿತ್ಯ ಹೋರಾಟವನ್ನೇ ನಡೆಸಿದ್ದರು. ಮುಹ್ಯುದ್ದೀನ್ ಮಾಲೆಯ ರಚನೆಕಾರರಾದ ಖಾಝಿ ಮುಹಮ್ಮದ್ ಪತ್ಹುಲ್ ಮುಬೀನ್ ಕೂಡಾ ಹೋರಾಟಕ್ಕೆ ಕಿಚ್ಚು ಹೊತ್ತಿಸುವ ಗ್ರಂಥ ವಾಗಿತ್ತು.ವೀರ ಸೇನಾನಿ ಅಲೀ ಮುಸ್ಲಿಯಾರ್ ಮಲಬಾರ್ ದಂಗೆಯ ಸೇನಾನಿಯಾಗಿದ್ದರೆ, ಸಯ್ಯಿದ್ ಮಂಬುರಂ ತಂಙಲ್ ಸಮರ ಮುಂಚೂಣಿಯಲ್ಲಿದ್ದರು.ಅವರ ಮಗನಾದ ಸಯ್ಯಿದ್ ಪಝಲ್ ಪೂಕೋಯ ತಂಙಲ್ ಸೈಫುಲ್ ಬತಾರ್ (ಪ್ರವಾದಿ ಖಡ್ಗ )ಎಂಬ ಹೆಸರಲ್ಲಿ ಗ್ರಂಥ ಬರೆದು ಪರಕೀಯರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು.ಪಾಣಕ್ಕಾಡ್ ಹುಸೈನ್ ತಂಙಲ್ ಕೂಡಾ ಸಮರ ಮುಖದಲ್ಲಿದ್ದರು.
ಸಮರ ಸೇನಾನಿಗಳಾಗಿ ಹೋರಾಡಿದ ಅಸಂಖ್ಯಾತ ಮುಸ್ಲಿಮರ ಚರಿತ್ರೆಯನ್ನು ಇತಿಹಾಸ ಕಾರರು ಉಲ್ಲೇಖಿಸುತ್ತಾರೆ.ಯಾವುದೇ ಕಾಲದಲ್ಲೂ ಮುಸ್ಲಿಮರು ಬ್ರಿಟಿಷರ ಅಧಿಕಾರದ ಭಾಗವಾಗಲಿಲ್ಲ.ಅವರೊಂದಿಗೆ ಸಹಕಾರ ಒಪ್ಪಿಗೆ ಪತ್ರ ಬರೆಯಲಿಲ್ಲ.
ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಮಾಹಿತಿ ಕೊಡುವ ನಯ ವಂಚಕ ಕೆಲಸವನ್ನೂ ಮಾಡಲಿಲ್ಲ.ಆದರೂ ಮುಸಲ್ಮಾನರನ್ನು ದೇಶಪ್ರೇಮದ ವಿಚಾರದಲ್ಲಿ ಅನುಮಾನದಿಂದ ನೋಡುವವರಿಗೆ ಕಮ್ಮಿ ಇಲ್ಲ.ಇನ್ನು ದೇಶಿಯ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರು ಮಾಡಿದ ಹೋರಾಟ, ನಿರ್ಮಿಸಿದ ಇತಿಹಾಸ ಇಂದಿನ ದೇಶಭಕ್ತರೆನಿಸಿಕೊಂಡವರ ಪೂರ್ವ ಹಿರಿಯರು ಮಾಡಲಿಲ್ಲ.ಅಂತಹಾ ಅಪ್ರತಿಮ ಹಿನ್ನಲೆ ಮುಸ್ಲಿಂ ಮಹಿಳಾಮಣಿಗಳಿಗಿದೆ.ಬುರ್ಖಾದೊಳಗೆ ಬಂಧಿತಳು,ತ್ರಿವಳಿ ತಲಾಖ್ ನೊಳಗೆ ಅತಂತ್ರಳು ,ನಾಲ್ಕು ಗೋಡೆಯೋಳಗೆ ಅಶಕ್ತಳು? ಎಂದೆಲ್ಲಾ ಹೇಳಿಕೆ ಕೊಡುವ ಮಸ್ಲಿಂ ವಿರೋಧಿ ನಂಜನ್ನು ಕಾರುವ ನಕಲಿ ದೇಶ ಭಕ್ತರು ಅರಿಯಬೇಕಾದ ಸಂಗತಿ! ಗಂಡಸರೆನಿಸಿಕೊಂಡವರು ಬ್ರಿಟಿಷರ ಸೆರಗಿನೊಳಗೆ ನುಸುಳಿ ಕೂತಾಗ ರಣ ವೀರೆಯರಾಗಿ ರಣರಂಗದಲ್ಲಿ ಧೀರವಾಗಿ ಹೋರಾಡಿದ ಚರಿತ್ರೆ ಮುಸ್ಲಿಂ ಮಹಿಳೆಯರಿಗಿದೆ.ಸ್ವಾತಂತ್ರ್ಯ ನಂತರ ಎಲ್ಲೋ ಅಡಗಿದ್ದ ಭಕ್ತರು ಮೆಲ್ಲಮೆಲ್ಲನೆ ಜಡೆ ಎತ್ತಿ ಕೊನೆಗೆ ನಿಜವಾದ ಹೋರಾಟಗಾರರನ್ನು ಪಕ್ಕಕ್ಕೆ ಸರಿಸಿ ತಾವೇ ತಮ್ಮ ಪೂರ್ವಿಕರೇ ಹೋರಾಟಗಾರರೆಂದು ಬಿಂಬಿಸುತ್ತಿದ್ದಾರೆ. ಮೂಲಕ ಮುಸ್ಲಿಮರ ಹೋರಾಟದ ಅಧ್ಯಾಯ ವನ್ನು ಮರೆಮಾಚಲಾಗುತ್ತಿದೆ.ಅಲ್ಪಸಂಖ್ಯಾತರ ಮೇಲಾಗುವ ದೌರ್ಜನ್ಯ ವನ್ನುಮುಚ್ಚಿಹಾಕಲು  ಮುಸ್ಲಿಮ್ ರಾಜರುಗಳ ಮೇಲೆ ಹೆಣೆಯಲ್ಪಟ್ಟ ಕಟ್ಟುಕಥೆಗಳಾದ ಮತಾಂತರ,ಮಂದಿರ ದ್ವಂಸ ಎಂಬಿತ್ಯಾದಿ ವಿಚಾರಗಳೊಂದಿಗೆ ಭಯೋತ್ಪಾದನೆಯ ಭೂತವನ್ನು ಮುಸ್ಲಿಮ್ ತಲೆ ಮೇಲೆ ಕೂರಿಸಲಾಗುತ್ತದೆ.
ಬುರ್ಖಾಧಾರಿ ಮಹಿಳೆಯರ ಸ್ವಾತಂತ್ರ್ಯ ಹೋರಾಟದ ವೀರ ಇತಿಹಾಸ ಅದ್ಭುತವಾದದ್ದು.೧೮೪೭ರಲ್ಲಿ  ಬೇಗಂ ಹಝ್ರತ್ ಮಹಲ್ ಬುರ್ಖಾಧಾರಿ ಮಹಿಳೆ ಬ್ರಿಟೀಷರ ವಿರುದ್ಧ ಏಳು ಲಕ್ಷ ಸೈನಿಕರನ್ನು ಕಟ್ಟಿ ಹೋರಾಡಿದ ಮಹಿಳೆ. ಬ್ರಿಟಿಷರಿಗೆ ತಲೆ ನೋವಾಗಿದ್ದ ಮಹಲನ್ನ ಮುಗಿಸಲು ಪ್ರಯತ್ನ ಪಟ್ಟರೂ ಸಾದ್ಯವಾಗಲಿಲ್ಲ.ಅನೇಕ ಸಲ ಹಝ್ರತ್ ಮಹಲನ್ನು ಓಲೈಸಕೊಳ್ಳಲು  ಬ್ರಿಟಿಷರು ಮುಂದಾದರೂ ಸಾಧ್ಯವಾಗಲಿಲ್ಲ.ಕಡೆಗೆ ಅವರು ನೇಪಾಳದಲ್ಲಿ ನೆಲೆಸುತ್ತಾರೆ ಧೀರ ವನಿತೆ.
ಮೊದಲ ಸ್ವಾತಂತ್ರ್ಯ ಸಮರದಲ್ಲಿ ವೀರಾವೇಶದಿಂದ ಹೋರಾಡಿದ ಸಾಹಿರಾ ಬೇಗಂ.ಇವರ ಹೋರಾಟ ಕಂಡು ಬ್ರಿಟಿಷ್ ಸೈನ್ಯ ದಂಗಾಗಿ ಹೋಗಿತ್ತು.ಸೇನಾ ಕಮಾಂಡರ್ ವೈ. ಡಬ್ಲ್ಯು,ಹಡ್ಸನ್ ಹೇಳಿದ್ದು  ಸಾಹಿರಾ ಸಾಮಾನ್ಯಳಲ್ಲ  ಅವಳು ಅಸಾಮಾನ್ಯ ಸಮರ ರತ್ನ  ಎಂದಾಗಿತ್ತು.ಸಾಹಿರಾ ಬೇಗಂ ದೆಹಲಿಯ ಚಾಂದ್ನಿ ಚೌಕಿಯ ವೌಲವಿಯ ಮಗಳಾಗಿದ್ದರು.ಕೊನೆಗೆ ಸಮರ ರತ್ನವನ್ನು ಗಲ್ಲಿಗೇರಿಸಲಾಯಿತು.ಜಾಮಿಯಾ ಮಿಲ್ಲಿಯ ಪ್ರಿನ್ಸಿಪಾಲರಾದ ಮಾಜಿದ್ ಪತ್ನಿ ಖುರ್ಶಿದಾ ಬೇಗಂ  ಹಿಂದ್ ಎನ್ನುವ ಪತ್ರಿಕೆ ಮೂಲಕ ವಿಚಾರ ಹೋರಾಟಕ್ಕೆ ಮುಂದಾದರು.ಅಹ್ಮದಾಬಾದಿನಲ್ಲಿಹಮೀದಿಯಾ ಕಾಲೇಜನ್ನು ಸ್ಥಾಪಿಸಿದ್ದರು.
ಕಾನ್ಪುರದಲ್ಲಿ ಮಹಿಳಾ ಸೇನೆಯನ್ನು ಕಟ್ಟಿದ ದೀರ ವನಿತೆ ಅಝೀಝ ಖಾನಂ. ಗುಪ್ತವಾಗಿ ಬ್ರಿಟಿಷ್ ವಿರುದ್ಧ ಮಹಿಳಾ ಶಕ್ತಿಯನ್ನು ಸಂಘಟಿಸುತ್ತಿದ್ದ ಖಾನಂ ನನ್ನು ಹಿಡಿದು ತಂದು ಬೆಂಕಿಯನ್ನು ಉಗುಳುವ ತೋಪಿನ ಮುಂದೆ ನಿಲ್ಲಿಸಿ ಅಜೀಮುಲ್ಲಾ  ಖಾನ್ ಎಲ್ಲಿ ಎಂದು ಹೇಳು ಎನ್ನುತ್ತಾ ಗದರಿಸಿ ನೀನು ಅವನ ಬಗ್ಗೆ ಹೇಳಿದರೆ ನಿನ್ನನ್ನು ಸುಮ್ಮನೇ ಬಿಡುತ್ತೇವೆ.ಆಗ ಅಝೀಝ ಖಾನಂ ಹೇಳಿದ್ದು
 ಸ್ವಾತಂತ್ರ್ಯ ಸೇನಾನಿಯನ್ನು ನಿಮಗೆ ಬಲಿಕೊಡುವುದಕ್ಕಿಂತ ನಾನೇ ನಿಮ್ಮ ತೋಪಿಗೆ ತಲೆ ಒಡ್ಡುವೆ.
ಕೊನೆಗೆ ರುಂಡವನ್ನು ಅವರ ತೋಪು ಬಲಿ ತೆಗೆದಿತು.
ದೇಶಿಯ ಪ್ರಸ್ಥಾನದ ನೇತಾರ ಬದ್ರುದ್ದೀನ್ ತಯ್ಯಿಬ್ ಜೀ ಪತ್ನಿ ಆಮಿನಾ.ಸಂಬಂಧಿಕರಾದ ರಹನಾ ,ಸುಹೈಲಾ ಗಾಂದೀ ಜೊತೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸಿ ಮದ್ಯಪಾನ ವಿರುದ್ಧ ಹೋರಾಡಿದರು.
ಬದ್ರುದ್ದೀನ್ ತಯ್ಯಿಬ್ ಮಗಳು ಸಕೀನಾ ಲುಖ್ಮಾನಿ ಬಾಂಬೆಯ ಬೆಂಕಿ ಉಗುಳುವ ಭಾಷಣಗಾರರಾಗಿದ್ದರು.ಸಮರ ವೀರ ರಸೂಲ್ ಕುರೇಸಿ ಪತ್ನಿ ಆಮಿನಾ,ಸೈಫುದ್ದೀನ್ ಪತ್ನಿ ಸಹಾದತ್ ಬಾನು ಹೋರಾಟದ ಹಾದಿಯಲ್ಲಿ ಸಬರಮತಿ ಆಶ್ರಮದಲ್ಲೇ ಇದ್ದರು.ಹಝ್ರತ್ ಮೋಹಾನಿ ಪತ್ನಿ ನಿಹ್ಮತುನ್ನಿಸಾ ಬೇಗಂ ,ಬ್ಯಾರಿಸ್ಟರ್ ಆಸಿಫ್ ಅಲಿ ಪತ್ನಿ ಅಕ್ತರ್ ಬೇಗಂ ಕೂಡಾ ಸಮರ ರಂಗದಲ್ಲಿದ್ದರು.ಭಾರತ ಕಂಡ ಅಪ್ರತಿಮ ಹೋರಾಟಗಾರರಾದ ಮುಹಮ್ಮದಲಿ ಶೌಕತ್ ಅಲೀ ತಾಯಿ ಬೀಯುಮ್ಮ ತೋರಿದ ಧೀರತೆ ಅಪಾರ. ಸರಳುಗಳು ಮಧ್ಯೆ ಬಂದಿತ ಮಕ್ಕಳೊಂದಿಗೆ ಹೇಳಿದ್ದು ಯಾವುದೇ ಕಾರಣದಿಂದ ನೀವು ಬ್ರಿಟೀಷರಿಗೆ ಶರಣಾಗಬೇಡಿ ಸಹಕರಿಸಬೇಡಿ.ಒಂದು ವೇಳೆ ಹಾಗೇ ಮಾಡಿದರೆ ನನ್ನ ಎದೆಹಾಲು ನಿಮಗೆ ಹಾರಾಂ  (ನಿಷಿದ್ದ)ಆದೀತು.ಇಸ್ಲಾಮಿನ ಬುರ್ಖಾಧಾರಿ ಮುಸ್ಲಿಮರ ಹೋರಾಟದ ಹತ್ತಿರಕ್ಕೆ ಬರಲು ಇಂದಿನ ಸ್ವಯಂ ಘೋಷಿತ ದೇಶ ಭಕ್ತರಿಗೆ ಅಸಾಧ್ಯ. ಗಾಂಧಿಯವರನ್ನು ಕೊಂದವರು,ರಾಷ್ಟ್ರಧ್ವಜ ಕ್ಕೆ ಅವಮಾನ ಮಾಡಿದವರು, ಹೋರಾಟದ ವಿಷಮ ಘಟ್ಟದಲ್ಲಿ ಪರಕಿಯರ ಜೊತೆ ಇದ್ದವರು ನಿಜವಾದ ದೇಶ ಭಕ್ತರಲ್ಲ .ಅವರು ದೇಶ ಭಕ್ಷಕರು.ಹಚ್ಚಗಿದ್ದಲ್ಲಿ ಮೇಯುವ ಬೆಚ್ಚಗಿದ್ದಲ್ಲಿ ಮಲಗುವ ಇಲ್ಲವಾದರೆ ಬಿಲ ಸೇರುವ ಸಮಯಸಾಧಕರು ಮಾತ್ರ.ಇವರ ಸಿದ್ದಾಂತ ಭಾರತೀಯ ಬಹು ರೂಪತೆಯ ಸಂಸ್ಕೃತಿಯ ವಿರೋಧಿ, ಪ್ರಜಾಪ್ರಭುತ್ವಕ್ಕೆ ಕಂಟಕ, ಸಂವಿಧಾನ ವ್ಯವಸ್ಥೆಗೆ ವಿನಾಶಕಾರಿ.ಇಂತವರಿಗೆ ಮಣೆ ಹಾಕೋದು ಹುಚ್ಚುತನ ಮಾತ್ರವಾಗಬಹುದು.ಇದರಿಂದ ದೊಡ್ಡ ಗಂಡಾಂತರಕ್ಕೆ ಕಾರಣವಾಗಲೂಬಹುದು. ದೇಶದ ಸಮಾನ ಮನಸ್ಕರಾದ ಬಹು ಸಂಖ್ಯಾತ ಪ್ರಗತಿಪರ ಚಿಂತಕರು ದಮನಿತ  ಅಲ್ಪಸಂಖ್ಯಾತರ ಪರ ದ್ವನಿ ಎತ್ತುತ್ತಿದ್ದಾರೆ.ಆದರೆ ಕೆಲ ವಿದ್ವಾಂಸರೆನಿಸಿಕೊಂಡವರ ಅವಿವೇಕದ ವರ್ತನೆಯು ಪ್ರಗತಿಪರರನ್ನು ವಿಮುಖರಾಗುವಂತೆ ಮಾಡಿದರೆ ಅದು ದೊಡ್ಡ ದುರಂತವಾಗಬಹುದು.

ವರದಿ ಅಹ್ಸನ್ ಮಾಸಿಕ