ಅಪಪ್ರಚಾರಗಳಿಂದ ಇಸ್ಲಾಮನ್ನು ಕಟ್ಟಿ ಹಾಕಲಾಗದು; ಆದಿರಾ ಎತ್ತಿದ ಪ್ರಶ್ನೆಗಳಿಗೆ ಆಧಾರ ಸಹಿತ ದಿಟ್ಟ ಉತ್ತರ.

ಮೌಲಾನಾ ಯು ಕೆ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಐತಿಹಾಸಿಕ ವಿಜಯಗಳ ಚರಿತ್ರೆಯನ್ನು ಬರೆಯಲ್ಪಟ್ಟ,
ಜಗತ್ತಿನ ಅತ್ಯದ್ಭುತ ಘಟನೆಗಳಿಗೆ ಸಾಕ್ಷಿಯಾದ,
ದಮನಿತ, ಘೋಷಿತ ಅಸಹಾಯಕ ಜನ ವರ್ಗಕ್ಕೆ ಆಶಾಕಿರಣ ನೀಡುವ ತಿಂಗಳು ಪವಿತ್ರ ಮುಹರ್ರಂ.
ಜಗದೊಡೆಯನ ಅಸ್ತಿತ್ವದ ವಿರುದ್ಧ ಶಕ್ತಿ ಪ್ರದರ್ಶಿಸಿದ ಅಹಂಕಾರಿಗಳ ಸದ್ದಡಗಿದ್ದು ಇದೇ ಮುಹರ್ರಮ್ ನಲ್ಲಿ.ಅಗ್ನಿ ಪರೀಕ್ಷೆಗೆ ಬಲಿಯಾದ ಹಜ್ರತ್ ಖಲೀಲಿಲ್ಲಾಹಿ ಇಬ್ರಾಹಿಂ (ಅ ) ಏಳು ದಿವಸಗಳ ನಂತರ ಬೆಂಕಿಯ ಕೆನ್ನಾಲೆಯಿಂದ ಒಂದು ರೋಮವೂ ಸುಡದಂತೆ ಹೊರಬಂದದ್ದು ಇದೇ ಮುಹರ್ರಂ ತಿಂಗಳಿನಲ್ಲಿ.

ಸತ್ಯ ಧರ್ಮದ ಉಳಿವಿಗಾಗಿ ನಡೆದ ಅನೇಕ ರೋಮಾಂಚಕ ಘಟನೆಗಳಿಗೆ ಈ ಮಾಸ ಸಾಕ್ಷಿಯಾಗಿದೆ. ಇಸ್ಲಾಮಿನ ವಿರುದ್ಧವಾಗಿ ಯಾರು ದ್ವನಿ ಎತ್ತಿದರೂ ಅದು ಫಲ ನೀಡದು ಎನ್ನುವದು ಕಾಲ ಕಂಡ ಸತ್ಯ.

ಇತ್ತೀಚಿನ ಕೆಲ ದಿನಗಳಲ್ಲಿ ಚರ್ಚೆಗೆ ಗ್ರಾಸವಾದ ವಸ್ತು ಕಾಸರಗೋಡಿನ ಉದುಮಾ ನಿವಾಸಿ ಆದಿರಾ !

ಆದಿರಾ  ಎಂಬ ಹೆಣ್ಣು ಮಗಳು ತನ್ನ ಇಷ್ಟದಂತೆ ಇಸ್ಲಾಮಿಗೆ ಮತಾಂತರ ಗೊಂಡಿದ್ದಳು. ನಂತರ ಮನೆ ಬಿಟ್ಟ ಆದಿರಾ ಆಯಿಷಾ ಆಗಿ ಕೋರ್ಟಿಗೆ ಹಾಜರಾಗುತ್ತಾಳೆ.ನನ್ನ ಸ್ವ ಇಚ್ಚೆಯಿಂದಲೇ ಮತಾಂತರಗೊಂಡಿದ್ದೇನೆ ಎಂದು ಹೇಳಿಕೆ ಕೊಡುತ್ತಾಳೆ.ನನ್ನ ಮುಂದಿನ ಅದ್ಯಯನ ಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರ್ಟಿನೊಂದಿಗೆ ವಿನಂತಿ ಮಾಡುತ್ತಾಳೆ. ನಂತರ ಹೆತ್ತವರ ಸುಪರ್ದಿಗೆ ಕೊಡಲಾಗುತ್ತದೆ.ಅಲ್ಲಿಂದ ಒಂದು ಆಶ್ರಮದಲ್ಲಿ ಕೆಲಕಾಲ ಹೆಚ್ಚಿನ ಅದ್ಯಯನ ಕ್ಕಾಗಿ ಸೇರಿಕೊಳ್ಳುತ್ತಾಳೆ. ನಂತರ ಪುನಃ ಆದಿರಳಾಗಿ ಚಾನಲ್ ಮುಂದೆ ಪ್ರತ್ಯಕ್ಷಳಾಗುತ್ತಾಳೆ.ಹಾಗೇ ತನ್ನ ಸಂದರ್ಶನವನ್ನು ನೀಡುತ್ತಾಳೆ.
ಈ ಮಧ್ಯೆ ಆದಿರಾ ವಿಷಯದಲ್ಲಿ ಉಗ್ರ,ಜಿಹಾದ್,ಬಲಾತ್ಕಾರ ಐಸಿಸ್ ಎಂಬಿತ್ಯಾದಿ ಚರ್ಚೆಗಳು ಧಾರಾಳವಾಗಿ ನಡೆದಿತ್ತು..ಅದೆಲ್ಲವೂ ಅಪ್ರಸ್ತುತ ಎಂದು ಆದಿರಳ ಮಾತಿನಿಂದ ಬಯಲಾಯಿತು.ಮತ್ತೆ ತನ್ನ ಸಹಾಯಕ್ಕೆ ಬಂದವರು ಸಹಪಾಟಿಗಳಿರಬಹುದು,ಪರಿಚಯದವರೂ ಇರಬಹುದು.ಅದೆಲ್ಲಾ ಸಹಜವಾದ ಸಂಗತಿಗಳು. ಇದ್ಯಾವುದು ನಮ್ಮ ಚರ್ಚೆಯ ವಿಷಯವಲ್ಲ.
ಆದಿರ ಆಯಿಷಾ ಆದರೂ ಆಯಿಷಾ ಆದಿರಾ ಆದರೂ ನಮಗೇನು ?
ಅಂತಹಾ ಸಂಗತಿಗಳು ನಡೆಯುತ್ತಲೇ ಇದೆ.ಅದು ಅವರವರ ವ್ಯಕ್ತಿ ಸ್ವಾತಂತ್ರ್ಯ. ಯಾರೂ ಪ್ರಶ್ನಿಸುವಂತಿಲ್ಲ.
ಆದರೆ ಆದಿರ ಕೊಟ್ಟ ಹೇಳಿಕೆಗಳು ಅವಳ ಮಾತ್ರ ಅಭಿಪ್ರಾಯವಾಗಿದ್ದರೂ ,ಬೇರೆಯವರು ಆ ರೀತಿ ಸಿದ್ದಪಡಿಸಿದ್ದೇ ಆಗಿದ್ದರೂ ಅದು   ಖಂಡನೀಯ.
ಕಾರಣ ಆದಿರಾ ಯಾವ ಧರ್ಮವನ್ನು ಬೇಕಾದರೂ ಅಪ್ಪಿಕೊಳ್ಳಬಹುದು. ಆದರೆ ಯಾವುದೇ ಧರ್ಮದ ಬಗ್ಗೆ ಅಪಕ್ವವಾದ ಆರೋಪಗಳನ್ನು ಮಾಡಬಾರದೆಂಬ ಕಾರ್ಯವನ್ನು ನಾವು ಎತ್ತಿಹಿಡಿಯುತ್ತೇವೆ.
ಮತ್ತು ಆರೋಪಗಳಿಗೆ ಉತ್ತರವನ್ನು  ಕೊಡಬೇಕಾದುದು ನಮ್ಮ ಕರ್ತವ್ಯವಾಗಿರುತ್ತದೆ.
ಇಸ್ಲಾಮಿನಲ್ಲಿ ಸ್ತ್ರೀಯರಿಗೆ ಸಮಾನತೆ ಸ್ವಾತಂತ್ರ್ಯ ಇಲ್ಲ ಎನ್ನುವುದು  ಆದಿರಾಳ ಮೊದಲ ಆರೋಪ.
ಇದರ ನಿಜಾಂಶವೇನೆಂದು ತಿಳಿಯೋಣ.
ಮನುಷ್ಯ ಸೃಷ್ಟಿ ಯ ಬಗ್ಗೆ ಕುರಾನ್ ಹೀಗೆನ್ನುತ್ತದೆ.

لَقَدْ خَلَقْنَا الْإِنْسَانَ فِي أَحْسَنِ تَقْوِيمٍ

ಖಂಡಿತವಾಗಿಯೂ ನಾವು ಮನುಷ್ಯನನ್ನು ಅತ್ಯುತ್ತಮ ರಚನೆಯೊಂದಿಗೆ ಸೃಷ್ಟಿಸಿರುವೆವು.

وَلَقَدْ كَرَّمْنَا بَنِي آدَمَ وَحَمَلْنَاهُمْ فِي الْبَرِّ وَالْبَحْرِ وَرَزَقْنَاهُمْ مِنَ الطَّيِّبَاتِ وَفَضَّلْنَاهُمْ عَلَىٰ كَثِيرٍ مِمَّنْ خَلَقْنَا تَفْضِيلًا

ಖಂಡಿತವಾಗಿಯೂ ನಾವು ಆದಮ್ ಸಂತತಿಗಳನ್ನು ಗೌರವಿಸಿರುವೆವು. ಅವರನ್ನು ನಾವು ಸಮುದ್ರದಲ್ಲೂ, ನೆಲದಲ್ಲೂ ವಾಹನದಲ್ಲಿ ವಹಿಸಿರುವೆವು. ವಿಶಿಷ್ಠ ವಸ್ತು ಗಳಿಂದ ಅವರಿಗೆ ನಾವು ಅನ್ನಾಧಾರವನ್ನು ಒದಗಿಸಿರುವೆವು. ನಾವು ಸೃಷ್ಟಿಸಿದವುಗಳ ಪೈಕಿ ಹೆಚ್ಚಿನವರಿಗಿಂತಲೂ ಅವರಿಗೆ ನಾವು ವಿಶೇಷ ಶ್ರೇಷ್ಠತೆಯನ್ನು ದಯಪಾಲಿಸಿರುವೆವು.
ಇಲ್ಲಿ ಕುರಾನ್ ಯಾವುದೇ ರೀತಿಯ ಭೇದ ತೋರುವುದಿಲ್ಲ.ಮನುಷ್ಯನ ಸೃಷ್ಟಿ ಮತ್ತು ಅನುಗ್ರಹ ಎಲ್ಲವೂ  ಗಂಡು ಹೆಣ್ಣಿಗೆ ಸಮಾನವಾಗಿದೆ.
ಇನ್ನು ಪ್ರತಿಫಲದ ಬಗ್ಗೆ ಯೂ ಕುರಾನ್ ಸಮಾನವಾಗಿ ಕಾಣುತ್ತದೆ.
مَنْ عَمِلَ صَالِحًا مِنْ ذَكَرٍ أَوْ أُنْثَىٰ وَهُوَ مُؤْمِنٌ فَلَنُحْيِيَنَّهُ حَيَاةً طَيِّبَةً ۖ وَلَنَجْزِيَنَّهُمْ أَجْرَهُمْ بِأَحْسَنِ مَا كَانُوا يَعْمَلُونَ
(ಅನ್ನಹ್ಲ್ :೯೭)

ಗಂಡಾಗಲಿ, ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿರುತ್ತಾ ಯಾರು ಸತ್ಕರ್ಮಗಳನ್ನು ಮಾಡುವರೋ ಖಂಡಿತವಾಗಿಯೂ ನಾವು ಆ ವ್ಯಕ್ತಿಗೆ ಉತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು.ಪ್ರತಿಯೋರ್ವರ ಜವಾಬ್ದಾರಿ ಯೂ ಸಮಾನವೆಂಬುದು ಕುರಾನ್ ಉಲ್ಲೇಖಿಸುತ್ತದೆ.

 وَلَهُنَّ مِثْلُ الَّذِي عَلَيْهِنَّ بِالْمَعْرُوفِ ۚ وَلِلرِّجَالِ عَلَيْهِنَّ دَرَجَةٌ ۗ ﻭﺍﻟﻠﻪعزيز ﺣﻜﻴﻢ.

ಸ್ತ್ರೀಯರಿಗೆ ಪತಿಯಂದಿರೊಂದಿಗೆ) ಬಾಧ್ಯತೆಗಳಿರುವಂತೆ ಅವರಿಗೆ ಸಿಗಬೇಕಾದ ನ್ಯಾಯಬದ್ಧ ಹಕ್ಕುಗಳೂ ಇವೆ. ಆದರೆ ಪುರುಷರಿಗೆ ಅವರಿಗಿಂತ ಹೆಚ್ಚಿನ ಒಂದು ಪದವಿಯಿದೆ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

ಹೆಣ್ಣು ಮಕ್ಕಳನ್ನು ಸಾಕಿದರೆ ಅಂತ್ಯ ದಿನದಲ್ಲಿ ಪ್ರವಾದಿ ಜೊತೆ ಸೇರಬಹುದು.
ಮಡದಿಯ ಬಾಯಲ್ಲಿ ಇಡುವ ಪ್ರತೀ ತುತ್ತಿಗೆ ಪುಣ್ಯವಿದೆ.
ಇದು ಪುಣ್ಯ ಪ್ರವಾದಿಯ ಶ್ರೇಷ್ಠ ವಚನಗಳು.
ವೈವಾಹಿಕ ಬದುಕಿನಲ್ಲಿ ಗಂಡ ಹೆಂಡತಿ ಸಮಾನರು.ಕುರಾನ್ ಹೇಳುತ್ತದೆ.
هُنَّ لِبَاسٌ لَكُمْ وَأَنْتُمْ لِبَاسٌ لَهُنَّ ۗ

ಅವರು ನಿಮಗೊಂದು ಉಡುಪಾಗಿ ರುವರು. ಮತ್ತು ನೀವು ಅವರಿಗೊಂದು ಉಡುಪಾಗಿರುವಿರಿ.
ಇನ್ನು ಜವಾಬ್ದಾರಿ ವಿಚಾರದಲ್ಲಿ ನೋಡಿದರೆ
ಹೆಂಡತಿಯ ಸಂಪಾದನೆ ಅವಳಿಗೆ ಮಾತ್ರವಾಗಿರುತ್ತದೆ.
ಗಂಡನಾದವನು ಸಂಪೂರ್ಣ ಖರ್ಚು ವೆಚ್ಚವನ್ನು ನಿಭಾಯಿಸುವುದರೊಂದಿಗೆ ತಂದೆಯ ಸೊತ್ತಿನಲ್ಲಿ ಹೆಣ್ಣು ಪಾಲು ಪಡಯುತ್ತಾಳೆ.
ಗಂಡಾದವನು ಹೆಣ್ಣಿನ ಒಂದಂಶ ಜಾಸ್ತಿ ಪಡೆದರೂ ಖರ್ಚನ್ನು ಭರಿಸುವ ಜವಾಬ್ದಾರಿ ಹೊಂದಿರುತ್ತಾನೆ.
ಕುರಾನ್ ಹೇಳುತ್ತದೆ.
الرِّجَالُ قَوَّامُونَ عَلَى النِّسَاءِ بِمَا فَضَّلَ اللَّهُ بَعْضَهُمْ عَلَىٰ بَعْضٍ وَبِمَا أَنْفَقُوا مِنْ أَمْوَالِهِمْ ۚ

ಅಲ್ಲಾಹು ಮನುಷ್ಯರ ಪೈಕಿ ಒಂದು ವರ್ಗವನ್ನು ಇನ್ನೊಂದು ವರ್ಗದವರಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ವರನ್ನಾಗಿ ಮಾಡಿರುವುದರಿಂದ ಮತ್ತು (ಪುರುಷರು) ತಮ್ಮ ಧನವನ್ನು ವ್ಯಯಿಸುವುದರಿಂದ ಪುರುಷರು ಸ್ತ್ರೀಯರ ಮೇ
ಲೆ ನಿಯಂತ್ರಣಾಧಿಕಾರ ಹೊಂದಿದವರಾಗಿರುತ್ತಾರೆ.

ಇನ್ನು ಸ್ರೀಯ ಬಗ್ಗೆ ಶ್ಲೋಕ ಏನನ್ನುತ್ತದೆ.?

ತಥಾ ಚ ಶ್ರುತಯೋ ಬಹ್ವೋ ನಗೀತಾ ನಿಗಮೇಷ್ವಪಿ/-(9-19)
ಸ್ತ್ರೀಯರು ಹೀಗೆಂದು ವೇದಗಳಲ್ಲಿಯೇ ಪ್ರಮಾಣಗಳಿವೆ.
ಸ್ವಭಾವ ಏಷ ನಾರಿಣಾಂ ನರಾಣಾಮಿಹ ದೂಷಣಂ/-(2-213)
ಪುರುಷರ ಮನಸ್ಸು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ.
ಅವಿದ್ವಾಂಸಮಲ ಲೋಕೇ ವಿದ್ವಾಂಸಮಪಿ ವಾ ಪುನಃ/
ಪ್ರಮದಾ ಹ್ಯುತ್ಪಥಂ ನೇತುಂ ಕಾಮಕ್ರೋಧವಶಾನುಗಂ-(2-214)
ಅವನು ಪಂಡಿತನೇ ಇರಲಿ, ಪಾಮರನೇ ಆಗಿರಲಿ ಕಾಮ ಕ್ರೋಧ ವಶನಾದ ಮನುಷ್ಯನನ್ನು ಮಾರ್ಗ ಭ್ರಷ್ಟನನ್ನಾಗಿ ಮಾಡಲು ಸ್ತ್ರೀ ಸಮರ್ಥಳು.

ಪಿತ್ರಾ ಭತರ್ಾ ಸುತೈವರ್ಾಪಿ ನೇಚ್ಛೇದ್ವಿರಹಮಾತ್ಮನಂ/
ಏಷಾಂ ಹಿ ವಿರಹೇಣ ಸ್ತ್ರೀ ಗಹ್ಯರ್ೇ ಕುಯರ್ಾಭೇ ಕುಲೇ//-(5-149)
ಸ್ತ್ರೀಯರು ತಂದೆ, ಗಂಡ, ಮಕ್ಕಳನ್ನು ಬಿಟ್ಟು ಒಬ್ಬಳೇ ಇರಬಾರದು. ಹಾಗೆ ಒಬ್ಬಳೇ ಇದ್ದರೆ ಉಭಯ ಕುಲಗಳಿಗೂ ಕೆಟ್ಟ ಹೆಸರು ತರುತ್ತಾಳೆ.

ಬಾಲ್ಯೇ ಪಿತುರ್ವಶೇ ತಿಷ್ಠೇತ್ಪಾಣಿಗ್ರಾಹಸ್ಯ ಯೌವನೇ/
ಪುತ್ರಾಣಾಂ ಭರ್ತರಿ ಪ್ರೇತೇ ಭಜೇತ್ ಸ್ತ್ರೀ ಸ್ವತಂತ್ರತಾಂ//-(5-148)
ಬಾಲ್ಯದಲ್ಲಿ ತಂದೆಯ ವಶದಲ್ಲಿ ಯೌವ್ವನದಲ್ಲಿ ಗಂಡನ ವಶದಲ್ಲಿ ಗಂಡ ಸತ್ತ ನಂತರ ಪುತ್ರರ ಅಧೀನದಲ್ಲಿ ಬಾಳಬೇಕಲ್ಲದೇ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು.

ಮನುಸ್ಮೃತಿಯ ಬಹಳ ಪ್ರಸಿದ್ಧವಾದ ಶ್ಲೋಕ-

ಪಿತಾ ರಕ್ಷತಿ ಕೌಮಾರೇ ಭತರ್ಾ ರಕ್ಷತಿ ಯೌವನೇ/
ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ//-(9-3)


ನಾಸ್ತಿ ಸ್ತ್ರೀಣಾಂ ಪೃಥಗ್ಯಜ್ಞೋ ನವ್ರತಂ ನಾಪ್ಯು ಪೋಷಿತಂ/
ಪತಿಂ ಶುಶ್ರೂಷತೇ ಯೇನ ತೇನ ಸ್ವಗರ್ೇ ಮಹಿಯತೇ// (5-155)
ಪತಿಯನ್ನು ಬಿಟ್ಟು ಸ್ತ್ರೀಗೆ ಬೇರೇ ಯಜ್ಞವೇ ಇಲ್ಲ. ವ್ರತವೂ ಇಲ್ಲ. ಉಪವಾಸವೂ ಇಲ್ಲ. ಪತಿ ಸೇವೆ ಮಾಡುವುದರಿಂದಲೇ ಸ್ತ್ರೀಯು ಸ್ವರ್ಗದಲ್ಲಿ ಗೌರವ ಪಡೆಯುತ್ತಾಳೆ.

ವಿಶೀಲಂ ಕಾಮವೃತ್ತೋ ವಾಗುಣೈವರ್ಾ ಪರವರ್ಜತಃ/
ಉಪಚರ್ಯಃ ಸ್ತ್ರೀಯಾ ಸಾಧ್ವಾ ಸತತಂ ದೇವತ್ಪತಿಃ//-(95-154)
ಪತಿಯ ನಡತೆಯು ಚೆನ್ನಾಗಿರದಿದ್ದರೂ, ಕಾಮಾತುರನಾಗಿ ಅವನು ಬೇರೆ ಹೆಣ್ಣಿನ್ನು ಮೋಹಿಸಿದರೂ, ದುರ್ಗುಣಿಯಾಗಿದ್ದರೂ ಸಹ ಸಾಧ್ವಿಯಾದ ಹೆಂಡತಿಯು ತನ್ನ ಪತಿಯನ್ನು ದೇವರೆಂದೇ ಭಾವಿಸಿ ಸೇವೆ ಮಾಡಬೇಕು.

ಶಯ್ಯಾಸನಮಲಂಕಾರಂ ಕಾಮಂ ಕ್ರೋಧಂ ಅನಾರ್ಜವಂ/
ದ್ರೋಹ ಭಾವಂ ಕುಚಯರ್ಾಂ ಚ ಸ್ತ್ರೀಭ್ಯೋ ಮನುರಕಲ್ಪಯತ್ ? (9-17)
ಮಲಗುವುದು, ಕುಳಿತುಕೊಂಡಿರುವುದು, ಅಲಂಕಾರ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿ ದ್ರೋಹ ಮತ್ತು ದುರ್ನಡತೆ ಇವು ಸ್ತ್ರೀಯರಿಗೆ ಸ್ವಾಭಾವಿಕ ಗುಣಗಳೆಂದು ಮನು ಹೇಳುತ್ತಾನೆ.
ಮಡದಿಯರು ಗಂಡಸರ ಕೃಷಿ ಭೂಮಿ ಎಂದು ಹೇಳಿದೆ ಎನ್ನುದು ಇನ್ನೊಂದು ಆರೋಪ.
نِسَاؤُكُمْ حَرْثٌ لَكُمْ .
ನಿಮ್ಮ ಪತ್ನಿಯರು ನಿಮ್ಮ ಹೊಲವಾಗಿರುವರು.

ನಿಜ ಹೇಳಬೇಕಾದರೆ ಇದು ಅಲಂಕಾರಿಕ ಪದ ಪ್ರಯೋಗ.
ಸಂತಾನವನ್ನು ಕೊಡಲು ಅವಳಿಗೆ ಮಾತ್ರ ಸಾಧ್ಯ.ಅದೂ ಅಲ್ಲದೇ ಆ ಸಂತಾನ ಅವಳ ಪಾಲು ಆಗಿರುತ್ತದೆ.ತಾಯಿಯೊಂದಿಗಿನ ಭಾದ್ಯತೆ ಬಗ್ಗೆ ಕೇಳಿದಾಗ ಮೂರು ಸಲವೂ ತಾಯಿ ಪರ ಹೇಳಿದ ಪ್ರವಾದಿ ಸ ನಾಲ್ಕನೆಯ ಸಲ ತಂದೆಗೆ ಎಂದು ತಂದೆಯ ಪರ ಹೇಳುತ್ತಾರೆ.ಅದೂ ಅಲ್ಲದೇ ಕೃಷಿಕನಿಗೆ ತನ್ನ ಕೃಷಿ ಭೂಮಿಗಿಂತ ಮೇಲು ಯಾವುದೂ ಇಲ್ಲ.
ಇಸ್ಲಾಮನ್ನು ಸ್ವೀಕರಿಸಿದವರ ಮೇಲೆ ಹೋರಾಡಬೇಕೆನ್ನುವುದನ್ನು ಕುರಾನ್ ಹೇಳಿದೆ ಎನ್ನುವುದು ಇನ್ನೊಂದು ಆರೋಪ.
ಹದಿಮೂರು ವರ್ಷಗಳ ಕಾಲ ಇನ್ನಿಲ್ಲದ ದೌರ್ಜನ್ಯ ದಬ್ಬಾಳಿಕೆಯನ್ನು ಪ್ರವಾದಿ ಮತ್ತು ಅನುಚರ ಮೇಲೆ  ನಡೆಸಿದ ಮಕ್ಕಾ ದ ಜನತೆ ಆದರೂ ಪ್ರತಿರೋಧ ತೋರದೇ ಕಡೆಗೆ ಜನ್ಮಭೂಮಿ ತೊರೆದು ಹೊರಡುತ್ತಾರೆ.ಆಗಲೂ ತಡೆಯೊಡ್ಡಿದರು.ನಂತರ  ಮದೀನಕ್ಕೂ ಅಪಾಯ ತಂದೊಡ್ಡುವ ಘಟ್ಟದಲ್ಲಿ ಕುರಾನ್ ಯುದ್ಧ ಕ್ಕೆ ಅನಮತಿ ನೀಡುತ್ತದೆ.
أُذِنَ لِلَّذِينَ يُقَاتَلُونَ بِأَنَّهُمْ ظُلِمُوا ۚ وَإِنَّ اللَّهَ عَلَىٰ نَصْرِهِمْ لَقَدِيرٌ
(ಅಲ್ ಹಜ್ಜ್ :೩೯)
ಯುದ್ಧಕ್ಕೆ ಬಲಿಯಾಗುವವರಿಗೆ, ಅವರು ಮರ್ದಿತರಾಗಿರುವುದರಿಂದ (ತಿರುಗೇಟು ನೀಡಲು) ಅನುಮತಿ ನೀಡಲಾಗಿದೆ. ಖಂಡಿತವಾಗಿಯೂ ಅವರಿಗೆ ನೆರವು ನೀಡಲು ಅಲ್ಲಾಹು ಸಮರ್ಥನಾಗಿರುವನು.

الَّذِينَ أُخْرِجُوا مِنْ دِيَارِهِمْ بِغَيْرِ حَقٍّ إِلَّا أَنْ يَقُولُوا رَبُّنَا اللَّهُ
ನಮ್ಮ ಪ್ರಭು ಅಲ್ಲಾಹುವಾಗಿರುವನು’ ಎಂದು ಹೇಳಿರುವ ಕಾರಣಕ್ಕಾಗಿ ಮಾತ್ರ ಅವರನ್ನು ಅನ್ಯಾಯವಾಗಿ ಅವರ ಮನೆಗಳಿಂದ ಹೊರಗಟ್ಟಲಾಗಿದೆ. ತಮ್ಮ ಮೇಲೆ ಯುದ್ಧ ಮಾಡುವವರೊಂದಿಗೆ ಮಾತ್ರ ಯುದ್ಧಾನುಮತಿ ನೀಡುತ್ತದೆ ಕುರಾನ್.
وَقَاتِلُوا فِي سَبِيلِ اللَّهِ الَّذِينَ يُقَاتِلُونَكُمْ وَلَا تَعْتَدُوا ۚ إِنَّ اللَّهَ لَا يُحِبُّ الْمُعْتَدِينَ

ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ಅಲ್ಲಾಹುವಿನ ಮಾರ್ಗದಲ್ಲಿ ನೀವೂ ಯುದ್ಧ ಮಾಡಿರಿ. ಆದರೆ ಹದ್ದು ಮೀರದಿರಿ. ಖಂಡಿತವಾಗಿಯೂ ಹದ್ದು ಮೀರುವವರನ್ನು ಅಲ್ಲಾಹು ಮೆಚ್ಚಲಾರನು.(2/190)

ಯಾರ ಮೇಲೂ ಬಲಾತ್ಕಾರ ಬಯಸುವುದಿಲ್ಲ.
لَا إِكْرَاهَ فِي الدِّينِ ۖ قَدْ تَبَيَّنَ الرُّشْدُ مِنَ الْغَيِّ(2/256)

ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರ ವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಸ್ಪಷ್ಟವಾಗಿ ಬೇರ್ಪಟ್ಟು ನಿಂತಿದೆ.

ವಿರೋಧಿಸದ ,ಅಕ್ರಮಿಸದ ಎಲ್ಲರೊಂದಿಗೂ ಉತ್ತಮವಾಗಿ ವರ್ತಿಸಲು ಕುರಾನ್ ಆಜ್ಞಾಪಿಸುತ್ತದೆ.
 لَا يَنْهَاكُمُ اللَّهُ عَنِ الَّذِينَ لَمْ يُقَاتِلُوكُمْ فِي الدِّينِ وَلَمْ يُخْرِجُوكُمْ مِنْ دِيَارِكُمْ أَنْ تَبَرُّوهُمْ وَتُقْسِطُوا إِلَيْهِمْ ۚ إِنَّ اللَّهَ يُحِبُّ الْمُقْسِطِينَ

ಧರ್ಮದ ವಿಷಯದಲ್ಲಿ ನಿಮ್ಮೊಂದಿಗೆ ಯುದ್ಧ ಮಾಡದವರು ಮತ್ತು ನಿಮ್ಮ ಮನೆಗಳಿಂದ ನಿಮ್ಮನ್ನು ಹೊರಗಟ್ಟದವರು ಯಾರೋ ಅವರಿಗೆ ನೀವು ಒಳಿತು ಮಾಡುವುದನ್ನು ಮತ್ತು ಅವರೊಂದಿಗೆ ನ್ಯಾಯಪಾಲಿಸು ವುದನ್ನು ಅಲ್ಲಾಹು ನಿಮಗೆ ವಿರೋಧಿಸುವುದಿಲ್ಲ. ಖಂಡಿತವಾಗಿಯೂ ಅಲ್ಲಾಹು ನ್ಯಾಯ ಪಾಲಿಸುವವರನ್ನು ಇಷ್ಟಪಡುವನು.(60:08)

ಧರ್ಮದ ಕಾರಣದಿಂದ ಹೆತ್ತವರನ್ನು ಕಡೆಗಣಿಸಬಾರದೆಂದು ಹೇಳುವುದರೊಂದಿಗೆ ಅವರೊಂದಿಗೆ ಅತ್ತ್ಯುತ್ತಮ ವಾಗಿ ವರ್ತಿಸಲು ಕುರಾನ್ ಕರೆ ನೀಡುತ್ತದೆ.

وَإِنْ جَاهَدَاكَ عَلَىٰ أَنْ تُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۖ وَصَاحِبْهُمَا فِي الدُّنْيَا مَعْرُوفًا

ನಿನಗೆ ಯಾವುದೇ ಜ್ಞಾನವಿಲ್ಲದ ಏನನ್ನಾದರೂ ನನ್ನೊಂದಿಗೆ ಸಹಭಾಗಿಯನ್ನಾಗಿ ಮಾಡುವಂತೆ ಅವರಿ ಬ್ಬರೂ ನಿನ್ನನ್ನು ಬಲವಂತಪಡಿಸಿದರೆ, ಆಗ ಅವರನ್ನು ಅನುಸರಿಸಬಾರದು. ಐಹಿಕ ಜೀವನದಲ್ಲಿ ಅವರೊಂದಿಗೆ ಉತ್ತಮವಾಗಿ ವರ್ತಿಸು. 31:15 ಲುಕ್ಮಾನ್

ಶತ್ರುಗಳ ಹೃದಯದ ಲ್ಲಿ ಸ್ನೇಹವನ್ನು ಅಲ್ಲಾಹನು ಏಕೆ ಹಾಕಲಿಲ್ಲ ಅವರ  ಹೃದಯದ ಲ್ಲಿ ಭಯವನ್ನೇ ಏಕೆ ಹಾಕಿದ ? ಇದೂ ಆದಿರಳ ಪ್ರಶ್ನೆಗಳಲ್ಲಿ ಒಂದಾಗಿತ್ತು.
ಸುದೀರ್ಘ ಸಮಯ ಕಾದ ಬಳಿಕ ಸದುಪದೇಶವನ್ನೂ ನೀಡಿ ನಂತರವೂ ದ್ವೇಷದಿಂದ  ಸತ್ಯ ,ಅಹಿಂಸೆ,ಮಾನವೀಯತೆ ಎಲ್ಲವನ್ನೂ ಕಡೆಗಣಿಸಿ ನಿರಾಯುಧ  ,ಬಲಹೀನ, ಮತ್ತು
ಅಲ್ಪಸಂಖ್ಯಾತ ದುರ್ಬಲ ರನ್ನು ಸದೆ ಬಡಿಯಲು ಬಂದ ಜನರ ಹೃದಯಕ್ಕೆ ಸ್ನೇಹ ವನ್ನು ತುಂಬಬೇಕಿತ್ತಂತೆ !.
 ಎಲ್ಲವೂ ಅಲ್ಲಾಹನದೇ.ಅವನು ಬಯಸಿದ್ದೇ ನಡೆಯುವುದು.ಆದರೆ ಸರಿ ತಪ್ಪು ,ಪಾಪ ಪುಣ್ಯ ಲೆಕ್ಕಾಚಾರ ಬರೋದು ಮನುಷ್ಯನಿಕೆ ಅದನ್ನು ಆಯ್ಕೆ ಮಾಡುವ ಬುದ್ಧಿಯನ್ನು ಅಲ್ಲಾಹನು ಜನರಿಗೆ ಕೊಟ್ಟಿದ್ದಾನೆ.ಆ ಕಾರಣದಿಂದ ಕೆಡುಕು ಒಳಿತು ಸ್ವರ್ಗ,ನರಕ ಎನ್ನುವುದಕ್ಕೆ ಅರ್ಥ ಬರುತ್ತದೆ.ಎಲ್ಲಾ ವ್ಯವಸ್ಥೆ ಮಾಡಿದವನೆಂಬ ಕಾರಣಕ್ಕೆ ಒಬ್ಬನನ್ನು ಅರೋಪಿಸಲಾಗದು .ಉದಾ ಒಬ್ಬ ಎರಡು ಬಾಟಲಿ ಕೊಟ್ಟು,ಒಂದರಲ್ಲಿ ಹಾಲಿದೆ ,ಇನ್ಮೊಂದರಲ್ಲಿ ಮದ್ಯವಿದೆ.ಹಾಲನ್ನು ಕುಡಿ ಅದು ಒಳ್ಳೆಯದು ‌ಮದ್ಯ ಕುಡಿಯಬೇಡಾ ಅದು ಹಾಳು.ನಂತರ ಹಾಲು ಕುಡಿದರೆ ,ಆತ ಹಾಲು ಕುಡಿಸಿದ ಎನ್ನಬಹುದು.ಆದರೆ ಮದ್ಯ ಕುಡಿದರೆ ಅವನು ಕುಡಿಸಿದ ಎಂದು ಹೇಳಲಾಗದು .ಕಾರಣ ಆತ ಕುಡಿಯಲು ಹೇಳಿಲ್ಲ ತಾನೇ  ?
ಕುರಾನ್ ಹೇಳುತ್ತದೆ.

مَنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَنْ ضَلَّ فَإِنَّمَا يَضِلُّ عَلَيْهَا ۚ وَلَا تَزِرُ وَازِرَةٌ وِزْرَ أُخْرَىٰ ۗ وَمَا كُنَّا مُعَذِّبِينَ حَتَّىٰ نَبْعَثَ رَسُولًا

ಯಾರಾದರೂ ಸನ್ಮಾರ್ಗವನ್ನು ಪಡೆಯುವುದಾದರೆ ಅವನದನ್ನು ಪಡೆಯುವುದು ಅವನದೇ ಒಳಿತಿಗಾಗಿದೆ. ಯಾರಾದರೂ ಪಥಭ್ರಷ್ಟನಾಗುವುದಾದರೆ ಅವನ ಕೆಡುಕಿಗಾಗಿಯೇ ಅವನು ಪಥಭ್ರಷ್ಟನಾಗುತ್ತಾನೆ. ಪಾಪಭಾರವನ್ನು ಹೊರುವ ಯಾರೂ ಬೇರೊಬ್ಬನ ಪಾಪಭಾರವನ್ನು ಹೊರಲಾರನು. ಒಬ್ಬ ಸಂದೇಶವಾಹಕ ರನ್ನು ಕಳುಹಿಸುವ ತನಕ ನಾವು (ಯಾರನ್ನೂ) ಶಿಕ್ಷಿಸಲಾರೆವು. (17:15)

ಇನ್ನು ಯುದ್ಧ ಬಗ್ಗೆ ಗೀತೆ ಏನನ್ನುತ್ತದೆ? ನೋಡೋಣ.


ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್ ಅರ್ಹಸಿ

ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ  ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ --
ನಿನ್ನ ಧರ್ಮವನ್ನು ಕಂಡಾದರೂ ನೀನು ಎದೆಗೆಡಬಾರದು  ಕ್ಷತ್ರಿಯನಾದವನಿಗೆ ನ್ಯಾಯದಿಂದ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.


ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಹಾಗು ಸ್ವಧರ್ಮ ಯಾವುದು? ಸನಾತನ ಧರ್ಮ ಹೇಳುತ್ತದೆ: ‘ಅನ್ಯಾಯದ ವಿರುದ್ಧ ಹೋರಡಲೇ ಬೇಕು’ ಎಂದು; ಸಮಾಜ ಧರ್ಮ ಹೇಳುತ್ತದೆ: ಕ್ಷತ್ರಿಯನಾದವನು ಅಧರ್ಮದ ವಿರುದ್ಧ ಹೋರಾಡಬೇಕು, ಸಮಾಜದ ರಕ್ಷಣೆ ಮಾಡಬೇಕು ಹಾಗು ಈ ಪುಣ್ಯ ಕಾರ್ಯದಲ್ಲಿ 'ತನ್ನವರು' ಎಂದು ನೋಡಬಾರದು ಎಂದು.ಇನ್ನು ಅರ್ಜುನ ಮೂಲತಃ ಕ್ಷತ್ರಿಯನಾದ್ದರಿಂದ ಆತನ ಸ್ವಧರ್ಮ ‘ಅನ್ಯಾಯದ ವಿರುದ್ಧ ಹೋರಾಟ’. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ ಹಾಗು ಸನಾತನಧರ್ಮ ಏಕವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧ ಹೋರಾಡುವುದು ಮಹಾ ಪುಣ್ಯದ ಕೆಲಸ. ಸಮಾಜ ಸುರಕ್ಷತೆಗಾಗಿ ಹೋರಾಡುವುದು ಕ್ಷತ್ರಿಯನ ಮಹಾ ತಪಸ್ಸು. ಇದಕ್ಕಿಂತ ಪುಣ್ಯಕಾರ್ಯ ಇನ್ನೊಂದಿಲ್ಲ.


ಯದೃಚ್ಛಯಾ ಚ ಉಪಪನ್ನಮ್  ಸ್ವರ್ಗ ದ್ವಾರಮ್ ಅಪಾವೃತಮ್

ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮ್ ಈದೃಶಮ್--ಇಂಥ ಕಾಳಗವೆಂದರೆ ದೈವೇಚ್ಛೆಯಿಂದ ಕೂಡಿಬಂದ, ತೆರೆದಿಟ್ಟ ಸ್ವರ್ಗದ ಬಾಗಿಲು. ಪಾರ್ಥ,ಭಾಗ್ಯವಂತರಾದ ಕ್ಷತ್ರಿಯರು ಮಾತ್ರವೇ ಇಂಥ ಅವಕಾಶ ಪಡೆಯುತ್ತಾರೆ.



ಇಲ್ಲಿ ನಮಗೆ ಕೃಷ್ಣ ಅರ್ಜುನನಲ್ಲಿ ಯುದ್ಧಮಾಡು ಎಂದು ಏಕೆ ಹೇಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರತಿಯೊಬ್ಬ ಮಾನವನೂ  ಸನಾತನಧರ್ಮ,ಅದಕ್ಕನುಗುಣವಾಗಿ ಸಮಾಜಧರ್ಮ ಹಾಗು ಸಮಾಜ ಮತ್ತು ಸನಾತನ ಧರ್ಮಕ್ಕನುಗುಣವಾಗಿ ಸ್ವಧರ್ಮ-ಈ ನೆಲೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕು
ಇದು ಭಗವದ್ಗೀತೆಯ ಸಾರಾಂಶ.

ಚಾಣಕ್ಯ ನೀತಿ ಹೀಗೆ ವಿವರಿಸುತ್ತದೆ.
ದಾಕ್ಷಿಣ್ಯ೦ ಸ್ವಜನೇ ದಯಾ ಪರಜನೇ ಶಾಠ್ಯ೦ ಸದಾ ದುರ್ಜನೇ
ಪ್ರೀತಿಃ    ಸಾಧುಜನೇ ಸ್ಮ್ಯಯಃ ಖಲಜನೇ ವಿದ್ವಜ್ಜನೇ ಚಾರ್ಜನ೦
ಶೌರ್ಯ೦ ಶತ್ರುಜನೇಕ್ಷಮಾ ಗುರುಜನೇ ನಾರೀಜನೇ ಧೃಷ್ಟತಾ
ಇತ್ಥ೦ ಯೇ ಪುರುಷಾ೦ ಕಲಾಸು ಕುಶ್ಲಾಸ್ತೇಷ್ವೇವ ಲೋಕಸ್ಥಿತಿಃ||೩||

ಸ್ವಜನರಲ್ಲಿ ಸಜ್ಜನತೆ, ಪರರಲ್ಲಿ ದಯೆ ದುಷ್ಟರಲ್ಲಿ  ದುಷ್ಟತನ,  ಸಜ್ಜನರಲ್ಲಿ ಪ್ರೇಮ. ಪ೦ಡಿತರಲ್ಲಿ ಸರಳತೆ, ಶತ್ರುಗಳ ಪ್ರತಿ ಶೂರತ್ವ, ಗುರುಹಿರಿಯರಲ್ಲಿ ಸಹನಶೀಲತೆ, ಸ್ತ್ರೀಯರಲ್ಲಿ ವಿಶ್ವಾಸ - ಹೀಗೆ ಯಾರು ಈ ಕಲೆಗಳಲ್ಲಿ ಕುಶಲರಿರುತ್ತಾರೋ ಜನ ಅಂಥವರಿಂದಲೇ ಲೋಕವ್ಯವಹಾರವು ಸಾಗುತ್ತಿದೆ.

ಅಲ್ಲಾಹನು ಯಾಕೆ  ಹುಳು ಮಾನವನನ್ನು ಪಂಥಾಹ್ವಾನಕ್ಕೆ ಕರೆದ? ಎನ್ನುವದೂ ಒಂದು ಪ್ರಶ್ನೆ.
ಪ್ರವಾದಿಯನ್ನು ಸುಳ್ಳಾಗಿಸಿದ, ಮತ್ತು ಕುರಾನನ್ನು ನಂಬದ, ಹಾಗೇಅಲ್ಲಾಹನ ಸ್ಥಾನದಲ್ಲಿ ಬೇರೆ ಆರಾಧ್ಯರನ್ನು ಪ್ರತಿಷ್ಟಾಪಸಿದ ಜನರೊಂದಿಗೆ ಸಾಧ್ಯವಾದರೆ ಇದರ ಬದಲು ತನ್ನಿ ಬೇಕಾದರೆ ಆರಾಧ್ಯ ರನ್ನು ಸೇರಿಸಿಕೊಳ್ಳಿ ಎಂದರೆ ಹೇಗೆ ತಪ್ಪಾಗುತ್ತದೆ.?.
ಇತರ ಆರಾಧ್ಯದೈವ ವನ್ನು ಹೀಯಾಲಿಸಲಾಗುತ್ತದೆ.ಎನ್ನುವ ಆರೋಪ ಬಾಲಿಶವಾದುದು.ಕಾರಣ ಸ್ಪಷ್ಟವಾಗಿ ಅದನ್ನು ಕುರಾನ್ ವಿರೋಧಿಸಿದೆ.

وَلَا تَسُبُّوا الَّذِينَ يَدْعُونَ مِنْ دُونِ اللَّهِ فَيَسُبُّوا اللَّهَ عَدْوًا بِغَيْرِ عِلْم
(06/108)
ಅಲ್ಲಾಹುವಿನ ಹೊರತು ಅವರು ಕರೆದು ಪ್ರಾರ್ಥಿಸುತ್ತಿರುವವರನ್ನು ನೀವು ದೂಷಿಸದಿರಿ. ಅವರು  ಅರಿವಿಲ್ಲದೆ ಅತಿಕ್ರಮವಾಗಿ ಅಲ್ಲಾಹುವನ್ನು ದೂಷಿಸಲು ಅದು ಕಾರಣವಾಗಬಹುದು.
ಬಲವಂತದ ಮತಾಂತರ ಇಸ್ಲಾಮಿನಲ್ಲಿ ಅಸಾಧ್ಯ. ಅದರ ಆವಶ್ಯಕತೆ ಯೂ ಇಲ್ಲ.
ಇಂತಹಾ ಆರೋಪಗಳು ನಮಗೆ ಸಮಸ್ಯಯೇ ಅಲ್ಲ.
🌅. ವರದಿ ಅಲ್ ಅಹ್ಸನ್ ಮಾಸಿಕ

No comments:

Post a Comment