ಜಗದೊಡೆಯನ ದಾಸನಾಗು ಜಗವೆಲ್ಲವೂ ಅವನದೇ.ಒಡೆಯನ ಎಲ್ಲವೂ ದಾಸನಿಗೆ ಸಲ್ಲುತ್ತದೆ. ಆಗ ಜಗವೇ ನಿನ್ನದು

ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ (ಕೊಯ್ಯೂರು) ಚೊಕ್ಕಬೆಟ್ಟು

ನಾವು ಯಾವತ್ತಾದರು ಸಂಕಟದಲ್ಲಿ ಸಿಕ್ಕಿಹಾಕಿಕೊಂಡಾಗ ನಮ್ಮ ಸಹಾಯಕ್ಕೆ ಬಂದವರನ್ನು ನಾವು ಮರೆಯೋದು ಕಮ್ಮಿ..ವಾಹನ ಅಪಘಾತ ನಡೆದಾಗ,ಅಥವಾ ಕೆಟ್ಟು ನಿಂತಾಗ,ಇಲ್ಲವೇ ಪರ್ಸ್ ಮರೆತು ಬಸ್ಸಲ್ಲಿ ಟಿಕೇಟಿನ ಹಣ ಕೊಡಲು ಪರದಾಡಿದಾಗ,ರಾತ್ರೋರಾತ್ರಿ ತುಂಬು ಗರ್ಭಿಣಿ ಯನ್ನು ಅಥವಾ ಹೃದಯಾಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸುವ ಸಂದರ್ಭ ಬಂದಾಗ ಸಹಾಯಕ್ಕೆಂದು ಬಂದವರನ್ನು ನಾವು ಸದಾ ನೆನೆಯುತ್ತೇವೆ. ಅವರನ್ನು ಫ್ಯಾಮಿಲಿ ಫ್ರೆಂಡ್ ಗಳಾಗಿ ಒಡನಾಟ ಇಟ್ಟು ಕೊಂಡಿರುತ್ತೇವೆ.
ಆದರೆ ತಾಯಿಯ ಹೊಟ್ಟೆಯ ಕತ್ತಲಲ್ಲಿ ನಮ್ಮನ್ನು ಸೃಷ್ಟಿಸಿ ಕುಂದುಕೊರತೆಗಳಿಲ್ಲದೇ ಸುರಕ್ಷಿತವಾಗಿ ಭೂಮಿಗೆ ತಂದು, ಅನ್ನ,ಆರೈಕೆ,ಆಸರೆ,ಪ್ರೀತಿ ಕರುಣೆ ಕೊಡುವ ಹೆತ್ತವರನ್ನೂ ನೀಡಿ, ಬೆಳೆಸಿ ಆರೋಗ್ಯ,ಶಕ್ತಿ ಸೊತ್ತು ಎಲ್ಲವನ್ನೂ ದಯೆಪಾಲಿಸಿದ ಅಲ್ಲಾಹನನ್ನು ನಾವು ಎಷ್ಟು ನೆನಪಿಸಿಕೊಳ್ಳುತ್ತೇವೆ?

ನೆಬಿಯವರಲ್ಲಿ ನಿಮಗೆ ಉತ್ತಮ ಮಾದರಿ ಇದೆ ಎಂದು ಕುರಾನ್ ಹೇಳುತ್ತದೆ

 ರಸೂಲ್ ಸ ರವರ ಬದುಕಿನ ಕೆಲವು ಘಟನೆಗಳನ್ನು ಅವಲೋಕಿಸಿದಾಗ !

ಹಝ್ರತ್ ಪ್ರವಾದಿ (ಸ) ಕಾಲುಗಳೆರಡೂ ಬಾತುಕೊಂಡು ನೋಯುತ್ತಿದ್ದರೂ ರಾತ್ರಿ ಹೊತ್ತಲ್ಲಿ ಪ್ರಾರ್ಥನೆ ಯಲ್ಲಿ ನಿರತರಾಗಿದ್ದರು.
ಇದನ್ನು ಪ್ರಶ್ನಿಸಿದ ಬೀವಿ ಆಯಿಷಾ (ರ)ರೊಂದಿಗೆ ನಬಿ (ಸ)ಉತ್ತರಿಸದ್ದು !
ನಾನು ಅಲ್ಲಹನಿಗೆ ಕೃತಜ್ಞತೆ ತೋರುವ ದಾಸನಾಗಬೇಡವೇ?

ಉಹುದು ಪರ್ವತ ದಷ್ಟು ಬಂಗಾರವು ನನ್ನಲ್ಲಿದ್ದು ಮೂರು ದಿನಗಳು ಕಳೆದಾಗ ಸಾಲ ಕೊಡಲು ತೆಗೆದಟ್ಟದ್ದಲ್ಲದ ಒಂದೇ ಒಂದು ದೀನಾರ್ ನನ್ನ ಬಳಿ ಉಳಿದು ಕೊಳ್ಳುವುದನ್ನು ನಾನು ಇಷ್ಟ ಪಡುವುದಿಲ್ಲ.

ಅಬು ದರ್ ದಾಃ ಹೇಳುತ್ತಾರೆ:
ನಾವು  ರಸೂಲರೊಂದಿಗೆ ಯಾತ್ರೆಯಲ್ಲಿದ್ದೆವು. ಬಿಸಿಲಿನ ತಾಪಕ್ಕೆ ನಮ್ಮ ಕೈಯನ್ನು ರಸೂಲರ ತಲೆ ಮೇಲೆ ಇಡುತ್ತಿದ್ದೆವು.ನಮ್ಮಲ್ಲಿ ಯಾರೂ ಉಪವಾಸ ಮಾಡದಿದ್ದರೂ ರಸೂಲರು ಉಪವಾಸವಿದ್ದರು
ಅಲಿಯ್ಯಿ (ರ) ಹೇಳುತ್ತಾರೆ:
ಬದ್ರ್ ಯುದ್ಧ ವೇಳೆ ನಮ್ಮಲ್ಲಿ ಎಲ್ಲರೂ ನಿದ್ದೆಗೆ ಜಾರಿದ್ದರು. ರಸೂಲರು (ಸ) ಒಂದು ಮರದ ಕೆಳಗೆ ನಮಾಜು ಮಾಡುತ್ತಾ ಅತ್ತು ಪ್ರಾರ್ಥಿಸುತ್ತಿದ್ದರು.
ಆಯಿಷಾ ಬೀವಿ ವಿವರಿಸುತ್ತಾರೆ:
ರಾತ್ರಿ ಹನ್ನೊಂದು ರಕಾತ್ತು ನಮಾಜು ಮಾಡುತ್ತಿದ್ದರು.ಒಂದು ಸುಜೂದಿನಲ್ಲಿ ಸುಮಾರು ಐವತ್ತು ಆಯತ್ತುಗಳನ್ನು ಓದುವಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದ್ದರು.

ಒಂದು ದಿನ ಹಸಿದಾಗ ಕಲ್ಲೊಂದನ್ನು ಹೊಟ್ಟೆಯ ಭಾಗದಲ್ಲಿ ಕಟ್ಟಿ ಹೇಳುತ್ತಾರೆ ಈ ಲೋಕದಲ್ಲಿ ಸುಖ ಜೀವನ ನಡೆಸಿದ ಅನೇಕ ಮಂದಿ ಅಂತ್ಯ ದಿನದಲ್ಲಿ ಹಸಿದವರಾಗಿರುತ್ತಾರೆ
ನೆಬಿ ಹೇಳುತ್ತಾರೆ ನಾನು ಹೆಚ್ಚು ಅಲ್ಲಾಹನನ್ನು ಭಯಪಡುವವನೂ ಭಯ ಭಕ್ತಿ ತೋರುವವನಾಗಿದ್ದೇನೆ.
ರಸೂಲರು  ಅಲ್ಲಾಹನಿಗೆ ಒಳ್ಳೆಯ ದಾಸನಾಗುವ ವಿಧಾನವನ್ನು ತೋರಿಕೊಟ್ಟಿದ್ದಾರೆ.
ಕುರಾನ್ ಹೇಳುತ್ತದೆ.
ಈಸಾ (ಅ) ಮತ್ತು ಮಲಕ್ಕುಗಳು ಅಲ್ಲಾಹನ ದಾಸನಾಗಲು ಲಜ್ಜೆ ಪಡುವುದಿಲ್ಲ.
ಒಟ್ಟಿನಲ್ಲಿ ನಾವು ಅಲ್ಲಾಹನ ದಾಸನಾಗಬೇಕಾಗಿದೆ.
ಅಲೆಕ್ಸಾಂಡರ್ ಯಾತ್ರೆಯಲ್ಲಿ ಫಕೀರನೊಬ್ಬ ಎದುರಾಗುತ್ತಾನೆ. ಏನಾದರೂ ಆವಶ್ಯಕತೆ ಇದ್ದರೆ ಹೇಳಿರಿ ಎಂದ ರಾಜ.
ಆಗ ನನಗೆ ಬೇಕಾದ್ದು ನಿನಗೆ ನೀಡಲು ಸಾಧ್ಯವೇ? ಎಂದಾಗಿತ್ತು ಫಕೀರನ ಪ್ರಶ್ನೆ.ರಾಜ ತಬ್ಬಿಬ್ಬಾದದನ್ನು ನೋಡಿ ಫಕೀರ ಹೇಳ್ತಾನೆ
ನೀನು ಕಾಡಲ್ಲಿ ಆಕಸ್ಮಿಕವಾಗಿ ಒಂಟಿಯಾದರೆ ಅಲ್ಲಿಂದ ಹೊರ ಬರಲು ಅಸಾದ್ಯವಾಗಿ ಬಾಯಾರಿ ಇನ್ನೇನು ಸತ್ತು ಹೋಗುತ್ತೇನೆ ಎಂಬ ಸ್ಥಿತಿ ತಲುಪಿದಾಗ ಸಾಮ್ರಾಜ್ಯದ ಒಡೆಯನಾದ ನಿನಗೂ ನೀರನ್ನು ಪಡೆಯಲಾಗದು. ಆ ಸಂದರ್ಭದಲ್ಲಿ ಒಂದು ಲೋಟ ನೀರಿಗೆ ನಿನ್ನ ಜೀವ ಉಳಿಸಲು ಎಲ್ಲವನ್ನೂ ತ್ಯಾಗ ಮಾಡುವೆ.ಆದರೆ ಲಕ್ಷಾಂತರ ಜೀವಗಳ ರಕ್ತ ಹರಿಸಿ ಪಡೆದ ಅಧಿಕಾರಕ್ಕೆ ಒಂದು ಲೋಟ ನೀರಿನ ಬೆಲೆ ಇರೋದಿಲ್ಲ.ಆದ್ದರಿಂದ ನೀನು ಅಲ್ಲಾಹನ ದಾಸನಾಗು ಆಗ ಜಗತ್ತೆಲ್ಲವೂ ನಿನ್ನ ಒಡೆಯನದು.ನಿನ್ನ ಯಜಮಾನನದ್ದು ನಿನಗೆ ಸೇರಿದ್ದು.
ಹೌದು ಜಗತ್ತಿನಲ್ಲಿರುವ ಎಲ್ಲವೂ ಅಲ್ಲಾಹನದು.ಹನಿ ನೀರು,ರಕ್ತ,ಪ್ರಾಣವಾಯು, ನಮ್ಮದಲ್ಲ ಇರುವೆಯ ಜೀವನವನ್ನೂ ನಮ್ಮಿಂದ ಕೊಡಲಾಗದು.
ಅಲ್ಲಾಹನು ತನ್ನ ದಾಸನಿಗಾಗಿ ಕಾಯುತ್ತಾನೆ. ಅವನೆಷ್ಟೇ ತಪ್ಪು ಮಾಡಿದರೂ ಸರಿ.ಅಲ್ಲಹನು ಹೇಳುತ್ತಾನೆ,
ನಾನು ನನ್ನ ದಾಸನ ಭಾವನೆಯಂತೆ ಒಳಿತಾದರೆ ಆತನಿಗೇ ಒಳಿತು.ಕೆಡುಕಾದರೆ ಆತನಿಗೇ ಕೆಡುಕು.
ಇಮಾಂ ಶಾಫೀ ಹೇಳುತ್ತಾರೆ ಪ್ರೀತಿಸುವವನು ಪ್ರೀತಿದವನನ್ನು ಅನುಸರಿಸುತ್ತಾನೆ.
ಅಲ್ಲಾಹನು ಹೇಳ್ತಾನೆ ಸತ್ಯವಿಶ್ವಾಸಿಗಳು ಅಲ್ಲಾಹನನ್ನು ತೀವ್ರವಾಗಿ ಪ್ರೀತಿಸುತ್ತಾರೆ.
ಎಷ್ಟೇ ದೊಡ್ಡ ಪಾಪಿಯನ್ನೂ ಅಲ್ಲಾಹನು ಪಾಪಮುಕ್ತಿ ಕೊಟ್ಟು ಪ್ರೀತಿಸುತ್ತಾನೆ.
ಅಲ್ಲಾಹನು ಹೇಳುತ್ತಾನೆ,
 ನನ್ನ ದಾಸ ಒಂದು ಗೇಣು ಹತ್ತಿರ ಬಂದರೆ ನಾನು ಒಂದಡಿ ಹತ್ತಿರವಾಗುವೆ.ಒಂದಡಿ ಹತ್ತಿರ ಬಂದರೆ ಒಂದು ಮಾರುದ್ದ ನಾನು ಹತ್ತಿರವಾಗುವೆ.ಆತ ನಡೆಯುವ ಕೊಂಡು ಬಂದರೆ ನಾನು ಓಡಿಕೊಂಡು ಆತನ ಬಳಿ ಹೋಗುವೆ
ಅಲ್ಲಾಹನ ಬಳಿ ಪಶ್ಚಾತ್ತಾಪ ಪಟ್ಟು ಮರಳುವ ದಾಸನನ್ನು ಅಲ್ಲಾಹನು ಹೆಚ್ಚು ಪ್ರೀತಸುತ್ತಾನೆ.
ಸಹರ ಮರುಭೂಮಿಯಂತ ಮರಳುಗಾಡಿನಲ್ಲಿ ಒಂಟೆಯನ್ನು ಕಳಕೊಂಡವನು ನಂತರ ಅದು ಕಾಣಸಿಕ್ಕಾಗ ಸಂತೋಷದಿಂದ. ಅಲ್ಲಾಹನೇ ನಾನು ನಿನ್ನ ಪಾಲಕ ನೀನು ನನ್ನ ದಾಸ.ಸಂತೋಷದ ಅಮಲಿನಲ್ಲಿ ಬಾಯ್ತಪ್ಪಿನಿಂದ ಹೇಳುವಂತಾ ಕ್ಷಣ.ಇದಕ್ಕಿಂತಲೂ ಹೆಚ್ಚು ಸಂತೋಷ ಅಲ್ಲಾಹನಿಗಿದೆ, ಆತನ ದಾಸ ತೌಬಾದೊಂದಿಗೆ ಮರಳಿದಾಗ.(ಹದೀಸು)
ನೂರು ಮಂದಿಯನ್ನು ಕೊಂದು ಪ್ರಾಯಶ್ಚಿತ್ತ ಕ್ಕಾಗಿ ಹೊರಟ ವ್ಯಕ್ತಿಯನ್ನು ಸ್ವರ್ಗ ಸೇರಿಸಲು ಭೂಮಿಯನ್ನೇ ಹತ್ತಿರವಾಗಿಸಿದ ಘಟನೆ ಹದೀಸಿನಲ್ಲಿದೆ.ಅಂತ್ಯದಿನದಲ್ಲಿ ನರಕ ಸೇರಿದ ಅಸಂಖ್ಯಾತ ಮಂದಿಯನ್ನು ರಸೂಲರು (ಸ) ಶಪಾಅತ್ತಿನಿಂದ ರಕ್ಷಿಸುತ್ತಾರೆ.ಹಾಗೇ ಮಲಕ್ಕುಗಳು, ಪ್ರವಾದಿಗಳು, ಸತ್ಯವಿಶ್ವಾಸಿಗಳು ಎಲ್ಲರೂ ಸಾಧ್ಯವಾದಷ್ಟು ಮಂದಿಯನ್ನು ರಕ್ಷಿಸುತ್ತಾರೆ. ಕೊನೆಗೆ ಅಲ್ಲಾಹನು ಒಂದು ವರ್ಗವನ್ನು ನರಕದಿಂದ ಹೊರತೆಗೆಯುತ್ತಾನೆ. ಅವರು ನರಕದಲ್ಲಿ  ಭಯಾನಕ ಶಿಕ್ಷೆಯ ಕಾರಣ ಸುಟ್ಟು ಕರಕಲಾಗಿ ಇದ್ದಿಲಿನಂತಾಗಿರುತ್ತಾರೆ.ಅವರನ್ನು ಸ್ವರ್ಗದ ನದಿಯಲ್ಲಿ ಮುಳುಗಿಸಿದಾಗ ಅವರಲ್ಲಿದ್ದ ಕುರೂಪವೆಲ್ಲಾ ಹೋಗಿ ಮುತ್ತಿನಂತೆ ಹೊಳೆಯುತ್ತಾರೆ.ನರಕ ವಿಮೋಚಿತರು ಎಂಬ ಹೆಸರು ಅವರಿಗಿರುತ್ತದೆ.
ನಂತರ ಅಲ್ಲಾಹನು ಹೇಳುತ್ತಾನೆ ನಿಮಗೇನು ಬೇಕೋ ಅದನ್ನು ಪಡೆದು ಸ್ವರ್ಗದಲ್ಲಿ ಸುಖವಾಗಿರಿ.
ಇದು ಅಲ್ಲಾಹನು ತನ್ನ ದಾಸನಿಗೆ ತೋರುವ ಔದಾರ್ಯವಾಗಿರುತ್ತದೆ.
ನಾವು ಅಲ್ಲಾಹನ ಉತ್ತಮ ದಾಸರಾಗೋಣ.
ಅಹ್ಸನ್

No comments:

Post a Comment