ರಕ್ತದ ಹೆಸರಲ್ಲಿ ರಾಜಕೀಯ ಮಾಡುವ ಬದಲು ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ ನಡೆಯಲಿ.



ಮನುಷ್ಯನನ್ನು ಮುಗಿಸುವ ಮಾದಕ ಮಾಫಿಯಾದ ವಿರುದ್ಧ ಯಾಕೆ ಹೋರಾಟ,ಪ್ರತಿಭಟನೆಗಳು ನಡೆಯಲ್ಲ?
ಭಾಷಣ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಜಗತ್ತಿನಲ್ಲಿ ಕೋಟ್ಯಾನು ಕೋಟಿ ಜೀವ ಸಂಕುಲವನ್ನು ಸೃಷ್ಟಿಸಿದ ಅಲ್ಲಾಹನು ಯಾವ ಜೀವಿಗೂ ಕೊಡದೇ ಮನುಷ್ಯನಿಗೆ ಮಾತ್ರ ಕೊಟ್ಟ ಅತ್ಯಮೂಲ್ಯ ವಸ್ತು ಬುದ್ಧಿ ಎನ್ನುವುದಾಗಿದೆ.ಅದನ್ನು ಕೈಯಿಂದ ಜಜ್ಜಲಾಗದು,ಕತ್ತಿಯಿಂದ ಕೊಯ್ಯಲಾಗದು ಅಂತಹಾ ಬುದ್ಧಿಯನ್ನು ಅಮಲು ಉಪಯೋಗಿಸಿ ನಾಶಮಾಡುವುದು ಮಹಾ ದರಂತವೇ ಆಗಿದೆ.

ಕುರಾನ್ ಅಮಲು ಉಪಯೋಗದ ಬಗ್ಗೆ ಹೀಗೆನ್ನುತ್ತದೆ.

إِنَّمَا يُرِيدُ الشَّيْطَانُ أَنْ يُوقِعَ بَيْنَكُمُ الْعَدَاوَةَ وَالْبَغْضَاءَ فِي الْخَمْرِ وَالْمَيْسِرِ وَيَصُدَّكُمْ عَنْ ذِكْرِ اللَّهِ وَعَنِ الصَّلَاةِ ۖ فَهَلْ أَنْتُمْ مُنْتَهُونَ

ಸೈತಾನನು ಇಚ್ಛಿಸುವುದು ಮದ್ಯ ಮತ್ತು ಜೂಜಾ ಟದ ಮೂಲಕ ನಿಮ್ಮ ಮಧ್ಯೆ ಶತ್ರುತ್ವ ಹಾಗೂ ವಿದ್ವೇಷ ವನ್ನು ಬಿತ್ತಲು ಮತ್ತು ಅಲ್ಲಾಹುವಿನ ಸ್ಮರಣೆ ಹಾಗೂ ನಮಾಝ್ ನಿಂದ ನಿಮ್ಮನ್ನು ತಡೆಯಲು ಮಾತ್ರವಾಗಿದೆ. ಆದ್ದ ರಿಂದ ನೀವು (ಅವುಗಳನ್ನು) ನಿಲ್ಲಿಸಲು ಸಿದ್ಧರಿರುವಿರಾ?

ಮದ್ಯ ಸೇವನೆಯಂತೆ ಡ್ರಗ್ಸ್ ಕೂಡಾ ಬಯಾನಕವಾಗಿದೆ.

وقال النووي في المجموع: "وأما ما يزيل العقل من غير الأشربة والأدوية، كالبنج وهذه الحشيشة المعروفة فحكمه حكم الخمر في التحريم.

ಬುದ್ದಿಯನ್ನು ನಾಶ ಮಾಡುವ  ರೀತಿಯ ಎಲ್ಲಾ ಪಾನೀಯ, ಮದ್ದು ಅಲ್ಲದ ಅಮಲು ಪದಾರ್ಥ, ಗಾಂಜಾ ಮುಂತಾದವು ಗಳ ವಿಧಿಯೂ ಮದ್ಯದಂತೆ ನಿಶಿಧ್ಧವಾಗಿದೆ. ಎಂದು ಇಮಾಂ ನವವೀ (ರ) ವಿವರಿಸುತ್ತಾರೆ.

ಹದೀಸಿನಲ್ಲಿ ಎಲ್ಲಾ ಅಮಲು ಭರಿಸುವ ವಸ್ತು ನಿಶಿಧ್ಧವೆಂದು ಹೇಳಿದೆ.
نهى رسول الله - صلى الله عليه وسلم - عن كل مسكر ومفتر
ಜಗತ್ತಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವಲೋಕಿಸಿದರೆ ಗಾಬರಿಯಾಗುತ್ತಿದೆ ಸಹಸ್ರಾರು ವರ್ಷಗಳಿಂದ ಧರ್ಮಶ್ರಧ್ದೆಯ ಮೂಲಕ ಜನ ನಾಗರಿಕತೆ ಮತ್ತು ಸಂಸ್ಕಾರ ನೆಲೆನಿಂತಿದ್ದರೆ ಇದೀಗ ಧರ್ಮ, ನೀತಿ, ರೀತಿ ರಿವಾಜು ಹಳೆಯದಾಗುತ್ತಿದೆ.ಅಧಿಕಾರಕ್ಕಾಗಿ ಧರ್ಮವನ್ನು ಎಳೆತಂದಾಗ ಧರ್ಮಕ್ಕೂ ಬೆಲೆ ಇಲ್ಲ ಮನುಷ್ಯನಿಗೂ ನೆಲೆ ಇಲ್ಲದಾಗಿದೆ.ದ್ವೇಷ ಕ್ಕಾಗಿ ಮನುಷ್ಯ ಮನಸ್ಸಿನಲ್ಲಿ ವಿಷವನ್ನು ತುಂಬಿದ ಕಾರಣ ಅಪರಾಧಗಳು ಸರ್ವೇಸಾಮಾನ್ಯ ವಾಗಿ ಬಿಟ್ಟಿದೆ.ಅದರೊಟ್ಟಿಗೆ ಮಹಾಮಾರಿ ಡ್ರಗ್ಸ್ ಮಾಫಿಯಾ ಸಮಾಜವನ್ನೇ ಆಪೋಶನ ತೆಗೆದುಕೊಳ್ಳವಂತೆ ಬ್ರಹತ್ತಾಗಿ ಜಗತ್ತಿನಾದ್ಯಂತ ಬೆಳೆಯುತ್ತಿದೆ.
ಅದರ ಮುಂದೆ ಯಾವ ನಾಗರಿಕತೆ,ಸಂಸ್ಕಾರ ಯಾವುದೂ ಉಳಿಯುವ ಬಗ್ಗೆ ಗಾಬರಿ ಇದೆ.ವಿಶೇಷವಾಗಿ ದೇಶ ಅಮಲಿಗೆ ಬಲಿಯಾಗತ್ತಿದೆ. ಅದರಲ್ಲೂ ಯುವ ಸಮೂಹ!ಅದು ನಮ್ಮ ಮನೆ ಬಾಗಿಲಿಗೇ ಬಂದು ಮುಟ್ಟಿದೆಯೆಂದು ಬಾಸವಾಗುತ್ತದೆ . ರಸ್ತೆಗಳಲ್ಲಿ ಹೆಣಗಳು ಒಂದರ ಮೇಲೊಂದಂತೆ ಬೀಳುತ್ತಿದೆ.ಹಾಲಿಗಿಂತ ಸಲೀಸಾಗಿ ಮಾದಕವಸ್ತು ಲಭ್ಯವಾಗುತ್ತಿದೆ.ಗೋವಾ,
ಆಂದ್ರಪ್ರದೇಶ,ಪಂಜಾಬ್ ಅದರ ಕೆಂದ್ರ ವಾಗಿ ಆ ಮೂಲಕ ವಾಯು ,ಜಲ ,ನೆಲ ಮಾರ್ಗ ಮೂಲಕ ಸರಬರಾಜು ನಡೆಯುತ್ತಿದೆ.
ಅಂಗಡಿ, ಗೂಡಂಗಡಿ ,ಮಾಲು ಮಾರ್ಕೇಟು,ನಗರ ಮತ್ತು ಹಳ್ಳಿಗಳಲ್ಲಿ ಎಗ್ಗಿಲ್ಲದೇ ಗಾಂಜಾ ಹಾವಳಿ ನಡೆಯುತ್ತಿದೆ.
ಶಾಲಾ ಕಾಲೇಜು ಕ್ಯಾಂಪಸುಗಳಿಗೂ ಸಪ್ಲೈಮಾಡಲಾಗುತ್ತಿದೆ.ಈ ಮಹಾ ಮಾರಿಯ ಬಗ್ಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ಮೌನವಹಿಸುವುದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಧರ್ಮದ ಹೆಸರಿನ ಕೊಲೆಗಳ ಬಗ್ಗೆ ಮಾತ್ರ ಇಲ್ಲಿ ಚರ್ಚೆಯಾಗುತ್ತದೆ.ರ‌್ಯಾಲಿಗಳು ನಡೆಯುತ್ತದೆ.ಗದ್ದಲ ಗಲಾಟೆ ಪ್ರತಿಭಟನೆ?. ಆದರೆ ಮಾದಕ ವಸ್ತುಗಳ ದಂಧೆಯ ಬಗ್ಗೆ ಗೊತ್ತಿದ್ದೂ ಅಥವಾ ರಾಜಕೀಯ ಪುಡಾರಿಗಳ ಒತ್ತಡದ ಕಾರಣವಾಗಿ ಇಲ್ಲವೇ ಸರಕಾರದ ನಿರ್ಲಕ್ಷದಿಂದಲೋ ಡ್ರಗ್ಸ್ ಮಾಫಿಯಾ ಹೆಣಗಳು ಬೀಳುತ್ತಿದ್ದರೂ ಯಾವುದೇ ಕ್ರಮಗಳನ್ನು ಸಂಬಂಧ ಪಟ್ಟವರು ಕೈಗೊಳ್ಳುತ್ತಿಲ್ಲ. ಇದರ ನೇರ ಹೊಣೆ ಸರಕಾರವೇ ಆಲ್ಲವೇ?

ಟ್ರಂಪ್ ಮತ್ತು ಕಿಮ್ ಯುದ್ಧ ದಾಹಿಗಳಾಗಿ ಎಗರಾಡುತ್ತಿದ್ದಾರೆ. ಸರ್ವನಾಶದ ಮಾತನ್ನಾಡುತ್ತಿದ್ದಾರೆ ಆದರೆ ಅದಕ್ಕಿಂತಲೂ ದೊಡ್ಡ ಅನಾಹುತ ಮಾದಕವಸ್ತು ಸಂಬಂಧಿತ ಜಾಲದ ಸವಾಲಾಗಿದೆ. ಕಾರಣ ಯುದ್ದದಲ್ಲಿ ಮನುಷ್ಯರು ಸತ್ತರೆ ಅಮಲಿನಲ್ಲಿ ಮನುಷ್ಯತ್ವ ಸಾಯುತ್ತದೆ.
ಜಗತ್ತಿನ ಎರಡು ಹುಚ್ಚರ ಆಟ ನೋಡಿದರೆ ಮೂರನೆಯ ಮಹಾ ಯುದ್ಧ ಬೇಗನೇ ಬರುತ್ತದೋ ಎಂದು ಭಯವಾಗುತ್ತದೆ.
ಒಮ್ಮೆಐನ್‍ಸ್ಟೈನ್ ನೊಂದಿಗೆ ಯಾರೋ ಕೇಳಿದರು . ಮೂರನೆಯ ಮಹಾಯುದ್ಧದ ಅಯುಧಗಳೇನು? ಆಗ ಖ್ಯಾತ ವಿಜ್ಞಾನಿ ಹೇಳಿದ ಉತ್ತರ "ಮೂರನೆಯ ಯುದ್ಧದ ಆಯುಧ ಬಗ್ಗೆ ನನಗೆ ಗೊತ್ತಿಲ್ಲ.ಆದರೆ ನಾಲ್ಕನೇಯ ಯುದ್ಧ ದ ಆಯುಧ ಕಲ್ಲು ಮತ್ತು ಮರದ ತುಂಡುಗಳು ಆಗಿರಬಹುದು" ಅದು ಹೇಗೆ  ಎಂದು ಕೇಳಿದಾಗ ಮೂರನೆಯ ಯುದ್ಧದಲ್ಲಿ ಎಲ್ಲವೂ ನಾಶವಾಗಲಿದೆ
ಎಂದಾಗಿತ್ತು ಉತ್ತರ.ಆದರೆ ಅಮಲು ಪದಾರ್ಥ ಮೂಲಕ ಮುಂದಿನ ಯುಧ್ಧಕ್ಕೆ ಏನೂ ಉಳಿಯದು ಎನ್ನುವುದಂತು ಸತ್ಯ.

ಯಾವುದಾದರೊಬ್ಬ ರಾಜಕೀಯ ನಾಯಕನ ಮೇಲೆ ಯಾವುದಾದರೊಂದು ಆರೋಪ,(ಅದು ಮೊಬೈಲ್ ವಾಚು ಆಗಬಹುದು,)ಹಾಗೇ ಯಾರಾದರೂ ಅನೈತಿಕ ಸಂಬಂಧವನ್ನೋ, ಆತ್ಮಹತ್ಯೆ ಪ್ರೇರಣೆ ಆರೋಪವನ್ನೋ ಹೊರಿಸಿದರೆ ಗಂಟೆಗಟ್ಟಲೆ ಚಿತ್ರ ವಿಚಿತ್ರ ವಾರ್ತೆಯಾಗಿ ,ಡಿಬೇಟಾಗಿ ,ಬಿತ್ತರಿಸುವ ಚಾನಲುಗಳು!.ಯಾವುದಾದರೊಂದು ಹೆಣ್ಣು ಮಗಳ ಮೇಲೆ ಕಿರುಕುಳ ಕೇಸು ಸಿಕ್ಕರೆ ಗೌಪ್ಯತೆಯನ್ನು ಗೌರವಿಸದೇ ಸಂತ್ರಸ್ತೆಯನ್ನು ಸ್ಟುಡಿಯೋದಲ್ಲಿ ಕೂರಿಸಿ ಅಥವಾ ಫೋನಾಯಿಸಿ ಇನ್ನಷ್ಟು   ಸತಾಯಿಸುವ ರೀತಿಯಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ  ಎಕ್ಸ್ಲ್ ಕ್ಯೂಸಿವ್ ವರದಿಯಾಗಿ ಬಿತ್ತರಿಸುವ ಮೀಡಿಯಾ ಗಳು ?ಇನ್ನು ಯಾವದಾದರೊಂದು ಊಹಾಪೋಹ ವರದಿಯು ಮುಸ್ಲಿಂ ಸಮುದಾಯದ ಬಗ್ಗೆ ಬಂದರೆ ಸತ್ತ ಕಾಗೆ ಬಳಿ ಅರಚುವ ಕಾಗೆಗಳಂತೆ ಅಥವಾ ಮೈಮೇಲೆ ಬಂದಂತೆ ವರ್ತಿಸುವ ಜರ್ನಲಿಸ್ಟುಗಳು,  ಯಾಕೆ ಮಾದಕ ಜಾಲದ ಹಿಂದೆ ಕಾರ್ಯಾಚರಿಸುತ್ತಿಲ್ಲ ಅದರ ಬೆನ್ನತ್ತಿ ಹೋಗುವುದಿಲ್ಲ.?

ಮಾನವೀಯತೆ ಮತ್ತು ನಾಗರಿಕತೆ ಯನ್ನು ಕಾಪಾಡಬೇಕಾದ ಧರ್ಮವೇ ಅಮಲಿಗೆ ಬಲಿಯಾಗುವುದೇ?
ಅದು ದೊಡ್ಡ ದುರಂತವಾಗಬಹುದು.ಸ್ವಾಮೀ ವಿವೇಕಾನಂದರು ಹೀಗೇ ಬರೆಯುತ್ತಾರೆ.
ಬಾರತವು ಸಾಯುವುದೇ ?ಹಾಗೇನಾದರೂ ಆದರೆ ಪ್ರಪಂಚದ ಎಲ್ಲಾ ಅಧ್ಯಾತ್ಮ ವೂ ನಿರ್ನಾಮವಾಗುವುದು.ಎಲ್ಲಾ ನೈತಿಕತೆ ನಷ್ಟವಾಗುವುದು.ಎಲ್ಲಾ ಮತಗಳ ಬಗ್ಗೆ ಮಧುರ ಅನುಕಂಪವೂ ನಾಶವಾಗುವುದು‌. ಎಲ್ಲಾ ಆದರ್ಶ ತತ್ವಗಳು ‌ನಿರ್ನಾಮವಾಗುವುದು.ಲೈಂಗಿಕ ಕಾಮ ಸುಖ ಭೋಗಗಳೇ ಗಂಡು ಹೆಣ್ಣು ದೇವತೆಗಳಾಗಿ ,ಹಣವು ಅದರ ಪೂಜಾರಿಯಾಗಿ,ಮೋಸ ಬಲತ್ಕಾರ ಮತ್ತು ಸ್ಪರ್ಧೆ ಗಳು ಪೂಜಾ ಕ್ರಮವಾಗಿ ಮಾನವ ಆತ್ಮ ಬಲಿಪಶುವಾಗುವುದು.

ಎಲ್ಲಾ ಧರ್ಮಾದವರೂ ಒಂದಾಗಿ ಹೋರಾಡಬೇಕಾದದ್ದು ಅಮಲು ಹಾವಳಿಯ ಬಗ್ಗೆ. ಅದನ್ನು ಮಾಡದಿದ್ದರೆ ಧರ್ಮ ಧರ್ಮ ಅಂತ ಹೊಡೆದಾಡಲು ಯಾರೂ ಉಳಿಯಲ್ಲ.ಅಮಲು ಮಾಫಿಯಾದಲ್ಲಿ ಮನುಷ್ಯತ್ವವೇ ನಾಶವಾಗುತ್ತಿರುವಾಗ ,ಕೆಲವರು ರಕ್ತದ ಹೆಸರಿನಲ್ಲಿ ರಾಜಕೀಯದಾಟ ನಡೆಸಿದರೆ .ಇನ್ನೊಂದು ಕಡೆ ಕೆಲವರು ಉಗ್ರ ಕ್ರಮ,ಕಟ್ಟು ನಿಟ್ಟಿನ ಕ್ರಮ,ಮುಲಾಜಿಲ್ಲದೇ ಕ್ರಮ ಅಂತ ರಾಗ ಎಳೆದು ಜನರನ್ನು ವಂಚಿಸುತ್ತಾರೆ ?.
ಕಾನೂನು ಸುವ್ಯವಸ್ಥೆ ಯನ್ನು ಕಾಪಾಡಬೇಕಾದವರು ಅಮಲು ಮಾರಟಗಾರರ ಏಜನ್ಸಿಗಳಾಗುತ್ತಾರೆಯೇ ?
.
ಇದೀಗ ಧರ್ಮದ ಹೆಸರಲ್ಲಿ ರಾಜಕೀಯ ಮಾಡದೇ ,ಜನರನ್ನು ಪರಸ್ಪರ ಒಡೆಯದೇ ಮಾದಕ ಜಾಲವನ್ನು ಭೇಧಿಸಲು ಎಲ್ಲರೂ ಒಂದಾಗಬೇಕಾಗಿದೆ.ಇಲ್ಲವಾದರೆ ಧರ್ಮವೂ ಉಳಿಯದು ಮನುಷ್ಯತ್ವವೂ ಉಳಿಯದು.
ಅಪಘಾತವಾದರೆ
ಜೀವ ಉಳಿಸಲು ಹರಸಾಹಸ ಪಡುತ್ತಾರೆ,ಜೈಲು ಸೇರಿದರೆ ಅರೋಪ ಮುಕ್ತವಾಗಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ ? ಆದರೆ ಮನಷ್ಯತ್ವವನ್ನು ಕಾಪಾಡಲು ನಾವೇನು ಮಾಡುತ್ತಿದ್ದೇವೆ?ಅದಕ್ಕಾಗಿ ಏಕೆ ಹೋರಾಡಬಾರದು.?
ಒಂದು ಪ್ರದೇಶದಲ್ಲಿ ಈ ತರದ ಅಮಲು ದಂಧೆ ನಡೆಯುತ್ತಿದ್ದರೆ  ಅದಕ್ಕೆ ನೇರ ಹೊಣೆ ಸರಕಾರ ಮತ್ತು ಪ್ರಾದೇಶಿಕ ಆಡಳಿತ ಹಾಗೂ ಕಾನೂನು ಪಾಲಕ ಕೇಂದ್ರಗಳೇ ಕಾರಣವಾಗಬೇಕಿದೆ.
ಆದರೆ ಪುಂಡ ಪಟ್ಟಿಂಗರನ್ನು ಬೆಳೆಸುವುದು ಕೆಲ ರಾಜಕಾರಣಿಗಳು ಮತ್ತು ಪೋಲಿಸ್ ಠಾಣೆಗಳು ಎಂದು ಜನ ಆಡಿಕೊಳ್ಳುತ್ತಾರೆ.
ಸಾಮಾಜಿಕ ಭದ್ರತೆ ಒದಗಿಸಬೇಕಾದ ಸರಕಾರ ಇದಕ್ಕೆ ಬಧ್ಧವಾಗಬೇಕಿದೆ.

قُلْ إِنَّمَا حَرَّمَ رَبِّيَ الْفَوَاحِشَ مَا ظَهَرَ مِنْهَا وَمَا بَطَنَ وَالْإِثْمَ وَالْبَغْيَ بِغَيْرِ الْحَقِّ

ಹೇಳಿರಿ: ‘ನನ್ನ ಪ್ರಭು ನಿಷಿದ್ಧಗೊಳಿಸಿರುವುದು ಪ್ರತ್ಯಕ್ಷವಾಗಿರುವ ಮತ್ತು ಪರೋಕ್ಷವಾಗಿರುವ ನೀಚಕೃತ್ಯ ಗಳು, ಪಾಪಕೃತ್ಯಗಳು, ಅನ್ಯಾಯವಾದ ದಬ್ಬಾಳಿಕೆಗಳು ಆಗಿವೆ.

🎆 ವರದಿ ಅಲ್ ಅಹ್ಸನ್ ಮಾಸಿಕ

No comments:

Post a Comment