ಕ್ರೌರ್ಯ ತುಂಬಿದ ಜಗತ್ತಿಗೆ ಪ್ರವಾದಿಯವರ ಮಾದರಿಯಾಗಿ ಶಾಂತಿಯ ಪಾಠ ಹೇಳಿ ಕೊಡೋಣ


ಭಾರತ ಜಗ ಶ್ರೇಷ್ಠ ವಾದದ್ದು   ಆತ್ಮಜ್ಞಾನ,ನಾಗರೀಕತೆಯಿಂದ ಉಳಿದ ಮಾನವೀಯತೆಯ ಕಾರಣಕ್ಕೆ
ಭಾಷಣ 🎤ಮೌಲಾನಾ ಯು. ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು
    By: AL Ahsan

ಕುರಾನ್ ಹೇಳುತ್ತದೆ.

لَقَدْ كَانَ لَكُمْ فِي رَسُولِ اللَّهِ أُسْوَةٌ حَسَنَةٌ لِمَنْ كَانَ يَرْجُو اللَّهَ وَالْيَوْمَ الْآخِرَ وَذَكَرَ اللَّهَ كَثِيرًا

ಖಂಡಿತವಾಗಿಯೂ ನಿಮಗೆ ಅಲ್ಲಾಹುವಿನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಂದರೆ ಅಲ್ಲಾಹುವನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹುವನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ.

ಅಮೇರಿಕದಲ್ಲಿ ಒಬ್ಬ ಐವತ್ತೆಂಟು ಮಂದಿ ಅಮಾಯಕರ ಮೇಲೆ ಗುಂಡಿನ ಮಳೆಗೆರೆದು ಕೊಂದು ಹಾಕಿದ ಅವನು ಸ್ಟೀಫನ್.
ಅದು ಅಮೇರಿಕಾ ಅಂತ ಸುಮ್ಮನಿರಬಹುದೇ ?

ನಿರ್ಭಯಾ ಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕ್ರೂರವಾಗಿ ಹತ್ಯೆಮಾಡಿದಾಗ ಜನಾರೋಷ ಎದ್ದು ಪ್ರತಿಭಟನೆ ನಡೆಯಿತು!ನಂತರ ತಣ್ಣಗಾಯಿತು?ಅತ್ಯಾಚಾರ ಕೊನೆಯಾಗಲಿಲ್ಲ.!

 ಗೋ ರಕ್ಷಣೆಯ ಗುಂಪು  ಅಖ್ಲಾಕ್ ಮತ್ತು ಅನೇಕರನ್ನು ಕೊಂದಾಗಲೂ ಅಸಹಿಷ್ಞುತೆಯ ಕೂಗು ದೇಶದಾದ್ಯಂತ ಎದ್ದಿತು ಮತ್ತೆ ತಣ್ಣಗಾಯಿತು, ?

ಹದಿಹರೆಯದ ಜುನೈದನನ್ನು ರೈಲಲ್ಲಿ ಅಮಾನುಷವಾಗಿ ಕೊಂದು ಹಾಕಿದಾಗ ಜಂತರ್ ಮಂತರ್ ದೇಶವೇ ನಡುಗುವಂತೆ ಹೇಳಿತು "NOT IN MY NAME" ಆನಂತರ ಸುಮ್ಮನಾಯಿತು.

ಅಸಹಿಷ್ಣುತೆಯ ಕಾರಣ ಅನೇಕ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದಿರುಗಿಸಲಾಯಿತು.ಆದರೂ ‌ ಪತ್ರಕರ್ತೆಯ ಸವಕಲು ದೇಹ ಮನೆ ಗೇಟಲ್ಲಿ ಜನರ ಮಧ್ಯೆ ಗುಂಡಿಗೆ ಬಲಿಯಾಯಿತು. ಅಲ್ಲಿ ಯೂ ಬ್ರಹತ್ ಪ್ರತಿಭಟನೆ ನಡೆಯಿತು.ಮುಂದೇನಾಯಿತು ?
 
ಮೊನ್ನೆ ರಾಜಸ್ತಾನಲ್ಲಿ ಶ್ಲೋಕ ಹಾಡಿದ ಅಹಮದನನ್ನು ಗುಂಪು ಕೊಂದಿತು.ಆ ಕಾರಣ ಅಲ್ಲಿಂದ ಇನ್ನೂರಕ್ಕಿಂತಲೂ ಹೆಚ್ಚು ಮುಸ್ಲಿಂ ಕುಟುಂಬ ಊರು ತೊರೆದು ಹೋಗುತ್ತಿದೆ .

ಇದೂ ಅಲ್ಲದೇ ಪ್ರತೀ ಮನೆಮನೆಯಲ್ಲಿ ಹರಿತವಾದ ತಲವಾರು ಕತ್ತಿ ಇಟ್ಟು ಸಿದ್ದ ರಾಗಿ ಎಂದು ಕರೆ ನೀಡಲಾಗುತ್ತದೆ.

ಇದೀಗ ಬೇಕಿರೋದು ಹೇಳಿ,ಕೂಗಿ ಪ್ರಯೋಜನ ವಿಲ್ಲವೆಂದಾಗ ಏನು ಮಾಡಬೇಕೆನ್ನುವುದಾಗಿದೆ.


ಈ ದೇಶ ಹಿಂಸೆಯತ್ತಾ ಮುಖ ಮಾಡಿದೆಯಾ ? ಮಂದಿರ, ಮಸೀದಿ, ದ್ಯಾನ ಜಪ ತಪ ಕೇಂದ್ರಗಳು ಅರ್ಥವನ್ನು ಕಳಕೊಂಡಿದೆಯಾ  ?
ಬೋಧನೆ,ಪ್ರವಚನಗಳು,
ಧರ್ಮನೀತಿ ತತ್ವಗಳು ಅಪ್ರಸ್ತುತ ವಾಯಿತೆ ?
ಶಾಂತಿದೂತರ, ಮಾಹಾನುಭಾವರ,ಸಾತ್ವಿಕರ,
ದರ್ಶನಗಳು ಅರ್ತಹೀನವಾಯಿತೇ ?
ಅದೆಲ್ಲಾ ಬಿಟ್ಟು ಬಿಡೋಣವೆಂದರೂ
ಆಧುನಿಕ ಶಿಕ್ಷಣಗಳಿಂದಾಗುವ ಪರಿಣಾಮಗಳೇನು ?
ಶಿಕ್ಷಣಕ್ಕಾಗಿ ಇಂದು ಬದುಕಿನ ಬಹುಮುಖ್ಯ ಭಾಗವನ್ನು ವ್ಯಯಿಸಲಾಗುತ್ತಿದೆ.ಆದರೆ ಆ ಶಿಕ್ಷಣವೂ ಜನರಿಗೆ ಮಾನವೀಯತೆಯನ್ನು ಕಲಿಸುತ್ತಿದೆಯೇ ?ಶಿಕ್ಷಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡುವ ರೀತಿಯಲ್ಲಿ
ಸಿದ್ದಪಡಿಸಲಾಗುತ್ತದೆ.ಆದರೆ ನಾಳೆಯ ಭವಿಷ್ಯದಲ್ಲಿ ಭಯ ,ಆತಂಕ ಅಭದ್ರತೆ,ಅಸಹಿಷ್ನುತೆ ಇಲ್ಲದ ನಾಡಲ್ಲಿ ನಮ್ಮ ಮಕ್ಕಳು ಕೂಡಿ ಬಾಳಬಹುದೇ ?ಸ್ವಾಸ್ಥ್ಯ ಸಮಾಜದಲ್ಲಿ ನಮ್ಮ ಮುಂದಿನ ಜನ ಬಾಳಬಹುದೇ ?
ಇನ್ನು ಈ ದೇಶವನ್ನು ಜಗತ್ತಿನ ಶ್ರೇಷ್ಠ ದೇಶವಾಗಿ ಜಗತ್ತು ಪರಿಗಣಿಸಿದ್ದು ಇಲ್ಲಿಯ ಜನಸಾಮಾನ್ಯರು  ಅನುಭವಿಸುವ ಶ್ರೀಮಂತಿಕೆಯ ಕಾರಣವೇ ? ಅಲ್ಲ
ರೋಗ ರುಜಿನಗಳಿಂದ ಮುಕ್ತವಾದ ದೇಶ ಅನ್ನುವ ಉದ್ದೇಶಕ್ಕಾಗಿಯೇ ? ಇಲ್ಲವೇ ಅತ್ಯುನ್ನತ ವಾದ ಸ್ವಚ್ಚ ಪರಿಸರವೆನ್ನುವ ಹೆಗ್ಗಳಿಕೆಗಾಗಿಯೇ ?    ಎಲ್ಲಾ ಸಮಸ್ಯೆಗಳಿಂದ ಮುಕ್ತವಾದ ರಾಷ್ಟ್ರ ಎನ್ನುವುದಕ್ಕಾಗಿಯೇ ?
ಕಳ್ಳ ,ದರೋಡೆ ಕೋರ,ಅತ್ಯಾಚಾರಿ,ಕೊಲೆಗಟುಕ ದುಷ್ಟರ ಯಾವುದೇ ತಂಟೆಗಳಿಲ್ಲದ ನಾಡು ಎಂಬ ಕಾರಣಕ್ಕಾಗಿ ಯೇ ?
ಕ್ಲೇಶಗಳಿಲ್ಲದ ಸ್ವಾಸ್ಥ್ಯ ಸಮಾಜದ ಮಧ್ಯೆ ಬದುಕಬಹುದೆಂಬ ಕಾಳಜಿಗಾಗಿಯೇ ?
ಇದೆಲ್ಲವನ್ನೂ ಗುರುತಿಸಲು ಅಸಾದ್ಯವಾಗಬಹುದು. ಆದರೆ ಈ ದೇಶ ಎದ್ದು ನಿಲ್ಲುವುದು ಧಾರ್ಮಿಕತೆಯಿಂದ ಪಡೆದ ಆತ್ಮ ಜ್ಞಾನ, ಮತ್ತು ನಾಗರೀಕತೆಯಿಂದ ಉಳಿದ ಮಾನವೀಯತೆಯ ಕಾರಣಗಳಿಗಾಗಿ ಮಾತ್ರ. ಬೇರೆ ಎಲ್ಲಾ ದೇಶಗಳಿಗಿಂತ ದೊಡ್ಡದಾದ ಮನುಷ್ಯತ್ವದ ಭೂಮಿಕೆಯನ್ನು ಹಾಗೂ ಬಲಿಷ್ಟವಾದ ಸಂವಿಧಾನ ಮೂಲಕ ಪ್ರಜಾತಂತ್ರವನ್ನೂ ಜಗತ್ತಿಗೆ ಸಾರಿದ್ದು ನಮ್ಮ ದೇಶ.
ಆದರೆ ಇಂದು ಕ್ರೌರ್ಯ ಮೆರೆಯುತ್ತಿದೆ.ಅಶಾಂತಿ ಬೆಳೆಯುತ್ತಿದೆ.
ಇಂತಹಾ ಸಂದರ್ಭದಲ್ಲಿ ನಾವು ಸರ್ವಶ್ರೇಷ್ಠ ಧರ್ಮದ ಅನುಯಾಯಿಗಳಾಗಿ,ಗತಿಸಿಹೋದ ಮಹಾನ್ ಚೇತನಗಳು ಅನುಸರಿಸಿದ ಆದರ್ಶದ ಮೂಲಕ ಪ್ರವಾದಿ (ಸ) ರವರ ಶಾಂತಿಯ ರಾಯಭಾರಿಗಳಾಗಿ ಪ್ರತಿಯೊಬ್ಬ ಮಸಲ್ಮಾನ ಬದಲಾಗಬೇಕಾಗಿದೆ.ನಿಯಮ ಕಾನೂನುಗಳು, ನೀತಿ ಪಾಠಗಳು,ಕಾರಾಗ್ರಹಗಳು,ಸೋತು ನಿಂತಾಗ ಸಮಾಜಕ್ಕೆ ದೀಪಸ್ತಂಭ ವಾಗಿ ಇಸ್ಲಾಂ ಬೆಳಕು ನೀಡಬೇಕು.ಆ ಮೂಲಕ ವಿರೋಧಿಗಳಿಗೆ, ಅತಿಕ್ರಮಿಗಳಿಗೆ  ಹೊಸ ದಾರಿಯನ್ನು ತೋರಲು ಮುಸ್ಲಿಂ ಸಮುದಾಯಕ್ಕೆ ಸಾಧ್ಯವಾಗಬೇಕು.ಇಸ್ಲಾಮನ್ನು ಪರಿಚಯಿಸಲು ಇದಕ್ಕಿಂತ ದೊಡ್ಡ ಅವಕಾಶ ಬೇರೆ ಇರಲಿಕ್ಕಿಲ್ಲ.ಪ್ರವಾದಿ ಆಗಮನದ
ಏಳನೇಯ ಶತಮಾನ ಕ್ರೌರ್ಯ ಗಳಿಂದಲೇ ತುಂಬಿ ಹೋಗಿತ್ತು.
ಕುರಾನ್ ಹೇಳುತ್ತದೆ.
كُنْتُمْ خَيْرَ أُمَّةٍ أُخْرِجَتْ لِلنَّاسِ تَأْمُرُونَ بِالْمَعْرُوفِ وَتَنْهَوْنَ عَنِ الْمُنْكَرِ وَتُؤْمِنُونَ بِاللَّهِ(3-10)

ನೀವು ಮನುಕುಲಕ್ಕಾಗಿ ಹೊರತರಲಾಗಿರುವ ಉತ್ತಮ ಸಮುದಾಯವಾಗಿರುವಿರಿ. ನೀವು ಸದಾಚಾರ ವನ್ನು ಆದೇಶಿಸುತ್ತಿರುವಿರಿ, ದುರಾಚಾರವನ್ನು ವಿರೋಧಿಸು ತ್ತಿರುವಿರಿ ಮತ್ತು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವಿರಿ.(3-10)
ಸದಾಚಾರದ ಉತ್ತಮ ರಾಯಭಾರಿಯಾಗಿ ನಾವು ಕಾರ್ಯಾಚರಿಸಬೇಕಾಗಿದೆ.
ಇನ್ನು ಕೆಡುಕನ್ನು ಕೆಡುಕಿನಿಂದ ಎದುರಿಸಲಾಗದು.ಜಗತ್ತಿನಲ್ಲಿ ಅನೇಕ ಹೋರಾಟಗಳು ದಾರಿ ತಪ್ಪುವುದು ಇಂತಹಾ ಸಂದರ್ಭಗಳಲ್ಲಿ ಆಗಿರುತ್ತದೆ.ಶಕ್ತಿ ಪ್ರದರ್ಶನಕ್ಕಿಂತ ಪರಿಣಾಮಕಾರಿ ಬುದ್ಧಿವಂತಿಕೆ ತೋರುವುದಾಗಿದೆ.ಮದವೇರಿದ ಆನೆಯನ್ನು ಪಳಗಿಸುವ,ಅಶ್ವಾರೋಹಿ ಯಾಗಿ ಬಲಿಷ್ಟ ಕುದುರೆಗೆ ಕಡಿವಾಣ ಹಾಕುವ ಮನುಜ,
ನಿಖರ ಗುರಿ ಮೂಲಕ ಕ್ಷಣಮಾತ್ರದಲ್ಲಿ ಬೇಟೆಯನ್ನು ಮುಗಿಸಿ ಬಿಡುವ ಹುಲಿ,ಸಿಂಹಗಳನ್ನೂ ತನ್ನ ಚಮತ್ಕಾರದಿಂದ ವಶೀಕರಿಸುವ ಮನುಷ್ಯನಿಗೆ ಬುಧ್ದಿ,ವಿವೇಕ,ಶಿಕ್ಷಣ ವಿರುವ ಸಮಾಜ ವನ್ನು ಸಂವೇದನಾಶೀಲ ವರ್ತನೆ ಮೂಲಕ ಋಜುವಾದ ದಾರಿಯೇಡೆಗೆ  ಆಕರ್ಶಿಸಬಹುದು.ಆಮೂಲಕ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.ಕುರಾನ್ ಹೀಗೆ ಹೇಳುತ್ತದೆ.
وَلَا تَسْتَوِي الْحَسَنَةُ وَلَا السَّيِّئَةُ ۚ ادْفَعْ بِالَّتِي هِيَ أَحْسَنُ فَإِذَا الَّذِي بَيْنَكَ وَبَيْنَهُ عَدَاوَةٌ كَأَنَّهُ وَلِيٌّ حَمِيمٌ

ಒಳಿತು ಮತ್ತು ಕೆಡುಕು ಸಮಾನವಾಗಲಾರದು. ಅತ್ಯುತ್ತಮವಾದುದು ಯಾವುದೋ ಅದರ ಮೂಲಕ ತಾವು (ಕೆಡುಕನ್ನು) ತಡೆಯಿರಿ. ಆಗ ಯಾರ ಮತ್ತು ತಮ್ಮ ಮಧ್ಯೆ ಶತ್ರುತ್ವವಿದೆಯೋ ಅವನು (ತಮ್ಮ) ಆಪ್ತ ಮಿತ್ರನೋ ಎಂಬಂತೆ ಮಾರ್ಪಡುವನು.
ತಸ್ಲೀಮಳಂತ ತಲೆಹಿಡುಕ ಕೂಟಕ್ಕೆ ಮಾತ್ರ ಕುರಾನ್ ಬಗ್ಗೆ ಅಸಹಜ ಅಸಹನೆ ಮತ್ತುಅಸೂಯೆ ಇದೆ ಎಂದು ಒಪ್ಪಿಕೊಳ್ಳಲೇ ಬೇಕು.
ಆದರೆ ಇಸ್ಲಾಮಿನ ದರ್ಶನ ವನ್ನು ಸಮಾಜಕ್ಕೆ ತಲುಪಿಸಲು ನಮ್ಮಿಂದ ಆಗಬೇಕು.
ಕೇರಳದ ಉಗ್ರ ಮತಾಂಧ ದ್ವೇಷ ಭಾಷಣದ ಬೆಂಕಿ ಉಗುಳುವ  ಟೀಚರ್ ಮನೆಗೆ ಹೋಗಿ ಇಸ್ಲಾಮಿನ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಾಲಾಡಿಸಲು ಪ್ರಯತ್ನ ಪಟ್ಟ ಎಸ್ ಕೆ ಎಸ್ ಎಸ್  ಎಫ್ ನ ಮಾದರಿ ನಮಗೆ ಅನುಕರಣೀಯ.ಅಲ್ಲಿಂದ ಗೌರವದೊಂದಿಗೆ ಆತಿಥ್ಯ ಸ್ವೀಕರಿಸಿ ಉಪಹಾರ ಸ್ವೀಕರಿಸಿ ಬಂದಿದ್ದರೆ ಅದು ಸಮಸ್ತ ಪೋಷಕ ಸಂಘಟನೆಯ ಶಕ್ತಿಯಾಗಿದೆ‌. ಅದಲ್ಲದೇ ಹಿಂಸೆಗೆ ಹಿಂಸೆ ,ತಲವಾರಿಗೆ ತಲವಾರು ಪರಿಹಾರವಲ್ಲ.
 ಹಝ್ರತ್ ಉಮರ್( ರ ) ಪ್ರವಾದಿಯ ರುಂಡ ಕತ್ತರಿಸಲು ಮುಂದಾಗಿ ಬಂದಿಧ್ದರು ಎನ್ನುವುದಂತು ಸತ್ಯ ಆದರೆ ಅವರನ್ನು ತಡೆಯುವ ಯಾವುದೇ  ಶಕ್ತಿ ಸಾಮರ್ಥ್ಯ  ನಬಿಯವರಿಗೆ ಇರಲಿಲ್ಲ. ಆದರೆ ಉಮರ್( ರ )ರವರ ಬಲಿಷ್ಟ ತಾಕತ್ತು ಕುರಾನಿನ ಎರಡು ಸೂಕ್ತಗಳಲ್ಲಿ ಕರಗಿ ಹೋಯಿತು.

 طه مَا أَنْزَلْنَا عَلَيْكَ الْقُرْآنَ لِتَشْقَىٰ

ತಾವು ಕಷ್ಟಪಡಬೇಕೆಂದು ನಾವು ತಮಗೆ ಕುರ್ ಆನ್ ನನ್ನು ಅವತೀರ್ಣಗೊಳಿಸಿಲ್ಲ

 إِلَّا تَذْكِرَةً لِمَنْ يَخْشَىٰ

ಇದು ಭಯಪಡುವವರಿಗಿರುವ ಒಂದು ಉಪದೇಶ ಮಾತ್ರವಾಗಿದೆ.

تَنْزِيلًا مِمَّنْ خَلَقَ الْأَرْضَ وَالسَّمَاوَاتِ الْعُلَى

ಇದು ಭೂಮಿಯನ್ನು ಮತ್ತು ಉನ್ನತವಾದ ಆಕಾಶಗಳನ್ನು ಸೃಷ್ಟಿಸಿದವನ ಬಳಿಯಿಂದ ಅವತೀರ್ಣ ಗೊಂಡಿರುವುದಾಗಿದೆ.

[ತ್ವಾಹಾ : 1 - 4]
ಆ ಕುರಾನಿನ ಸಂದೇಶಗಳನ್ನು ಮನುಕುಲಕ್ಕೆ ತಲುಪಿಸಬೇಕಾಗಿದೆ.
ಹಾಗೇ   ಸುರಾಖಾಃ ಕುದುರೆ ಮೇಲೆ ಏರಿ ಬಂದರೂ ಕೈಗಟುಕುವ ಸನಿಹದಲ್ಲಿ ಇದ್ದರೂ ಪ್ರವಾದಿಯನ್ನು ಸ್ಪರ್ಶಿಸಲು ಸಾದ್ಯವಾಗಲಿಲ್ಲ.
ಹದಿಮೂರು ವರ್ಷಗಳ ಕಾಲ ಕ್ರೂರವಾಗಿ ಕೊಲ್ಲುವ,ಜೀವಂತ ಮನುಷ್ಯ ಮಕ್ಕಳನ್ನು ಹೂಳುವ,ಹೆಣ್ಣುಮಕ್ಕಳನ್ನು ಬೇಕೆಂದೆನಿಸಿದಾಗ ಬೋಗಿಸಲಿಕ್ಕಿರುವ ವಸ್ತುವಾಗಿ ಬಳಸಿಕೊಳ್ಳುವ ಕಾಲದಲ್ಲಿ ಪ್ರವಾದೀ (ಸ)ರವರು ಸತ್ಯ ಸಂದೇಶಗಳನ್ನು ನೀಡುತ್ತಾರೆ.
ಅಲ್ಲಾಹನ ದಾರಿಯನ್ನು ಕೊಡುತ್ತಾರೆ.ಆದರೆ ಜನರಿಂದ ಅವರಿಗೆ ಸಿಕ್ಕಿದ್ದು  ಊರಿನಿಂದಲೇ ಪಲಾಯನ ಮಾಡ ಬೇಕಾದ ಪರಿಸ್ಥಿತಿ. ಊರು ತೊರೆದು ಹೋಗುವಾಗಲೂ ಬೆಂಬಿಡದೇ ಸುರಾಖಾಃ ಹಿಂಬಾಲಿಸುತ್ತಾರೆ.ಸುರಾಖಾಃ ಕಿನಾನಃ ಗೋತ್ರದ ನಾಯಕರಾಗಿದ್ದರು. ಪ್ರವಾದೀ ಇನ್ನೇನು ಕೈಗೆ ಸಿಕ್ಕಿ ಬಿಟ್ಟರು ಎನ್ನುವಷ್ಟರಲ್ಲಿ ಅವರ ಕುದುರೆಯ ಕಾಲು ಭೂಮಿಯಲ್ಲಿ ಹೂತು ಹೋಗುತ್ತದೆ.ಕಡೆಗೆ ಯಾವುದೇ ದಾರಿ ಇಲ್ಲದೇ ರಕ್ಷಿಸಲು ಬೇಡುತ್ತಾರೆ.
ಪ್ರವಾದಿ (ಸ) ರವರ ಪ್ರಾರ್ಥನೆ ಮೂಲಕ ಸುರಾಖಾಃ ಬಚವಾಗುತ್ತಾರೆ.ಆಗ ನಬಿ ಹೇಳುತ್ತಾರೆ.

كيف بك إِذا لبست سِوَارَيْ كسرى ومِنْطَقَتَه وتاجه، فقال سراقة: كسرى بن هرمز؟ فقال رسول الله: نعم
ಸುರಾಖಾ ಕಿಸ್ರಾ ರಾಜನ ಬಳೆ,ಕಿರೀಟ,ಮತ್ತು ಸೊಂಟದ ಪಟ್ಟಿಯನ್ನು ನಿಮಗೆ ಧರಿಸಲ್ಪಟ್ಟಾಗ ಹೇಗೇ ?

ಕಿಸ್ರಾ ರಾಜನೇ ? ಸುರಾಖಾ ಪ್ರಶ್ನೆ.
ನಬಿ ಸ ಹೇಳಿದರು ಹೌದು.
(ನಂತರ ಖಲೀಫಾ ಉಮರ್ ರ ಕಾಲ ಮದಾಯಿನ್ ಕೈವಶ ವಾದಾಗ ಕಿಸ್ರಾ ರಾಜನ ಬಳೆ,ಕಿರೀಟ ವನ್ನು ಖಲೀಫಾ ರವರು ಸುರಾಖಾ (ರ) ತೊಡಿಸುತ್ತಾರೆ.)
ಹೀಗೆ ಅಲ್ಲಾಹನ ಧರ್ಮದ ಕಾರ್ಯವನ್ನು ಆತ ಸರಿಯಾಗೇ ನಿರ್ವಹಿಸಿದ್ದಾನೆ. ಅಲ್ಲಾಹನಿಗಾಗಿ  ಕರ್ಮ ಮಾಡುವವನು  ಆತನ ಧರ್ಮದ ನೆಲೆಯಲ್ಲಿ ಗಟ್ಟಿಯಾಗೀ ನಿಲ್ಲಬೇಕಾಗಿದೆ.
ಅಲ್ಲಾಹನು ಹೇಳುತ್ತಾನೆ.

يَا أَيُّهَا الَّذِينَ آمَنُوا إِنْ تَنْصُرُوا اللَّهَ يَنْصُرْكُمْ وَيُثَبِّتْ أَقْدَامَكُمْ

ಓ ಸತ್ಯವಿಶ್ವಾಸಿಗಳೇ!, ನೀವು ಅಲ್ಲಾಹುವಿಗೆ ಸಹಾಯ ಮಾಡುವುದಾದರೆ ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಅಚಲವಾಗಿ ನಿಲ್ಲಿಸುವನು.
ಅಲ್ಲಾಹನಿಗೆ ಸಹಾಯ ಮಾಡುವುದೆಂದರೆ ನಾವು ಉತ್ತಮ ಆದರ್ಶ ವ್ಯಕ್ತಿಗಳಾಗಿ ವರ್ತಿಸುವುದಾಗಿದೆ.

يَا أَيُّهَا الَّذِينَ آمَنُوا كُونُوا قَوَّامِينَ لِلَّهِ شُهَدَاءَ بِالْقِسْطِ ۖ وَلَا يَجْرِمَنَّكُمْ شَنَآنُ قَوْمٍ عَلَىٰ أَلَّا تَعْدِلُوا ۚ اعْدِلُوا هُوَ أَقْرَبُ لِلتَّقْوَىٰ ۖ وَاتَّقُوا اللَّهَ ۚ إِنَّ اللَّهَ خَبِيرٌ بِمَا تَعْمَلُونَ

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿಗೋಸ್ಕರ ನೆಲೆಗೊಳ್ಳುವವರೂ, ನ್ಯಾಯಕ್ಕೆ ಸಾಕ್ಷಿವಹಿಸುವವರೂ ಆಗಿರಿ. ಒಂದು ಜನತೆಯೊಂದಿಗಿರುವ ಕ್ರೋಧವು ನ್ಯಾಯ ಪಾಲಿಸದಿರಲು ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯ ಪಾಲಿಸಿರಿ. ಅದು ಧರ್ಮನಿಷ್ಠೆಗೆ ಅತ್ಯಂತ ನಿಕಟವಾಗಿದೆ. ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.

ಒಂದು ವೇಳೆ ನಾವೇ ಅಕ್ರಮಿಗಳು ಮತ್ತು ಅನಾಚಾರಿಗಳಾದರೆ ಜಯಿಸಲು  ಸಾದ್ಯ ವಾಗದು.
(ಅಲ್ಮಾಯಿದಾ :೮)
ವರದಿ ಅಲ್ ಅಹ್ಸನ್ ಮಾಸಿಕ

1 comment:

  1. Masha allah very amazing sentence.. i think it make socity peacefully

    ReplyDelete