ಪ್ರವಾದಿ( ಸ) ಗುಣಗಾನವನ್ನು ನಮ್ಮ ಬದುಕಿನ ಭಾಗವಾಗಿಸಿದ ಮಂಖೂಸ್ ಮೌಲಿದ್.

ಜಗಬೆಳಗಿಸಿದ ನಾಯಕರ ಸ್ಮರಣೆ ಅನಿವಾರ್ಯ
ಮೌಲಾನಾ ಯುಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು"

ವಸಂತ ಕಾಲ ಆಗಮಿಸುತ್ತಿದೆ. ಪುಣ್ಯ ಪ್ರವಾದಿ  (ಸ)ಜನ್ಮದಿನ ಹತ್ತಿರವಾಗುತ್ತಿದೆ.ಸತ್ಯವಿಶ್ವಾಸಿಯ ಹೃದಯ ಆ ಪ್ರವಾದಿ ಜನ್ಮ ದಿನಕ್ಕಾಗಿ ಕಾಯುತ್ತಲಿದೆ.ಪ್ರವಾದಿ (ಸ) ರ ಗುಣಗಾನ ,ಮೌಲಿದ್ ಸ್ವಲಾತಿನಿಂದ ಜಗತ್ತಿನಾದ್ಯಂತ ಶೋಭೆ ಹರಡಲಿದೆ.
ನಮ್ಮೆಡೆಯಲ್ಲಿ ಹೆಚ್ಚು ಮನೆಮಾತಾಗಿರುವ ಮಂಕೂಸ್ ಮೌಲಿದ್ ಮೂಲಕ ಮನೆ ಮನೆಗಳಲ್ಲಿ ಸಂಭ್ರಮ ತುಂಬಲಿದೆ.
ಇಸ್ಲಾಂ ಪ್ರವಾದಿ ಮುಹಮ್ಮದ್ (ಸ)ರ ಕಾಲದಲ್ಲೇ ಭಾರತದಲ್ಲಿ  ಪ್ರವೇಶ ಪಡೆದಿರುವುದು ಐತಿಹಾಸಿಕ ಹಿನ್ನೆಲೆ ಯಾಗಿರುತ್ತದೆ.ಆರಂಭದಲ್ಲಿ ಮಸೀದಿಗಳ ನಿರ್ಮಾಣ ಮೂಲಕ ಧರ್ಮದ ಪ್ರಚಾರಕ್ಕೆ ಅವಕಾಶಗಳು ಸಿಕ್ಕವು.ಹೀಗೆ ಮುಂದುವರಿದು ಹಿಜರಿ ಒಂಬತ್ತನೇ ಶತಮಾನ ವಾಗುವ ಷ್ಟ ರಲ್ಲಿ ಈಜಿಪ್ಟ್ ,ತುರ್ಕಿ, ಸೌದಿ,ಸಿರಿಯಾ ಮುಂತಾದ ಕಡೆಗಳಿಂದ ವಿದ್ವಾಂಸರು ಭಾರತದ ಕೇರಳದತ್ತ ಧಾರ್ಮಿಕ ಅರಿವನ್ನರಸಿ ಬರುವಂತಹಾ ಸನ್ನಿವೇಶ ಸೃಷ್ಟಿಯಾಯಿತು. ಅದು ಕೂಡಾ ಅದ್ಭುತ ಮತ್ತು ಅಷ್ಟೇ ವಿಸ್ಮಯ.ಈ ಸಂಭ್ರಮ ಕ್ಕೆ ವೇದಿಕೆ ಒದಗಿಸಿದವರು ಒಂಬತ್ತನೇಯ ಶತಮಾನ ಕಂಡ ಅಪ್ರತಿಮ ವಿದ್ವತ್ ಪ್ರತಿಭೆ  ಹಝ್ರತ್ ಅಸ್ಸಯ್ಯದ್ ಝೈನುದ್ದೀನ್ ಮಖ್ದೂಮ್ ಅಲ್ ಕಬೀರ್ (ರ) ಆಗಿದ್ದರು.(1467.ಹಿಜರಿ -873-928)
ಯಮನ್ ದೇಶದಿಂದ ತಮಿಳುನಾಡಿನ ಕೀಲಕ್ಕರೆ,ಕಾಯಲ್ಪಟ್ಟಣಂ,ಮೂಲಕ ಕೊಚ್ಚಿ ತಲುಪಿದ ಮಖ್ದೂಂ ಕುಟುಂಬದ ಪಿತಾಮಹಾ ಅಸ್ಸಯ್ಯದ್ ಮಖ್ದೂಂ ಅಸ್ಸೈಖ್
ಝೈನುದ್ದೀನ್ ಇಬ್ರಾಹೀಮ್ ಬಿನ್ ಅಹ್ಮದ್ (ರ).ಅವರು  ಝೈನದ್ದೀನ್ ಮಖ್ದೂಮರ  ಚಿಕ್ಕಪ್ಪರಾಗಿರುತ್ತಾರೆ.ಝೈನದ್ದೀನ್ ಮಖ್ದೂಮ್ ಒಂದನೆಯವರು
ಹಿಜರಿ 873 ರಲ್ಲಿ ಕೊಚ್ಚಿಯಲ್ಲಿ ಜನ್ಮ ತಾಳಿದರು. ನಂತರ ಪಿತೃ ವಿಯೋಗ ನಿಮಿತ್ತ ಮಹಾನುಭಾವರು ತನ್ನ ಚಿಕ್ಕಪ್ಪರ ಜೊತೆ ಕೊಚ್ಚಿಯಿಂದ  ಪೊನ್ನಾನಿ ಗೆ ವಾಸ ಬದಲಿಸಿತ್ತಾರೆ.ಅಲ್ಲೇ ಧಾರ್ಮಿಕ ಅರಿವನ್ನು ಪಡೆದು ನಂತರ ಮಕ್ಕಾ ಶರೀಪಿಗೆ ತೆರಳಿ ಉನ್ನತ ವಿದ್ವಾಂಸರಿಂದ ಅರಿವನ್ನು ಪಡೆದುಕೊಳ್ಳುತ್ತಾರೆ.ಆಮೇಲೆ ಈಜಿಪ್ಟಿಗೆ ಹೋಗಿ ಅಲ್ ಅಝಹರ್ ವಿದ್ಯಾಲಯ ದಲ್ಲಿ ಜಗತ್ತು ಕಂಡ ಮಹಾ ವಿದ್ವಾಂಸರಾದ ಅಸ್ಸೈಖ್ ಝಕರಿಯ್ಯ ಲ್ ಅನ್ಸಾರಿ (ರ )ರ ಬಳಿ ಸೇರಿ ಕೊಳ್ಳುತ್ತಾರೆ.
ಅಸ್ಸೈಖ್ ಝಕರಿಯ್ಯ ಲ್ ಅನ್ಸಾರಿ (ರ )ಒಂಬತ್ತನೇ ಶತಮಾನದ ಮುಜದ್ದಿದ್ (ಯುಗ ಪರಿವರ್ತಕ)ಆಗಿದ್ದರು.ಖಾತಿಮತುಲ್ ಮುಹಖ್ಖಿಖ್ ಇಬ್ನು ಹಜರ್ (ರ)ಕೂಡಾ ಅವರ ಶಿಷ್ಯರು.ನನ್ನ ಕಣ್ಣು ಕಂಡ ಮಹಾನುಭಾವ ರಲ್ಲಿ ಸರ್ವಶ್ರೇಷ್ಠ ರು ನನ್ನ ಗುರುಗಳೆಂದು
ಇಬ್ನು ಹಜರ್ (ರ)ಹೇಳಿರುತ್ತಾರೆ.ಇಮಾಂ ಜಲಾಲುದ್ದೀನ್ ಮಹಲ್ಲಿ ,ಇಮಾಂ ಹಜರುಲ್ ಅಸ್ಕಲಾನಿ,ಇಮಾಂ ಇಝ್ಝುದ್ದೀನ್ ಅಬ್ದುಸ್ಸಲಾಂ,ಇಮಾಂ ಸಿರಾಜುದ್ದೀನ್ ಬುಲ್ಕೈನಿ ಮುಂತಾದ ವಿದ್ವಾಂಸರು ಅಸ್ಸೈಖ್ ಝಕರಿಯ್ಯ ಲ್ ಅನ್ಸಾರಿ (ರ)ಗುರುಗಳಾಗಿರುತ್ತಾರೆ.
ಇಮಾಂ ಶಾಫಿಈ(ರ)ರ ಬಳಿಯೇ ಅವರು ಅಂತ್ಯವಿಶ್ರಮ ಪಡೆದಿರುತ್ತಾರೆ.
ಅಸ್ಸೈಖ್ ಝಕರಿಯ್ಯಲ್ ಅನ್ಸಾರಿ ಮತ್ತು ಇಮಾಂ ಶಾಫಿ ರ ಮಧ್ಯೆ ಹದಿನೇಳು ಗುರುವರ್ಯರನ್ನು ಕಾಣಬಹುದಾಗಿದೆ.
ಅಶ್ಸೈಖ್ ಮಖ್ದೂಂ (ರ)ಈಜಿಫ್ಟಿನಿಂದ ಪೊನ್ನಾನಿಗೆ ಮರಳಿ ಬಂದ  ನಂತರ ಕಟ್ಟಿದ ಮಸೀದಿ ಖ್ಯಾತ ಇಸ್ಲಾಮಿಕ್ ಸಂಸ್ಕೃತಿಯ ಕೇಂದ್ರ ವಾಗಿ ಬೆಳಗಿದೆ.ಅಶ್ಸೈಖ್ ಮಖ್ದೂಂ (ರ)ರವರ ದಾರಿಯಲ್ಲೇ ಸಾಗಿದ ಮೊಮ್ಮಗ ಅಸ್ಸಯ್ಯದ್ ಅಹ್ಮದ್ ಝೈನುದ್ದೀನ್ ಎರಡನೆಯವರು  ಅಗಾಧವಾದ ಧಾರ್ಮಿಕ ಜ್ಞಾನವನ್ನು ಪಡೆಯುತ್ತಾರೆ.ಹರಂ ಶರೀಫಿನಲ್ಲಿ ಹತ್ತು ವರ್ಷಗಳ ಕಾಲ ಮಕ್ಕಾ ಹರಂ ಶರೀಫಿನಲ್ಲಿ ಜ್ಞಾನವನ್ನು ಪಡೆಯುತ್ತಾ
ಖಾತಿಮತುಲ್ ಮುಹಖ್ಖಿಖೀನ್ ಇಬ್ನು ಹಜರ್(ಹಿಜರಿ  .909-973)(ರ) ರ ಶಿಷ್ಯತ್ವವನ್ನು ಪಡೆಯುತ್ತಾರೆ.
ಆನಂತರ ಪೊನ್ನಾನಿಗೆ ಮರಳಿ ಪ್ರಸಿದ್ದ ಮಸೀದಿ ಕೇಂದ್ರವಾಗಿ ದರ್ಸ್ ನ್ನು ಮುನ್ನಡೆಸುತ್ತಾರೆ.ಆ ಸಂದರ್ಭದಲ್ಲಿ ಇಬ್ನು ಹಜರ್ (ರ) ಪೊನ್ನಾನಿ ದರ್ಸಿಗೆ ಬೇಟಿ ನೀಡಿ ಕೆಲಕಾಲ ತಂಗಿದ್ದು ಉಲ್ಲೇಖವಿದೆ. ಅಂದು ಪೊನ್ನಾನಿ ಯಲ್ಲಿ ತಂಗಿದ ಕಾಲ ತನ್ನ ಕೈಯಿಂದ ಬರೆದ ಕೆಲವು ಬರಹಗಳು ದಾರುಲ್ ಇಫ್ತಾತಾಹ್  ಅಝ್ಹರಿಯಾ ಅಹ್ಮದ್ ಕೋಯ ಸ್ಸಾಲಿಯಾತಿ ಲೈಬ್ರರಿಯಲ್ಲಿ ಲಭ್ಯವಿದೆ. ಅಲ್ ಜಾಮಿಯಲ್ ಅಝ್ಹರ್,ಕೈರೋ
ಅಲ್ ಜಾಮಿಯಲ್ ಅಮವೀ ಡಮಸ್ಕಸ್,ಅಲ್ ಜಾಮಿಯಲ್ ಫಾತಿಹ್ ಇಸ್ತಾಂಬುಲ್, ಅಲ್ ಹರಮೈನಿ ಶ್ಶರೀಪೈನಿ ವಿಶ್ವವಿದ್ಯಾಲಯ ಗಳಿಂದ ಜ್ಞಾನ ದಾಹಿಗಳು ಪೊನ್ನಾನಿ ಸಂದರ್ಶಿಸುತ್ತಿದ್ದುದು ಪೊನ್ನಾನಿ ವಿಶ್ವೋತ್ತರವಾಗಿ ಬೆಳೆದ ಉದಾಹರಣೆ ಯಾಗಿದೆ.ಇಷ್ಟೆಲ್ಲಾ ವಿವರಿಸಲು ಕಾರಣ ಸುಮಾರು ಐನೂರು ವರ್ಷಗಳಷ್ಟು ಹಿಂದೆ ಅರಬ್ ಜಗತ್ತನ್ನು ಕೇರಳದ ಕಡೆ ಆಕರ್ಶಿಸಿಸುವಂತೆ ಮಾಡಿದ ಮಹಾನುಭಾವ ರು ಸಾಮಾನ್ಯರಲ್ಲ.
ಮಖ್ದೂಂ ಒಂದನೆಯವರು ಬರೆದ ಮಂಖೂಸ್ ಮೌಲಿದ್ ಪ್ರವಾದಿ (ಸ) ರವರ ಸ್ತುತಿ ಕೀರ್ತನೆಗಳನ್ನು ಜೀವಂತವಾಗಿಸಿದೆ.ಅದು ಒಬ್ಬ ಮುಸ್ಲಿಮನ ಜನನ ಮರಣ,ಬಾಳು ಬದುಕಿನಲ್ಲಿ ಹಾಸುಹೊಕ್ಕಾಗಿ ರುವುದು ಮತ್ತು ಉಳಿದಿರುವುದು ಸಚ್ಚಾರಿತ್ಯವಿರುವ ಇಮಾಮರ ಪ್ರಜ್ಞಾವಂತಿಕೆಯಿಂದಲೇ ಆಗಿದೆ.
ಸಕಾಲದಲ್ಲಿ  ಸಮಸ್ತ ಉಲಮಾ ಸಭೆಯು ಕಾರ್ಯ ಪ್ರವೃತರಾಗಿರುವ ಕಾರಣ ಇಸ್ಲಾಮಿಕ್ ಸಾಹಿತ್ಯ ಕ್ಷೇತ್ರದಲ್ಲಿ ಬಲು ದೊಡ್ಡ ಸವಾಲನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದೆ.
ಮೌಲಿದ್ ಬಗ್ಗೆ ವಿರೋಧಿಗಳು ಎತ್ತುವ ಆರೋಪಗಳಲ್ಲಿ ಪ್ರಮುಖವಾದವುಗಳನ್ನು ಹೀಗೆ ಕಾಣಬಹುದು.

ಮೌಲಿದ್ ಪಾರಾಯಣ ನಬಿ ಕಾಲದಲ್ಲಿ ಇರಲಿಲ್ಲ.

ಕುರಾನ್ ಮತ್ತು ಮೌಲಿದಿನಲ್ಲಿ ವೈರುಧ್ಯಗಳಿವೆ.

ನಬಿಯನ್ನು ಕರೆದು ಅಪೇಕ್ಷಿಸುತ್ತಾರೆ.

ನೆಬಿ ಸ ರ ಕಾಲದಲ್ಲಿ ಮೌಲಿದ್ ಇರಲಿಲ್ಲ ಎನ್ನುವುದು ಹಸಿ ಸುಳ್ಳು. ಮೌಲಿದ್ ಎಂದರೆ ನಬಿ ಕೀರ್ತನೆ, ಗುಣಗಾನ ಮಾಡುವುದಾಗಿದೆ.
ಅದು ಕುರಾನ್ ಹದೀಸುಗಳಲ್ಲಿ ದಾರಾಳವಿದೆ.
 قُلْ بِفَضْلِ اللَّهِ وَبِرَحْمَتِهِ فَبِذَٰلِكَ فَلْيَفْرَحُوا هُوَ خَيْرٌ مِمَّا يَجْمَعُونَ

ಹೇಳಿರಿ: ‘ಇದು ಅಲ್ಲಾಹುವಿನ ಅನುಗ್ರಹ ಮತ್ತು ಕಾರುಣ್ಯದಿಂದಾಗಿದೆ. ಅದರಿಂದಾಗಿ ಅವರು ಸಂಭ್ರಮಪಡಲಿ. ಅವರು ಒಟ್ಟುಗೂಡಿಸಿಡುವುದಕ್ಕಿಂತಲೂ ಇದು ಅತ್ಯುತ್ತಮವಾದುದಾಗಿದೆ’.
ಯೂನುಸ್ ಸೂರ 58 ರ ತಫ್ಸೀರಿನಲ್ಲ فضل ಎಂಬುದು ಅರಿವು   رحمۃ ಎಂದರೆ ಪ್ರವಾದಿಯವರೆಂದು ಇಬ್ನ ಅಬ್ಬಾಸ್ (ರ)ವ್ಯಾಖ್ಯಾನಿಸಿರುವುದನ್ನು ತಫ್ಸೀರ್ ಬಹ್ರುಲ್ ಮುಹೀತಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರವಾದಿ (ಸ) ರ ಗುಣ ಗಾನ ಜಗತ್ತಿನಲ್ಲಿ ಸಂಪಾದಿಸುವ ಸರ್ವಕ್ಕಿಂತಲೂ ಉತ್ತಮವೆಂದು   ತಿಳಿಯಬಹುದು.ಗದ್ಯ
ಪದ್ಯಗಳಲ್ಲಿ ಪ್ರವಾದಿಗಳ ಮಹಾತ್ಮೆ ಯನ್ನು ಕೊಂಡಾಡಲಾಗುತ್ತಿದೆ.ಇಮಾಂ ಬುಖಾರಿ (ರ) ವರದಿ ಮಾಡಿದ ಹದೀಸು ಹೀಗಿದೆ ಆಯಿಷಾ ರ ಹೇಳುತ್ತಾರೆ. ಮದೀನ ಮಸೀದಿಯಲ್ಲಿ ಹಸ್ಸಾನ್ (ರ) ರವರಿಗೆ ಮಿಂಬರನ್ನು ಇಡಲು ಆಜ್ಞಾಪಿಸುತ್ತಿದ್ದರು.ಹಸ್ಸಾನ್ ರ  ಅದರ ಮೇಲೆ ನಿಂತು ನಬಿ ಬಗ್ಗೆ ಮಹತ್ವವನ್ನು ಹೇಳುತ್ತಿದ್ದರು ಮತ್ತು ವಿರೋಧಿಗಳ ಟೀಕೆ ಟಿಪ್ಪಣಿ ಗಳನ್ನು ಪ್ರತಿರೋಧಿಸುತ್ತಿದ್ದರು. ಪ್ರವಾದಿ (ಸ) ರವರು ಪವಿತ್ರ ಆತ್ಮ ಮೂಲಕ ಹಸ್ಸಾನನ್ನು ಬಲಪಡಿಸು ಎಂದು ಪ್ರಾರ್ಥಿಸುತ್ತಿದ್ದರು.
ಈ ಹದೀಸು ಮೂಲಕ ಇಮಾಮ್ ನವವೀ (ರ) ರವರು  ಮಸೀದಿಯಲ್ಲಿ ಪ್ರವಾದಿ ಗುಣಗಾನ ಸುನ್ನತ್ತ್ ಎಂದು ವಿವರಿಸಿದ್ದಾರೆ. (ಶರಹು ಮುಸ್ಲಿಂ.)
ಅಬ್ದುಲ್ಲಾಹಿಬ್ನು ರವಾಹಃ ಪದ್ಯ ಪ್ರವಾದಿ ಕೀರ್ತನೆಯಲ್ಲಿ ಪ್ರಮುಖವಾಗಿದೆ.
أَخْبَرَنَا يُونُسُ ، عَنِالزُّهْرِيِّ ، عَنِ الْهَيْثَمِ بْنِ أَبِي سِنَانٍ ، قَالَ : رَأَيْتُ أَبَا هُرَيْرَةَيَوْمَ جُمُعَةٍ يَقُصُّ قَائِمًا ، فَقَالَ فِي قَصَصِهِ : " إِنَّ أَخًا لَكُمْ كَانَ لَا يَقُولُ الرَّفَثَ يَعْنِي عَبْدُ اللَّهِ بْنُ رَوَاحَةَ ، فَقَالَ :
وَفِينَا رَسُولُ اللَّهِ يَتْلُو كِتَابَه
ُ إِذَا انْشَقَّ مَعْرُوفٌ مِنَ الْفَجْرِ سَاطِع
ُ أَرَانَا الْهُدَى بَعْدَ الْعَمَى فَقُلُوبُنَا
بِهِ مُوقِنَاتٌ أَنَّ مَا قَالَ وَاقِعُ
 يَبِيتُ يُجَافِي جَنْبَهُ عَنْ فِرَاشِه إِذَا اسْتَثْقَلَتْ بِالْكَافِرِينَ الْمَضَاجِعُ " . صَحِيحٌ رَوَاهُ الْبُخَارِيُّ .

ಅಬ್ದುಲ್ಲಾಹಿಬ್ನು ರವಾಹಃ ಬಗ್ಗೆ ನಬಿಯವರು ಹೇಳಿದ್ದನ್ನು ಅಬೂ ಹುರೈರ  ರ ಜ್ಞಾಪಿಸುತ್ತಾರೆ.
ನಿಮ್ಮ ಸಹೋದರ ಸುಳ್ಳು ಹೇಳುವ ವ್ಯಕ್ತಿಯಲ್ಲ.
ನಂತರ ಅವರು ಹೇಳಿದ ಪದ್ಯವನ್ನು ಹೇಳುತ್ತಾರೆ.

ಪ್ರಭಾತ ಸಮಯ ನಬಿಯವರು ಕುರಾನ್ ಪಠಿಸುತ್ತಾರೆ.ಕತ್ತಲೆಯ ನಂತರ ನಾವು ಬೆಳಕನ್ನು ಕಂಡೆವು.ಅವರು ಹೇಳಿದ್ದೇಲ್ಲವೂ ಘಟಿಸುತ್ತದೆ.ಜನ ಗಾಢವಾದ ನಿದ್ರೆಯಲ್ಲಿ ರುವಾಗ ನಬಿಯವರು ಹಾಸಿಗೆಯಿಂದ ಎದ್ದು ನಮಾಜಿನಲ್ಲಿ ಮಗ್ನರಾಗುತ್ತಾರೆ.

(ಪದ್ಯದ ಭಾವಾನುವಾದ)

ಉಂರತುಲ್ ಖಳಾ ಸಮಯ ನಬಿ ಬಳಿ ಅಬ್ದುಲ್ಲಾಹಿಬ್ನು ರವಾಹಃ ಪದ್ಯ ಹೇಳುತ್ತಾರೆ.

خَلُّوا بَنِي الْكُفَّارِ عَنْ سَبِيلِه
ِ الْيَوْمَ نَضْرِبْكُمْ عَلَى تَنْزِيلِهِ
 ضَرْبًا يُزِيلُ الْهَامَ عَنْ مَقِيلِهِ وَيُذْهِلُ الْخَلِيلَ عَنْ خَلِيلِهِ
فَقَالَ لَهُ عُمَرُ : يَابْنَ رَوَاحَةَ , بَيْنَ يَدَيْ رَسُولِ اللَّهِ , صَلَّى اللَّهُ تَعَالَى عَلَيْهِ وَسَلَّمَ ، وَفِي حَرَمِ اللَّهِ تَقُولُ شِعْرًا ؟ فَقَالَ النَّبِيُّ , صَلَّى اللَّهُ تَعَالَى عَلَيْهِ وَسَلَّمَ : خَلِّ عَنْهُ يَا عُمَرُ ، فَلَهِيَ أَسْرَعُ فِيهِمْ مِنْ نَضْحِ النَّبْلِ . .
ಪ್ರವಾದಿ ಒಂಟೆಯ ಲಗಾಮು ಹಿಡಿದು ಈ ಹಾಡನ್ನು ಹೇಳಿದಾಗ ಉಮರ್ (ರ) ಪ್ರಶ್ನಿಸುತ್ತಾರೆ ನಬಿಯವರ ಬಳಿ ಮತ್ತು ಹರಮಿನಲ್ಲಿ ನೀವು ಹಾಡುವುದೇ ?ಆಗ. ನಬಿಯವರು ಅವರನ್ನು ಬಿಡಿ‌ ಅವರ ಹಾಡು ಬಾಣಕ್ಕಿಂತ ಶಕ್ತಿಶಾಲಿ ಯಾಗಿದೆ.( ತಿರುಮುದಿ 2847)
ಕ‌ಅಬ್ ಇಬ್ನು ಝುಹೈರ್ ನಬಿಯ ಪರಮ ವೈರಿಯಾಗಿದ್ದರು.ಅವರ ಪದ್ಯವು ತೀರ ಅಸಹ್ಯವಾಗಿ ಕಂಡಾಗ ಅವರನ್ನು ವಧಿಸಲು ನಬಿಯವರು ಆಜ್ಞಾಪಿಸುತ್ತಾರೆ.
ಇದನ್ನರಿತ ಕ‌ಅಬ್  ವೇಷ ಬದಲಿಸಿ ನಬಿಯವರ ಬಳಿ ಬಂದು ಹಾಡುತ್ತಾರೆ.
إنّ الرسول لنور يستضاء به...مهند من سيوف الله مسلول
ಈ ಜಾಗ ತಲುಪಿದಾಗ ನಬಿಯವರು ತನ್ನ ಶಾಲನ್ನು ಹೊದಿಸುತ್ತಾರೆ.
ಆ ಶಾಲನ್ನು ಮುಆವಿಯಾ (ರ) ಕ‌ಅಬ್ (ರ) ಮಕ್ಕಳಿಂದ ಖರೀದಿಸುತ್ತಾರೆ.ನಂತರ ಅದನ್ನು ಅಬ್ಬಾಸಿಯಾ ಆಡಳಿತಾಧಿಕಾರಿಗಳು ಹಬ್ಬದ ದಿನಗಳಲ್ಲಿ ಧರಿಸುತ್ತಿದ್ದರು.ಬಗ್ದಾದ್ ನಗರವನ್ನು ಮುಘಲ್
ಅಕ್ರಮಿಸಿದಾಗ ಅಬ್ಬಾಸೀ ಆಡಳಿತ ಕೊನೆಗೊಂಡಿತು.ಆಗ ಅಬ್ಬಾಸಿಗಳಿಂದ  ಮುಘಲರು ಆ ಶಾಲನ್ನು ವಶಪಡಿಸಿಕೊಳ್ಳುತ್ತಾರೆ. ಅದನ್ನು ಬೆಂಕಿಗೆ ಹಾಕಿದಾಗ ಅದು ಸುಡಲಿಲ್ಲ.ಇದೀಗ ಅದು ಇಸ್ತಾಂಬುಲಿನಲ್ಲಿ  ಸಂರಕ್ಷಿಸಲಾಗುತ್ತಿದೆ. ಇಮಾಮ್ ಬೂಸ್ವೀರಿ (ರ) ರವರು ವಾತ ರೋಗದಿಂದ ಬಳಲುತ್ತಿದ್ದಾಗ ಪ್ರವಾದಿ ಸ್ನೇಹದ ಬಗ್ಗೆ ಅತ್ಯುನ್ನತ ಪದ್ಯ ರಚನೆ ಮಾಡಿದ ನಿಮಿತ್ತವಾಗಿ ಪ್ರವಾದಿಯು ಕನಸಿನಲ್ಲಿ ಶಾಲನ್ನು ಹೊದಿಸಿದ ಮತ್ತು ಆ ಮೂಲಕ ಸಂಪೂರ್ಣ ಗುಣಮುಖರಾದ ಘಟನೆ ಇಲ್ಲಿ ಗಮನಿಸಬಹುದು.
ಉಳಿದ ಭಾಗ ಮುಂದಿನ ವಾರದಲ್ಲಿ ನಿರೀಕ್ಷಿಸೋಣ.ಇನ್ಷಾ ಅಲ್ಲಾಃ.
ವರದಿ ಅಲ್ ಅಹ್ಸನ್ ಮಾಸಿಕ

No comments:

Post a Comment