ಕಣ್ಣೀರಲ್ಲಿ ಕರಗಿದ ಕಲ್ಲಗುಡ್ಡೆಗೆ ಹೆಜ್ಜೆ ಇಟ್ಟಾಗ ಕಂಗಳು ತುಂಬಿಕೊಂಡವು...


ಮಕ್ಕಳನ್ನು ಕಳಕೊಂಡ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ "ಸಮಸ್ತ"
ಎಳೆಯದರಲ್ಲಿ ಅಗಲಿದ ಮಕ್ಕಳು ಹೆತ್ತವರ ಸ್ವರ್ಗ ಪ್ರವೇಶಕ್ಕೆ ದಾರಿ ಸುಗಮಗೋಳಿಸುವರೆಂಬ ಪ್ರವಾದಿ ವಚನ ಗಮನಾರ್ಹ
ಭಾಷಣ: ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

 ಮೂಲರ ಪಟ್ನ ದ ಹತ್ತಿರದ ಊರು ಕಲ್ಲುಗುಡ್ಡೆ.ತೀರಾ ಬಡ ಕುಟುಂಬಗಳು ಚಿಕ್ಕ ಚಿಕ್ಕದಾದ ಮನೆಕಟ್ಟಿಕೊಂಡು ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಆ ಊರಿನ ಜನರಲ್ಲಿ ಕಡು ಬಡವರೇ ಜಾಸ್ತಿ.
ಆದರೆ ಹೃದಯ ಶ್ರೀಮಂತಿಕೆಯ ಲ್ಲಿ ಅವರನ್ನು ಮೀರಲು ಸಾಧ್ಯವಾಗದು.ಧಾರ್ಮಿಕ ಅರಿವು ಮತ್ತು ಉಲಮಾರೊಂದಿಗೆ ಅವರಿಗಿರುವ ಗೌರವ ವರ್ಣಿಸುವುದು ಕಷ್ಟ.ಆ ಕಾರಣದಿಂದಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಧಾರ್ಮಿಕ ವಿದ್ಯಾರ್ಜನೆಗೆ ಕಳುಹಿಸಿದ ಹೆಮ್ಮೆ ಆ ಊರಿಗಿದೆ.ಇಷ್ಟೆಲ್ಲಾ ಹೇಳಲು ಕಾರಣ ಮೊನ್ನೆ ಸೋಮವಾರ ಸಂಜೆಯಾಗುತ್ತಲೇ ಕಲ್ಲುಗುಡ್ಡೆ ಕರಗಲಾರಂಬಿಸಿತು.ಕಣ್ಣೀರ ಕೋಡಿ ಹರಿಯಲಾರಂಭಿಸಿತು.ನಿರಸ ಮೌನ ಆ ಊರನ್ನೇ ಆವರಿಸಿತ್ತು.ಮಸೀದಿಯ ಪಕ್ಕದಲ್ಲಿ ಲವಲವಿಕೆಯಿಂದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಭವಿಷ್ಯದಲ್ಲಿ  ಉನ್ನತ ವಿದ್ವಾಂಸರಾಗಿ ಬೆಳಗಬೇಕಾಗಿದ್ದ ಹದಿಹರೆಯದ
SKSSF ತ್ವಲಬಾವಿಂಗ್ ಸದಸ್ಯರು, ಶಂಶುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತ್ವೈಬಾ ಕಿನ್ಯ ಇದರ ವಿದ್ಯಾರ್ಥಿ  ಮುಬಶ್ಶಿರ್ ಕಲ್ಲಗುಡ್ಡೆ ಹಾಗೂ SKSSF ಕ್ಶಾಂಪಸ್ ವಿಂಗ್ ಇದರ ಸದಸ್ಯರಾದ ಅಸ್ಲಾಮ್,ರಮೀಝ್,ಅಝ್ಮಲ್, ಸವಾದ್ ಐದು ಮಂದಿ ತರುಣರು
ಪಕ್ಕದ ಪಲ್ಗುಣಿ ನದಿಯಲ್ಲಿ ಬದುಕಿನ ಯಾತ್ರೆ ಮುಗಿಸಿ ಜೊತೆಯಾಗಿ ಮರಣವನ್ನು ಅಪ್ಪಿಕೊಂಡು ಬಿಟ್ಟಿದ್ದರು.
ಸಂಜೆಯಾಗುತ್ತಲೇ ಊರಿಗೆ ಊರೇ ಬೆಚ್ಚಿಬಿದ್ದಿತು.ಎಲ್ಲರೂ ದುಃಖ ತಾಳಲಾರದೇ ಕಣ್ಣೀರಿಡುತ್ತಿದ್ದರು.ಒಂದರ ಮೇಲೆ ಒಂದರಂತೆ ಐದು ಮಕ್ಕಳ ಮೃತ ದೇಹಗಳನ್ನು ಹೋರ ತೆಗೆಯುವಾಗ ಹೃದಯವೇ ಒಡೆದು ಹೋಗುವಂತಿತ್ತು.ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ನಂತರ ಬಂಟ್ವಾಳದಲ್ಲಿ ಮರಣೋತ್ತರ ಪರೀಕ್ಷೆ ಯ ಬಳಿಕ ಪಾರ್ಥಿವ ಶರೀರವನ್ನು ಹೊತ್ತ ವಾಹನ ಊರಿಗೆ ಬರುತ್ತಿದ್ದಂತೆ ಊರಿಗೆ ಊರೇ ದುಃಖ ಸಾಗರದಲ್ಲಿ ಮುಳುಗಿತ್ತು.ಇನ್ನೂ ಆ ಶೋಕ ಆರಿದಂತಿಲ್ಲ ಅದಕ್ಕೆ ಇನ್ನೆಷ್ಟೋ ಸಮಯ ಬೇಕಾದಿತು.ಶುಂಟಿ ಹಿತ್ತಲಿನ ಮಸೀದಿಯ ಮಾರ್ಗದ ಬದಿಯಲ್ಲಿರು ಕಬರಸ್ತಾನದ ಎತ್ತರದ ಹಾದಿ ಏರುತ್ತಾ ಹೋದರೆ ಅಲ್ಲಿ ಒಂದೇ ಜಾಗದಲ್ಲಿ ಅಕ್ಕ ಪಕ್ಕಗಳಲ್ಲಿ ಜೋತೆಯಾಗಿ ಮಲಗಿರುವ ಮಕ್ಕಳ ಕಬರುಗಳು ಉತ್ತರ ಸಿಗದೇ  ಮೌನವಾಗಿದೆ ಎಂದು ಭಾವಿಸುವಂತಿತ್ತು.
ಗುರುವಾರ ಬೆಳಗಾಗುತ್ತಲೇ ಸಮಸ್ತದ ಆದೇಶ ಪ್ರಕಾರ ಶೈಖುನಾ ಎಂ ಟಿ ಉಸ್ತಾದರು ದುರಂತ ಸ್ಥಳಕ್ಕೆ ಬೇಟಿ ನೀಡಿ ಮರಣಹೊಂದಿದ ಮಕ್ಕಳ ಮನೆಗಳಿಗೆ ಭೇಟಿ ನೀಡುತ್ತಾರೆ ಎಂದು ತಿಳಿದೊಡನೇ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕಲ್ಲುಗುಡ್ಡೆ ಗೆ ಧಾವಿಸಿದೆವು.ಸಮಸ್ತ ನೇತಾರರೆಲ್ಲರೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಪ್ರಥಮವಾಗಿ ಕಬರ್ ಝಿಯಾರತ್ತು ನಡೆಸಿ ದುಅಃ ನಿರ್ವಹಿಸಲು ಶೈಖುನಾ ಮುಂದಾದಾಗ ಐದು ಮಕ್ಕಳ ತಂದೆಯರನ್ನು ಹತ್ತಿರ ಕರೆದು ನೀವು ಯಾರು ಮಕ್ಕಳನ್ನು ಕಳಕೊಂಡಿಲ್ಲ !ಅವರ್ಯಾರೂ ಮರಣಿಸಿಲ್ಲ!ಸಹನೆ ವಹಿಸಿ ನಮ್ಮನ್ನು ಮತ್ತು ನಿಮ್ಮನ್ನು ಸ್ವರ್ಗಕ್ಕೇ ಸೇರಿಸುವ ಮಕ್ಕಳು ಅವರು ಎಂದು ದುಖಃ ತಾಳಲಾರದೇ ಗದ್ಗದಿತರಾಗಿ ಹೇಳಿದಾಗ ಅಲ್ಲಿದ್ದ ಎಲ್ಲರ ಕೆನ್ನೆಯಲ್ಲಿ ಕಣ್ಣೀರು ಹರಿದಾಡುತ್ತಿತ್ತು.
ಚಿಕ್ಕ ಪ್ರಾಯದಲ್ಲೇ ಮರಣಹೊಂದಿದ ಪ್ರವಾದಿ (ಸ) ರ ಮಗನಾದ ಇಬ್ರಾಹಿಂ ಎಂಬ ಒಂದುವರೆ ವರ್ಷ ಪ್ರಾಯದ ಮಗುವಿನ ಬಗ್ಗೆ ಪ್ರವಾದಿಯರು ಅನುಭವಿಸಿದ ನೋವಿನ ಬಗ್ಗೆ ವಿವರಿಸಿ ಸಾಂತ್ವನ ಹೇಳಿದಾಗ ಮಕ್ಕಳನ್ನು ಕಳಕೊಂಡ ತಂದೆಯರ ಮುಖದಲ್ಲಿ ಸಮಾಧಾನದ ಭಾವ ಕಾಣುತ್ತಿತ್ತು.
ನಂತರ ಐದು ಮನೆಗಳಿಗೂ ಬೇಟಿ ನೀಡಿ ಪ್ರಾರ್ಥಿಸಿ ಕುಟುಂಬದವರಿಗೂ ಸಾಂತ್ವನ ಹೇಳಿದರು.ಜೊತೆಗೆ ಸಮಸ್ತದ ಎಲ್ಲಾ ಕಾರ್ಯಕರ್ತರೂ ಸಾಥ್ ನೀಡಿದ್ದರು.

ಮರಣವು ಕೂಡಾ ಒಂದು ಪರೀಕ್ಷೆ ಎಂದು ಕುರಾನ್ ಹೇಳುತ್ತದೆ.

وَلَنَبْلُوَنَّكُمْ بِشَيْءٍ مِنَ الْخَوْفِ وَالْجُوعِ وَنَقْصٍ مِنَ الْأَمْوَالِ وَالْأَنْفُسِ وَالثَّمَرَاتِ ۗ وَبَشِّرِ الصَّابِرِينَ

ಕೆಲವೊಂದು ಭಯ, ಹಸಿವು, ಸೊತ್ತುನಾಶ, ಪ್ರಾಣಹಾನಿ, ಫಲಗಳ ನಾಶ ಇತ್ಯಾದಿಗಳ ಮೂಲಕ ನಾವು ನಿಮ್ಮನ್ನು ಖಂಡಿತವಾಗಿಯೂ ಪರೀಕ್ಷಿಸುವೆವು. (ಇಂತಹ ಸಂದರ್ಭಗಳಲ್ಲಿ) ತಾಳ್ಮೆ ವಹಿಸುವವರಿಗೆ ಶುಭವಾರ್ತೆ ಯನ್ನು ತಿಳಿಸಿರಿ.

ಪ್ರವಾದಿ ಸ ರವರ ಸನ್ನಿಧಿಯಲ್ಲಿ ಹಾಜರಿರುತ್ತಿದ್ದ ಸ್ಹಹಾಬಿಯೋರ್ವರನ್ನು ಕಾಣದಾದಾಗ  ನಬಿಯವರು ಅವರ ಬಗ್ಗೆ ವಿವರ ಕೇಳುತ್ತಾರೆ.ಅವರು ತನ್ನ ಸಣ್ಣ ಮಗನ ಮರಣ ಕಾರಣ ಬರುತ್ತಿಲ್ಲ ಎಂದು ಸ್ವಹಾಬಿಗಳು ಉತ್ತರಿಸುತ್ತಾರೆ.ಪ್ರವಾದಿ ಸ ರವರು ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು ನಂತರ.

ثم قال: يا فلان أيما كان أحب إليك أن تمتع به عمرك أو لا تأتي غدا إلى باب من أبواب الجنة إلا وجدته قد سبقك إليه يفتحه لك. قال: يا نبي الله بل يسبقني إلى باب الجنة فيفتحها لي لهو أحب إلي. قال: فذاك لك. رواه النسائي وصححه ابن حبان والحاكم وابن ﺣﺠﺮ (ر)

ನಂತರ ಮಗುವಿನ ತಂದೆಯನ್ನು ಕರೆದು ನಿಮಗೆ ನಿಮ್ಮಮಗುವಿನ ಜೊತೆ ಸುಖವಾಗಿ ಬಾಳುವುದನ್ನು ಇಷ್ಟ ಪಡುವಿರೋ ಅಥವಾ ಆಗು ಸ್ವರ್ಗದ ಬಾಗಿಲ ಬಳಿ ತೆರಳಿ ನಿಮಗಾಗಿ ಸ್ವರ್ಗದ ಬಾಗಿಲನ್ನು ತೆರೆಯುವುದಾದರೆ ನಿಮಗೆ ಯಾವುದು ಇಷ್ಟ  ?ಅಂತ ಕೇಳುತ್ತಾರೆ.ಆಗ ಆ ಸ್ವಹಾಬಿ ಹೇಳುತ್ತಾರೆ ನಬಿಯವರೇ ಆ ನನ್ನ ಮಗು ಸ್ವರ್ಗದ ಬಾಗಿಲನ್ನು ತೆರೆಯುವ ಮಗುವಾಗುವುದನ್ನು ನಾನು ಬಯಸುವೆ.
وعن أبي موسى الأشعري أن رسول الله صلى الله عليه وسلم قال: إذا مات ولد العبد قال الله لملائكته: قبضتم ولد عبدي؟ فيقولون: نعم. فيقول: قبضتم ثمرة فؤاده. فيقولون: نعم. فيقول: ماذا قال عبدي؟ فيقولون: حمدك واسترجع. فيقول الله: ابنوا لعبدي بيتا في الجنة وسموه بيت الحمد. رواه الترمذي وحسنه، وأحمد،
ಓರ್ವ ವ್ಯಕ್ತಿಯ ಮಗು ಮರಣ ಹೊಂದಿದರೆ ಅಲ್ಲಾಹನು ತನ್ನ ಮಲಕ್ಕುಗಳಿಗೆ ಕೇಳುತ್ತಾನೆ, ನನ್ನ ದಾಸನ ಮಗನನ್ನು ಮರಣಿಸಿದಿರೋ ? ಹೌದು ಎಂದು ಮಲಕ್ಕುಗಳು ಉತ್ತರಿಸುತ್ತಾರೆ.ಆತನ ಹೃದಯ ದ ಹೂವನ್ನು ಮರಣಿಸಿದಿರೋ?
ಹೌದೆಂದು ದೇವದೂತರು ಹೇಳುತ್ತಾರೆ. ಆಗ ಅಲ್ಲಾಹನು ಪ್ರಶ್ನಿಸುತ್ತಾನೆ,ಆಗ ಆತ ಏನು ಹೇಳಿದ ?ಆತ ಸ್ತುತಿಸಿದ ಮತ್ತು "ಇನ್ಮಾಲಿಲ್ಲಾ"ಆಪತ್ತಿನ ವಾಕ್ಯ ಉಚ್ಚರಿಸಿದ.ಎಂದು ಮಲಕ್ಕುಗಳು ಉತ್ತರಿಸುತ್ತಾರೆ.
ಹಾಗಾದರೆ ನೀವು ಆತನಿಗೆ ಸ್ವರ್ಗದಲ್ಲಿ ಮನೆಯೊಂದನ್ನು ಸಿದ್ದಪಡಿಸಿ ಅದಕ್ಕೆ ಬೈತುಲ್ ಹಂದು"ಸ್ತುತಿಯ ಮನೆ"ಎಂದು ಹೆಸರಿಡಿ,

أنه رأى صحابياً يبكي على فرطاً له فقال له رسول الله صلى الله عليه وسلم أو مايسرك أنه الآن يلاعب أبني إبراهيم تحت ضل العرش قال بلي
ಪ್ರವಾದಿ (ಸ) ರವರು ಒಮ್ಮೆ ತನ್ನ ಸ್ವಹಾಬಿಗಳಲ್ಲಿ ಓರ್ವರು ಮಗನ ಮರಣ ನಿಮಿತ್ತ  ಅಳುತ್ತಿರುವುದನ್ನು ಕಂಡು ಪ್ರಶ್ನಿಸುರಾಗಿದ್ದರು.ನಿಮ್ಮ ಮಗ ಈಗ ನನ್ನ ಮಗನಾದ ಇಬ್ರಾಹಿಮ್ ನೊಂದಿಗೆ ಅರ್ಶಿನ ನೆರಳಿನಲ್ಲಿ ಆಟ ಆಡುತ್ತಿರುವುದನ್ನು ಇಷ್ಟಪಡುವುದಿಲ್ಲವೇ ?ಆಗ ಆ ದುಃಖಿತ ಸ್ವಹಾಬಿ ಹೇಳುತ್ತಾರೆ ನಾನು ಸಂತುಷ್ಟನಾಗಿದ್ದೇನೆ.

ನಬಿಯವರು ತಮ್ಮ ಮಗನ ಅಗಲಿಕೆಯ ಬಗ್ಗೆ ತುಂಬಾ ದುಃಖಿತ ರಾಗಿದ್ದರು.
ಕಣ್ಣೀರ ಸುರಿಸುತ್ತಾ ಹೀಗೆ ಹೇಳಿದ್ದರು.
إن العين تدمع، والقلب يحزن، ولا نقول إلا ما يرضي ربنا، وإنا بفراقك يا إبراهيم لمحزونون))

ಕಣ್ಣು ಕಣ್ಣೀರ ಸುರಿಸುತ್ತದೆ, ಹೃದಯ ದುಃಖಿಸುತ್ತದೆ.ಅಲ್ಲಾಹನು ತೃಪ್ತಿಪಡುವ ಕಾರ್ಯವನ್ನಲ್ಲದೇ ಬೇರೆ ಏನನ್ನೂ ನಾವು ಹೇಳಲಾರೆವು.ಓ ಇಬ್ರಾಹೀಮ್ ನಿಮ್ಮನ್ನು ಕಳಕೊಂಡು ನಾವು ದುಃಖಿತ ರಾಗಿದ್ದೇವೆ.
ಇಬ್ರಾಹೀಮ್ ಎಂಬ ಪುತ್ರನ ಬಗ್ಗೆ ಅಪಾರ ಮಹಾತ್ಮೆ ಯನ್ನೂ ಹೇಳಲಾಗಿದೆ.
أخرج البخاري في صحيحه من طريق إسماعيل بن أبي خالد قال: "قلت لابن أبي أوفى: رأيتَ إبراهيمَ ابنَ النبي؟ قال: مات صغيرًا، ولو قُضِيَ أن يكون بعد محمد صلى الله عليه وسلم نبيٌّ، عاش ابنه؛ ولكن لا نبي بعده
ಬುಖಾರಿ ರ ವರದಿ ಮಾಡಿದ ಹದೀಸಿನಲ್ಲಿ ಇಬ್ನು ಅಬೀ ಅವ್ ಪಾ (ರ) ಹೇಳುತ್ತಾರೆ,ಮುಹಮ್ಮದ್ ನಬಿ (ಸ) ನಂತರ ಪ್ರವಾದಿ ಬರುವ ವಿಧಿ ಇದ್ದಿದ್ದರೆ ನಬಿಯವರ  ಮಗ ಇಬ್ರಾಹೀಂ ಬದುಕುತ್ತಿದ್ದರು.ಆದರೆ ಅವರ ನಂತರ ಪ್ರವಾದಿಯೇ ಇಲ್ಲ.
ನಬಿಯವರ ನೋವನ್ನು ಬೇರೆ ಬೇರೆ ರೀತಿಯಲ್ಲಿ ಯೂ ಹೇಳಿಕೊಂಡಿದ್ದಾರೆ.
 وعن ابن عباس قال : قال رسول الله صلى الله عليه وسلم : " من كان له فرطان من أمتي أدخله الله بهما الجنة ، فقالت عائشة : فمن كان له فرط من أمتك ؟ قال : ومن كان له فرط يا
موفقة ، فقالت : فمن لم يكن له فرط من أمتك ؟ قال فأنا فرط أمتي ، لن يصابوا بمثلي . رواه الترمذي وقال : هذا حديث غريب .
ನಬಿಯವರು ಹೇಳುತ್ತಾರೆ
ಎರಡು ಮಕ್ಕಳು ಮರಣಿಸಿದ್ದರೆ ಅವರ ಕಾರಣ ಆತನನ್ನು ಅಲ್ಲಾಹನು ಸ್ವರ್ಗಕ್ಕೆ ಕಳುಹಿಸುತ್ತಾನೆ.ಆಗ ಆಯಿಷಾ ರ ರವರು ಹೇಳುತ್ತಾರೆ.ಒಂದು ಮಗು ಮರಣಿಸಿದ್ದರೆ ?ಅಗಲೂ ಸ್ವರ್ಗವಿದೆ ಎಂದು ಪ್ರವಾದಿ ಉತ್ತರಿಸುತ್ತಾರೆ.ಆಗ ಆಯಿಷಾ ರ ಕೇಳುತ್ತಾರೆ, ತಮ್ಮ ಉಮ್ಮತ್ತ್ ನಲ್ಲಿ ಒಬ್ಬರಿಗೆ ಯಾರೂ ಮರಣ ಹೊಂದದೇ ಇದ್ದರೆ ? ನಬಿ ಸ ಉತ್ತರಿಸುತ್ತಾರೆ,ನಾನು ನನ್ನ ಉಮ್ಮತ್ತಿಗಾಗಿ ಮುಂದಾಗಿ ಹೋಗಿ ಸಿದ್ದ ಪಡಿಸುವ  ವ್ಯಕ್ತಿ ಆಗಿರುತ್ತೇನೆ. ನನ್ನಂತೆ ಆಪತ್ತು ಯಾರಿಗೂ ಸಂಭವಿಸಿಲ್ಲ.
ಮಗನನ್ನು ಕಳಕೊಂಡ ಉಮ್ಮು ಸುಲೈಮ್ (ರ) ತನ್ನ ಪತಿ ಅಬೂ ತಲ್ಹಾ (ರ )ರ ಗಮನಕ್ಕೆ ಕೊಡದೇ ರಾತ್ರಿ ವೇಳೆ ಪತಿಯ ಜೊತೆ ಮಲಗಿ   ಬಳಿಕ ಬುದ್ದಿವಂತಿಕೆಯಿಂದ ಮಗನ ಮರಣದ ವಿಷಯವನ್ನು ಗಮನಕ್ಕೆ ತರುತ್ತಾರೆ.ಅಗ ಕೋಪಗೊಂಡ ಅಬೂ ತಲ್ಹಃ ರ ನೇರವಾಗಿ ನಬಿ (ಸ) ರ ಬಳಿ ತೆರಳುತ್ತಾರೆ.ವಿಷಯ ತಿಳಿಸಿದಾಗ ರಸೂಲರು ದುಅಃ ಮಾಡುತ್ತಾರೆ.

 بارك الله لكما في غابر ليلتكما.
ನಿಮಗಿಬ್ಬರಿಗೂ ಕಳೆದ ರಾತ್ರಿಯಲ್ಲಿ ಅಲ್ಲಾಹನು ಅನುಗ್ರಹಿಸಲಿ.
ಅದೇ ರಾತ್ರಿ ಗರ್ಭ ಧರಿಸಿದ  ಉಮ್ಮು ಸುಲೈಮ್ ಗಂಡು ಮಗುವಿಗ ಜನ್ಮ ಕೊಡುತ್ತಾರೆ.
ಈ ಎಲ್ಲಾ ಹದೀಸುಗಳ ಸಂದೇಶಗಳು ಆತಂಕ,ದುಃಖ ,ನೋವಿನಿಂದ ಕಂಗಾಲಾದ ಆ ಐದು ಮಕ್ಕಳ ಮನೆ ಮಂದಿಗೆ  ಸಮಾಧಾನ, ಸಹನೆಯ ಸುಗಮಗೊಳಿಸುತ್ತದೆ.ಆ ದೌತ್ಯವನ್ನು ನಿರ್ವಹಿಸಿದ ಸಮಸ್ತ ಮುಶಾವರ ಪ್ರತಿನಿಧಿ ಶೈಖುನಾ ಎಂ ಟಿ ಉಸ್ತಾದರಿಗೆ ಮತ್ತು ಸಮಸ್ತ ಉಲಮಾ ಸಭೆಗೆ  ಜಿಲ್ಲೆಯ  ಎಲ್ಲಾ ಸಮಸ್ತ ಅಭಿಮಾನಿಗಳ ಹೃದಯ  ಮಿಡಿಯುತ್ತಿತ್ತು.ನೋವಿನ ಒಂದಿಷ್ಟು  ಭಾರವನ್ನು ಸಾಂತ್ವನ ಮೂಲಕ ಕಡಿಮೆಗೊಳಿಸಿದ ಸಂತೃಪ್ತಿ ಅಲ್ಲಿ ನೆರೆದ ಎಲ್ಲರ ಮನದಲ್ಲಿತ್ತು.ಅಲ್ಲಾಹನು ಅವರಿಗೆ ವಿಜಯವನ್ನು ಕರುಣಿಸಲಿ ಆಮೀನ್.

☪ ವರದಿ ಅಲ್ ಅಹ್ಸನ್ ಮಾಸಿಕ☪

No comments:

Post a Comment