ಜಗತ್ತಿನಲ್ಲಿ ಒಳಿತು ಪ್ರಚಾರ ಪಡೆಯದೇ ಕೆಡುಕು ಮತ್ತು ಸುಳ್ಳು ವ್ಯಾಪಕ ಪ್ರಾಚಾರ ಪಡೆಯತ್ತಿರುವುದು ಮಹಾ ದುರಂತ

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಪ್ರತಿಮ ಸಾಧನೆ ಅನುಕರಣೀಯ.
ಭಾಷಣ: ಮೌಲಾನಾ  ಅಝೀಝ್  ದಾರಿಮಿ ಚೊಕ್ಕಬೆಟ್ಟು

ನಮ್ಮ ಸುತ್ತಾ ನೂರಾರು ಜನಪರ ಸೇವಾ ಕಾರ್ಯಗಳು ನಡೆಯತ್ತಾ ಇದೆ. ಸಂಘ ಸಂಸ್ಥೆಗಳು ಬೇರೆಬೇರೆ ಯಾಗಿ ದಿನನಿತ್ಯ ಹತ್ತಾರು ಜನ ಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತವೆ.ಅಷ್ಟಕ್ಕೂ ಈ ಜಗತ್ತಿನಲ್ಲಿ  ಸುಮಾರು ಆರುನೂರ ಐವತ್ತು ಕೋಟಿ ಜನ ದಿನನಿತ್ಯ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುತ್ತಾರೆ. ಅದುವೇ ಒಂದು ಅದ್ಬುತ ಕಾರ್ಯ. ನಮ್ಮ ಸುತ್ತಲೂ ನೋಡಿದರೆ
ಹಲವು ಸಂಘ ಸಂಸ್ಥೆಗಳು ಅಹರ್ನಿಶಿ ದುಡಿಯುತ್ತಲಿದೆ.ಬೇರೆಬೇರೆ ಗುರಿಯನ್ನು ಮುಂದಿಟ್ಟು
ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್,
ಅಲ್ ಹಿದಾಯ ,ಬ್ಯಾರಿ ಫೌಂಡೇಶನ್. ಬ್ಲಡ್ ಹೆಲ್ಫ ಲೈನ್, ನೂರಾರು ಸೋಷಿಯಲ್ ಮೀಡಿಯಾ ಗ್ರೂಪ್ ಗಳ ಅಸಂಖ್ಯಾತ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲಿದೆ. ಅವುಗಳು ಫಲ ಬಯಸದೇ ಕಾರ್ಯಾಚರಿಸುತ್ತಿದೆ.ಬಡ ಹೆಣ್ಮಕ್ಕಳ ಮದುವೆ,ಶಿಕ್ಷಣ ಮೆಡಿಕಲ್ ಹೆಲ್ಪ್ ಮುಂತಾದವು.ಆದರೆ ಅದ್ಯಾವುದೂ ಸಮಾಜದ ಮುಂದೆ ಹೆಚ್ಚು ಪ್ರಚಾರಪಡೆಯುತ್ತಿರುವಂತೆ ಕಾಣಸಿಗುವುದಿಲ್ಲ.ಇದರ ಕಾರಣ ಸಮಾಜದಲ್ಲಿ ಅನಿಷ್ಟ,ಮತ್ತು ಸುಳ್ಳುಗಳನ್ನು ಹೆಚ್ಚಾಗಿ ಪ್ರಚಾರ ಮಾಡಲು ಜನರು ಹೆಚ್ಚು ಉತ್ಸಾಹ ತೋರುವಂತಿದೆ.  ಇದು ಉತ್ತಮ ಬೆಳವಣಿಗೆ ಅಲ್ಲವೇ ಅಲ್ಲ.

ಮುಸ್ಲಿಂ ಸಮಾಜದಲ್ಲಿ ಅತ್ಯದ್ಭುತ ವೂ ವಿಸ್ಮಯವೂ ಆದ ಸೇವೆಯ ಮಾರ್ಗವನ್ನು ತರೆದಿಟ್ಟ ಒಂದು ಸಂಸ್ಥೆ ಸಮಸ್ತ ಎಂಬ ವಿದ್ವಾಂಸ ಸಭೆ.ಇಸ್ಲಾಮಿಕ್ ವಿದ್ಯಾಭ್ಯಾಸ ಶಿಕ್ಷಣವನ್ನು ಅದು ವ್ಯವಸ್ಥೆ ಗೊಳಿಸಿದು ಒಂದು ಪವಾಡವೇ ಆಗಿದೆ.ಶಾಲೆಗಳಿಂದ ಧರ್ಮದ ಶಿಕ್ಷಣವನ್ನು ತಡೆಯಲ್ಪಟ್ಟಾಗ ಅದು ಕಂಡುಕೊಂಡ ಮಾರ್ಗ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಗಿದೆ. ಅದರ ಸಮಯ ಬೆಳಗ್ಗೆ ಮತ್ತು ಸಂಜೆಯ ಸಮಯ.ಇನ್ನೂರ ಮುವತ್ತು ದಿನಗಳಲ್ಲಿ ಆರುನೂರ ತೊಂಬತ್ತು ಕ್ಲಾಸುಗಳಲ್ಲಿ(ಒಂದು ಕ್ಲಾಸು ನಲವತ್ತೈದು ನಿಮಿಷ) ಪ್ರೀ ಪ್ರೈಮರಿ ಯಿಂದ ಪ್ಲಸ್ ಟು ತನಕದ ದಾರ್ಮಿಕ ಶಿಕ್ಷಣ ಸಿಲಬಸ್ ಸಿದ್ದಪಡಿಸಿ ಇದು ಕಾರ್ಯಾಚರಿಸುತ್ತದೆ.1952ರಲ್ಲಿ ಇದರ ಅಂಗೀಕಾರ ಪಡೆದ ಕೇವಲ ಹತ್ತು ಮದರಸವಿದ್ದರೆ ಇದೀಗ (2017 ಜೂನ್ ತನಕ) 9709 ಮದರಸವನ್ನು ಅದು ಹೊಂದಿದೆ.ಹನ್ನೆರಡು ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣದ ದಾರಿಯನ್ನು ಅದು ಪ್ರಸ್ತುತ ಪಡಿಸಿದೆ.ಪ್ರತಿ ಮದ್ರಸಕ್ಕೂ ಪ್ರತಿ ವರ್ಷ ಮದ್ರಸಕ್ಕೆ ಬೇಕಾದ ಎಲ್ಲಾ ರೆಕಾರ್ಡ್ ಪುಸ್ತಕಗಳನ್ನು ಅದು ಉಚಿತವಾಗಿ ನೀಡುತ್ತದೆ.ಹೀಗೆ ಹತ್ತು ಸಾವಿರ ಮದ್ರಸಗಳಿಗೆ ಕೊಡುವಾಗ ಎಷ್ಟು ಖರ್ಚು ಬರಬಹುದೆಂದು ನೀವೇ ಊಹಿಸಿ. ವರ್ಷಕ್ಕೆ ಎರಡು ಸಲ ಶೋಧಕ ರನ್ನು ಕಳುಹಿಸುತ್ತದೆ.ಒಂದು ಲಕ್ಷದಷ್ಟು ಮುಅಲ್ಲಿಮರು ಸರ್ವೀಸ್ ರಿಜಿಸ್ಟರ್ (ಎಮ್ ಎಸ್ ಆರ್) ಪಡೆದವರಿದ್ದಾರೆ.ನೂರ ಐದು ಶೋಧಕರು (ಮುಫತ್ತಿಸ್).ಐದು ಖಾರಿವುಗಳು,ನಾಲ್ಕು,(ಟ್ರೈನರುಗಳು)ಐವತ್ತರಷ್ಟು ಮುದರ್ರಿಬುಗಳು ಸೇವಾ ನಿರತರಾಗಿದ್ದಾರೆ.  ಅದೂ ಅಲ್ಲದೇ ಹತ್ತು ಸಾವಿರ ಮದ್ರಸಗಳ ಪರೀಕ್ಷೆಗಳನ್ನು ಬೋರ್ಡ್ ಕ್ರಮಬದ್ಧವಾಗಿ ಕಂಪ್ಯೂಟರೀಕೃತ ವ್ವವಸ್ಥೆಯೊಂದಿಗೆ ಕಾರ್ಯ  ನಿರ್ವಹಿಸುತ್ತದೆ. ಸುಮಾರು ಇನ್ನೂರಕ್ಕಿಂತಲೂ ಅಧಿಕ ನೌಕರರು ಅಲ್ಲಿ ದುಡಿಯುತ್ತಾರೆ .ಅವರೆಲ್ಲರೂ ಉತ್ತಮ ಸಂಬಳವನ್ನೂ ಪಡೆಯುತ್ತಾರೆ.ಇದೂ ಅಲ್ಲದೇ ಪ್ರತಿಯೊಂದು ಜಿಲ್ಲೆಯ ಒಬ್ಬ ಬಡ ಮುಅಲ್ಲಿಮರಿಗೆ ಐದು ಲಕ್ಷ   ರುಪಾಯಿ ಮೌಲ್ಯದ ಮನೆಯನ್ನು ಕಟ್ಟಿ ಕೊಡುತ್ತಿದೆ.ಮದುವೆಗೆ ಸಹಾಯ,ಅಪಘಾತ,ಮರಣ ಮುಂತಾದ ಸಮಯದಲ್ಲಿ ಸಹಾಯ, ಮನೆ ಸಹಾಯ,ನೀಡುತ್ತಲಿದೆ. ಮುಅಲ್ಲಿಂ ಗಳಗೆ ಉತ್ತೇಜನ ನೀಡುವ ಸಲುವಾಗಿ ಮುಅಲ್ಲಿಂ ಅವಾರ್ಡ್ ಸುವರ್ಣ ಅವಾರ್ಡ್ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ.  ಹೀಗೆ ನೂರಾರು ಕಾರ್ಯಗಳನ್ಮುಅದು ನಿರ್ವಹಿಸುತ್ತದೆ. ಮದರಸ ಎಂಬ ವ್ಯವಸ್ಥೆಯು ಯಾವುದೇ ವಂತಿಗೆ ಇಲ್ಲದೇ ನಡೆಸುತ್ತಿದ್ದರೆ ಅದು ಒಂದು ಅದ್ಭುತ ವಲ್ಲವೇ ?ಅದಕ್ಕೆ ಏನಾದರೂ ವರಮಾನ ವಿದ್ದರೆ ಅದು ಮಕ್ಕಳ ಪಠ್ಯಪುಸ್ತಕ ದಿಂದ ಸಿಗುವ ಒಂದೆರಡು ರುಪಾಯಿ ಗಳು ಮಾತ್ರ. ಇನ್ನು ಮುಅಲ್ಲಿಮರ ಸಂಬಳ ಕೊಡಿತ್ತಿಲ್ಲವಲ್ಲ ಎನ್ನುವುದಾದರೆ ಇಂತಹಾ  ಬ್ರಹತ್ ವ್ಯವಸ್ಥೆ ಗೆ ಅದು ಅಪವಾದವಲ್ಲ. ಯಾವ ಕಲೆಕ್ಷನ್ ಕೂಡಾ ಅದು ಮಾಡುತ್ತಿಲ್ಲ.

ಇದೀಗ ಮುಅಲ್ಲಿಮರ ಕ್ಷೇಮ ಮತ್ತು ದಅವಾ ಕಾರ್ಯ ಉದ್ದೇಶಕ್ಕಾಗಿ ನೂರು ರುಪಾಯಿ ಸಂಭಾವನೆ ಯನ್ನು "ಒರು ಕೈ ತಾಂಙ್" (ಒಂದು ಅಭಯಹಸ್ತ)ಎಂಬ ಯೋಜನೆ ನಡೆಸಲು ಮುಂದಾಗಿದ್ದರೆ, ಉಮ್ಮತ್ತಿನ ಬಡ ನಿರ್ಗತಿಕರಿಗೆ ಹಾಗೂ ಧಾರ್ಮಿಕವಾಗ ತೀರ ಹಿಂದುಳಿದಿರುವ ಪ್ರದೇಶಗಳಲ್ಲಿ ದ ಅವಾ ಕಾರ್ಯ ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ಮಾಣ ಕ್ಕೂ ಬಳಕೆಯಾಗುತ್ತದೆ.ಇಂತಹಾ ಅಭೂತ ಪೂರ್ವ ಕಾರ್ಯ ಹೆಚ್ಚಿನವರಿಗೆ ತಿಳಿದಿರುವುದಿಲ್ಲ.ಸುಮ್ಮನೇ ನಾಲ್ಕು ಮನೆಗೆ ಹೋಗಿ ಬಾ ಎಂದರೆ ಹಿಂಜರಿಯುವ ಕಾಲ! ಹತ್ತು ಸಾವಿರ ಮದ್ರಸಗಳನ್ನು ಸುವ್ಯವಸ್ಥೆ ಯಲ್ಲಿ ಮುನ್ನಡೆಸುವುದು ಸಾಮಾನ್ಯ ವಿಷಯವಲ್ಲ.
ಈ ರೀತಿಯ ಪ್ರಾಮಾಣಿಕ ಶೈಕ್ಷಣಿಕ,ಸಾಮುದಾಯಿಕಕ್ರಾಂತಿಯು ನಮಗೂ ಮಾದರಿಯಾಗಬೇಕಿದೆ.

ಆದರೆ ಅಮಾನವೀಯತೆ,ವಂಚನೆ ಅನಾಚಾರಗಳು,  ದೌರ್ಜನ್ಯ ದಬ್ಬಾಳಿಕೆಗಳು ಮಾತ್ರವೇ ಹೆಚ್ಚು ಪ್ರಾಚಾರ ಪಡೆಯುತ್ತಿರುದು ಆಶ್ಚರ್ಯ. ಅದರ ಕಾರಣ ಇಂದು ಜನರು ಎರಡು ಕಾರ್ಯಗಳಿಗೆ ಹೆಚ್ಚು ಪ್ರಾಚಾರ ಕೊಡುತ್ತಾರೆ ಎನ್ನುವುದಾಗಿದೆ.ಒಂದು ಕೆಟ್ಟ ವಾರ್ತೆ ಗಳಿಗೆ ಮಾನ್ಯತೆ ಕೊಡುವುದು ಮತ್ತು ಸುಳ್ಳನ್ನು ಒಪ್ಪಿಕೊಳ್ಳುವುದು.ಇಂದು ಸುಳ್ಳು ಹೇಳದೇ ಬದುಕಲಾಗದು ಎಂಬಲ್ಲಿಗೆ ಬಂದು ನಿಂತಿದೆ ಪರಿಸ್ಥಿತಿ!
ಧರ್ಮ ನಂಬಿಕೆ,ಆದ್ಯಾತ್ಮ ,ರಾಜಕೀಯ,ಉದ್ಯಮ ವ್ಯಾಪಾರ ವ್ಯವಹಾರ ಎಲ್ಲವೂ ಸುಳ್ಳಿನ ಮೇಲೆಯೇ ಕಟ್ಟಲು ಶ್ರಮಿಸುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿದೆ.ಕೈಯಲ್ಲಿರುವ ಮೊಬೈಲ್ ನಲ್ಲಿ ಸುಳ್ಳನ್ನು ಹೇಳದೇ ಯಾರಿಗೂ ಬಚಾವುಇಲ್ಲ.ರಂಗುರಂಗಿನ ವಾರ್ತೆಗಳು ಬಿತ್ತರಿಸಲು ಮಾದ್ಯಮ ಗಳು ತೀವ್ರ ಪೈಪೋಟಿ ನಡೆಸುತ್ತದೆ.
ಒಟ್ಟಿನಲ್ಲಿ ಒಂದು ಕಥೆ ನೆನಪಾಗುತ್ತದೆ. ಸುಳ್ಳು ಮತ್ಯು ಸತ್ಯ ಸರೋವರದಲ್ಲಿ ಬಟ್ಟೆಗಳನ್ನು ಕಳಚಿ ಮೈಮರೆತು ಈಜುತ್ತಿದ್ದವಂತೆ.ಅಲ್ಲಿಂದ ಬೇಗ ಎದ್ದು ಬಂದ ಸುಳ್ಳು ಸತ್ಯದ ಬಟ್ಟೆಯನ್ನು ಧರಿಸಿ ಹೊರಟಿತು.ಸತ್ಯ ಸ್ನಾನ ಮುಗಿಸಿ ಬಂದು ನೋಡಿದರೆ ತನ್ನ ಬಟ್ಟೆ ಕಾಣಲಿಲ್ಲ ಅಲ್ಲೆ ಇದ್ದ ಸುಳ್ಳಿನ ಬಟ್ಟೆ ಧರಿಸಿ ಕೊಳ್ಳಲು ಸತ್ಯಕ್ಕೆ ಮುಜುಗರವಾಯಿತು.ಈ ಕಾರಣಗಳಿಂದ ಸುಳ್ಳು ಜನ ಮುಂದೆ ಸತ್ಯದ ವೇಷ ಹಾಕಿ ಕುಣಿಯುತ್ತಿದೆಯಂತೆ.ಸತ್ಯ ಮಾನ ಮುಚ್ಚಲು ಕದ್ದು ಮುಚ್ಚಿ ಬದುಕುತ್ತಿದೆಯಂತೆ.ಇದು ಕತೆಯಾದರೂ ನಿಜ ಅದರಲ್ಲಿದೆ.

ಆಧುನಿಕತೆಯಲ್ಲಿ ಎಷ್ಟು ಅಸಹಜವಾದ ಘಟನೆಗಳಿಗೆ ಸಮಾಜ ಸಾಕ್ಷಿಯಾಗುತ್ತದೋ ಅದಕ್ಕಿಂತ ಹೆಚ್ಚಾಗಿ ಉತ್ತಮ ಕಾರ್ಯಗಳಿಗೂ ಈ ಸಮಾಜ ವೇದಿಕೆಯಾಗುತ್ತದೆ.
ಅದರೆ ಅದು ಪ್ರಚಾರ ಪಡೆಯುವುದು ಕಮ್ಮಿ. ಕಾರಣ ಸಮಾಜದ ಹೆಚ್ಚಿನ ಮಂದಿ ಅನಿಷ್ಟ ವಾರ್ತೆಗಳಿಗೆ ಇನ್ನಷ್ಟು ಒಗ್ಗರಣೆ ಸೇರಿಸಿ ಸ್ವಯಂ ಪ್ರೇರಿತ ರಾಗಿ ಪ್ರ‌ಚಾರಕ ರಾಗಿದ್ದಾರೆ ಎನ್ನುವುದಾಗಿದೆ.
ಅದೇ ರೀತಿಯ ಪ್ರಚಾರ ಒಳಿತಿಗೆ ಸಿಗದೇ ಹೋಗುವದು ದುರಾದೃಷ್ಟವಾಗಿದೆ.
ಒಂದು ಉದಾಹರಣೆ
ಒಂದು ಊರಿನಲ್ಲಿ ಪ್ರಾಮಾಣಿಕ ವ್ಯಕ್ತಿ ಬಗ್ಗೆ ಒಂದು ಸುಳ್ಳಾರೋಪ ಹರಡಿದಾಗ ಊರಿನ ಕಟ್ಟ ಕಡೆಯ ಯಾವತ್ತೂ ಮಾತಿಗೆ ಸಿಗದ ವ್ಯಕ್ತಿ ಫೋನ್‌ ಮೂಲಕ ಕರೆ ಮಾಡಿ ಪರಮ ಹಿತೈಶಿಯಂತೆ ಮಾತಾಡಿಸುತ್ತಾನೆ.ಆತನ ಉದ್ದೇಶ ಸುಖ ದುಃಖ ವಿಚಾರಣೆಯಲ್ಲ ಬದಲಿಗೆ ಆರೋಪವನ್ನು ವ್ಯಕ್ತಿಯಿಂದಲೇ ಹೇಳಿಸಿ ನೋಯಿಸಿ ಆನಂದ ಪಡುವುದಾಗಿದೆ. ಒಂದು ವೇಳೆ ಅದೇ ವ್ಯಕ್ತಿಗೆ ಅತ್ಯುನ್ನತ ಸ್ಥಾನ ಸಿಕ್ಕಾರೆ ಅದು ಯಾರಿಗೂ ತಿಳಿದಿರುವುದಿಲ್ಲ ಬದಲಿಗೆ ಅಪ್ಪಿತಪ್ಪಿ ಮಾತಾಡಲು ಸಿಕ್ಕಾಗ ಈ ವಿಚಾರ ಎತ್ತಿದರೆ ಹೌದಾ ನನಗೆ ಗೊತ್ತೇ ಇಲ್ಲ ಅಂತ ಎದುರುಸಿರು ಬಿಡುತ್ತಾನೆ.ಇದು ಒಳಿತಿಗೂ ಕೆಡುಕಿಗೂ ಇರುವ ವ್ಯತ್ಯಾಸ.
قال تعالى: ﴿ إِنَّ اللَّهَ لَا يَهْدِي مَنْ هُوَ مُسْرِفٌ كَذَّابٌ ﴾ [غافر: 28].

ಅತಿಕ್ರಮಿ ಮತ್ತು ಸುಳ್ಳನಿಗೆ ಅಲ್ಲಾಹನು ಸನ್ಮಾರ್ಗ ನೀಡಲಾರ ಎಂದು ಅಲ್ಲಾಹನು ಹೇಳುತ್ತಾನೆ.
ಪ್ರವಾದಿ ಹೇಳುತ್ತಾರೆ,
برُّ الوالدين يزيد في العمر، والكذب ينقص الرزق، والدعاء يرد القضاء)).
ಮಾತಾಪಿತರ ಸೇವೆ ಆಯುಷ್ಯವನ್ನು ಹೆಚ್ಚಾಗಿಸುತ್ತದೆ.ಸುಳ್ಳು ಆಹಾರ ವನ್ನು ಕುಂಟಿತಗೊಳಿಸುತ್ತದೆ.ಪ್ರಾರ್ಥನೆ ವಿಧಿಯನ್ನು ತೆರಯುತ್ತದೆ

قيل في منثور الحكم: الكذب لص لأن اللص يسرق مالك والكذب يسرق عقلك
ಸುಳ್ಳು ಕಳ್ಳನಾಗಿರುತ್ತಾನೆ.ಕಳ್ಳನು ಸೊತ್ತನ್ನು ಕದ್ದರೆ ಸುಳ್ಳು ಬುದ್ದಿಯನ್ನು ಕದಿಯುತ್ತದೆ.ಎಂದು ಮಂಸೂರುಲ್ ಹಿಕಮಿನಲ್ಲಿ ಉಲ್ಲೇಖಿಸಲಾಗಿದೆ.

ವರದಿ ಅಲ್ ಅಹ್ಸನ್ ಮಾಸಿಕ

No comments:

Post a Comment