ಮನ ತಣಿಸಿದ ಮಾನವ ಸರಪಳಿ

ದೇಶದ ಗಣರಾಜ್ಯೋತ್ಸವದ ಅಂಗವಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧಿಕೃತ ವಿದ್ಯಾ ಸಂಘಟನೆಯಾದ ಎಸ್ಕೆಎಸ್ಸೆಸ್ಸೆಫ್ ’ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ’ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ಒಂಬತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮಾನವ ಸರಪಳಿ ಕಾರ್ಯಕ್ರಮವು ಈ ಬಾರಿಯು  ದ.ಕ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ವತಿಯಿಂದ  ಮಿತ್ತಬೈಲಿನಲ್ಲಿ ಬಹಳ ಅದ್ದೂರಿಯಿಂದ ನಡೆಯಿತು.
ಕರ್ನಾಟಕದ ಅಗ್ರಗಣ್ಯ ಉಲಮಾಗಳು, ಜನಪ್ರತಿನಿಧಿಗಳು ಸಮಾಜಿಕ ನೇತಾರರು, ವಿದ್ತಯಾರ್ಥಿಗಳು ಸೇರಿದಂತೆ ಸಾವಿರಾರು ಜನರ ಸಮಕ್ಷಮದಲ್ಲಿ ನಡೆದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮವು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಅರಣ್ಯ ಸಚಿವರೂ ಆಗಿರುವ
ಶ್ರೀ.ಬಿ ರಮಾನಾಥ ರೈ ಮಾತನಾಡಿ, ’ಮಾನವ ಸರಪಳಿಯು ಇಡೀ ದೇಶಕ್ಕೆ ಮಾದರಿ ಕಾರ್ಯಕ್ರಮವಾಗಿದ್ದು, ದಾರಿತಪ್ಪುತ್ತಿರುವ ಯುವ ಜನತೆಯಲ್ಲಿ ದೇಶಪ್ರೇಮ ತುಂಬುವಲ್ಲಿ ಯಶಸ್ವಿಯಾಗಿದೆ. ಅಲ್ಪಸಂಖ್ಯಾತರ ಕೋಮುವಾದವು ಅವರ ಸಮುದಾಯಕ್ಕೆ ಕೇಡಾದರೆ ಬಹುಸಂಖ್ಯಾತರ ಕೋಮುವಾದ ಇಡೀ ದೇಶಕ್ಕೆ ಅಪಾಯವಾಗಿದೆ ಎಂದು ಅಭಿಪ್ರಯಾಪಟ್ಟರು..

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಮ್ಮಿಯತುಲ್ ಉಲಮಾದ ಪ್ರ. ಕಾರ್ಯದರ್ಶಿ ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣ ಮಾತನಾಡಿ ದೇಶದ ಪ್ರಜಾಪ್ರಭುತ್ವದ ರಕ್ಷಣೆಗೆ ಅಲ್ಪಸಂಖ್ಯಾತರು ಮುಂದೆ ನಿಲ್ಲಬೇಕೆಂದು ಕರೆ ನೀಡಿದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಪ್ರಾರ್ಥನೆಯನ್ನು ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಇಸ್ಹಾಖ್ ಫೈಝಿಯವರು ದೇಶ ಸೇವೆಯ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿದ ಕೆಐಸಿ ಸಂಸ್ಥೆಯ ಪ್ರಾಧ್ಯಾಪಕರೂ ಖ್ಯಾತ ವಾಗ್ಮಿಯೂ ಆದ ಅನೀಸ್ ಕೌಸರಿ ಮಾತನಾಡಿ ಕೋಮು ಸೌಹಾರ್ದತೆಯ ಅನಿವಾರ್ಯತೆಯನ್ನು ಎತ್ತಿ ಹಿಡಿದರಲ್ಲದೆ, ಇತ್ತೀಚಿನ ದಿನಗಳಲ್ಲಿ  ದೇಶದಲ್ಲಿ ನಡಯುತ್ತಿರುವ ಬೆಳವಣಿಗೆಗಳತ್ತ ಬೆಳಕು ಚೆಲ್ಲಿದರು. ಅಲ್ಲದೆ ಕಾರ್ಯಕ್ರಮದಲ್ಲಿ ಹೈದರ್ ದಾರಿಮಿ ಕಲ್ಲಡ್ಕ, ಖಾಸಿಂ ದಾರಿಮಿ ಭಾಷಣ ನಡೆಸಿದರು. ಹಾಜಿ ಮುಹಮ್ಮದ್ ಮಸೂದ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆ.ಐ.ಸಿ ವಿಧ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.
ವೇದಿಕೆಯಲ್ಲಿ ಅಲಿ ತಂಙಳ್ ಕರಾವಳಿ, ಅಮೀರ್ ತಂಙಳ್ ಕಿನ್ಯ, ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಸೆಯ್ಯದ್ ಅಹ್ಮದ್ ಬಾಷಾ ತಂಙಳ್, ಉಸ್ಮಾನ್ ಫೈಝಿ ತೋಡಾರು, ಸ್ವದಖತುಲ್ಲಾಹ್ ಫೈಝಿ, ಉಸ್ಮಾನ್ ದಾರಿಮಿ ಫರಂಗಿಪೇಟೆ, ಖಲೀಲ್ ದಾರಿಮಿ ಮಿತ್ತಬೈಲ್, ಹಮೀದ್ ದಾರಿಮಿ, ಇರ್ಶಾದ್ ದಾರಿಮಿ ಮಿತ್ತಬೈಲು, ಮುಸ್ತಫಾ ಹಾಜಿ ಕೆಂಪಿ, ಟಿ.ಎಂ ಶಹೀದ್, ಹಾಜಿ ಬಿ. ಮೊಯಿದಿನಬ್ಬ, ಶಾಹುಲ್ ಹಮೀದ್ ಹಾಜಿ ಮೆಟ್ರೋ, ಹನೀಫಾ ಹಾಜಿ ಬಂದರು, ಪೋಪಿ ಅಬೂಬಕ್ಕರ್ ಸುಳ್ಯ, ಮುಹಮ್ಮದಲಿ ಬಂಟ್ವಾಳ, ಡಿ.ಎಸ್.ಬಿ ಅಬ್ದುಲ್ ಖಾದರ್ ಬಂಟ್ವಾಳ, ಇಬ್ರಾಹೀಂ ಕೋಡಿಜಾಲ್, ಸುಲೈಮಾನ್ ಮಾಸ್ಟರ್ ಬಿ.ಡಿ, ಜಿ.ಮುಹಮ್ಮದ್, ಮುಹಮ್ಮದ್ ಶರೀಫ್, ಮುಹಮ್ಮದ್ ನಂದಾರಬೆಟ್ಟು, ಸದಾಶಿವ, ಮುಹಮ್ಮದ್ ಅಜ್ಜೇಡಿ, ಇಸ್ಮಾಯಿಲ್ ಅರಬಿ, ಇಸ್ಮಾಯಿ ಯಮಾನಿ, ಹನೀಫ್ ಮುಸ್ಲಿಯಾರ್ ತಾಳಿಪಡ್ಪು, ಅಲ್ತಾಫ್ ಮಿತ್ತಬೈಲ್, ಹಾರೂನ್ ಬಂಟ್ವಾಳ್ ಉಪಸ್ಥಿತರಿದ್ದರು. ಮಾನವ ಸರಪಳಿ ಸ್ವಾಗತ ಸಮಿತಿ ಚೇರ್‌ಮಾನ್ ಸಿದ್ದೀಖ್ ಅಬ್ದುಲ್ಲ ಬಂಟ್ವಾಳ್ ಸ್ವಾಗತಿಸಿ ಜಲೀಲ್ ಬದ್ರಿಯಾ ವಂದಿಸಿದರು. ಇರ್ಫಾನ್ ಮೌಲವಿ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಮೆರವಣಿಗೆ: ಸಭಾ ಕಾರ್ಯಕ್ರಮದ ಮುಂಚೆ ಗೂಡಿನಬಳಿಯಿಂದ ಬಿಸಿ ರೋಡಿನ ಹೃದಯ ಭಾಗಗಳಲ್ಲಾಗಿ ಶಾಂತಿಯಂಗಡಿ ವರೆಗೆ ನಡೆದ ಶಿಸ್ತುಬದ್ಧ ಜಾಥಾವು ಜನಾಕರ್ಷಣೆಯನ್ನು ಪಡೆಯಿತು. ಸಮವಸ್ತ್ರ ದಾರಿಗಳಾದ ವಿಖಾಯ, ತ್ವಲಬಾ, ಕ್ಯಾಂಪಸ್, ಪಾಣಕ್ಕಾಡ್ ಪಟ್ಟಾಳಂ, ದಫ್, ಸ್ಕೌಟ್ ವಿಭಾಗಗಳು ಮೆರವಣಿಗೆಗೆ ಮೆರುಗು ನೀಡಿತ್ತು.
ಪ್ರಜಾಪ್ರಭುತ್ವ ದ ಮೌಲ್ಯವನ್ನು ಎತ್ತಿ ಹಿಡಿಯುವ ಮಾನವ ಸರಪಳಿ:
ಜನವರಿ ೨೬.  ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ಸುದಿನವದು. ಜನರಿಗಾಗಿ, ಜನ ರಿಂದ ಆರಿಸಲ್ಪಟ್ಟ ಜನರ ಆಡಳಿತ ಅಂಥಾರಲ್ಲ. ಅಂಥ ಪ್ರಜಾಪ್ರಭುತ್ವವನ್ನು ಹೊಂದಿದ ನಮ್ಮ ರಾಷ್ಟ್ರ ವಿಶ್ವದಲ್ಲೇ ಗ್ರೇಟು.
ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ತನ್ನ ಹಾಗೂ ದೇಶದ ಪ್ರಗತಿಗಾಗಿ ಬೇಕಾದ ಆಡಳಿತ ಅಧಿಕಾರ ಪ್ರಜೆಗಳಿಗೆ ಇರುತ್ತದೆ ಎಂದರ್ಥ. ಅಂಥದ್ದೊಂದು ಪ್ರಜಾಪ್ರಭುತ್ವದ ಸುಂದರ ನೆನಪನ್ನು ಪ್ರತಿ ಜನವರಿ ೨೬ ಹಾದು ಹೋಗುವಾಗ ನಾವು ನೆನಪಿಸುತ್ತೇವೆ. ಜಾತ್ಯಾತೀತ ತತ್ವದ ಮೇಲೆ ನಿಂತ ಈ ದೇಶದ ಶ್ರೇಷ್ಠ ಪ್ರಜಾಪ್ರ ಭುತ್ವದ ಸಂವಿಧಾನ ಜಾರಿಗೆ ಬಂದ ಆ ದಿನದಲ್ಲಿ ನಾವು ಮನ ತುಂಬಾ ಸಂತಸ ಸಂಭ್ರಮ ಪಡುತ್ತೇವೆ.
ಆದರೆ  ಸ್ವಾತಂತ್ರ್ಯ ಪಡೆದ ನಂತರ ಅಧಿಕಾರ ಕೈ ಬಂದ ಎಲ್ಲಾ ರಾಜಕೀಯ ಪಕ್ಷಗಳು ನಮ್ಮ ದೇಶವನ್ನು ಇಂದು ತಂದು ನಿಲ್ಲಿಸಿದ ರೀತಿಯನ್ನು ಹಾಗೂ ಪ್ರಜಾಪ್ರಭುತ್ವ ಹಾಗೂ ದೇಶದ ಜಾತ್ಯಾತೀತ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರಗಳನ್ನು ಯೋಚಿಸುವಾಗ ಮರುಕವಾಗುತ್ತಿದೆ. ಈ ರಾಜಕಾರಣಿಗಳ ಬಗ್ಗೆ ಹೇಸಿಗೆ ಹುಟ್ಟುತ್ತದೆ. ಈ ಶ್ರೇಷ್ಠ ನಾಡಿನ ಭವಿಷ್ಯದ ಬಗ್ಗೆ ದೇಶ ಪ್ರೇಮಿಗಳ ಮನದಲ್ಲಿ ಆತಂಕ ಉಂಟಾಗುತ್ತದೆ.
ಇದು ಸುಳ್ಳೇ?... ನೋಡಿ, ನಮ್ಮ ಅಮೂಲ್ಯ ಮತಗಳನ್ನು ಪಡೆದು ಗದ್ದುಗೆ ಏರಿದ ಮಂದಿ ಕೆಲವೇ ತಿಂಗಳುಗಳ ಅಂತರ ದಲ್ಲಿ ದೇಶದ ಸಂಪತ್ತನ್ನು ತಿಂದು ತೇಗಿ ಲೂಟಿ ಮಾಡಿ ಕೋಟಿಪತಿಗಳಾಗಿ ಮೆರೆಯುತ್ತಾರೆ. ಹೊಟ್ಟೆಗೆ ಅನ್ನವಿಲ್ಲದೆ ಪ್ರಜೆ ಮಾತ್ರ ಹಸಿವಿನಿಂದ ಕಂಗೆಡುತ್ತಾನೆ.
ಸರಿಯಾದ ಮೂಲಭೂತ ಸೌಕರ‍್ಯ ಸಿಗದೆ ನರಳುತ್ತಿವೆ. ಇದು ಒಂದು ಕಡೆಯಾದರೆ ಮತ್ತೊಂದೆಡೆ ಮತದಾರರಿಗೆ ಹಣ, ಹೆಂಡ ಹಂಚಿ ಅಮೂಲ್ಯ ಮತಗಳನ್ನೇ ಅಪಹರಿಸುವ ರಾಜಕಾರಣಿಗಳು ಬೇರೆ. ಅಷ್ಟೇ ಅಲ್ಲ ನಿಯತ್ತಿನಿಂದ ಪಕ್ಷ ವ್ಯಕ್ತಿ ಎಂದೆಲ್ಲ ಅಭಿಮಾನದಿಂದ ಅಮೂಲ್ಯ ಮತ ಕೊಟ್ಟು ಪ್ರಜೆಗಳು ಚುನಾಯಿಸಿದ ಪ್ರತಿನಿಧಿ ತನ್ನ ಪಕ್ಷ ಅಧಿಕಾರಕ್ಕೆ ಬಾರದಿದ್ದರೆ ಅಧಿಕಾರದ ಆಸೆಗಾಗಿ ಆಪರೇಶನ್ ಹೆಸರಿನಲ್ಲಿ ಮಾರಿಕೊಳ್ಳುತ್ತಾನೆ. ಇನ್ನು ಇವೆಲ್ಲದರ ಜೊತೆಗೆ ಕೋಮು ದ್ವೇಷ ಕೆರಳಿಸಿ ದೇಶದ ಪ್ರಜೆಗಳನ್ನು ಧರ್ಮದ ಹೆಸರಿನಲ್ಲಿ ವಿಂಗಡಿಸಿ ಹೊಡೆದಾಡಿಸಿ ಗಲಭೆ ಹುಟ್ಟುಹಾಕಿ ರಾಜಕೀಯ ದುರ್ಲಾಭ ಕೊಯ್ಯಲು ಹೊಂಚು ಹಾಕುವ ಕೋಮುವಾದಿ ರಾಜಕಾರಣಿಗಳು ಬೇರೆ.
ಹೀಗೆ ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಶ್ರೇಷ್ಠ ಸಂವಿಧಾನಕ್ಕೆ ನಿರಂತರ ಅಪಚಾರ ಎಸಗುವ ಇಂದಿನ ದಿನಗಳಲ್ಲಿ ಈ ನಾಡನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುವ ಜನರಿಗೆ ಆತಂಕ. ಉದ್ವೇಗದ ದಿನಗಳೇ ಆಗಿವೆ.
ಈ ಎಲ್ಲದರ ಮಧ್ಯೆ ನಾವು ಈ ಬಾರಿ ೬೭ನೇ ಪ್ರಜಾಪ್ರಭುತ್ವ ದಿನವನ್ನು ಆಚರಿಸಿ ದ್ದೇವೆ. ದೇಶದ ಪವಿತ್ರ ಸಂವಿಧಾನದ ಪಾವಿತ್ರ್ಯ ಕಾಪಾಡಲು ಕೋಮುವಾದ ಉಗ್ರವಾದಗಳನ್ನು ಮೆಟ್ಟಿನಿಂತು. ಜಾತಿ, ಧರ್ಮದ ಹಂಗಿಲ್ಲದೆ ದೇಶದ ಪ್ರಜೆಗಳೆಲ್ಲರೂ ಒಂದಾಗಿ ಬಾಳಿ ಬಲಿಷ್ಠ ಸ್ಪಷ್ಟ ರಾಷ್ಟ್ರ ಕಟ್ಟುವ ಪಣ ತೊಟ್ಟಿದ್ದೇವೆ. ಆ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯೋಣ.

No comments:

Post a Comment