ಆಧುನಿಕ ಮೀಡಿಯಾ ದುರ್ಬಳಕೆಯಾಗದಿರಲಿ


ಇಂದಿನ ದುನಿಯಾದಲ್ಲಿ ಎಂಥ ಮನಸ್ಥತಿಯ ಜನರಿದ್ದಾರೆ ನೋಡಿ, ಆಧುನಿಕ ತಾಂತ್ರಿಕ ಸೌಲಭ್ಯಗಳು ಹೆಚ್ಚಾದಂತೆ ಪ್ರಬುದ್ಧರಾಗಬೇಕಾದ ಮನುಜ ಮಾತ್ರ ತನ್ನ ಮನುಷ್ಯತ್ವವನ್ನೇ ಕಳಕೊಳ್ಳುವ ಮಟ್ಟಿಗೆ ಇಳಿದು ಬಿಟ್ಟಿದ್ದಾನೆ ಎಂದರೆ ಅದೆಂಥ ವ್ಯಂಗ್ಯ ಹೇಳಿ?
   ಆಧುನಿಕ ಜಗತ್ತಿನಲ್ಲಿ ಮನುಷ್ಯನ ಬದುಕಿನ ಭಾಗವಾಗಿ ಬಿಟ್ಟಿರುವ ಅಂತರ್ಜಾಲ ಸೌಲಭ್ಯ ಇದೆಯಲ್ಲ, ಅದನ್ನೇ ಮನುಷ್ಯ ತನ್ನ ಕೀಲು ಮಟ್ಟದ ತೆವಲು ತೀರಿಸವ ಕಿರಿಕ್ಕು ತಾಣವಾಗಿ ಉಪಯೋಗಿಸಿ ಆ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮಟ್ಟಕ್ಕೆ ಇಳಿದು ಬಿಟ್ಟಿದ್ದಾನೆ.
ನಮ್ಮೆಡೆಯಲ್ಲಿ ಕೆಲವು ಜೀವಿಗಳಿವೆ. ಅವರ ಕೆಲಸವೇನೆಂದರೆ ಯಾರಿಗಾದರು ಕರೆ ಮಾಡುವುದು ಮತ್ತು ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಂಚುವುದು.  ಇದು ವಂಚನೆಯಲ್ಲವೇ? ಲಜ್ಜೆಗೆಟ್ಟ ಕೆಲಸ ಮಾಡಿ ಹೀರೋ ಆಗಲು ಹೊರಟ  ಪರಾಕ್ರಮಿಗಳೇ (ಡಿಂಗ) ನೀವು ಮಾಡುತ್ತಿರುವುದು ಹಸಿ ಮುನಾಫಿಕ್‌ಗಳ ಕೆಲಸವಾಗಿದೆ.

ವಿಷಯ ಏನೆಂದರೆ ,
ನೀವು ಯಾವುದಾದರೊಂದು ಸಂಘಟನೆಯಲ್ಲಿ ಗುರುತಿಸಿಕೊಂಡ ಪ್ರಭಾವಿ ಎಂದಿಟ್ಟುಕ್ಕೊಳ್ಳಿ. ನಿಮಗೆ ಅಪರಿಚಿತ ಕರೆ ಬರುತ್ತದೆ. ಕರೆ ಮಾಡಿದವನು ತುಂಬಾ ಅಕ್ಕರೆಯಿಂದ ನಿಮ್ಮ ಅಭಿಮಾನಿಯೇನೋ ಎಂದು ಭಾವಿಸುವಷ್ಟು ನಯವಾಗಿ ಮಾತು ಪ್ರಾರಂಭಿಸುತ್ತಾನೆ.ನಂತರ ಅವನ ಪ್ರಶ್ನೆಗಳು ಶುರುವಾಗುತ್ತದೆ. ಯಾರಾದರೂ ಅವನಿಗೆ ಅವನದ್ದೇ ಆದ ಅಭಿಮಾನ ಇದ್ದೇ ಇರುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆ ನೀವು ಅವನ ಪ್ರಶ್ನೆಗಳಿಗೆ ನಿಮಗೆ ಸಾಧ್ಯವಾದಷ್ಟು ಉತ್ತರಿಸುತ್ತೀರಿ. ನಿಮಗೆ ನೀವು ಮಾತನಾಡುತ್ತಿರುವುದು ರೆಕಾರ್ಡ್ ಆಗುತ್ತಿದೆ ಎಂಬ ಮಾಹಿತಯೂ ಇರುವುದಿಲ್ಲ. ಕೆಲವೇ ಕ್ಷಣದಲ್ಲಿ ನೀವು ಮಾತಾಡಿದ್ದೆಲ್ಲವೂ ವಾಟ್ಸಾಪಲ್ಲಿ ಹರಿದಾಡುತ್ತೆ. ನಿಮಗೆ ಹೇಗಿರಬಹುದು? ಇದು ಅಕ್ರಮವಲ್ಲವೇ?
ಹಾಗೆ ಕರೆ ಮಾಡುವವರ ವಾದ ವಿಚಿತ್ರವಾಗಿದೆ. ಅವರು ಸತ್ಯವನ್ನು ಹೊರತರುವುದಂತೆ!  ಈ ರೀತಿಯಲ್ಲಿ ಸತ್ಯವನ್ನು ಭೇಧಿಸಲು ನಿನಗೆ ಯಾವ ಧರ್ಮ ಅನುಮತಿ ಕೊಟ್ಟದ್ದು?  ಪವಿತ್ರ ಇಸ್ಲಾಮಿನಲ್ಲಿ ಗುರಿ ಎಷ್ಟು ಉತ್ತಮವೋ ಅದೇ ರೀತಿ ಅದನ್ನು ಸಾಧಿಸಲು ಆಯ್ಕೆ ಮಾಡುವ ರೀತಿಯೂ ಉತ್ತಮವಾಗಿರಬೇಕೆಂದು ತಿಳಿಸಿಲ್ಲವೇ? ಹೇಗಾದರೂ ಸಾಧಿಸುವುದು ಮುನಾಫಿಕ್‌ಗಳಾದ ಯಹೂದಿಗಳ ಕೆಲಸವಲ್ಲವೇ? ಹಾಗೆ ನೀವು ಈ ರೀತಿ ಕರೆ ಮಾಡಿ ಯಾವ ಘನಂದಾರಿ ಕೆಲಸ ನಡೆದಿದೆ?...ಇನ್ನೇನು ನಡೆಯಲಿಕ್ಕಿದೆ.
ಹಾಗೆ ಕರೆ ಮಾಡುವವರು ಮಾತಿನ ಪ್ರಾರಂಭದಲ್ಲೇ ನಾನು ನಿಮ್ಮ ಮಾತನ್ನು ರೆಕಾರ್ಡ್ ಮಾಡುತ್ತಿದ್ದೇನೆ. ನಂತರ ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚುತ್ತೇನೆ ಎಂದು ಹೇಳಿ ಪ್ರಾರಂಭಿಸಿದರೆ ಸರಿ ಎನ್ನಬಹುದೇನೋ?
ಕೇಳುವವನ ಉದ್ದೇಶ ಇವರನ್ನು ಹೇಗಾದರೂ ಸಿಲುಕಿಸಬೇಕು ಎಂಬುದಾಗಿರುತ್ತದೆಯೇ ಹೊರತು ಒಳಿತಿರುವುದಿಲ್ಲ. ಕೇಳುವವನಿಗೆ ನನ್ನ ಶಬ್ದ ರೆಕಾರ್ಡ್ ಆಗುತ್ತಿದೆ ಎಂಬ ಅರಿವಿರುವುದರಿಂದ ಅವನ ಮಾತು ತಪ್ಪುವುದೂ ಇಲ್ಲ. ಆದರೆ ಈಚೆ ಕಡೆಯವ ಕೆಲವೊಮ್ಮೆ ಸಹನೆ ಕಳೆದುಕೊಳ್ಳುವುದು ಸಹಜ. ಓರ್ವ ಮುಸ್ಲಿಂ ಸಹೋದರನಿಂದ ತಪ್ಪು ಸಂಭವಿಸಬೇಕೆಂದು ಆಗ್ರಹಿಸುವವರಿಗೆ ಕಠಿಣ ಶಿಕ್ಷೆ ಇದೆಯೆಂದು ವಿ.ಖುರ್ ಆನ್ ಎಚ್ಚರಿಸಿದೆ.
ಇನ್ನು ಯಾರಾದರೂ ಕರೆ ಕಟ್ ಮಾಡಿದರೆ (ಚೋದ್ಯತ್ತಿಲ್ ನಿನ್ನ್ ಒಳಿಚ್ಚೋಡಿ) ಪಲಾಯನ ಅಂತ ಕ್ಲಿಪ್ ಹೊರಬರುತ್ತದೆ.
ಮರ್ಹೂಂ ಶೈಖುನಾ ಕಾಳಂಬಾಡಿ ಉಸ್ತಾದರಿಗೂ , ಶೈಖುನಾ ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದರಿಗೂ ಇದೇ ರೀತಿ ಕರೆ ಮಾಡಿ ನಂತರ ಶಬ್ದ ತುಣುಕು ಹರಿಯಬಿಟ್ಟದ್ದಿದೆ.
ಇಂಥಹ ವಂಚನೆಯ ಮೂಲಕ ಸಂಘಟನೆ ಮಾಡಬೇಕೆಂದು ಯಾರು ಹೇಳಿದ್ದು? ನಿಮಗೆ ಹೀರೂ ಆಗಬೇಕಿಂದಿದ್ದರೆ ಬೇರೆ ಯಾವುದಾದರೂ ಆಯ್ಕೆ ಮಾಡಿಕೊಳ್ಳಿ. ಅಲ್ಲಾಹನ ದೀನಿನೊಂದಿಗೆ ಆಟವಾಡಬೇಡಿ.
ಸಹೋದರನಾದ ಮುಸ್ಲಿಮನ ಕುರಿತು ಒಳ್ಳೆಯ ಭಾವನೆ ಇಟ್ಟುಕ್ಕೊಳ್ಳುವುದು ಉತ್ತಮ ಆರಾಧನೆಯಾಗಿದೆ ಎಂದೂ ಓರ್ವನಿಗೆ ಕೆಡುಕಾಗಿ ಆತ ತನ್ನ ಸಹೋದರನಾದ ಮುಸ್ಲಿಮನನ್ನು ಅವಮಾನ ಮಾಡುವುದು ಸಾಕೆಂದೂ, ಒಬ್ಬ ಮುಸ್ಲಿಮನ ಮಾನ ಇನ್ನೋರ್ವನಿಗೆ ನಿಷಿದ್ದವೆಂದೂ ಪ್ರವಾದಿ ಕಲಿಸಿರುವಾಗ ಇದೆಲ್ಲವೂ ಯಾವ ಸಾಲಿಗೆ ಸೇರುತ್ತದೆ ಎಂದು ನೀವೇ ತೀರ್ಮಾನಿಸಿ.
ಇತ್ತೀಚೆಗೆ ಈ ರೋಗ ಎಲ್ಲಾ ಸಂಘಟನೆಗಳ ವಾಟ್ಸಾಪ್ ವೀರರಿಗೂ ಹರಡಿದ್ದು ಖೇದಕರ. ಯಾರಾದರೂ ಸರಿ ಇದನ್ನು ಪ್ರಜ್ಞಾವಂತರೆಲ್ಲರೂ ವಿರೋಧಿಸಬೇಕು.


 - ಅನೀಸ್ ಕೌಸರಿ, ಫ್ರೋ. ಕೆಐಸಿ ಕುಂಬ್ರ 

No comments:

Post a Comment