ಚೆರುಶ್ಶೇರಿ ಉಸ್ತಾದರ ವಿದಾಯ ಭಾಷಣದ ಮುಖ್ಯಾಂಶಗಳು

ಮಂಗಳೂರಿನಲ್ಲಿ  ನಡೆದ ಸಮಸ್ತ-೯೦ ಉದ್ಘಾಟನಾ ಸಮಾರಂಭದಲ್ಲಿ ತನ್ನ ವಿದಾಯ ಭಾಷಣ ಮಾಡಿದ ಶೈಖುನಾ ಚೆರುಶ್ಶೇರಿ ಉಸ್ತಾದ್


  •  (ಪ್ರವಾದಿ ಸ.ಅ.ರವರ ಹಜ್ಜತುಲ್ ವಿದಾಹ್ ಭಾಷಣವನ್ನು ಉಲ್ಲೇಖಿಸುತ್ತಾ...) ನನಗೂ ಹೇಳಲಿಕ್ಕಿರುವುದು, ಎಲ್ಲರೂ ಅಲ್ಲಾಹನ ಭಯಭಕ್ತಿ(ತಖ್ವಾ)ಯಿಂದ ಬದುಕಬೇಕು.
  •  ಪ್ರವಾದಿ ಸ.ಅ.ರವರ ಸುನ್ನತನ್ನು ಸುರಕ್ಷಿತವಾಗಿ ಕಾಪಾಡುವುದಕ್ಕಾಗಿಯೇ ವರಕ್ಕಲ್ ಮುಲ್ಲಕೋಯ ತಂಙಳರಿಂದ ಹಿಡಿದು ಕಳೆದು ಹೋದ ಸಮಸ್ತದ ಎಲ್ಲಾ ಮಹಾನುಭಾವರು ಶ್ರಮಪಟ್ಟಿರುವುದು... ಅವರು ತೋರಿಸಿಕೊಟ್ಟ ಹಾದಿಯಲ್ಲೇ ಸಾಗಿ ನಾವೂ ಕೂಡ ಸುನ್ನತ್ ಜಮಾಅತ್ತನ್ನು ಇನ್ನಷ್ಟು ಭದ್ರಪಡಿಸಲು ಪರಿಶ್ರಮಿಸಬೇಕಿದೆ.
  •  ಒಂದು ವೇಲೆ ನಮ್ಮ ಪೂರ್ವಿಕರು ಸಮಸ್ತವೆಂಬ ಆಧ್ಯಾತ್ಮಿಕ ಸಂಘಟನೆಯನ್ನು ಸ್ಥಾಪಿಸದೇ ಹೋಗಿದ್ದರೆ ಇಂದು ನಾವು ಒಳಿತು ಯಾವುದು? ಕೆಡುಕು ಯಾವುದು? ಎಂದು ತಿಳಿಯದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.
  •  ಸುನ್ನತ್ ಜಮಾಅತ್ ಮತ್ತು ಸತ್ಕರ್ಮಗಳು ಸಂರಕ್ಷಿಸುವುದೇ ಸಮಸ್ತದ ಉದ್ದೇಶ.
  •  ಸಮಸ್ತದ ಬೆಳವಣಿಗೆಯಲ್ಲಿ ನೀವು ಈಗ ತೋರಿಸುತ್ತಿರುವ ಉತ್ಸಾಹವನ್ನು ಮುಂದಿನ ದಿನಗಳಲ್ಲಿ ಕೂಡ ಇನ್ನಷ್ಟು ಹಿಮ್ಮಡಿಗೊಳಿಸಬೇಕು.
  •  ಅಂತ್ಯದಿನದಲ್ಲಿ ಸುನ್ನತ್ ಜಮಾಅತ್ತನ್ನು ಅಂಗೀಕರಿಸುವವರ ಸಂಖ್ಯೆಯು ಕಡಿಮೆಯಾಗಬಹುದೆಂದು ಪ್ರವಾದಿಯವರು ಹೇಳದ್ದಾರೆ. ಆದ್ದರಿಂದ ನಾವು ಸಾಧ್ಯವಾದಷ್ಟು ಅದರ ಪ್ರಚಾರದಲ್ಲಿ ಮುನ್ನುಗ್ಗಬೇಕಿದೆ.
  •  ಕೆಲವು ನೂತನವಾದಿಗಳು ಮಹಿಳೆಯರ ಮಸೀದಿ ಪ್ರವೇಶ, ತವಸ್ಸುಲ್ ಸೇರಿದಂತೆ ಕೆಲವೊಂದು ಕ್ಷುಲ್ಲಕ ವಿಷಯಗಳನ್ನೆತ್ತಿಕೊಂಡು ಮುಸ್ಲಿಂ ಸಮಾಜದಲ್ಲಿ ಭಿನ್ನತೆ ಸೃಷ್ಟಿಸಲು ಮುಂದಾಗಿದ್ದಾರೆ. ಅಂತಹ ವ್ಯಕ್ತಿಗಳಿಂದ ಪ್ರವಾದಿಯವರ ಆದರ್ಶವನ್ನು ನೈಜ ರೂಪದಲ್ಲಿ ಕಾಪಾಡಿಕೊಳ್ಳಲು ಸಮಸ್ತವು ಜನ್ಮ ತಾಳಿದೆ.
  • ನಮಾಝಿನ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು, ಝಕಾತ್ ನೀಡದೇ ಇರುವುದು, ಮುಸ್ಲಿಮರೆಡೆಯ ಭಿನ್ನಮತಗಳನ್ನು ಬೀದಿಗೆ ತರುವುದು, ವ್ಯಾಪಾರದ ವೇಳೆ ತೂಕದಲ್ಲಿ ವಂಚನೆ ಮಾಡುವುದು, ನೈಜ ಅಲ್ಲಾಹನ ದಾಸ(ಔಲಿಯಾ)ರನ್ನು ಅವಹೇಳಿಸುವುದು ಹಾಗೂ ಇಸ್ಲಾಮಿನಲ್ಲಿ ಬಿದ್‌ಅತ್ ಸೃಷ್ಟಿಸುವುದು ಮುಂತಾದಗಳು ಓರ್ವ ಮುಸಲ್ಮಾನನ ನೀಚ ಮರಣಕ್ಕೆ ಕಾರಣವಾಗಬಹುದು. ಆದ್ದರಿಂದ ಎಲ್ಲರೂ ಆ ವಿಷಯದಲ್ಲಿ ಜಾಗರೂಕರಾಗಿರಬೇಕು.
  • ನಮ್ಮ ಕಾರ್ಯಕರ್ತರೆಲ್ಲರೂ, ಅದರಲ್ಲೂ ವಿಶೇಷವಾಗಿ ಎಸ್ಕೆಎಸ್ಸೆಸ್ಸೆಫ್‌ನ ನಮ್ಮ ಯುವಕರು ನಮಾಝಿನ ವಿಷಯದಲ್ಲಿ ಎಚ್ಚರವಹಿಸಬೇಕು.
  • ವರಕ್ಕಲ್ ಮುಲ್ಲಕ್ಕೋಯ ತಂಙಳರಂತಹ ಮಹಾನುಭಾವರಾದ ನಮ್ಮ ಪೂರ್ವಿಕರು ಕಷ್ಟಪಟ್ಟು ಬೆಳೆಸಿದ ಸಮಸ್ತವೆಂಬ ಮಹಾ ಪ್ರಸ್ತಾನದ ಜೊತೆ ಸೇರಿಕೊಂಡು ಅದರ ಬೆಳವಣಿಗೆಯಲ್ಲಿ ಎಲ್ಲರೂ ಕೈ ಜೋಡಿಸಬೇಕು.
  • ಸಮಸ್ತದಿಂದ ಹೊರಗೆ ಹೋದವರ ಬಗ್ಗೆ ಶಂಸುಲ್ ಉಲಮಾ ಮತ್ತು ಕಣ್ಣೀಯತ್ ಉಸ್ತಾದರೇ ಕೀಳಾಗಿ ಪ್ರತಿಕ್ರಿಯಿಸಿರುವಾಗ ಅವರ ಬಗ್ಗೆ ನನಗೆ ಹೆಚ್ಚಿನದ್ದೂ ಏನು ಹೇಳಲಿಕ್ಕಿಲ್ಲ. ಅವರ ಬಗ್ಗೆ ನೀವೇ ಮನದಟ್ಟು ಮಾಡಿಕೊಳ್ಳಿ. 


***************************
ಖಳಾವನ್ನು ಬದಲಾಯಿಸಲು ಪ್ರಾಥನೆಯಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾ, ಮರಣದ ವಿಷಯ ಉಲ್ಲೇಖಿಸಿ, ಕೆಲ ಹೊತ್ತು ಪ್ರಾರ್ಥಿಸಿ ತನ್ನ ಭಾಷಣವನ್ನು ಮುಗಿಸಿದ ಚೆರುಶ್ಶೇರಿ ಉಸ್ತಾದ್. 

No comments:

Post a Comment