ಜೀವ ಉಳಿಸೋದು ಯಾಕೆ ಸುದ್ದಿಯಾಗುವುದಿಲ್ಲ ?

ವಿಪರೀತ ಟ್ಯೂಷನ್ ಕೊಟ್ಟು ಮಕ್ಕಳನ್ನು ಮಂದ ಬುಧ್ದಿಗಳಾಗಿಸಬೇಡಿ

-ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು
...................................................

ನಮ್ಮ ಸಮಾಜದಲ್ಲಿ  ನಡೆಯುತ್ತಿರುವ ಘಟನೆಗಳಲ್ಲಿ ಆಘಾತ ಕಾರಕ ಸಂಗತಿಗಳ ಜೊತೆಗೆ ಮೌಲ್ಯಯುತವಾದದ್ದೂ, ಸ್ವಾರಸ್ಯಕರವಾದುದ್ದೂ ನಡೆಯುವುದಿದೆ.ಗೋರಕ್ಷಕರ ಅಟ್ಟಹಾಸವನ್ನು ಗಾಬರಿಯಿಂದ ವಿಶ್ಲೇಷಿಸಿ ರಾಷ್ಟ್ರಪತಿಯೂ ಎಚ್ಚರಿಕೆಯನ್ನು ನೀಡಿದರು.ಪ್ರಧಾನಿ ಗೋರಕ್ಷಣೆಯ ಹೆಸರಲ್ಲಿ ಸಾವು ಸಹಿಸಲಾಗದು ಎಂದು ಹೇಳಿಕೆಯನ್ನೇ ಕೊಟ್ಟರು.ಇದರ ಮದ್ಯೆ ಜನರನ್ನು  ಅಟ್ಟಾಡಿಸಿ ಕೊಲ್ಲಲು ಮುಂದಾಗುವ ನರರಕ್ಷಸರು ನಡೆದಾಡುವ ಜಾಗದಲ್ಲಿ ತಾಳಿಪಡ್ಪು ನಿವಾಸಿ ಉಮರಬ್ಬ ಮಗ ಅಬ್ದುರ್ರವೂಫ್ ಸಮಾಜದಲ್ಲಿ ಹೆಚ್ಚು ಪ್ರಿಯನಾಗಿ ನಮ್ಮ ಕಣ್ಣ ಮುಂದೆ ಬರುತ್ತಾನೆ.ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಎತ್ತಿ ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದಾಗದಿದ್ದಾಗ ಆಪದ್ಭಾಂದವನಾಗಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ರಕ್ಷಿಸಿ ದೇಶಕ್ಕೇ ಮಾದರಿಯಾದ ಸಂದೇಶವನ್ನು ಅಬ್ದುರ್ರವೂಫ್ ಕೊಟ್ಟಿದ್ದಾನೆ.ಈ ಘಟನೆಯೂ ಅನೇಕ ಸತ್ಯವನ್ನು ಹೊರಗೆಡವಿದೆ. ಯಾರನ್ನು  ವೈರಿಗಳೆಂದು ಕಾಣುತ್ತೆವೆಯೋ ಅವರು ವೈರಿಗಳಾಗಿರುವುದಿಲ್ಲ.ಹಾಗೇ ಯಾರನ್ನು ನಮ್ಮವರು ಎಂದು ಭಾವಿಸುತ್ತೇವೋ ಅವರೇ ರಕ್ಷಣೆಗೆ ಬರಬೇಕೆಂದಿಲ್ಲ.?ಹಾಗೇ ಜೀವವನ್ನೇ ಉಳಿಸೋದು ಧರ್ಮವೆಂದು ಕುರಾನಿನ ಸಂದೇಶವನ್ನು ಪರೋಕ್ಷವಾಗಿ ಸಾರಿದೆ.ಅಚ್ಚರಿಯೆಂದರೆ ಈ ಘಟನೆಯಲ್ಲಿ ಜೀವ ಉಳಿದಿದ್ದರಿಂದ ಕೆಲವರು ಗುಂಪು ಸೇರುವುದು ಉಳಿಯಿತು! ಆದರೆ  ಸಮಾಜದ ರಕ್ಷಣೆಯ ಹೊಣೆ ಹೊತ್ತವರು ಯಾರೂ ಧ್ವನಿ ಎತ್ತಲೇ ಇಲ್ಲ.ಇಂತಹಾ ಘಟನೆಗಳನ್ನು ಸಮಾಜಕ್ಕೆ ಎತ್ತಿ ತೋರಿಸಬೇಕಿತ್ತು ಆದರೆ ಮನಸ್ಸು ಬದಲಾಗಬೇಕಷ್ಟೆ.!ಇಸ್ರೇಲಿನ ಟೆಲ್ ಅವೀವ್ ಸುತ್ತಾ ಸುತ್ತಿದ ಚಾನಲುಗಳ ಅಕ್ರಮಣಕಾರಿ ಇಸ್ರೇಲಿನನ್ನು ಹೊಗಳುವುದರಲ್ಲೇ ಕಾಲ ಕಳೆಯಿತು.ಇಸ್ರೇಲಿನ ಕ್ರೌರ್ಯಗಳನ್ನು ಹೋರಾಟವೆಂದು ಬಣ್ಣಿಸಲಾರಂಭಿಸಿದೆ.ಕಾಲಾಯ ತಸ್ಮೇಯ!
ಒಂದು ಮೆಸೇಜ್ ಕಾರ್ಕಳದಿಂದ ಹರಿದಾಡುತ್ತಿದೆ! ಹಸುವನ್ನು ಕದ್ದೊಯ್ಯಲು ಬಂದಿದ್ದಾರೆ ಎಂದು ಹೇಳಿ ಆ ಅಯ್ಯಮ್ಮ ಕೆಲ ಪುಂಡರನ್ನು ಕರೆಯುತ್ತಾಳೆ. ಭರ್ಜರಿ ಕೆಲಸ ಸಿಕ್ಕಿತೆಂದು ಓಡಿ ಬಂದರು ರಕ್ಷಕರು?ಬಂದವರೇ ಕದೀಮರ ಬಗ್ಗೆ ವಿಚಾರಿಸುತ್ತಾರೆ.ಆಗ ಅ ಹೆಂಗಸು ಅವರ ಕೈಗೆ ಹಾರೆ ಕೊಟ್ಟು ನೋಡಿರಪ್ಪ ನಮ್ಮನೆಯಲ್ಲಿ ಪ್ರಾಯದ ಹಸು ಇತ್ತು ಮಾರಲು ನೀವು ಬಿಡಲಿಲ್ಲ!ನಮ್ಮಿಂದ ಅದನ್ನು ನೋಡಿಕೊಳ್ಳಲಾಗದೇ ಸತ್ತು ಹೋಯಿತು. ಅದನ್ನು ಮಣ್ಣು ಮಾಡಲೂ ನಮ್ಮಲ್ಲಿ ಹಣ ಇಲ್ಲ. ನೀವೇ ಅದನ್ನು ಮಾಡಿಬಿಡಿ,ನೀವು ರಕ್ಷಕರಲ್ವಾ? ಬಂದವರಿಗೆ ಏನೂ ತೋಚದೇ ಕೆಲಸ ಶುರು ಮಾಡಿದರಂತೆ.
ವಿಷಯ ಏನೇ ಆಗಿದ್ದರೂ!
ಒಟ್ಟಿನಲ್ಲಿ ಕೆಲವರಿಗೆ ಜನರ ಜೀವದೊಂದಿಗೆ ಲಾಬಿ ನಡೆಸಬೇಕು ಅಷ್ಟೇ.ಎಲ್ಲಾ ಸ್ವಾರ್ಥಕ್ಕಾಗಿ ನ ಹೋರಾಟ. ಅದೇರೀತಿ ಜನರಲ್ಲಿ ಲೂಟಿಯೂ ವ್ಯಾಪಕವಾಗಿ ನಡೆಯುತ್ತಲಿದೆ. ಸಮಾಜದಲ್ಲಿ ಲೂಟಿಯನ್ನು ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗುತ್ತದೆ.ಅದರ ಪ್ರಮುಖವಾದ ಎರಡು ಆಯಾಮಗಳಾಗಿವೆ ಗರ್ಭಿಣಿಯರು ಮತ್ತು ವಿದ್ಯಾರ್ಥಿಗಳು.ಋತು ನಿಂತಿತು ಎಂದಾಗಲೇ ಆರಂಭಗೊಳ್ಳುತ್ತದೆ ಟೆಸ್ಟ್?ರಕ್ತ, ಮೂತ್ರ,ಬಿ ಪಿ,ಸುಗರ್ ಎಲ್ಲಾ! ಇಂಜೆಕ್ಷನ್ ಬೇರೆ ಅದರೊಟ್ಟಿಗೆ ಸ್ಕ್ಯಾನಿಂಗ್ !?ಬೆರಳಾಗಲಿ,ಕೂದಲಾಗಲಿ ವ್ಯತ್ಯಾಸ ವಿಲ್ದದೇ ಹಾನಿಯಾಗದೇ ಮಗುವನ್ನು ತರುವವನು ಅಲ್ಲಾಹನು,ಆದರೆ ಮಗುವಿನ ಪೊಝಿಷನ್ ಸರಿಯಿಲ್ಲ, ನೀರು ಕಮ್ಮಿ ಇದೆ,ತೂಕ ಸರಿಯಾಗಿಲ್ಲ,ಹಾರ್ಟ್ ಬಿಟ್ ಕರೆಕ್ಟಿಲ್ಲ,ಸುಗರ್ ಲೆವೆಲ್ ಸರಿ ಇಲ್ಲ,ಹೀಗೆಲ್ಲಾ ಪುರಾಣಗಳು ಹೇಳುತ್ತಾ ಇರ್ತಾರೆ. ಜನ ಕೈಕಾಲು ಬಿಟ್ಟು ಕಂಗಾಲಾಗುತ್ತಾರೆ. ಲೂಟಿಗೆ ತಕ್ಕ ಸಮಯವೂ ಅದಾಗಿರುತ್ತದೆ.ಖರ್ಚು ಮಾಡಲು ಸಾದ್ಯವಿಲ್ಲದ ಜನ.ಮನೆ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆರಾಮವಾಗಿ ಹೆತ್ತು ಬರುತ್ತಿರೋದು ಇದಕ್ಕೆ ಅಪವಾದವೂ ಆಗಿರಬಹುದು.
ಎರಡನೆಯ ಲೂಟಿ ಹಾಗೇ ಹೆತ್ತ ಮಗುವನ್ನು ಶಾಲೆಗೆ ಸೇರಸಿದಂದಿನಿಂದ ಆರಂಭವಾಗುತ್ತದೆ.ಐದಾರು ವರ್ಷಗಳ ಕಾಲ ತಾಯಿ ಜೊತೆ ಇರಬೇಕಾದ ಮಗು ಮೂರು ವರ್ಷದಿಂದಲೇ ತಾಯಿ ಸಂಪರ್ಕ ಕಡಿದು ಕೊಳ್ಳುತ್ತದೆ.
ಅದಕ್ಕಿಂತಲೂ ದೊಡ್ಡ ದುರಂತ ಎಲ್ ಕೆ ಜಿ, ಮತ್ತು ಪ್ರೈಮರಿ, ಹೈ ಪ್ರೈಮರಿ,ಸಮಯದಲ್ಲಿ ಟ್ಯೂಷನ್ ಮೊರೆ ಹೋಗೋದು?ಶಾಲೆಯಲ್ಲಿ ಆರೇಳು ಘಂಟೆ ಶಿಕ್ಷಕರು ಮಾಡುವುದಾದರೂ ಏನು?ಇಂತಹಾ ಟ್ಯೂಷನ್ ನಿಂದ ನಮ್ಮ ಮಕ್ಕಳು ದಡ್ಡರಾಗುತ್ತಾರೆ.ಕಾರಣ ಟ್ಯೂಷನ್ ಇದೆ ಅಂತ ಶಾಲೆ ಪಾಠವನ್ನು ವಿದ್ಯಾರ್ಥಿಗಳು ಗಮನಿಸುವುದಿಲ್ಲ. ಟ್ಯೂಷೆನ್ಗೆ ಹೋಗಿ ಅಂತ ಶಿಕ್ಷಕರು ಜವಾಬ್ದಾರಿ ವಹಿಸೋದೂ ಇಲ್ಲ. ಇತ್ತ ಟ್ಯೂಟರ್ ಶಾಲೆಯಲ್ಲಿ ಕಲಿತದ್ದೇ ಅಂತ ಮಕ್ಕಳನ್ನು ಯಾಮಾರಿಸಿದರೆ ದೇವರೇ ಗತಿ! ಎಸ್ ಎಸ್ ಎಲ್ ಸಿ ಸಿದ್ದತೆಗಲ್ಲದೇ ಟ್ಯೂಷನನ್ನು ನಿರ್ಭಂಧಿಸಬೇಕಾಗಿದೆ.
ಅದು ಹಣವನ್ನು ಫೋಲು ಮಾಡುವ ವಿಧಾನ ಮಾತ್ರ.
ಒಟ್ಟಿನಲ್ಲಿ ಮಗು ಮದ್ದು ಇಂಜಕ್ಷನ್ ನಿಂದ ಬೆಂದುಹೋಗ್ತಾರೆ. ಟ್ಯೂಷನ್ ದಂಧೆಯಿಂದ ಮಂದರಾಗ್ತಾರೆ.Rank ಸ್ಟೂಡೆಂಟುಗಳು ಯಾರೂ ಟ್ಯೂಷನ್ ಪಡೆದವರಾಗಿರೋದಿಲ್ಲ.ಹಿಂದಿನ ಕಾಲದಲ್ಲಿ ಮಂದ ಬುಧ್ಧಿಗಳಿಗೆ ಮೇಷ್ಟ್ರುಗಳು ಹೇಳಿಕೊಡುತ್ತಿದ್ದ ಹೆಚ್ಚುವರಿ ಪಾಠವೇ ಹಳೇಕಾಲದ ಟ್ಯೂಷನ್!ಇವತ್ತು ಅದರಿಂದಲೇ ಮಕ್ಕಳು ಕಂಗಾಲಾಗುತ್ತಾರೆ.
ಎಲ್ಲದಕ್ಕಿಂತಲೂ ದೊಡ್ಡ ವಿಚಾರ ಮುಸ್ಲಿಮರು ದಂಧೆಯ ವಾಹಕರಬಾರದು.ವಂಚನೆ ಯಾವತ್ತೂ ನಡೆಯಬಾರದು.ಧರ್ಮವು ಅನ್ಯಾಯದ ಸೊತ್ತನ್ನು ಅಂಗೀಕರಿಸುವುದಿಲ್ಲ.ಅದು ಆತನ ಸಂಪತ್ತೂ ಆಗುವದಿಲ್ಲ.ಅನ್ಯಾಯದ ಸೊತ್ತಿನಿಂದ ವೃದ್ಧಿಯಾದ ರಕ್ತ ನರಕಕ್ಕೆ ಹೆಚ್ಚು ಸೂಕ್ತವಾಗಿರುತ್ತದೆ.ಹದೀಸು
ಪ್ರವಾದಿ (ಸ) ರವರು ಆಹಾರ ವ್ಯಾಪಾರಿಯ ಮುಂದೆ ಸಾಗುತ್ತಿರುವಾಗ ಸಂದರ್ಭ ಆಹಾರದ ರಾಶಿಯೊಂದರ ಒಳಗೆ ಕೈಹಾಕುತ್ತಾರೆ, ಆಗ ನಬಿಯವರ ಕೈಗೆ ಒಳಗೆ ಒದ್ದೆಯಾಗಿರುವ  ಅನುಭವ ಆಗುತ್ತದೆ.ನಬಿ  (ಸ) ಪ್ರಶ್ನಿಸಿದರು ಏನಿದು?ವ್ಯಾಪಾರಿ ಅದು ಮಳೆ ಸುರಿದ ಕಾರಣ ಹಾಗಾಗಿದೆ ಎಂದು
ಸಮಜಾಯಿಕೆ ಕೊಡುತ್ತಾನೆ. ಇದರಿಂದ ಸುಮ್ಮನಾಗದ ಪ್ರವಾದಿ ಹೇಳುತ್ತಾರೆ ಮತ್ಯಾಕೆ ಅದನ್ನು ಮೇಲ್ಭಾಗದಲ್ಲಿ ಹಾಕಲಿಲ್ಲ ?ನಮ್ಮನ್ನು ಯಾರದರೂ ವಂಚಿಸಿದರೆ ಅವನು ನಮ್ಮವನಲ್ಲ.
ಕೆಲವು ತಿಂಗಳ ಹಿಂದೆ ಲಂಡನಿನಲ್ಲ್ಲಿ ನಡೆದ ಘಟನೆಯ ಪೋಸ್ಟು ಫೇಸ್ಬುಕ್ಕಲ್ಲಿ ಹರಿದಾಡುತ್ತಿತ್ತು ವಿಷಯ ಇಷ್ಟೇ,ಬಸ್ ಕಂಡಕ್ಟರ್ ಒಬ್ಬ ಮುಸಲ್ಮಾನ ಯುವಕನಿಗೆ ಚಿಲ್ಲರೆ ಕೊಡುವಾಗ ಇಪ್ಪತ್ತು ಪೈಸೆಯಷ್ಟು ಉದ್ದೇಶ ಪೂರ್ವಕವಾಗಿ ಹೆಚ್ಚು ಕೊಟ್ಟಿದ್ದ  ಲೆಕ್ಕ ಮಾಡಿದ ಮುಸ್ಲಿಂ ಯುವಕ ಅದನ್ನು ಹಿಂದಿರುಗಿಸುತ್ತನೆ. ಆಗ ಬ್ರಿಟಿಷ್ ಕಂಡಕ್ಟರ್ ಹೇಳ್ತಾನೆ ನಿಮ್ಮ ಕುರಾನ್ ಓದಿದ್ದೇನೆ ಅದರಲ್ಲಿ ವಂಚನೆಯನ್ನು ಮಾಡಿದವ ಅಂತ್ಯದಿನದಲ್ಲಿ ಅದನ್ನು ಹೊತ್ತು ಬರುತ್ತಾನೆ ಎಂದಿದೆ ಹಾಗೆ ಮುಸ್ಲಿಮರಾದ ನೀವು ಇದ್ದೀರಾ ಎಂದು ಪರೀಕ್ಷಿಸಲು ಹೀಗೇ ಮಾಡಿದೆ. ಮುಸ್ಲಿಂ ಯುವಕ ಮನಸ್ಸಿನಲ್ಲಿ ಅಂದು ಕೊಂಡ, ನಾನು ಈ ಮಾಡದೇ ಹೋಗಿದ್ದರೆ ಮುಸ್ಲಿಮರನ್ನು ಆತ ವಂಚಕರೆಂದು ಭಾವಿಸುತ್ತಿದ್ದ.!

ವರದಿ ಅಹ್ಸನ್ ಮಾಸಿಕ

No comments:

Post a Comment