ಶ್ಲೋಕಗಳ ,ಸೂಕ್ತಗಳ ಧ್ವನಿ ರಾಜಧಾನಿಯಲ್ಲಿ ಮೊಳಗಲಿ...!!!

"Not in my name"
"ಮಾ ವಿದ್ದುಷಾವಹೀ"
"ಮಾ ನಿಷಾದ,"
"ಒಬ್ಬನ ಕೊಲೆ ಜಗತ್ತಿನ ಮಾನವ ಸಮೂಹದ ಕೊಲೆಯಾಗಿದೆ" (ಕುರಾನ್)
ಶ್ಲೋಕಗಳ ,ಸೂಕ್ತಗಳ ಧ್ವನಿ ರಾಜಧಾನಿಯಲ್ಲಿ ಮೊಳಗಲಿ

ಮೌಲಾನಾ ಯುಕೆ ದಾರಿಮಿ ಚೊಕ್ಕಬೆಟ್ಟು ಜುಮ್ಮಾ ಭಾಷಣ

ವಿಶುದ್ಧ ರಮಳಾನ್ ವಿದಾಯ ಹೇಳಿದ ಬಳಿಕ ಮುಂದೆ ಏನು ? ಎಂಬ ಪ್ರಶ್ನೆ ಮಾಡಬೇಕಾಗಿಲ್ಲ.ಕಾರಣ ಉಪವಾಸ ಭಾಗಶಃ ಉಳಿದುಕೊಂಡಿದೆ.ಪ್ರತೀ ತಿಂಗಳ ಎಲ್ಲಾ 13,14,15 ಹಾಗೇ27,28,29 ಮತ್ತು ಎಲ್ಲಾ ಸೋಮವಾರ ಹಾಗೂ ಮಂಗಳವಾರ ,ದುಲ್ಹಜ್ಜ್ 9 ದಿವಸಗಳು.ಒಟ್ಟು ಸುಮಾರು 190 ದಿವಸಗಳು ಉಪವಾಸ ಸುನ್ನತ್ತಿದೆ.ಬರಾಅತ್ತು,ಮಿಹ್ರಾಜ್ ಸೇರಿಸಿದರೆ ಇನ್ನೂ ಜಾಸ್ತಿಯಾಗಬಹುದು. ಪ್ರತಿ ಜಾಮಾತ್ತಿಗೆ 27 ರ ಪ್ರತಿಫಲವೂ ಇದೆ ,ಇನ್ನು ಇವೆಲ್ಲದಕ್ಕಿಂತ ಮಹತ್ವಪೂರ್ಣ ವಾದ ಒಂದು ಅತ್ಯಮೂಲ್ಯ ವಸ್ತುವಿದೆ .ಅದು ರಮಳಾನಿನೊಂದಿಗೆ ನಿಕಟ ಸಂಬಂಧ ಹೊಂದಿದೆ. ಅದುವೇ ಕುರಾನ್. ರಮಳಾನನ್ನು ಗೌರವಿಸಿದವರು ಕುರಾನನ್ನು ಗೌರವಿಸಲೇ ಬೇಕು.ಆಗ ಮಸೀದಿಗಳಲ್ಲಿ ಜನ ಕಮ್ಮಿಯಾಗದು ಕಾರಣ ಮಸೀದಿಯೂ ಅದರ ಒಡೆಯನೂ ನಮ್ಮಿಂದ ದೂರ ಹೋಗಲಿಲ್ಲ.

ಇನ್ನು ಹಬ್ಬದ ವಿಷಯಕ್ಕೆ ಬಂದರೆ ಯಾಕೋ ಸಮಾಧಾನವಾಗುತ್ತಿಲ್ಲ.ನಮ್ಮ ಹಬ್ಬವು ತರ್ಕದಲ್ಲೇ ಮುಗಿದು ಹೋಯಿತು.ತಿಂಗಳು ಪೂರ್ತಿ ವೃತ, ಆರಾಧನೆ,ನಿದ್ದೆ ಬಿಟ್ಟು ಮಾಡಿದ ಪುಣ್ಯ ಕರ್ಮಗಳಿಂದ ಧನ್ಯಗೊಂಡ ಹೃದಯ ಪರಸ್ಪರ ಅಪ್ಪಿಕೊಳ್ಳುವ, ಕ್ಷಮಿಸುವ ಮನಸ್ಸಿನೊಂದಿಗೆ ಈದುಲ್ ಫಿತರನ್ನು ಕಾಯುತ್ತಿತ್ತು.ಆದರೆ ಸಮುದಾಯ ಏನೂ ತೋಚದೇ ಕಂಗಾಲಾಯಿತು.ಮಗಳನ್ನು ಕರೆತರುವ ಉತ್ಸಾಹ ತಂದೆಗಿಲ್ಲ.ಮಗಳು ಬಾರದೇ ಮನೆಯಲ್ಲಿ ಹಬ್ಬವಿಲ್ಲ! ಎಲ್ಲರೂ ಧರ್ಮಸಂಕಟ ಅನುಭವಿಸಿದರು.ಪಕ್ಕದ ಮನೆ ಬಾಗಿಲು ಹಬ್ಬದಂದೇ ಮುಚ್ಚುವಂಥಾ ಪರಿಸ್ಥಿತಿ ನಿರ್ಮಾಣವಾಯಿತು.ಒಟ್ಟಿನಲ್ಲಿ ಮಕ್ಕಳು ಬಹಳ ನೊಂದು ಬಿಟ್ಟರು.ಅ ಮನೆ ಆಂಟಿ ಪೆರ್ನಾಳಿನಂದು ಕೊಡುವ ನೂರರ ನೋಟಿಗೆ ಕಾದದ್ದು ಕೂಡಾ  ಫಲವಿಲ್ಲದಾಯಿತು.ಹೀಗೇ ನಮ್ಮೂರಿನಲ್ಲಿ ಹಬ್ಬ ಇದ್ದೂ ಇಲ್ಲದಂತಾಯಿತು.

ಇದಕ್ಕಿಂತಲೂ ಶೋಚನೀಯವಾದ ವಾರ್ತೇಯಾಗಿತ್ತು ಹರಿಯಾಣದ ಬಲ್ಲಾಭಾಗ ರ ಹಳ್ಳಿಯ ಸ್ಥಿತಿ ದಯನೀಯವಾಗಿತ್ತು.ಆ ಹಳ್ಳಿಯಲ್ಲಿ ಈದ್ ಬಗ್ಗೆ ಸಂತೋಷವಿರಲಿಲ್ಲ.ಊರೆಲ್ಲೆಲ್ಲಾ ದುಖಃದ ಛಾಯೆ ಆವರಿಸಿತ್ತು.ಉಪವಾಸದ ಮುನ್ನ ದಿನ ತಾಯಿ ಸಾಯಿರಾ ಕೊಟ್ಟ ಸಾವಿರದೈನೂರು ರುಪಾಯಿ ಯಿಂದ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿ ತನ್ನ ಸಹೋದರ ಮತ್ತು ಕಝೀನ್ ಜೊತೆ ಮನೆಯತ್ತಾ ಹೊರಟಿದ್ದ ಹಾಫಿಲ್ ಜುನೈದ್ ಡೆಲ್ಲಿ-ಮಥುರೈ ರೈಲಿನಲ್ಲಿ ಸಂಚರಿಸುತ್ತಿದ್ದರು.ಓಕ್ಲಾ ಸ್ಟೇಷನ್ ತಲುಪುವಷ್ಟರಲ್ಲಿ ಜುನೈದ್ ರಕ್ತಮಡುವಿನಲ್ಲಿ ತನ್ನ ಸಹೊದರನ ಮಡಿಲಲ್ಲಿ ಪ್ರಾಣ ಬಿಟ್ಟಾಗಿತ್ತು.ಹದಿನಾರರ ಹುಡುಗ ಗೋ ರಾಕ್ಷಸರ ಕೈಯಲ್ಲಿ ಇರಿತಕ್ಕೊಳಗಾಗುವಾಗ ಅವರು ಧ್ವನಿ ಎತ್ತಿ ಕೂಗಾಡುತ್ತಿದ್ದುದು,
"beef eaters and anti national"
ಗೋ ರಾಕ್ಷಸರ ಅಟ್ಟಹಾಸದಿಂದ ಹಾಫಿಲ್ ಬಿರುದು ಪಡೆದು ಬರುತ್ತಿದ್ದ ಮಗನನ್ನು ಜೀವಂತ ಕಾಣಲು ತಾಯಿ ಸಾಯಿರಾ ಗೆ ಸಾಧ್ಯವಾಗಲಿಲ್ಲ.ದೆಹಲಿಯ ಜಾಮಿಯ ಮಸೀದಿಯಲ್ಲಿ ಒಂದು ದಿನವಾದರೂ ಇಮಾಮ್ ಆಗಬೇಕೆಂದು  ಬಯಕೆ ಇಟ್ಟು ಕೊಂಡಿದ್ದ ಜುನೈದ್ ತನ್ನ ಆಸೆ ಈಡೇರದೇ ಯಾತ್ರೆಯಾದ.ಈ ದುಖಃ ಕಾರಣ ಬಲ್ಲಾಬಾಗ್ ರ ಊರು ಕಣ್ಣೀರಿನಲ್ಲೇ ತಕ್ಬೀರ್ ಮೊಳಗಿಸಿತು.ಯಾರಿಗೂ ಹೊಸ ಬಟ್ಟೆ ಉಡಲು ಅಥವಾ ಬಿರಿಯಾನಿ ತಯಾರಿಸಲು ಮನಸ್ಸು ಬರಲಿಲ್ಲ.ತಾಯಿ ಕಣ್ಣೀರು  ಇನ್ಶೂ ಶಮನವಾಗಿಲ್ಲ.

ಗೋ ಭಯೋತ್ಪಾದನೆಗೆ ಬಲಿಯಾದ ಜೀವಗಳೆಷ್ಟು?
ಈ ವರ್ಷದ ಆರೇ ತಿಂಗಳಲ್ಲಿ ಬರೋಬ್ಬರಿ ಇಪ್ಪತ್ತು.ಅವರೆಲ್ಲರೂ ಮುಸ್ಲಿಮರು.ಮಾಂಸ ಮನೆಯಲ್ಲಿದ್ದ ಆರೋಪ ಕಾರಣ ದೇಶದ ಜವಾನನ ತಂದೆ ಅಖ್ಲಾಕ್ ಕೊಲೆಯಾದ,ಹೈನುಗಾರಿಕೆಗಾಗಿ ಹಸುವನ್ನು ಕರೆ ತರುವಾಗ ಫೈಲೂ ಖಾನ್ ಕ್ರೂರಿಗಳಿಗೆ ಬಲಿಯಾದ,ಮನೆಪಕ್ಕದಲ್ಲಿ ಸತ್ತ ಹಸುವಿಗಾಗಿ ಜಾರ್ಖಂಡಿನಲ್ಲಿ ವ್ಯಕ್ತಿಯನ್ನು ಜಜ್ಜಿ ಹಾಕಿ ಮನೆಯನ್ನು ಸುಡಲಾಯಿತು,ಹದಿನಾರು ವರ್ಷ ಮಾತ್ರ ಪ್ರಾಯದ ಬಾಲಕನನ್ನು ಕೊಲ್ಲಲು ಅಲ್ಲಿ ಹಸು ಸತ್ತಿರಲಿಲ್ಲ,ಹಸುವನ್ನು ಸಾಗಿಸಲೂ ಇಲ್ಲ,ಕೈಯಲ್ಲಿ ಮಾಂಸವು ಇರಲಿಲ್ಲ! ಮಾಂಸ ತಿನ್ನುವವ ಎಂಬ ಆರೋಪ ಮಾತ್ರವಾಗಿತ್ತು.
ಇದೊಂದು ರೀತಿಯ ಫೋಭಿಯಾ ರೋಗವಾಗಿ ದೇಶದಾದ್ಯಂತ ಹರಡುತ್ತಿದೆ.

ಉಡುಪಿ ಯ ಮಠದಲ್ಲಿ ನಡೆದ ಇಪ್ತಾರನ್ನು ವಿರೋಧಿಸುವ ಮಂದಿ ಆರೋಪಿಸುವುದೂ
 ಅವರು ಮಾಂಸ ಭಕ್ಷಕರುಎಂಬುದಾಗಿದೆ.
ಇಫ್ತಾರಿನಿಂದ ಸಮುದಾಯಕ್ಕೆ ದೊಡ್ಡ ಲಾಭವೇನು ಸಿಗಲಿಕ್ಕಿಲ್ಲ ಎಂದು ಎಲ್ಲರಿಗೂ ಗೊತ್ತು.ಆದರೆ
ನಂತರ ಸ್ವಾಮಿಗಳಿಂದ ಬಂದ ವಿವರಣೆಯಲ್ಲಿ ಕೆಲವು ಆಶಾದಾಯಕ ಅಂಶಗಳಿವೆ. ಸ್ವಧರ್ಮ ಆಚರಣೆ ಅನ್ಯರೊಂದಿಗೆ ಸಹಿಷ್ಣುತೆ.ಆದರೆಅದೆಷ್ಟು ಪ್ರಾಮಾಣಿಕವಾಗಿದೆ ಎಂದು ಕಾದು ನೋಡಬೇಕಷ್ಟೆ.
ನಂಬುವಂಥಾ ಸ್ಥಿತಿ ಯಲ್ಲಿ ಮುಸ್ಲಿಮರೂ ಇಲ್ಲ.ಕಾರಣ ಮಸ್ಲಿಮರನ್ನು ಕೊಲ್ಲಲು. ಬರೀ ಮಾಂಸ ತಿನ್ನುವರೆಂಬ ಕಾರಣ ಸಾಕು. ಮಾಂಸ ತಿನ್ನುವವರನ್ನೆಲ್ಲಾ ಕೊಂದರೆ ಈ ದೇಶದಲ್ಲಿ ಯಾರು ಉಳಿದಾರು ? ಕೊಲ್ಲವುದೊಂದೇ ದಾರಿಯಾ ?

ದೇಶದ ಪ್ರಧಾನಿ ಈ ಕೊಲೆಯನ್ನೆಲ್ಲಾ ಸಹಿಸಲಾಗದು ಅಂತಾರೆ ಗಾಂಧಿಯವರ ಅಹಿಂಸೆಯ ಸಾಬರಮತಿ ವೇದಿಕೆಯಲ್ಲಿ. ಆದರೆ ದೇಶದ ಪ್ರಧಾನಿ ಭಾಷಣವನ್ನು ಆಲಿಸುತ್ತಿರುವ ಕೋಟ್ಯಾಂತರ ಮಂದಿ ಟಿ ವಿ ಪರದೆಯ ಎಕ್ಸ್ಲ ಕ್ಲೂಸಿವ್ ಲೈನಲ್ಲಿ ಜಾರ್ಕಂಡಿನಲ್ಲಿ ಮುಸ್ಲಿಮನೋರ್ವನನ್ನು ಸಾರ್ವಜನಿಕ ವಾಗಿ ಹೊಡೆದು ಸಾಯಿಸಿದ ಮತ್ತು ವಾಹನವನ್ನು ಸುಟ್ಟ ವರದಿ ಹರಿದಾಡುತ್ತಿರುತ್ತದೆ.
ಮೋದಿಯ ದೇಶದ ಕಾನೂನಿಗೆ ತಾಕತ್ತಿಲ್ಲವೇ ?! ಪೋಲೀಸರಿಗೆ ಬಲವಿಲ್ಲವೇ?.ಬರೀ ಪುಂಡರಿಗೆ ಮಾತ್ರ ತಾಕತ್ತು ಇರೋದಾ?!
ಕಾನೂನಿನ ಮೂಲಕ ಗೋವನ್ನು ನಿಷೇಧಿಸುವುದೂ ಇಲ್ಲ.ಮಾಂಸ ರಫ್ತನ್ನು ರದ್ದು ಮಾಡುವ ಉದ್ದೇಶವೂ ಇಲ್ಲ.

ದೇಶದಲ್ಲಿ ಈಶಾನ್ಯಕ್ಕೊಂದು ಕಾನೂನು!ಉಳಿದ ಭಾಗಕ್ಕೊಂದು ಕಾನೂನು! ಗೋವಾದಲ್ಲೊಂದು, ಕೇರಳದಲ್ಲಿ ಇನ್ನೊಂದು! ಮುಸಲ್ಮಾನರನ್ನು ಕೊಲ್ಲಲು ಒಂದೇ ಕಾರಣ ಸಾಕು, ಅದುವೇ ಗೋ ಹತ್ಯೆ
ಮಂದೆ ಒಂದು ದಿನ ಈ ದೇಶ ಪುಂಡರ ಶ್ಮಶಾನ ಭೂಮಿಯಾಗದಂತೆ ಕಾಪಾಡಬೇಕಾಗಿದೆ.ನೀರಿಕ್ಷೆಗಳಿವೆ. ತಮಿಳುನಾಡಿನ ಪೋಲೀಸರು ಲಾಠಿ ಬೀಸಲು ಆರಂಭಿಸಿದ್ದಾರೆ.ಜಂತರ್ ಮಂತರ್ ಮಾತಾಡಲಾರಂಭಿಸಿದೆ,
not in my name
ನನ್ನ ಹೆಸರಿನಲ್ಲಿ ಬೇಡಾ
ಹೌದು ಜನ ಎಚ್ಚೆತ್ತು ಕೊಳ್ಳುತ್ತಿದ್ದಾರೆ.ಒಂದು ಹನಿ ರಕ್ತ ಬೀಳಬಾರದೆನ್ನುವ ವಾಲ್ಮೀಕಿ ಶ್ಲೋಕ
ಮಾನಿಷಾದ,
ಮಾ ವಿದ್ದುಷಾವಹೀಶ್ಲೋಕ,
 ಉಪನಿಷತ್ತುಗಳ ಸಂದೇಶವಾಹಕರು, ಹಾಗೇ
ಒಬ್ಬ ವ್ಯಕ್ತಿಯನ್ನು ಬದುಕಿಸುವುದು ಜಗತ್ತನ್ನು ಬದುಕಿಸಿದಂತೆಎಂಬ ಕುರಾನಿನ ವಾಹಕರು ಒಂದಾಗಿ ಈ ಭರತ ಖಂಡವನ್ನು ಉಳಿಸಬೇಕಾಗಿದೆ.

ಸುನ್ನೀಟುಡೇ

No comments:

Post a Comment