"ಕಾನೂನು ಮತ್ತು ಕೋರ್ಟುಗಳಿರೋದು ಅಮಾಯಕರನ್ನು ದಂಡಿಸಲು ಮತ್ತು ಅಪರಾಧಿಗಳನ್ನು ರಕ್ಷಿಸಲಿಕ್ಕಲ್ಲ."

🎤ಭಾಷಣ

ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು

🎆 ವರದಿ  "ಅಲ್ ಅಹ್ಸನ್ " ಮಾಸಿಕ

ದೆಹಲಿಯ ರಸ್ತೆಯಲ್ಲಿ ಚಾಲಕನೊಬ್ಬ ರಸ್ತೆ ದಾಟುತ್ತಿದ್ದಾಗ ವಾಹನವೊಂದು  ಡಿಕ್ಕಿ ಹೊಡೆದ ಕಾರಣ ಬಿದ್ದು ಒದ್ದಾಡುತ್ತಿದ್ದ .ಅಸಹಾಯಕ ಸ್ಥಿತಿ ಕಂಡು ಏಳಲಾರ ಎಂದು ಖಾತರಿ ಪಡಿಸಿಕೊಂಡು ದಾರಿಹೋಕ ಆತನ ಮೊಬೈಲನ್ನು ಮತ್ತು ಉಳಿದುಕೊಂಡಿದ್ದ ಹನ್ನೆರಡು ರುಪಾಯಿಯನ್ನೂ ಎಗರಿಸಿ ಹೊರಟು ಹೋಗ್ತಾನೆ.ಅವಕಾಶ ಸಿಕ್ಕರೆ ಕಬಳಿಸುವ ಗುಣ ಮನುಷ್ಯ ಬದುಕಿಗೆ ಸಮಂಜಸವೇ? ಬದುಕಿಗೆ ಅರ್ಥವಿಲ್ಲವೇ?

ಒಮ್ಮೆ ರಾಜನೊಬ್ಬ ತನ್ನ ಆಸ್ಥಾನ ವಿದ್ವಾಂಸರಿಗೆ ಸ್ಪರ್ಧೆಯೊಂದನ್ನು ಏರ್ಪಡಿಸುತ್ತಾನೆ . ಅದು  ಮನುಷ್ಯ ಜೀವನ ಚರಿತ್ರೆಯನ್ನು ಬರೆಯುವುದಾಗಿತ್ತು.ಅಪಾರ ಕೊಡುಗೆ ಸಿಗಬಹುದೆಂದು ವಿದ್ವಾಂಸರು  ನೂರಾರು ಗ್ರಂ‌ಥ ಗಳನ್ನು ಬರೆದು ತಂದರು.ಇದನ್ನು ಓದಿ ಮುಗಿಸಲು ಬದುಕು ಸಾಕಾಗದು ಇರೋದು ಒಂದು ಬದುಕು ಅದನ್ನು ಒಂದೇ ಗ್ರಂಥದಲ್ಲಿ ಸಂಕ್ಷಿಪ್ತವಾಗಿ ಬರೆದು ತನ್ನಿ ಎಂದು ರಾಜ ಹಿಂದಕ್ಕೆ ಕಳುಹಿಸುತ್ತಾನೆ. ನಂತರ ಒಂದು ಪುಸ್ತಕದಲ್ಲಿ ಬರೆದು ಪುನಃ ರಾಜನ ಮುಂದೆ ಹಾಜರುಪಡಿಸುತ್ತಾರೆ.ಆದರೆ ಅದು ಕೂಡಾ ಜಾಸ್ತಿ ಆಗಿದೆ ಇನ್ನಷ್ಟು ಕಡಿತಗೊಳಿಸಿ ಎಂದು ಕರೆ ಕೊಡುತ್ತಾನೆ.
ವಿದ್ವಾಂಸರು ತಮ್ಮ ಬುದ್ಧಿವಂತಿಕೆ ಉಪಯೋಗಿಸುತ್ತಾರೆ .ಮಾನವ ಚರಿತ್ರೆಯನ್ನು  ಒಂದು ಚೀಟಿಯಲ್ಲಿ ಬರೆದು ಲಕೋಟೆಯಲ್ಲಿ ಹಾಕಿ ಆಸ್ಥಾನಕ್ಕೆ ತಲುಪಿಸುತ್ತಾರೆ.ರಾಜ ಅಚ್ಚರಿಯಾಗುತ್ತಾನೆ .ಏನಿದು?ವಿದ್ವಾಂಸರು ಹೇಳುತ್ತಾರೆ. ಅದು ಮಾನವ ಚರಿತ್ರೆ!
ಆ ಚೀಟಿಯಲ್ಲಿ ಇಷ್ಟೇ ಇತ್ತು.
"ಮಾನವ ಹುಟ್ಟುತ್ತಾನೆ.ಅನುಭವಿಸುತ್ತಾನೆ.ಸತ್ತು ಹೋಗ್ತಾನೆ,"ವಿದ್ವಾಂಸರು ಹೇಳಿದರು ಇದುವೇ ಬದುಕು.
ನಮ್ಮ ನಿರೀಕ್ಷೆ ಯಂತೆ ಏನಾದರೂ ನಡೆಯುತ್ತದಾ? ನಾವು ಚಿಕ್ಕದರಲ್ಲಿ  ಆಟಕ್ಕಾಗಿ ಏನು ಬೇಕಾದರೂ ಬಿಡುತ್ತೇವೆ. ಊಟ,ಪಾಠ,ನಿದ್ದೆ ಎಲ್ಲವನ್ನೂ ಬಿಡುತ್ತೇವೆ. ಆಟದ ಕಾಲದಲ್ಲಿ ಬೇರೆ ಏನೂ ಕಾಣಲೇ ಇಲ್ಲ.ನಮ್ಮ ಆಲೋಚನಾ ಪರಿಧಿ ಚಿಕ್ಕದಾಗಿತ್ತು.ಮನೆ ಮಂದಿ ,ಮನೆ ಜಗಲಿ,ಶಾಲೆ,ಒಂದಿಷ್ಟು ಸ್ನೇಹಿತರು.ನಂತರ ಕಲಿಕೆ ಮುಗಿಯುತ್ತಿದ್ದಂತೆ ಅಥವಾ ಕಲಿಕೆ  ಬೇಡವೆಂದಾದರೆ  ನಿರೀಕ್ಷೆಗಳು ಬದಲಾಗುತ್ತದೆ.ಮತ್ತೆ ಸಂಪಾದನೆ ಮಾಡಬೇಕೆಂದು ಚಿಂತಿಸುತ್ತಾನೆ, ಹಾಗಾಗಬೇಕು ಹೀಗಾಗಬೇಕು.ಕನಸುಗಳು ಕನವರಿಕೆಗಳು! ನಂತರ ಹಲವು ಪ್ರಯತ್ನ ಮತ್ತು ಸಂಪಾದನೆ ಮಾಡಿದ ಮೇಲೆ ಸಂಸಾರಿ ಯಾಗಬೇಕೆಂದಾಯಿತು.ಹೆಣ್ಣಿನ ಹುಡುಕಾಟ ,ಮನಸ್ಸು. ಗರಿಗೆದರಿ ಹಾರಾಡುವ ಕನಸುಗಳು ಒಂದಿಷ್ಟು ದಿನ ಅದೂ ಮುಗೀತು.  ಸಂಸಾರಿಯಾಗುವಷ್ಟರಲ್ಲಿ ಸ್ನೇಹಿತರು   ದೂರವಾಗಿ ಬಿಡ್ತಾರೆ. ಕೆಲವು ವರ್ಷಗಳಲ್ಲಿ ಮರಿಮಕ್ಕಳು ಅಂತ ದುಡೀಯುತ್ತಾ ಇರುವಾಗ ನಂತರದ ಬದುಕು ಮಕ್ಕಳಿಗಾಗಿ ಮತ್ತು ಮನೆ ನಿಭಾಯಿಸೋದಕ್ಕೆ ಮೀಸಲಾಗುತ್ತದೆ .ಇಷ್ಟಾಗುವಾಗ ಸಹೋದರರು ಸಹೋದರಿಯರು ಮತ್ತು ಹತ್ತಿರವಿದ್ದವರೆಲ್ಲಾ ದೂರ ದೂರವಾಗ್ತಾರೆ.ತಂದೆ ತಾಯಿಯೂ ಅಪರೂಪವಾಗಿ ಹೋಗುತ್ತಾರೆ.ನಾವೀಗ ಮಕ್ಕಳ ಕಡೆ ಗಮನ ಕೊಡುತ್ತೇವೆ.ಮಕ್ಕಳು ದೊಡ್ಡವರಾಗುತ್ತಾ ಕ್ರಮೇಣ ನಮ್ಮನ್ನು ತಿರಸ್ಕರಿಸುತ್ತಾ ಬರುತ್ತಾರೆ .ಎನಾದರೂ ಸಂಪಾದನೆಯ ಉಳಿಕೆ ಇದ್ದರೆ ನಮ್ಮನ್ನು ಸ್ವಲ್ಪ ನೋಡಿಕೊಳ್ಳಬಹುದು.ಹೇಗಾದರೂ ನಾವೇ ನಮ್ಮ ಮಕ್ಕಳಿಗೆ ಭಾರವಾಗುವ ಸ್ಥಿತಿ ನಿರ್ರ್ಮಾಣವಾಗುತ್ತದೆ.ಇಂತಹಾ ಅವಗಣನೆಯ ಮತ್ತು ಅಸಹಾಯಕತೆಯ ಬದುಕಿಗಾಗಿ ಹಲವರೊಂದಿಗೆ ವೈರ,ಹಗೆ,ಪೈಪೋಟಿ, ಹಠ ಸಾದನೆ ಎಲ್ಲವೂ?ಈ ಹಟ ಸಾದನೆಗೆ ಅಧಿಕಾರ ,ಸಂಪತ್ತು,ಪ್ರಭಾವ ದುರುಪಯೋಗ ನಡೆಯುತ್ತದೆ.ಕಡೆಗೆ ನಮ್ಮ ದಿನ ಮುಗಿಯುತ್ತದೆ.ಈ ಬದುಕಿಗೇನು ಅರ್ಥ.ನಮ್ಮ ನಿರೀಕ್ಷೆಯಂತೆ ಯಾರು ಇರೋದಿಲ್ಲ ಅವರವರ ನಿರೀಕ್ಷೆಗಾಗಿ ಎಲ್ಲರೂ ಇರುತ್ತಾರೆ.
ಈ ಅತಂತ್ರ ಬದುಕಿಗಾಗಿ ನಾವು ನಮ್ಮ ಜೀವನವನ್ನೇ ಸವೆಸುತ್ತೇವೆ.ಆಟ,  ಸಂಪಾದನೆ, ಕುಟುಂಬ ಎಲ್ಲಾ ಮುಗಿವಾಗ ಏನೂ ಇಲ್ಲ. ಅರ್ಥ ಸಿಗದ ಒಂದಿಷ್ಟು ಕಾಲ!
ಮಾಡಿದ್ದು ಉಣ್ಣಲಾರದ ಸ್ಥಿತಿಯಲ್ಲಿ ಹೊರಟು ಹೋಗ್ತೇವೆ.ಜೊತೆಗೆ ಅನಾರೋಗ್ಯವೂ ಸತಾಯಿಸುತ್ತಿರುತ್ತದೆ.
ನನ್ನ ಇಚ್ಚೆಯಂತೆ ಆಗಬೇಕು.ನನಗೇ ಸಿಗಬೇಕು.ಸಿಗದೇ ಹೋದರೆ ಬೇರೆಯವರಿಗೆ ಸಿಗಬಾರದು.ಆಸೆ, ಅತಿಯಾಸೆ, ದುರಾಸೆ,ಅಸೂಯೆ ಹಗೆ, ಪೈಪೋಟಿ, ಲೂಟಿ, ಕೊಲೆ.ಕೊನೆಗೆ ಗಾಳಕ್ಕೆ ಸಿಕ್ಕ ಮೀನಿನಂತೆ ವಿಲವಿಲ ಒದ್ದಾಡಿ ಸಾಯಬೇಕಾಗುತ್ತದೆ.

ಬಯಲು ಪ್ರದೇಶದಲ್ಲಿ ಹದ್ದೊಂದು ಹಕ್ಕಿಯೊಂದನ್ನು ಬೇಟೆಯಾಡಿ ತನ್ನ ಎರಡು ಕಾಲುಗಳಿಂದ ಗಟ್ಟಿಯಾಗಿ ಅದುಮಿ ಹಿಡಿದಿತ್ತು.ಇದನ್ನು ಕಂಡ ಬೇರೆ ಎರಡು ಪಕ್ಷಿಗಳು ಹದ್ದಿನ ಮೇಲೆ ಎರಗುತ್ತಿತ್ತು ಆದರೂ ತನ್ನ ಬಲವಾದ ರೆಕ್ಕೆಗಳಿಂದ ರಕ್ಷಣೆ ಮಾಡುತ್ತಿತ್ತು. ನಂತರ ತನ್ನ ಕೊಕ್ಕಿನಿಂದ ಕುಕ್ಕಿ ತಿಂದು ಬಿಡುತ್ತದೆ. ಈ ಪ್ರಾಣಿಗಳಿಗಿಂತ ಮನುಷ್ಯ ಮಿಗಿಲಾಗುವುದು ಹೇಗೆ?.
ಜನ ಬಲ, ಹಣ ಬಲ,ರಟ್ಟೆ ಬಲ ಕಾಂಚನದ ಮುಂದೆ ಕಾನೂನು ತಲೆಬಾಗುತ್ತದೆ.ಪುರಾವೆಗಳು ಬದಲಾಗುತ್ತದೆ.ಜೈಲಿಗೆ ಹೋಗುವಾಗಲು ಹಾರ ತುರಾಯಿ ?ಬರುವಾಗಲೂ ಹಾರ ತುರಾಯಿ?.
ವಿಜಯದ ಸಂಕೇತ ಅಂತ ತೋರು ಬೆರಳು ಮತ್ತು ನಡು ಬೆರಳುಗಳನ್ನು ಎತ್ತಿ ಪ್ರದರ್ಶಿಸುತ್ತಾರೆ.ಯಾರು ಯಾರ ಮೇಲೆ ವಿಜಯ ಸಾಧಿಸುವುದು?
ಸತ್ಯದ ಮೇಲೆ ಅಸತ್ಯದ ಜಯವೋ?
ಕಾನೂನಿನ ಮೇಲೆ ಅನ್ಯಾಯದ ಜಯವೋ?
ಧರ್ಮದ ಮೇಲೆ ಅಧರ್ಮದ ಜಯವೋ?
ಸ್ವ ಇಚ್ಚೆಗಳು ಆತ್ಮದ ಮೇಲೆ ಹೆಚ್ಚು ಹೆಚ್ಚು ಗೆಲ್ಲಲಾರಂಭಿಸಿದೆ.ಸತ್ಯ ,ನ್ಯಾಯ ಧರ್ಮ ಸೋಲುತ್ತಿದೆ.ಆದರೆ ಅದು ಅವನತಿಯತ್ತ ಸಮಾಜವನ್ನು ಕೊಂಡೊಯ್ಯಲಿದೆ.
ಜಗತ್ತಿನಲ್ಲಿ ಹಲವು ರೀತಿಯಾಗಿ ಮಾನವ ಬದುಕು ಕಳೆದು ಹೋಗಿದೆ.ಸ್ವೇಚ್ಛಾಧಿಪತಿಗಳ ಕಾಲ.ದುಷ್ಟ ಅಹಂಕಾರಿ ರಾಜರುಗಳ ಕಾಲ.ದುರ್ಭಲರನ್ನು ದುಡಿಸಿಕೊಂಡ ಬಲಾಡ್ಯರ ಕಾಲ.ಆದರೆ ಇಂದು ಕಾಂಚಣ ಜಗತ್ತನ್ನುಆಳುವಂತಾಗಿದೆ.ನ್ಯಾಯಪೀಠ ಕಟ್ಟಲು ಖರ್ಚು ಇದೆ.(ಅ)ನ್ಯಾಯ ವಿಧಿ ಪಡೆಯಲು  ಕೂಡಾ ಖರ್ಚು ಮಾಡಬೇಕಾಗಿದೆ.ಅಪರಾಧ,ಅನ್ಯಾಯ,ಅತ್ಯಾಚಾರ ಯಾವುದು ಕಾಣೋದೇ ಇಲ್ಲ. ಹಣದ ಹೊಳೆಯಲ್ಲಿಅವೆಲ್ಲವೂ ಕೊಚ್ಚಿ ಹೋಗುತ್ತಿದೆ.ಕಾನೂನು ಮತ್ತು ಕೋರ್ಟುಗಳಿರೋದು ಅಮಾಯಕರನ್ನು ದಂಡಿಸಲು ಮತ್ತು ಅಪರಾಧಿಗಳನ್ನುರಕ್ಷಿವುದಕ್ಕೋ ? ಎಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ.ಸ್ವಾರ್ಥವು ಒಳಿತನ್ನು ಆಪೋಶನ ತೆಗೆದು ಕೊಳ್ಳುತ್ತಿದೆ.
ಒಂದಂತೂ ಸತ್ಯ.ಯಾರು ಏನೆಲ್ಲಾ ಮಾಡಿ ಕೂಡಿಟ್ಟದ್ದನ್ನು ಕಟ್ಟಿ ಕೊಂಡು ಹೊಗೋದಿಲ್ಲ .ಅದು ಇನ್ನೂ ಹಲವರನ್ನು ಕಚ್ಚಾಡಿಸಲು ಮಾತ್ರ ಪ್ರಯೋಜನವಾಗುತ್ತದೆ.
ನಾವು ನೀರೀಕ್ಷಿಸಿದವರಾರೂ ನಮ್ಮಜೊತೆ ಇರೋದಿಲ್ಲ.ಯಾರು ಯಾರನ್ನೂ ಬಯಸುವುದಿಲ್ಲ. ಸಂಪೂರ್ಣವಾಗಿ ನಮ್ಮನ್ನು ಬಯಸುವವನು ಅಲ್ಲಾಹನು ಮಾತ್ರ. ಆತನನ್ನು ಬಯಸುವವರು ಜನ ಹಿತ ಕಾಯುವರು.ಅವರು ಜನರನ್ನು ನೇರವಾಗಿ ಬಯಸುತ್ತಿಲ್ಲ ಬದಲಿಗೆ ಅಲ್ಲಾಹನಿಗಾಗಿ ಬಯಸುತ್ತಾರೆ.
ಅಲ್ಲಾಹನಿಗಾಗಿ ಯಾವನೊಬ್ಬ ಪ್ರೀತಿಸಿದರೆ ,ಕೋಪಿಸಿದರೆ,ಕೊಟ್ಟರೆ ,ತಡೆದರೆ,ಆತನ ಧರ್ಮವಿಶ್ವಾಸ ಪರಿಪೂರ್ಣಗೊಳ್ಳುತ್ತದೆ.(ಹದೀಸು)

ಅಲ್ ಅಹ್ಸನ್ ಮಾಸಿಕ

No comments:

Post a Comment