ಧರ್ಮ ಮತ್ತು ಆಡಳಿತ ಹಾಗೂ ಕಾನೂನು ಸ್ವಾರ್ಥ, ದ್ವೇಷ ಸಾಧನೆಗೆ ಬಳಕೆಯಾದರೆ ಪ್ರಳಯ ಸನ್ನಿಹಿತ!

ಕೋಳ ತೊಡಿಸ ಬೇಕಾದದ್ದು ಕಳ್ಳನಿಗೋ ಕಳ್ಳನನ್ನು ದೋಚುವವನಿಗೋಮೌಲಾನಾ ಪ್ರಶ್ನೆ

ಅಲ್ ಅಹ್ಸನ್ ಪ್ರಧಾನ ಸಂಪಾದಕ ಮೌಲನಾ ಅಬ್ದುಲ್ ಅಝೀಝ್ ದಾರಿಮಿ ಯವರ ಜುಮ್ಮಾ ಭಾಷಣ
  
ಇಬ್ನು ಮಸ್ಊದ್ () ಹೇಳುತ್ತಾರೆ.
ನಬಿ () ಕೇಳಿದರು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಅಲ್ಲಾಹನೊಂದಿಗೆ ಕರಾರನ್ನು ಮಾಡಲು ಅಸಾಧ್ಯವಾಗ ಬಹುದೇ?
ಸ್ವಹಾಬಿಗಳು ಪ್ರಶ್ನಿಸಿದರು. ಏನದು ? ನಬಿ () ವಿವರಿಸುತ್ತಾರೆ,ಪ್ರತಿ ಬೆಳಗ್ಗೆ ಮತ್ತು ಸಂಜೆ ನೀವು  ಹೀಗೆ ಪ್ರಾರ್ಥಿಸಿ.
ಆಕಾಶ ಭೂಮಿಯನ್ನು ಸೃಷ್ಟಿಸಿದ,ರಹಸ್ಯ ಮತ್ತು ಬಯಲು ಅರಿಯುವ ಅಲ್ಲಾಹನೇ ಬದುಕಿನಲ್ಲಿ ನಾನು ನಿಮ್ಮೊಂದಿಗೆ ಕರಾರನ್ನು ಮಾಡುವೆನು,ಆರಾಧ್ಯದೈವ ನೀನು ಮಾತ್ರ.ನಿನಗೆ ಜೊತೆಗಾರನಿಲ್ಲ,ಮಹಮ್ಮದ್ ನಬಿ  ()ನಿನ್ನ ದಾಸನೂ ದೂತನೂ ಆಗಿರುತ್ತಾರೆ.ನನ್ನನ್ನು ನನ್ನ ದೇಹ ಇಚ್ಚೆಗೆ ನಿಕಟವಾಗಿಸಬೇಡ.ಹಾಗಾದರೆ ಒಳಿತಿನಿಂದ ನನ್ನನ್ನುದೂರ ಮಾಡುವೆ.ಕೆಡುಕಿನೆಡೆಗೆ ಹತ್ತಿರವಾಗಿಸುವಿ.ನಿನ್ನ ಅನುಗ್ರಹವನ್ನಲ್ಲದೇ ನಾನು ಬರವಸೆ ಇಟ್ಟಿಲ್ಲ.ಅಂತ್ಯ ದಿನದಲ್ಲಿ ನೀನು ನನಗೆ ನೀಡುವ ಕರಾರನ್ನು ದಯೆಪಾಲಿಸು.ನೀನು ಕರಾರಿಗೆ ತಪ್ಪುವವನಲ್ಲ.
ಹದೀಸು
ಪ್ರವಾದಿ ಮುಹಮ್ಮದ್ ರವರು ಕಲಿಸಿದ ಮಹೊನ್ನತ ಪ್ರಾರ್ಥನೆ ಇದಾಗಿದೆ.
ಪ್ರಾರ್ಥನೆಯ ಮೂಲಕ ಪ್ರವಾದಿ ()ಸಮುದಾಯಕ್ಕೆ ಅತ್ಯಮೂಲ್ಯವಾದ ಸಂದೇಶವನ್ನು ನೀಡಿದ್ದಾರೆ .ಪ್ರತಿ ದಿನ ಧರ್ಮಾಧಾರಿತವಾಗಿ ಬದುಕುತ್ತೇನೆಂಬ ಕರಾರನ್ನು ಅಲ್ಲಾಹನೊಂದಿಗೆ ಮಾಡಿ, ಸ್ವ ಇಚ್ಚೆಯ ಕಡೆ ವಾಲದಿರುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸುವ ಮೂಲಕ ಪ್ರತಿಯೋರ್ವರಲ್ಲೂ ಧರ್ಮನಿಷ್ಟೆ ಜಾಗ್ರತಿ ಮೂಡಿಸುವ ಸಂಗತಿಯಾಗಿದೆ ಸಂದೇಶ.
ಸ್ವ ಇಚ್ಚೆಯ ಹಿಂದೆ ಬಿದ್ದರೆ ನ್ಯಾಯ ನೀತಿ ಪ್ರಾಮಾಣಿಕತೆಯಿಂದ ಬದುಕಲು  ಅಸಾಧ್ಯ ವೆನ್ನುವುದು ಪ್ರಾರ್ಥನೆಯ ಸಾರ.
ಪವಿತ್ರ ಕುರಾನ್ ಹೀಗೆನ್ನುತ್ತದೆ.
ಖಂಡಿತಾ ಮನಸ್ಸು ಕೆಡುಕನ್ನು ಹೆಚ್ಚಾಗಿ ಬಯಸುತ್ತದೆ.ಸೂರ ಯೂಸುಫ್ -53.
ಇಂದು ನಾವು ಕಾಣುತ್ತಿರುವ  ವೈಯಕ್ತಿಕ, ಕೌಟುಂಬಿಕ, ಸಾಮುದಾಯಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಜಾತಿ ,ಪಂಗಡ, ಸಾಂಸ್ಕೃತಿಕ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಂಘರ್ಷ,ಕಲಹ,ಹಗೆ,ದೊಂಬಿ ಅಸಹಿಷ್ಣುತೆ,ಅಸಹಕಾರ, ಅಸಮಧಾನ,ಎಲ್ಲದರ ಮೂಲ ಕಾರಣ ಒಂದೇ ಆಗಿದೆ. ಅದು ಸ್ವಾರ್ಥ ಮಾತ್ರ. ಧರ್ಮ ಪ್ರಜ್ಞೆ ಮಾತ್ರ ಅದಕ್ಕೆ ಪರಿಹಾರ.
ಅಧರ್ಮದ ವಿರುದ್ಧ ಧ್ವನಿ ಎತ್ತಬೇಕಾದವರೇ ಅಧರ್ಮ ಕಾರ್ಯವನ್ನು ಮಾಡಿದರೆ ಧರ್ಮ ಹೇಗೆ ಉಧ್ದಾರವಾಗೋದು?
ಕದ್ದು ತಂದ ಸಂಪತ್ತಿನಲ್ಲಿ ಕಾನೂನು ಪಾಲಕನೇ ಪಾಲು ಕೇಳಿದರೆ ಕಾನೂನನ್ನು ಕಾಪಾಡುವುದು ಯಾರು ?ಕಳಪೆ ಕಾಮಗಾರಿ ನಡೆಸುವಾತನಿಂದ ಹೆಚ್ಚುವರಿ ಕಮೀಷನ್ ಪಡೆವವನಿಂದ ಹೇಗೆ ಸಾರ್ವಜನಿಕ ಸೊತ್ತುಗಳನ್ಮು ಉಳಿಸಲು ಸಾಧ್ಯ?
ನ್ಯಾಯ ಕೊಡಬೇಕಾದವರು ನ್ಯಾಯದ ತಕ್ಕಡಿಯ ತಟ್ಟೆಯಲ್ಲಿ ಹಣದ ಗಂಟನ್ನು ತೂಗಿದರೆ ಹೇಗೆ ನ್ಯಾಯ ಸಿಗೋದು?
ಶಿಕ್ಷೆ ಕೊಡಬೇಕಾದ ಜೈಲುಗಳಲ್ಲಿ ಆತಿಥ್ಯ ಮರ್ಯಾದೆ ಸಿಗೋದಾದರೆ ಹೇಗೆ ತಪ್ಪಿತಸ್ಥ ರನ್ನು ಶಿಕ್ಷಿಸಲು ಸಾದ್ಯ?ಭ್ರಷ್ಟರನ್ನು ಮಟ್ಟ ಹಾಕಬೇಕಾದ ಅಧಿಕಾರಿಗಳು ಆಡಳಿತದ ಕೈಗೊಂಬೆಗಳಾದರೆ ಹೇಗೆ   ಭ್ರಷ್ಟಾಚಾರ ನಿಗ್ರಹ ಸಾಧ್ಯ?
ಆಡಳಿತ, ಕಾನೂನು,ಸುವ್ಯವಸ್ಥೆ, ಸುಭದ್ರತೆಗಳ ಕೇಂದ್ರಗಳು ಸ್ವಾರ್ಥ ಕ್ಕೆ ಬಲಿಯಾದರೆ ಅರಾಜಕತೆ ನಿರ್ಮಾಣವಾದಿತು.
ಕೋಳ ತೊಡಿಸಬೇಕಾದದ್ದು ಕಳ್ಳನಿಗೋ ಅಥವಾ ಕಳ್ಳನನ್ನು ದೋಚುವವನಿಗೋ?ಕಟಕಟೆಯಲ್ಲಿ ನಿಲ್ಲಬೇಕಾದದ್ದು ಆರೋಪಿಯೋ ಅಲ್ಲ ನ್ಯಾಯಾಧೀಶನೋ?ಯಾರೋ ಹೇಳಿದರು,
ಪಿಕ್ ಪಾಕೇಟ್ ಮಾಡಿ ಓಡುವವನನ್ನು ಬೆನ್ನಟ್ಟುವ ಸಾಮಾನ್ಯನಿಂದ ರಕ್ಷಿಸಿಕೊಳ್ಳಲು ಕಳ್ಳ ಸ್ಟೇಷನಿನ ಕಡೆಯೇ ಓಡ್ತಾನಂತೆ !
ಆಡಳಿತ ಮತ್ತು ಕಾನೂನಿನ ಯಂತ್ರ ಸ್ವಾರ್ಥ ಅಥವಾ ದ್ವೇಷ ಸಾಧನೆಗೆ ಬಲಿಯಾಗಬಾರದು.
ವ್ಯಕ್ತಿಗೆ ಹುಚ್ಚು ಹಿಡಿದರೆ ಸರಪಳಿಯಲ್ಲಿ ಹಾಕಬಹುದು ಸರಪಳಿಗೆ ಹುಚ್ಚುಹಿಡಿದರೆ ಏನು ಮಾಡಲು ಸಾಧ್ಯ? ಹುಳ ಹತ್ತದಿರಲು ಉಪ್ಪು ಹಾಕ್ತಾರೆ ಉಪ್ಪಿಗೆ ಹುಳ ಬಿದ್ದರೆ? ಗತಿಯೋ ಗತಿ!
ಅನ್ಯಾಯ, ಕೊಲೆ,ಅಫರಾದಗಳನ್ನು ವ್ಯಕ್ತಿ ಪ್ರಭಾವದ ಮೇಲೆ ನಿರ್ಣಯಿಸಲ್ಪಡುವುದು ಸಾಮಾಜಿಕ ದುರಂತವಾಗಿದೆ. ಶತ್ರುವಾದರೂ ಆತನೊಂದಿಗೆ ನ್ಯಾಯ ಪಾಲಿಸಬೇಕೆನ್ನುವದು ದೈವ ಆಜ್ಞೆಯಾಗಿದೆ.ಅದು ಅಲ್ಲಾಹನೊಂದಿಗಿನ ಕರಾರು ಕೂಡ.
ಒಬ್ಬ ವ್ಯಕ್ತಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡುವವನೆಂಬ ಕಾರಣಕ್ಕೆ ಆತನ ಅಪರಾಧದ ಪ್ರಮಾಣ ಕಮ್ಮಿಯಾಗಲಾರದು.ಪ್ರತಿಷ್ಟಿತ ಕುಟುಂಬದ ಮಹಿಳೆಯು ಕಳ್ಳತನ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗುತ್ತಾಳೆ.ಆಗ ಅವಳ ಕುಟುಂಬದ ಮಂದಿ ನಬಿ ಯೊಂದಿಗೆ  ಮಾತನಾಡಿ ಶಿಕ್ಷೆಯಿಂದ ಪಾರು ಮಾಡಲು  ಮುಂದಾದಾಗ ನಬಿ ( ) ಹೇಳಿದ ಮಾತು ನನ್ನ ಮಗಳು ಕದ್ದರೂ ಕೈ ಕಡಿವೆಎಂದಾಗಿತ್ತು.
ಭೌತಿಕತೆಯ ಪ್ರವಾಹವು ಧಾರ್ಮಿಕತೆಯನ್ನು ಕೊಚ್ಚಿಕೊಂಡು ಹೋದರೆ ಮತ್ತೆ ಉಳಿಯೋದು ಸ್ವಾರ್ಥ ಮಾತ್ರ.ಇದರಿಂದ ಹಲವು ಅನಿಷ್ಟಗಳನ್ನು ನಾವು ನೋಡಬೇಕಾಗುತ್ತದೆ.ಮೊನ್ನೆ ಕೇರಳದ ಒಂದು ಮಸೀದಿಯಲ್ಲಿ ತರ್ಕ ಜೋರಾಗಿ ಸ್ವವರ್ಗದವರಿಂದಲೇ ತಲವಾರು ಪ್ರಯೋಗ ನಡೆದಿದ್ದರೆ ಅಚ್ಚರಿ ಪಡಬೇಕಾಗಿಲ್ಲ.ಎಲ್ಲರೂ ಸ್ವಾರ್ಥ ಪೂಜಕರಾಗಿ ಬದಲಾಗುತ್ತಿದ್ದಾರೆ.
ಧರ್ಮ,ಆಡಳಿತ,ಕಾನೂನು ಸ್ವಾರ್ಥ ಮತ್ತು ದ್ವೇಷ ಸಾಧನೆಗೆ ಬಳಕೆಯಾದರೆ ಪ್ರಳಯ ನಿಶ್ಚಿತ.
ಕುರಾನ್ ಹೇಳುತ್ತದೆ.*
ಸತ್ಯವಿಶ್ವಾಸಿಗಳೇ ನೀವು ನ್ಯಾಯ ಪಾಲಿಸುವವರಾಗಿ. ಅಲ್ಲಾಹನ ಸಾಕ್ಷಿಗಳಾಗಿ.ಅದು ನಿಮ್ಮ ವಿರುದ್ಧ ವಾದರೂ ಸರಿ. ಅಥವಾ ಹೆತ್ತವರೋ ಹತ್ತಿರದ ಕುಟುಂಬಸ್ಥರೋ ಇರಲಿ.ಅವರು ಶ್ರೀಮಂತ ಇಲ್ಲವೇ ಬಡವನಿರಲಿ. ಅಲ್ಲಾಹನು ಅವರ ನಿಕಟವಾಗಿದ್ದಾನೆ.ನೀವು ಸ್ವ ಇಚ್ಛೆಯನ್ನು ಅನುಸರಿಸಬೇಡಿ.ನೀವು ನ್ಯಾಯವನ್ನು ತಿರಿಚಿದರೆ ಅಥವಾ ಹಿಂದೆ ಸರಿದರೆ ಅಲ್ಲಾಹನು ನೀವು ಮಾಡುವ ಕೆಲಸಗಳನ್ನು ಅರಿಯುವವನಾಗಿರುತ್ತಾನೆ. ಅನ್ನಿಸಾ : 135,

ಪ್ರತಿ ದಿನ ನಮ್ಮ ಕರಾರನ್ನು ಪಾಲಿಸೋಣ ನಿಸ್ವಾರ್ಥಿಗಳಾಗಿ ಬದುಕೋಣ.ಅಲ್ಲಾಹನು ಕರುಣಿಸಲಿ.ಆಮೀನ್.

No comments:

Post a Comment