ಮಹಿಳೆಯರಿಗೆ ತಲುಪದ ಜನ ಜಾಗೃತಿ ಕಾರ್ಯಕ್ರಮಗಳು ಯಶಸ್ಸು ಕಾಣಲು ಸಾದ್ಯವಿಲ್ಲ


ಅಲ್ ಅಹ್ಸನ್ ಗೌರವ ಸಂಪಾದಕ ಎಸ್.ಬಿ.ಮುಹಮ್ಮದ್ ದಾರಿಮಿ ಯವರ ಜುಮ್ಮಾ ಭಾಷಣ
ವರದಿ - ಮುಹಮ್ಮದ್ ಇಲ್ಯಾಸ್

ಪುತ್ತೂರು: ಕೆಲ ವರ್ಷಗಳ ಹಿಂದೆ ನನ್ನ ಮಿತ್ರರಾಗಿದ್ದ ಮದ್ರಸ ಉಸ್ತಾದರೊಬ್ಬರು ವರದಕ್ಷಿಣೆ ರಹಿತವಾಗಿ ಬಡ ಯುವತಿಯೊಬ್ಬಳನ್ನು ಮದುವೆಯಾಗಿದ್ದರು
ಆರ್ಥಿಕವಾಗಿ ಕಷ್ಟದಲ್ಲಿದ್ದ ಅವರು ಸ್ವಾಭಿಮಾನಿಯಾಗಿದ್ದ ಕಾರಣ ಬೇರೆಯವರ ಮುಂದೆ ಕೈಚಾಚಿ ಮದುವೆ ಕಾರ್ಯ ಆಡಂಬರ ಮಾಡುವುದಿಲ್ಲ ಎಂದು ತೀರ್ಮಾನಿಸಿ ಸಾಲಸೋಲ ಮಾಡದೆ ಸರಳವಾಗಿ ಮಸೀದಿಯಲ್ಲಿ ಲಘು ಉಪಹಾರ ನೀಡಿ ಖಾಝಿಗಳ ಉಲಮಾಗಳ ನೂರಾರು ಹಿತೈಷಿ ಗಳ ಸಮ್ಮುಖದಲ್ಲಿ ನಿಖಾಮಾಡಿಕೊಂಡಿದ್ದರು ಅಂದುಅಲ್ಲಿ ಮಸೀದಿಯಲ್ಲಿ  ಸೇರಿದ್ದ  ಪುರುಷರೆಲ್ಲರೂ ಬಹಳ ಸಂಭ್ರಮ ಮತ್ತು ಖುಷಿ ಪಟ್ಟಿದ್ದರೂ
ಮದ್ರಸದಲ್ಲಿ ನೆರೆದಿದ್ದ ಮಹಿಳೆಯರು ಮಾತ್ರ ಮುಖಃ ಸಿಂಡರಿಸಿ ಸೂತಕದ ಮನೆಯವರಂತೆ ವರ್ತಿಸಿದ್ದರು
ಮಾತ್ರವಲ್ಲ ಅವರ ಪೈಕಿ ಹಿರಿಯ ಮಹಿಳೆಯೊಬ್ಬರು ಕೈಎತ್ತಿ ಪ್ರಾರ್ಥಿಸಿಯೇ ಬಿಟ್ಟರು

ಪಡಚೆ ರಬ್ಬೇ ಗದಿಕೆಟ್ಟೆ ಮಙಿಲ ನೆಬಿರೆ ಉಮ್ಮತಿಗ್ ಆರ್ಗುಂ ಎತ್ತ್ ಪಾಟಿರಂಡ
(ಇಂತಹ ಗತಿಗೇಡಿನ ಮದುವೆ ಪೈಗಂಬರ ಅನುಯಾಯಿಗಳಿಗೆ ದಯಪಾಲಿಸಬೇಡ ರಬ್ಬೇ)
ಮುಸ್ಲಿಂ ಸಮಾಜದ ಮಹಿಳೆಯರ ಮನೋಸ್ಥಿತಿ ಹೇಗಿದೆ ಎಂಬುದರ ಒರೆಗಲ್ಲಾಗಿದೆ ಒಂದು ಉದಾಹರಣೆ
 ಇಂತಹ ಉದಾಹರಣೆಗಳು ಸಮಾಜದ ಉಲಮಾ ಉಮರಾ ಗಳಿಗೆ ಮತ್ತು ಸಮಾಜದ ಹಿತೈಷಿಗಳಿಗೆ  ಸಾಕಷ್ಟು ಕಲಿಯಬೇಕಾದ ಅಂಶಗಳನ್ನು ತೆರೆದಿಡುತ್ತದೆ ಎಂದು ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಯಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಹೇಳಿದ್ದಾರೆ
 ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರೇ ಹೆಚ್ಚಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳಲ್ಲಿ ಹೆಚ್ಚಿನವು ನಾವೇ ಹುಟ್ಟು ಹಾಕಿದ ಸಮಸ್ಯೆಗಳಾಗಿವೆ
ಸಮಸ್ಯೆಗಳು ಉಲ್ಬಣಿಸಿ ಅದು ಇಡೀ ಸಮಾಜವನ್ನು ಕಾಡಲು ತೊಡಗಿದಾಗ ಅದರ ವಿರುದ್ಧ ಜನಾಂದೋಲನ ರೂಪುಗೊಳ್ಳುವುದು ಪ್ರಕೃತಿ ನಿಯಮವಾಗಿದೆ. ಇದೇ ತತ್ವ ಪ್ರಕಾರ ಮುಸ್ಲಿಂ ಸಮಾಜದಲ್ಲಿ ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಜನಜಾಗೃತಿ ರೂಪುಗೊಳ್ಳುತ್ತಿದ್ದು ಇಂತಹ ಜನಾಂದೋಲನಗಳು   ಮಹಿಳೆಯರ ಕಡೆಗೆ ತಲುಪದಿದ್ದರೆ ಅದು ಪರಿಣಾಮಕಾರಿಯಾಗಿ ಯಶಸ್ಸು ಕಾಣುವುದಿಲ್ಲ ಎಂದ ದಾರಿಮಿ  ಸಮಾಜದ ಅರ್ಧ ಭಾಗವಾಗಿರುವ ಮಹಿಳೆಯರನ್ನು ಕತ್ತಲೆಯಲ್ಲಿಟ್ಟು ಪುರುಷರು ಮಾತ್ರ ಸುಧಾರಿಸಿ ಕೊಂಡರೆ ಏನೂ ಪ್ರಯೋಜನ ಇಲ್ಲ ಎಂಬುವುದಕ್ಕೆ  ಮೇಲಿನ ಮಹಿಳೆಯ ದುಹಾ ಉದಾಹರಣೆಯೇ ಸಾಕ್ಷಿ ಎಂದು ನುಡಿದರು
ಮಹಿಳೆಯರಿಗೆ ಧಾರ್ಮಿಕ ವಿದ್ಯೆ ನೀಡುವ ಮೂಲಕ ಧರ್ಮ  ಜಾಗೃತಿ ಮೂಡಿಸ ಬೇಕಾದ ಜರೂರತ್ತು ಇಂದು ಎದುರಾಗಿದ್ದು
ಮುಸ್ಲಿಂ ಮಹಿಳೆಯರನ್ನು ಲೌಕಿಕ ಡಿಗ್ರಿ ಕಲಿಸಿ ದುಡಿಯಲು ಕಲಿಸುವ ಬದಲು  ತಾಲೂಕು ಒಂದರಲ್ಲಿ ಕನಿಷ್ಟ ಮೂರು ವುಮನ್ಸ್ ಶರೀಹತ್ ಕಾಲೇಜಾದರೂ  ತರೆದು ಇಸ್ಲಾಂ ಧರ್ಮದ ನಿರಾಡಂಬರ ಜೀವನ ಶೈಲಿಯನ್ನು ಕಲಿಸ ಬೇಕಾದ ಅನಿವಾರ್ಯತೆ ಇದೆ
ಎಂದ ಖತೀಬರು ಪ್ರವಾದಿ ಪ್ರೀತಿಯ ಪುತ್ರಿ ವಿವಾಹವನ್ನು ಕೇವಲ ಖರ್ಜೂರ ನೀಡಿ ನೆರವೇರಿಸಿದ್ದರೆಂಬ ಜ್ಞಾನ ಮೇಲಿನ ಮಹಿಳೆಗೆ ಇರುತ್ತಿದ್ದರೆ ಅಂತಹ ಪ್ರಾರ್ಥನೆ ಅವರಿಂದ ಉಂಟಾಗುತ್ತಿರಲಿಲ್ಲ ಎಂದು ದುಖಃ ವ್ಯಕ್ತಪಡಿಸಿದರು
 ಇಂದು ನಮ್ಮದೇ ಜಿಲ್ಲೆಯಲ್ಲಿ ಮೂವತ್ತು ವರ್ಷ ದಾಟಿದ  ನೂರಾರು ಮಹಿಳೆಯರು ಮದುವೆಯಾಗದೆ ಉಳಿದಿದ್ದರೆ ಅದಕ್ಕೆ ಗರಿಷ್ಟ ಮಹಿಳೆಯರೇ ಕಾರಣ ಎಂದು ವಿವರಿಸಿದ ದಾರಿಮಿ ಒಣ ಪ್ರತಿಷ್ಠೆ -ಅತಿಯಾಸೆ -ಆಡಂಬರ ಪ್ರಿಯತೆ -ಇತರರೊಂದಿಗೆ ತುಲನಾತ್ಮಕ ಭಾವನೆ -ಮುಂತಾದ ಕೆಟ್ಟ ಗುಣಗಳಿಂದ  ಮಹಿಳೆಯರು ಹೊರ ಬಂದರೆ ಮಾತ್ರ ಸಮಾಜಕ್ಕೆ ಉಳಿಗಾಲವಿದೆ  ಎಂದ ದಾರಿಮಿ ಬಗ್ಗೆ ಅನಾಸ್ಥೆ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು  ಎಚ್ವರಿಸಿದರು
ಇಂದು ಎಲ್ಲಾ ಆಪೀಸು ಕಛೇರಿಗಲ್ಲಿ ಅಂಗಡಿ ಮುಗ್ಗಟ್ಟುಗಳಲ್ಲಿ ಮಹಿಳೆಯರೇ ಹೆಚ್ಚಾಗಿ  ದುಡಿಯುತ್ತಿದ್ದು ಪುರುಷರು ನಿರುದ್ಯೋಗಿಗಳಾಗಿ ಊರು ಸುತ್ತುತ್ತಿದ್ದಾರೆ
ಇದರಿಂದ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಕೌಟುಂಬಿಕವಾಗಿಯೂ ಸಮಸ್ಯೆಗಳು ತಲೆದೋರಲು ಆರಂಬಿಸಿದ್ದು ಮುಂದೆ ಇದು ಇನ್ನಷ್ಟು ಉಲ್ಬಣಿಸುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದ ಖತೀಬರು
ಅಂತಹ ತುರ್ತು ಸಂದರ್ಭದಲ್ಲಿ ಮಾತ್ರ ಮಹಿಳೆಯರು ದುಡಿಯಲು ಹೊರ ಹೋಗ ಬಹುದೇ ಹೊರತು ಆರ್ಥಿಕ ಸಮಸ್ಯೆ ಇಲ್ಲದಿದ್ದರೆ ಮಹಿಳೆಯರು ಮನೆಯಲ್ಲಿದ್ದು ಕೊಂಡು ತನ್ನ ಪರಿವಾರದ ಬಗ್ಗೆ ಕಾಳಜಿ ವಹಿಸಿ ಇಸ್ಲಾಮೀ ಜೀವನ ನಡೆಸುವುದರಲ್ಲಿ ಹೆಚ್ಚು ಗಮನಹರಿಸುವುದು ಅಗತ್ಯ ಇದರಿಂದ ಮನಶಾಂತಿ ಕೂಡಾ ಹೆಚ್ಚು  ಲಭಿಸುತ್ತದೆ ಎಂದು ನುಡಿದರು
ಪುರುಷರನ್ನೇ ಮನೆಯ ಯಜಮಾನನಾಗಿ ಅಂಗೀಕರಿಸಿ ಅವನ ಅಣತಿಂಯಂತೆ ಮನೆ ನಡೆಸಿದರೆ ಮನೆಯಲ್ಲಿ ಸಂತೃಪ್ತಿ ಇರುತ್ತದೆ
ಆದರೆ ಇಂದು ಹೆಚ್ಚಿನ ಕುಟುಂಬದಲ್ಲಿ ಯಜಮಾನನ ಮಾತು ನಡೆಯುವುದಿಲ್ಲ. ನಾಡಿನ ಆಗುಹೋಗುಗಳ ಬಗ್ಗೆ ಪ್ರಜ್ಞೆ ರೂಡಿಸಿ ಕೊಂಡು ಮನೆಗೆ ಬಂದ ಯಜಮಾನ ತನ್ನ ತಿಳುವಳಿಕೆಯ ಆದಾರದಲ್ಲಿ ಏನಾದರೂ ತೀರ್ಮಾಣಕ್ಕೆ ಬಂದರೆ ಅದಕ್ಕೆ ಅಡ್ಡಿಪಡಿಸುವ ಮಹಿಳೆಯರು ಮನೆಗೆ ಮತ್ತು ಕುಟುಂಬಕ್ಕೆ  ಅಪಾಯಕಾರಿಯಾಗಿದ್ದಾರೆ  ಎಂದು ಉದಾಹರಣೆ ಸಮೇತ ವಿವರಿಸಿದ ಉಸ್ತಾದರು
ಮಹಿಳೆಯರು ಸಮಾಜದ ಅರ್ಧ ಬಾಗವಾಗಿರುವುದರಿಂದ ಅವರನ್ನು ಪ್ರಬುದ್ದರನ್ನಾಗಿಸದಿದ್ದರೆ ಅದು ಒಟ್ಟಾರೆ ಸಮಾಜಕ್ಕೆ ಆತಂಕ ಸೃಷ್ಟಿಸುತ್ತದೆ ಎಂದರು

ಮಲಪ್ಪುರಂ ಜಿಲ್ಲೆಯ ಸಮಸ್ತದ ಮೇಲ್ನೋಟದಲ್ಲಿ ನಡೆಯುತ್ತಿರುವ ಮಹಿಳಾ ವಾಪೀ ಕಾಲೇಜಿನ ವಾರ್ಷಿಕ ಪ್ರಯುಕ್ತ ಮಹಿಳೆಯರಿಂದ ಮಹಿಳೆಯರಿಗಾಗಿ ಆಯೋಜಿಸಿದ ಮಹಿಳಾ ಸಮ್ಮೇಳನ ನಿಟ್ಟಿನಲ್ಲಿ ಮಾದರಿಯುಕ್ತವಾಗಿದೆ ಎಂದು ಪ್ರಶಂಸಿದರು

No comments:

Post a Comment