ಒಡೆದ ಮನಸ್ಸುಗಳನ್ನು ಕಾನೂನಿನ ಬಲದಿಂದ ಒಗ್ಗೂಡಿಸಲಾಗದು.

ಸಾಹಿರಾಬಾನು ಗೆ ನ್ಯಾಯ ಕೊಡಲು ಮುಂದಾದ ಸರಕಾರ ಗುಂಪು ಮತ್ತು ಕೋಮು ಹತ್ಯೆಗಳ ಸಂತ್ರಸ್ತ ವಿಧವೆಯರಿಗೆ ನ್ಯಾಯ ಕೊಡುಬಹುದೇ?

ಮೌಲಾನಾ ಯುಕೆ ಅಝೀಝ್ ದಾರಿಮಿ ಚೊಕ್ಕಬೆಟ್ಟು ಭಾಷಣ 
ವರದಿ ಅಲ್ ಅಹ್ಸನ್

ಇಬ್ರಾಹೀಮ್ ರನ್ನು ಅವರ ಪ್ರಭು ಕೆಲವು ಆಜ್ಞೆಗಳ ಮೂಲಕ ಪರೀಕ್ಷಿಸಿದ ಮತ್ತು ಅವರು ಅದನ್ನು ನೆರವೇರಿಸಿದ ಸಂದರ್ಭ(ವನ್ನು ಸ್ಮರಿಸಿರಿ). (ಆಗ) ಅಲ್ಲಾಹು ಅವರೊಂದಿಗೆ ಹೇಳಿದನು: ‘ನಾನು ತಮ್ಮನ್ನು ಮಾನ ವರಿಗೆ ನಾಯಕನನ್ನಾಗಿ ಮಾಡುವೆನು’. ಇಬ್ರಾಹೀಮ್ ಹೇಳಿದರು: ‘ನನ್ನ ಸಂತತಿಗಳಲ್ಲಿ ಸೇರಿದವರನ್ನೂ (ನಾಯಕರನ್ನಾಗಿ ಮಾಡು)’. ಅಲ್ಲಾಹು ಹೇಳಿದನು: ‘(ಸರಿ, ಆದರೆ) ನನ್ನ ಈ ನಿರ್ಧಾರವು ಅಕ್ರಮಿಗಳಿಗೆ ಅನ್ವಯವಾಗಲಾರದು’.ಕುರಾನ್ -೨:೧೨೪

ಪರೀಕ್ಷೆಗಳ ಅಗ್ನಿ ಭೂಮಿಯಲ್ಲಿ ಉಜ್ವಲ ಬೆಳಕಾಗಿ ಬೆಳಗಿದ ಹಝ್ರತ್ ಇಬ್ರಾಹಿಂ (ಅಲೈಸ್ಸಲಾಂ) ರ ತ್ಯಾಗ ಪೂರ್ಣ ಸ್ಮರಣೆಯನ್ನು ಕುರಾನ್ ಈ ರೀತಿ ವರ್ಣಿಸುತ್ತದೆ.ಆ ಮೂಲಕ ಇಬ್ರಾಹೀಮ್ (ಅ)ಮಾಡಿದ ಸತ್ಯಕ್ಕಾಗಿ ಸರ್ವ ತ್ಯಾಗದ ಮತ್ತು ಬಲಿದಾನದ
ಅಧ್ಯಾಯ ವನ್ನು ಜಗತ್ತಿಗೆ ಪರಿಚಯಿಸುತ್ತದೆ. ಇದನ್ನು ಈದುಲ್ ಅಝ್ಹಾ ಮೂಲಕ ಮುಸ್ಲಿಂ ಜಗತ್ತು ಸ್ಮರಿಸುತ್ತದೆ.
ಆಡಳಿತಾತ್ಮಕವಾಗಿ ನುಂರೂದ್,ಕೌಟುಂಬಿಕವಾಗಿ ತಂದೆ,ಸಾಮಾಜಿಕವಾಗಿ ಸಮಾಜವನ್ನು ಎದುರಿಸಬೇಕಾದ ಹಝ್ರತ್ ಇಬ್ರಾಹಿಂ (ಅ)ಪರೀಕ್ಷಾರ್ಥ ವಾಗಿ  ಮಡದಿಯರಾದ ಸಾರ ಬೀವಿ,ಹಾಜರಾಬೀವಿ,ಸುಪುತ್ರ ಇಸ್ಮಾಯಿಲ್ (ಅ) ಎಲ್ಲರಿಂದಲೂ ಸಂಕಟವನ್ನು ಎದುರಿಸಿದರು.
ಅಧಾರ್ಮಿಕತೆಯ ವಿರುಧ್ಧ ಅಗ್ನಿಯನ್ನು ಭೇದಿಸಿ,ದೇವಭಕ್ತಿಗಾಗಿ,ಜನ್ಮಭೂಮಿಯನ್ನು ತೊರೆದು,  ಪುತ್ರ ವಾತ್ಸಲ್ಯವನ್ನೂ ಬದಿಗೆ ಸರಿಸಿ ಪುತ್ರನ ಕುತ್ತಿಗೆಗೆ ಖಡ್ಗವನ್ನಿಡಲು ಮುಂದಾದ ಇಬ್ರಾಹಿ (ಅ )ರ ಆದರ್ಶ ವನ್ನು ಕೊಂಡಾಡಿದ ಅಲ್ಲಾಹನು ಅವರಿಗೆ  ನಾಯಕತ್ವವನ್ನು ನೀಡುತ್ತಾನೆ.ಪರಮಾಪ್ತ ಸ್ಥಾನವನ್ನು ಕರುಣಿಸುತ್ತಾನೆ.ಈ ನಾಯಕತ್ವ ಅಕ್ರಮಿಗಳಿಗೆ ಇಲ್ಲ ಎಂದೂ ಸ್ಪಷಪಡಿಸುತ್ತಾನೆ.
ಯಾವುದೇ ಸಂದರ್ಭದಲ್ಲಿಯೂ ಅನ್ಯಾಯ ಅಕ್ರಮ ಅಧರ್ಮದ ವಿರುದ್ಧ ಎದೆಗುಂದದೇ ಹೋರಾಡಬೇಕೆನ್ನುವುದು ಬಕ್ರೀದಿನ ಸಂದೇಶವಾಗಿದೆ.
ಪ್ರಚಲಿತ ಕಾಲ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದೇನೆಂದರೆ ದೇಶದ    ಬಹು ಕೋಟಿ ಜನರ ಕಟ್ಟ ಕಡೆಯ ಅಭಯ ಕೇಂದ್ರವಾದ ಸುಪ್ರೀಂಕೋರ್ಟಿನ ತೀರ್ಪು ಹೊರಬಿದ್ದಿದೆ.ಒಂದೆ ಘಳಿಗೆಯಲ್ಲಿ ಮೂರು ತಲಾಕು ಹೇಳುವ ತ್ರಿವಳಿ ತಲಾಕನ್ನು ರದ್ದು ಮಾಡಿ ಹೊಸ ಕಾನೂನನ್ನು ತರಲು ಕೇಂದ್ರಕ್ಕೆ ಶಿಪಾರಸು ಮಾಡಿದೆ.ಇದರಿಂದ ಮುಸ್ಲಿಂ ವೈಯುಕ್ತಿಕ ನಿಯಮವನ್ನು ಕೋರ್ಟು  ಎತ್ತಿ  ಹಿಡಿದಿದೆ  ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳಿಕೆ ನೀಡಿದರ ಜೊತೆಗೆ ಹಲವು ಅನುಮಾನ, ಆತಂಕವನ್ನೂ ವ್ಯಕ್ತ ಪಡಿಸಿದೆ .ತ್ರಿವಳಿ ಪದ್ದತಿಯನ್ನು ನಿರುತ್ಸಾಹ ಗೊಳಿಸಲು ಪ್ರಯತ್ನಿವುದಾಗಿ ಅದು ಹೇಳಿದೆ. ಬಹುಕಾಲದ ಬೇಡಿಕೆ ಈಡೇರಿದೆ ಎಂದು ಕೆಲವರು ಬೀಗಿದರೆ,ಹಲವರು ಸಿಹಿ ಹಂಚಿ ಆನಂದಿಸಿದ್ದಾರೆ.ವಿಷೇಸವೇನೆಂದರೆ ಕೆಲವು ನಾಮದಾರಿ ಮುಸ್ಲಿಂ ಮಹಿಳೆಯರು ವಿಷಯದ ವಸ್ತುಸ್ಥಿತಿ ಅರಿಯದೆ  ಚಾನಲ್ ಮುಂದೆ ಕೂತು ತಮ್ಮ ಅಜ್ಞಾನವನ್ನು ಬಹಿರಂಗ ಪಡಿಸಿದ್ದಾರೆ. ಕೋರ್ಟಿನ ವಿಧಿ ಬಂದದ್ದೇ ತಡ ಮಾಧ್ಯಮಗಳು ತಾ ಮುಂದು ತಾ ಮುಂದು ಎಂಬಂತೆ ಚರ್ಚೆಗಳನ್ನು ನಡೆಸಿದವು. ಶರೀಅತ್ತಿನ ಮೇಲೆ ಮುಗಿಬಿದ್ದವು. ಹೆಚ್ಚೇಕೆ ದೇಶದ ಪ್ರಧಾನಿ ಯವರು ಮಾಜಿ ಪ್ರಧಾನಿ ಮನಮೋಹನ್ ಸಿಂಗರಿಗೆ ಟ್ವೀಟ್ ಮಾಡಿದರೆಂಬ ಮೆಸೇಜು  ಹರಿದಾಡಲಾರಂಬಿಸಿತು. ಸುಪ್ರೀಮ್ ಕೋರ್ಟು  ತ್ರಿವಳಿ ತಲಾಕನ್ನು ರದ್ದು ಮಾಡಿ  ಐತಿಹಾಸಿಕ ತೀರ್ಪನ್ನು ನೀಡಿದೆ ಎಂಬ ಪ್ರಧಾನಿ  ಮನಮೋಹನ್ ಸಿಂಗರಿಗೆ  ಟ್ವೀಟ್ ಮಾಡಿದರಂತೆ.  ಆಗ ಸಿಂಗರು ಪ್ರತಿಕ್ರಯಿಸುತ್ತಾ  "ಅದು ತ್ರಿವಳಿ ಅಲ್ಲ instent tripale ಎಂದು ತಿದ್ದಿ ಇದನ್ನು ನಿಮ್ಮ ಹಿಂಬಾಲಕರಿಗೂ ತಿಳಿಸಿ"ಎಂದರಂತೆ.
ಇದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಪರಮೋಚ್ಚ ಕೋರ್ಟಿನ ತೀರ್ಮಾನವನ್ನು ಪ್ರಶ್ನಿಸುವಂತಿಲ್ಲ.ಕೆಲವರ ವಾದ ಪ್ರಕಾರ ತಲಾಕಿನ ದುರುಪಯೋಗವನ್ನು ತಡೆಯುವ ಉದ್ದೇಶವಾದರೆ ಸ್ವಾಗತಾರ್ಹವಾಗಿದೆ. ಆದರೆ ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗಿದೆ.
ಕಾರಣ ಒಮ್ಮೆಲೆ ಹೇಳುವ  ಮೂರು ತಲಾಕ್ ಇಸ್ಲಾಮಿನ ನಿರ್ದೇಶಿತ ವ್ಯವಸ್ಥೆ ಅಲ್ಲದಿದ್ದರೂ  ಒಂದು ವೇಳೆ ಕೆಲವೊಂದು ಸಂದರ್ಭದಲ್ಲಿ ಆ ರೀತಿ ನಡೆದರೆ ಅದರಿಂದ ತಲಾಕ್  ಸಿಂಧುವಾಗುತ್ತದೆ ಎಂದು ಶರೀಅತ್ತು ಹೇಳಿದೆ.ಮುಸ್ಲಿಂ ವೈಯಕ್ತಿಕ ಕಾನೂನಿನ ಬಗ್ಗೆ ಪರಿಜ್ಞಾನ ಇಲ್ಲದ ಮಂದಿ ಇದನ್ನು ಅಲ್ಲಗಳೆಯುತ್ತಾರೆ.
ಶರೀಅತ್ತು ಅ್ಯಾಕ್ಟ್ ಪ್ರಕಾರ ಇಸ್ಲಾಮಿನ ಕರ್ಮಶಾಸ್ತ್ರದ ವಿಭಿನ್ನ ದಾರಿಗಳಾದ ಮದ್ಹಬುಗಳ ಪರಮೋನ್ನತ ಗ್ರಂಥಗಳನ್ನು ಆಧಾರವಾಗಿ ಕೋರ್ಟು  ಸ್ವೀಕರಿಸಿದೆ.ಹನಫಿ ಪಂಥದವರಿಗೆ ಕರ್ಮಶಾಸ್ತ್ರ ಗ್ರಂಥಗಳಾದ ಹಿದಾಯ  ಮತ್ತು ಪತಾವ ಆಲಂಗೀರಿ ಗ್ರಂಥಗಳನ್ನು ಹಾಗೇ
ಶಾಫಿಈ  ಪಂಥದವರಿಗೆ  ಮಿನ್ಹಾಜ್ ಗ್ರಂಥವನ್ನು ಅವಲಂಬಿಸಿ ವಿಧಿ ನಿರ್ಣಯಿಸಲಾಗುತ್ತದೆ. ಇಸ್ಲಾಮಿನ ನಾಲ್ಕು ಮದ್ಹಬಿನಲ್ಲೂ ತ್ರಿವಳ ಬಗ್ಗೆ ಸ್ಪಷ್ಟ ವಿವರಣೆ ಕೊಟ್ಟಿದೆ.ಇನ್ನು ಕೆಲವರು ಕುರಾನಿನಲ್ಲಿ ಹೇಳಿಲ್ಲ ಅಂತ ಹೇಳುವವರಿದ್ದಾರೆ‌.ಅದು ಅವರಿಗಿರುವ ಅರಿವಿನ ಕೊರತೆಯಾಗಿದೆ.ಧರ್ಮದ ನಾಲ್ಕು ಆಧಾರಗಳು ಕುರಾನ್ ,ಹದೀಸು, ಇಚ್ಮಾ ,ಕಿಯಾಸು ,ಇವೆಲ್ಲದಕ್ಕೂ  ಕುರಾನ್ ಆಧಾರವಾಗಿದೆ.ಆದ್ದರಿಂದ ಮೂರು ತಲಾಕನ್ನು ಒಂದೇ ಸಮಯದಲ್ಲಿ ಹೇಳಿದರೆ ಅದು ಸಿಂಧುವೆಂಬುದನ್ನು ಹಝ್ರತ್ ಉಮರ್ (ರ)ಮತ್ತು ಸ್ವಾಹಾಬಿಗಳು ಅಂಗೀಕರಿಸಿದ ಇಜ್ಮಾ ಆಗಿದೆ.ಇದನ್ನು ಇಮಾಂ ಮುಸ್ಲಿಂ ಸಹೀಹ್ ಮುಸ್ಲಿಂ ಹದೀಸು ಗ್ರಂಥದಲ್ಲಿ ಹೇಳಿದ್ದಾರೆ.ಇಮಾಂ ನಸಾಯಿ (ರ) ವರದಿ ಮಾಡಿದ ಹದೀಸಿನಲ್ಲಿ ಮೂರು ತಲಾಕನ್ನು ಒಮ್ಮೆಲೇ ಹೇಳಿದ ವ್ಯಕ್ತಿಯೊಂದಿಗೆ ನಬಿ (ಸ) ಹೇಳುತ್ತಾರೆ ,
ನಾನು ನಿಮ್ಮ ಮುಂದೆ ಇರುವಾಗಲೇ ಅಲ್ಲಾಹನ ಗ್ರಂಥದೊಂದಿಗೆ ಆಟವೇ? ಇದೇ ರೀತಿ
ರುಕಾಣ ಇಬ್ನು ಅಬ್ದು ಯಸೀದ್ ರ ರವರು ತನ್ನ ಪತ್ನಿ ಸುಹೈಮರನ್ನು "ಅಲ್ ಬತ್ತ" ಪದ ಉಪಯೋಗಿಸಿ ತಲಾಕ್ ಹೇಳುತ್ತಾರೆ (ಅಲ್ಬತ್ತ ಪದವು ಒಂದು ಮತ್ತು ಮೂರನ್ನೂ ಉದ್ದೇಶಿಸಬಹುದಾಗಿದೆ)ಆವಾಗ ರುಕಾನ ರೊಂದಿಗೆ ನಬಿಯವರು ಕೇಳುತ್ತಾರೆ ನೀವು ಈ ಮೂಲಕ ಎಷ್ಟು ಉದ್ದೇಶಿಸಿರುವಿರಿ?ನಾನು ಒಂದನ್ನು ಮಾತ್ರ ಬಯಸಿದ್ದೇನೆ ಎಂದು ರುಕಾನಾ( ರ)ಹೇಳುತ್ತಾರೆ.‌ಆಗ ನಬಿಯ ವರು ಅವರೊಂದಿಗೆ ಆಣೆ ಮಾಡಿಸುತ್ತಾರೆ.
ನಂತರ ಪತ್ನಿಯೊಂದಿಗೆ ತೆರಳಲು ಅನಮತಿಸುತ್ತಾರೆ.ಈ ಹದೀಸನ್ನು ಇಮಾಮ್ ಮುಸ್ಲಿಂ ರ ರವರ ಹದೀಸಿ ಗ್ರಂಥದ ವ್ಯಾಖ್ಯಾಕಾರರಾದ  ಇಮಾಂ ನವವೀ( ರ)ರವರು  ಶರಹುಲ್ ಮುಸ್ಲಿಮಿನಲ್ಲಿ ವಿವರಿಸಿದ್ದಾರೆ.ಈ ಎಲ್ಲಾ ಮಾಹಿತಿ ಪ್ರಕಾರ ತ್ರಿವಳಿ ತಲಾಕು ಅನಿಸ್ಲಾಮಿಕ ಎಂದು ಹೇಳಲಾಗದು.ಆದರೂ ಅದನ್ನು ಇಸ್ಲಾಂ ಪ್ರೋತ್ಸಾಹಿಸುವುದಿಲ್ಲ.ಆ ಕಾರಣವಾಗಿಯೇ ದೇಶದಲ್ಲಿ ಬರೀ ೦.೩೭ ಶೇಕಡಾ ಪ್ರಮಾಣದಲ್ಲಿ ತಲಾಕು ನಡೆದಿದೆ.ಇನ್ನು ಕೆಲವರ ವಾದ ಇಸ್ಲಾಂ ಪ್ರೊತ್ಸಾಹಿಸದ ನಿಯಮ ಯಾಕೆ ?ಎಂದು.ಅಲ್ಲಾಹನ ನಿಯಮದಲ್ಲಿ  ಯಾವ ಲೋಪವೂ ಇರಲಿಕ್ಕೆ ಸಾಧ್ಯವಿಲ್ಲ .ಕೆಲವೊಂದು  ಸಂದರ್ಬದಲ್ಲಿ ಇದು ಅನಿವಾರ್ಯವಾಗುವುದುಂಟು.
ವಾಹನಗಳಲ್ಲಿ ತುರ್ತು ನಿರ್ಗಮನ ಬಾಗಿಲು ಇರುತ್ತದೆ ಹಾಗಂತ ಯಾರೂ ಅದರ ಮೂಲಕ ಇಳಿಯಲಿಕ್ಕೋ ಹತ್ತಲಿಕ್ಕೋ ಹೋಗೋದಿಲ್ಲ.ನಿನ್ನೆ ಮೈಸೂರಿನ ನರಸಿಪುರ ತಾಲೂಕಿನ ಸುರೇಶ ಎಂಬಾತ ತನ್ನ ಪತ್ನಿ ಬೇರೆಯೊಬ್ಬನ ಜೊತೆ ಮಲಗಿರುವುದನ್ನು ನೋಡಿ ದಿಗ್ಭ್ರಾಂತನಾಗುತ್ತಾನೆ.ಇದನ್ನು ಕಂಡು ಸಹಿಸದೇ ವಿಷ ಸೇವಿಸಿ ಪ್ರಾಣ ಬಿಡುತ್ತಾನೆ.ಒಂದು ವೇಳೆ ತ್ರಿವಳಿ ತಲಾಕು ಅವಕಾಶ ಆತನಿಗೆ ಇರುತ್ತಿದ್ದರೆ ಆತ ಅದನ್ನು  ಕೊಟ್ಟು ತಾಳ್ಮೆ ವಹಿಸುತ್ತಿದ್ದ .ಜೀವ ಉಳಿಯುತ್ತಿತ್ತು. ಕಣ್ಣೂರಿನಲ್ಲಿ ಕೋರ್ಟು ಆವರಣದಲ್ಲೇ ಮುಸ್ಲಿಂ ಹೆಣ್ಣು ಮಗಳೊಬ್ಬಳು ತನ್ನ ಮೂರು ವರ್ಷದ ಮಗ ಅತ್ತು ತಾಯಿಯ ಸೆರಗನ್ನೆಳೆದು ಕರೆದರೂ ಲೆಕ್ಕಿಸದೇ ಬೇರೆಯವನ ಜೊತೆ ಹೊರಟು ಹೋಗುತ್ತಾಳೆ. ಹೆಂಡತಿಯಾದವಳು ಗಂಡನನ್ನು ಕೊಂದು ಮನೆಯಲ್ಲೇ ಸುಡಲು  ಮಗನನ್ನೇ ಬಳಸಿಕೊಂಡ ದಾರುಣ ಘಟನೆಯ ಬಗ್ಗೆ ಎಲ್ಲರೂ ಅರಿತಿರುವ ವಿಚಾರ. ಇಂತಹಾ ಅಸಹಜ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ  ಅತಿರೇಕದಿಂದ ವರ್ತಿಸದೇ  ತಕ್ಷಣ ಮೂರು  ತಲಾಕನ್ನು ಹೇಳಿ ಹೆಚ್ಚಿನ ಅನಾಹುವನ್ನು ತಪ್ಪಿಸಿ ಯಾವ ಎಡವಟ್ಟನ್ನೂ ಮಾಡದೇ ಪರಿಸ್ಥಿತಿಯನ್ನು ನಿಭಾಯಿಸುವ   ಸಾಧ್ಯತೆ ಇದೆ.ಇಂತಹಾ ಸಂದರ್ಭಗಳಲ್ಲಿ ಕೋಪಗೊಂಡು ಎಷ್ಟೋ ಮಂದಿ  ಅನಾಹುತ ಮಾಡಿ ಜೈಲು ಸೇರಿದವರಿದ್ದಾರೆ. ಅದ್ಯಾವುದಕ್ಕೂ ಅನುವು  ಮಾಡದೇ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಅಂತ ಹೊರಟು ಹೋಗುವ ದಾರಿ ತ್ರಿವಳಿ ತಲಾಕಿನಿಂದ ಸಾಧ್ಯ ವಾಗಬಹುದು.ಇದು ಉತ್ತಮವೋ ಅಲ್ಲಾ ಆ ಆಕ್ರೋಶದ ಸಮಯದಲ್ಲಿ ಏನಾದರೂ ಎಡವಟ್ಟು ಮಾಡಿಕೊಳ್ಳುವುದು ಸರಿಯೋ ?ಇದಕ್ಕೆ ಉತ್ತರ ಕೊಡಬೇಕಾದವರು ಚಾನಲುಗಳ ಮುಂದೆ ಕೂತು ಏನೆಲ್ಲಾ ಮಾತಾಡುವವರು.  ಶರೀಅತ್ತನ್ನು ವಿರೋದಿಸುವವರೊಂದಿಗೆ ಇನ್ನೂ ಒಂದು ಪ್ರಶ್ನೆ ಜಾಲೆಂಜಾಗಿ ಹೇಳುತ್ತೇನೆ . ಕೊಲ್ಲಲು ಕುತಂತ್ರ ಮಾಡುವ , ಬೇರೆಯವನ ಜೊತೆ ಸಂಗ ಬಯಸುವ,ಕಣ್ಣ ಮುಂದೆಯೇ ಬೇರೆಯವನ ಜೋತೆ ಕೈ ಹಿಡಿದು  ಗಂಡನನ್ನು ಬಿಟ್ಟು ನಡೆದು ಹೋಗುವ ಮಡದಿಯರೊಂದಿಗೆ ಸ್ಪಲ್ಪ ತಾಳಿ ಮೂರು ತಿಂಗಳು ಬಿಟ್ಟು ತಲಾಕ್ ಹೇಳು ಅಂತ ಹೇಳುವ ಎದೆಗಾರಿಕೆ ಯಾವನಿಗಿದೆ ?

ಆದರೂ ಈ ಪದ್ದತಿಯನ್ನು ಬಳಸಿ ಮುಗ್ಧ ಹೆಣ್ಣುಮಕ್ಕಳ ಜೊತೆ ಕೌರ್ಯ ತೋರುವ ಮಂದಿಗೆ ಕಾನೂನು ಕ್ರಮ ಜರುಗಿಸಲೇ ಬೇಕು.ಅದು ಶರೀಅತ್ತಿನ ನಿಯಮಗಳ ಮೇಲೆ ಹಸ್ತಕ್ಷೇಪ ಮಾಡದೇ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸದೇ ಆಗಬೇಕು.ಅದು ಹೇಗೆ ಸಾಧ್ಯ ? ಎಂದು ಕೇಳಬಹುದು.   ದುರುಪಯೋಗದ ಆರೋಪ  ಸಾಬಿತಾದರೆ ಬರೋಬ್ಬರಿ ದಂಡ ವಿಧಿಸುವುದೋ,ಶಿಕ್ಷೆ ಕೊಡುವುದೋ ಆಗಬಹುದು .ಗುಲಾಮ ಪದ್ದತಿಯನ್ನು ಇಸ್ಲಾಂ ನಿರ್ಮೂಲನೆ ಮಾಡಿದ್ದು ನಿಶೇಧದಿಂದಲ್ಲ.ಬದಲಿಗೆ
ಕ್ರಿಯಾತ್ಮಕ ಪದ್ದತಿ ಅಳವಡಿಸುವ ಮೂಲಕವಾಗಿತ್ತು.ಹೆಲ್ಮೇಟ್ ಹಾಕದವನ  ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವುದಕ್ಕಿಂತ ದಂಡ ವಿಧಿಸೋದು  ಉತ್ತಮ ಪದ್ದತಿಯಾಗಬಹುದು .ಪ್ರಸವ ಸಮಯ ಮಗು ಸತ್ತಿದೆ ಅಂತ ಮದುವೆ ಬೇಡ ಎಂದು ಹೇಳುವ ಅಜ್ಞಾನಿಗಳು ಇಲ್ಲಾ ಅಂತ ಹೇಳಕ್ಕಾಗಲ್ಲಾ.ಕಾನೂನಾತ್ಮಕ ಹೋರಾಟದ ಕಾಲ ದೂರವಿಲ್ಲ.ಪಾರ್ಲಿಮೆಂಟಿನಲ್ಲಿ ರಚನಾತ್ಮಕ ಕಾನೂನು ಜಾರಿಯಾಗಲಿ . ಆ ಮೂಲಕ ತ್ರಿವಳಿ ದುರುಪಯೋಗ ಕೊನೆಯಾಗಲಿ. ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆಯಾಗದಿರಲಿ ಎಂದೇ ನಮ್ಮ ಅಭಿಮತ.ಆದರೂ
ನಾವು ಸಿಹಿ ಹಂಚುವ  ಸಂತಸ ಪಡುವ ಸ್ಥಿತಿಯಲ್ಲಿ ಖಂಡಿತಾ ಇಲ್ಲ .ಕಾರಣ ಗುಜರಾತಿನ ಗುಲ್ಬರ್ಗ ಸೊಸೈಟಿಯಲ್ಲಿ ಸುಟ್ಟು ಕರಕಲಾದ ನಾನೂರು ಶವಗಳಲ್ಲಿ ಒಬ್ಬರಾದ ಮಾಜಿ ಸಂಸದ ಇಹ್ಸಾನ್ ಜಾಪ್ರಿಯ ವಿಧವೆ ಝಕಿಯಾ ಜಾಫ್ರಿ,ಸಾಮೂಹಿಕ ಅತ್ಯಾಚಾರದ ಕಥೆ ಬರೆದ ಬಲ್ಖೀಸ್ ಬಾನು ,ಆಮ್ನಷ್ಟಿ ಇಂಟರ್ ನ್ಯಾಶನಲ್ ಮುಂದೆ ಅತ್ಯಾಚಾರಿಗಳಿಗೆ ಶಿಕ್ಷೆಯಾದರೆ ನಾನು ಬದುಕುವೆ ಎಂದು ಕೈ ಮುಗಿದು ಬೇಡಿದ ಮಝಪರ ಬಾದಿನ ಇಶಾ ಬಾನು ,"ಗೋ" ಕಾರಣ ಗುಂಪು ಹತ್ಯೆಯಲ್ಲಿ ಸಾವನ್ನಪ್ಪಿದ ನೂರಾರು ಅಮಾಯಕರ ಪತ್ನಿಯರು,ರೈಲಿನಲ್ಲಿ ಕೊಲೆಯಾದ ಹದಿನಾರರ ಹರೆಯದ ಜುನೈದ್ನ ತಾಯಿ ,ದೆಹಲಿಯ ಕಾಣೆಯಾದ ನಜೀಬನ ತಾಯಿ ನಫೀಸಾ, ಹೀಗೇ ಸಾವಿರಾರು ಅಕ್ಕ ತಂಗಿಯರು ಕಣ್ಣೀರಲ್ಲಿ ದಿನ ದೂಡುತ್ತಿರುವಾಗ ಸಂತೋಷದ ಅಚ್ಚೇ ದಿನ್ ಗಳು  ನಮಗೆ ಬರಲು ಸಾದ್ಯವೇ,? ಸಮಾನತೆಯ ಸೂರ್ಯೋದಯ ವನ್ನು ಕಾಯಬಹುದೇ? ಸಾಮಾಜಿಕ ನ್ಯಾಯ‌ ನಿಶೇಧಿಸಲ್ಪಟ್ಟವರಿಗೆ ಏನು ಸಮಾನತೆ?
ಸಾಯಿರಾ ಬಾನುಗೆ ನ್ಯಾಯ ಕೊಡಲು ಮುಂದಾದ ಸರಕಾರ ಗುಂಪು ಮತ್ತು ಕೋಮು ಹತ್ಯೆಯ ಸಂತ್ರಸ್ತ ವಿಧವೆಯರಿಗೆ ನ್ಯಾಯ ಕೊಡಬಹುದೇ?

ವರದಿ ಅಲ್ಅಹ್ಸನ್ ಮಾಸಿಕ

No comments:

Post a Comment