ನಕಲಿ ದೇವ ಮಾನವರ ವಂಚನೆಯನ್ನು ಬುಡ ಸಮೇತ ಕಿತ್ತೆಸೆದ ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಂ

ಇಪ್ಪತ್ತನಾಲ್ಕರ ಹೆಣ್ಣು ಮಗಳು ಕಿಟಕಿಯ ಮೂಲಕ ನನ್ನನ್ನು ರಕ್ಷಿಸಿ ಎಂದು ಸ್ವಂತ ಮನೆಯಿಂದ ಕೂಗಿ ಹೇಳುವ ಸ್ಥಿತಿಯಲ್ಲಿ ‌.....?

ಭಾಷಣ ಮೌಲಾನಾ ಯು ಕೆ ಅಬ್ದುಲ್ ಅಝೀಝ್ ದಾರಿಮಿ 

ಬಕ್ರೀದ್ ಸಂದೇಶ


ಹಝ್ರತ್ ಇಬ್ರಾಹಿಂ(ಅ)ಮತ್ತು ಕುಟುಂಬದ ತ್ಯಾಗ, ಬಲಿದಾನಗಳ ಮಹೋನ್ನತ ಅಧ್ಯಾಯದ ಸ್ಮರಣೆ ಯಾಗಿದೆ ಈದುಲ್ ಅಝ್ಹಾ.
ಅಸ್ತಮಿಸುವ ನಕ್ಷತ್ರ, ಚಂದ್ರ,ಸೂರ್ಯ ಹಾಗೇ ಮಾನವ ನಿರ್ಮಿತ ರೂಪಗಳು ಹೆಚ್ಚೇಕೆ ಮಾನವನೇ ದೇವನಾಗಲಾರನೆಂಬ ಸತ್ಯವನ್ನು ಆಧಾರ ಸಮೇತ ಜಗತ್ತಿಗೆ ಸಾರಿದ ಏಕ ವ್ಯಕ್ತಿ ಸೇನೆಯ ಸಾಮ್ರಾಟ್ ಹಝ್ರತ್ ಇಬ್ರಾಹಿಂ (ಅ).
ದೇವದೂತರೆಲ್ಲರೂ ಹೇಳಿದ್ದು ನಾವು ಅಲ್ಲಾಹನ ದಾಸರು.ಯಾರೂ ದೇವನೆಂದೋ ದೇವ ಮಾನವನೆಂದೋ ವಾದಿಸಲಿಲ್ಲ.
ಎಲ್ಲಾ ಪ್ರವಾದಿಗಳು ಪ್ರತಿಪಾದಿಸಿದ ಕಾರ್ಯ ಏಕ ದೇವ ಸಿದ್ದಾಂತ ವಾಗಿತ್ತು.
ಅತ್ಯಾಧುನಿಕತೆಯ ಈ ಕಾಲದಲ್ಲೂ ಚೋಟಾ ಮನುಷ್ಯ ದೇವ ಮಾನವನೆಂದು ಪ್ರತಿ ಬಿಂಬಿಸೋದು ಅಸಹ್ಯವಾಗಿ ಕಾಣುತ್ತದೆ.ದಿನಕ್ಕೆ ಹದಿನೇಳು ಲಕ್ಷದಷ್ಟು ಸಂಪಾದನೆ ,ಐದು ಲಕ್ಷದಷ್ಟು ಅನುಯಾಯಿಗಳು ರಾಜಕೀಯದ ಬಿಗ್ ಡೀಲುಗಳು ?ನಡೆಸುವ ಗುರ್ಮಿತ್ ಬಾಬ ಕಡೆಗೂ ಜೈಲು ಪಾಲಾಗಿದ್ದು ಐತಿಹಾಸಿಕ ಸತ್ಯ.ಆ ಮೂಲಕ ಕೆಲವರ
ಅರಮನೆಯಗಳು ದೇವ ಆಸ್ಥಾನ ಆಗಿರದೇ ಅದು ಬರೀ ಮಾಂಸ ಉಪಚಾರದ ಕೋಣೆಗಳು ಮಾತ್ರವಾಗಿತ್ತೆಂದು ಬೆಳಕಿಗೆ ಬಂತು.ಹಾಗೇ ದೇವ ಮಾನವ ಮಾನ ಕಳೆದು ಮಾನವ ನ್ಯಾಯಾಲಯದಲ್ಲಿ ಅತ್ತು ಕುಸಿದು ಬಿದ್ದ.
ಎಲ್ಲಾ ರೀತಿಯ ಸಂಕಷ್ಟಗಳನ್ನು ಎದುರಿಸಿ ಇಬ್ರಾಹೀಂ (ಅ) ಜಯಶ್ರೀ ಯಾದರು.ಸಮಾಜ ಮತ್ತು ಸಾಮ್ರೂಜ್ಯ ಎದುರಾದರೂ  ಎದೆಗುಂದ‌‌‌‌‌‌‌‌‌‌‌‌‌‌‌ದೆ ಎದುರಿಸಿದರು.ಊರನ್ನು ಬಿಟ್ಟು ಮಡದಿ ಮಕ್ಕಳನ್ನು ತ್ಯಜಿಸಿ ಅಗ್ನಿಕುಂಡಗಳನ್ನೇ ಗೆದ್ದು ಪುತ್ರ ಕುತ್ತಿಗೆಗೆ ಖಡ್ಗವನ್ನಿಡಲು ಮುಂದಾದರು.ಇದು ಅಗ್ನಿ ಪರೀಕ್ಷೆ ಎಂದು ಕುರಾನ್ ಹೇಳಿತು.ಎಲ್ಲಾ ಪರೀಕ್ಷೆಗಳನ್ನು ಜಯಿಸದಾಗ ಜಗತ್ತಿಗೆ ಇಬ್ರಾಹೀಮರನ್ನು ಅಲ್ಲಾಹನು  ನಾಯಕನನ್ನಾಗಿಸಿದ.
ಇಬ್ರಾಹಿಮ್  (ಅ) ರನ್ನು ಅನುಸರಿಸಿದವರಿಗಿಂತ ಉತ್ತಮ ಧರ್ಮನಿಷ್ಟೆ  ಇರುವವ ಯಾರು ಎಂದು ಪ್ರಶ್ನಿಸಿದ.
ಒಮ್ಮೆ ಇಬ್ರಾಹೀಂ (ಅ)ಹೇಳುತ್ತಾರೆ ನಾನು ಅಗ್ನಿ ಕುಂಡ ದಲ್ಲಿದ್ದ ಏಳು ದಿನಗಳು ನನ್ನ ಜೀವನದ ಅತ್ಯಂತ ಶ್ರೇಷ್ಠವಾದ ಕಾಲವಾಗಿತ್ತು.ಹಾಗಾದರೆ ಅಧರ್ಮದ ವಿರುದ್ಧ ಹೋರಾಡುವ ಬದುಕು ಮಹೋನ್ನತ ವಾದುದು ಎಂದಾಗಿದೆ.
ಇದು ಇಂದಿಗೂ ಪ್ರಸ್ತುತ ವಾಗುತ್ತಲಿದೆ.ಜನರನ್ನು ಬೀದಿಗಳಲ್ಲಿ ಹೊಡೆದು ಕೊಲ್ಲುವುದು,ಆಸ್ಪತ್ರೆಯಲ್ಲಿ ನೂರಾರು ಮಕ್ಕಳು ಪ್ರಾಣ ಬಿಡೋದು ಚರ್ಚೆಯಾಗದೇ ತ್ರಿವಳಿ ತಲಾಕ್ ದೊಡ್ಡ ಸುದ್ದಿಯಾಗುತ್ತದೆ.ಕ್ರಿಕೆಟಿಗನೊಬ್ಬಕ್ರಿಕೇಟ್ ಅಂಗಳದಲ್ಲಿ ಮಕಾಡೆ ಮಲಗಿದ ಸುದ್ದಿ ಬಿತ್ತರವಾಗುವಾಗ ಬಾಂಗ್ಲಾ ಗಡಿಯಲ್ಲಿ ಮ್ಯಾನ್ಮಾರ್ ಮಣ್ಣಿನಲ್ಲಿ  ನೋಬೆಲ್ ಸೂಕಿಯ ದೇಶದಲ್ಲಿ, ಶಾಂತಿ ದೂತ ಬುದ್ಧನ ಅನುಯಾಯಿಗಳು ಜನರನ್ನು ಜೀವಂತ ಹೂಳುತ್ತಾರೆ,ಸುಡುತ್ತಾರೆ,ಕೈಕಾಲುಗಳನ್ನು ನಿರ್ಧಯವಾಗಿ ಕತ್ತರಿಸುತ್ತಾರೆ.ನಗ್ನವಾಗಿ ಮರಗಳಿಗೆ ಆಣಿ ಹೊಡೆದು ನೇತು ಹಾಕುತ್ತಾರೆ.ಅಸಂಖ್ಯಾತ ಜೀವಗಳು ಗದ್ದೆ ಪೊದೆಗಳಲ್ಲಿ ಪ್ರಾಣ ಬಿಟ್ಟರೆ.ಮತ್ತೆ ಅನೇಕ ಶವಗಳು ಬರ್ಮಾ ತೀರದಲ್ಲಿ ರಾಶಿ ಬೀಳುತ್ತದೆ.ಉಳಿದವರು ಇರೋ ಪ್ರಾಣ ಕೈಯಲ್ಲಿ ಹಿಡಿದು ಪಲಾಯನ ಮಾಡುತ್ತಿದ್ದರೆ ಎಲ್ಲಿಗೆ ಯಾಕೆ ?ಎಂದು ಗೊತ್ತುಗುರಿ ಇಲ್ಲ.ಕಡಲು ಸೇರಿದ ಅನೇಕರು ಮೀನಿಗೆ ಆಹಾರವಾಗಿಯೂ ಬಲಿಯಾಗುತ್ತಿದ್ದಾರೆ.ಕತ್ತರಿಸಲ್ಪಟ್ಟ ರುಂಡವನ್ನು ಕೆಲವರು ಹಿಡಿದು ಅಳುತ್ತಿದ್ದರೆ ಮತ್ತೆ ಕೆಲವರು ಛಿದ್ರ ಛಿದ್ರವಾದ ದೇಹದ ಮುಂದೆ ಅಸಹಾಯಕತೆ ಯ ಕಣ್ಣೀರನ್ನು ಸುರಿಸುತ್ತಿದ್ದಾರೆ
ಆದರೆ ಇದ್ಯಾವುದನ್ನು ಆಲಿಸಲು ಜಗತ್ತಿಗೆ ಕಿವಿಯಿಲ್ಲ.ಅದರೆ ಐಸಿಸ್ ಎಂಬ ಕಟ್ಟಾ ಮುಸ್ಲಿಂ ವಿರೋಧಿ ದುಷ್ಟಕೂಟವು ಮಸ್ಲಿಮರನ್ನು ಮತ್ತು ಮುಸ್ಲಿಂ ರಾಷ್ಟಗಳನ್ನು ಪವಿತ್ರ ಮದೀನವನ್ನು  ಟಾರ್ಗೇಟ್ ಮಾಡಿ ವಿದ್ವಂಸಕ ಕ್ರೌರ್ಯ ಮೆರೆಯತ್ತಾ ಇದ್ದರೂ ಅದನ್ನು ಮಸ್ಲಿಮರ ಮೇಲೆಯೇ ಹೊರಿಸಲಾಗುತ್ತಿದೆ.ಮತ್ತು ಹಾಗೇ ಚಿತ್ರಿಸಲಾಗುತ್ತಿದೆ.ಅದೇ ರೀತಿ
ನಮ್ಮಲ್ಲಿಯೂ ಸುಸೂತ್ರವಾಗಿ ಮುಸ್ಲಿಂ ವಿರುದ್ಧ ಕಾರ್ಯ ತಂತ್ರ ಜರುಗುತ್ತಲೇ ಇದೆ.ಹಿಂದೆ ರಾಜರುಗಳ ಕಾಲದಲ್ಲಿ ನಡೆದಿತ್ತೆಂಬ ಕ್ರೌರ್ಯ ಕ್ಕೆ ಇಂದಿನ ಕಾಲದಲ್ಲಿ ಪ್ರತಿಕಾರ ತೀರಿಸಲು ಮುಂದಾಗುವ ಮತಾಂಧರು,ಶಿಕ್ಷಣವನ್ನೂ ಮತೀಯ ವಿಷದಲ್ಲಿ ಮುಳುಗಿಸಲು ಹವಣಿಸುವವರು,ಧಾರ್ಮಿಕ ಸ್ವಾತಂತ್ರ್ಯ ವನ್ನೂ ಕಿತ್ತೆಸೆಯಲು ಕುತಂತ್ರ ಹೆಣೆಯುವ ಕಂತ್ರಿಗಳು, ಎಲ್ಲರೂ ಸೇರಿ ಮುಸ್ಲಿಮ್ ಸಮುದಾಯವನ್ನು ದುರ್ಬಲಗೊಳಿಸುವುದರಲ್ಲೇ ಮುಳುಗಿದ್ದಾರೆ.ಅದರ ಭಾಗವಾಗಿದೆ ಆಗಾಗ ಏಕನೀತಿ ಕಾನೂನಿನ ಅಪಸ್ವರದ ದ್ವನಿ ಕೇಳಿ ಬರುವುದು. ಅದು ಇದೀಗ ತ್ರಿವಳಿ ಹಾವಳಿ ಮೂಲಕ ಮತ್ತೆ ಸುದ್ದಿಯಾಗಿದೆ.ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಅಪರಾಧಿಯನ್ನಾಗಿಸಲು ಬಳಸುವ ಇನ್ನೊಂದು ಆಪಾದನೆ ಯಾಗಿದೆ ಲವ್ ಜಿಹಾದ್ ?
ಅನ್ಯ ಹೆಣ್ಣಿನ ಬಗ್ಗೆ ಅಪಾರ ಎಚ್ಚರಿಕೆ ವಹಿಸಿದ ಧರ್ಮವಾಗಿದೆ ಇಸ್ಲಾಂ.ಸ್ವಧರ್ಮಿಯ ಹೆಣ್ಣಿನೊಂದಿಗೂ ಒಂಟಿಯಾಗುವುದನ್ನು ಅನೈತಿಕವೆಂದು ಅದು ವಿಧಿಸುತ್ತದೆ.ಕಣ್ಣೆತ್ತಿ ನೋಡುವುದನ್ನು ಅನಾಚಾರವಾಗಿ ಕಾಣುತ್ತದೆ.ಸ್ವಂತ ಗಂಡನ ಸಹೋದರರೊಂದಿಗೂ ಇದನ್ನು ನಿಶೇಧಿಸುತ್ತದೆ.ಅದನ್ನು "ಮರಣ" ವೆಂದ ರಸೂಲರು ಅನ್ಯ ಹೆಣ್ಣಿನ ಕಡೆ ತಿರುಗಿ ನೋಟ ಬೀರುವುದು ಪಿಶಾಚಿನ ವಿಷಯುಕ್ತ ಬಾಣವೆನ್ನುತ್ತಾರೆ. ಮದುವೆ ಎಂಗೇಜ್ ಮೆಂಟ್ ನಡೆದ ಮೇಲೂ ಭಾವಿ ಪತ್ನಿಯಾಗುವವಳೊಂದಿಗೆ ಮಾತುಕತೆಯನ್ನು ನಿಶೇಧಿಸುತ್ತದೆ.
ದೇಹ ಮಚ್ಚಲು ಅವಕಾಶವಿಲ್ಲದ ,ಮೊಲೆಯುಣಿಸಲು ಹಕ್ಕು ಪಡೆಯಬೇಕಾದರೆ ತೆರಿಗೆ ಪಾವತಿಸಬೇಕಾದ ಹೆಂಗಸರಿಗೆ ಮಾನ ಮುಚ್ಚಲು ಅವಕಾಶ ಮಾಡಿಕೊಟ್ಟ ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ ಸ್ಮರಣೀಯ ರಾಗುತ್ತಾರೆ.

ಯಾವ ವಿಷಮ ಸ್ಥಿತಿಯಲ್ಲಿಯೂ ಅಪರಾಧವನ್ನು ಸಕ್ರಮ ಮಾಡುವ ಯಾವುದೇ ವಿಧಿ ಇಸ್ಲಾಮಿನಲ್ಲಿ ಇಲ್ಲ.ಹಾಗಿರುವಾಗ ಹೇಗೆ ಅನ್ಯ ಮತೀಯ ಹುಡುಗಿಯರನ್ನು ದುರುದ್ದೇಶದಿಂದ ವಂಚಿಸಲು ಸಾಧ್ಯ? ಅದೂ ಧರ್ಮದ ಹೆಸರಿನಲ್ಲಿ!
ಕಣ್ಣೂರಿನ ಎರಡು ಮಕ್ಕಳ ತಾಯಿಯನ್ನು ಪರ ಪುರುಷನ ಜೊತೆ ತೆರಳಲು ಕೋರ್ಟು ಅನುಮತಿಸುತ್ತದೆ.ಕಂದಮ್ಮಗಳು ತನ್ನ ಸಾರಿಯನ್ನು ಹಿಡಿದೆಳೆದಾಗಲೂ ಯಾರಿಗೂ ಅದು ಅಸಹ್ಯವಾಗಿ ಕಾಣಲಿಲ್ಲ.ಆದರೆ ವಿದ್ಯಾವಂತೆಯಾದ ಇಪ್ಪತ್ತನಾಲ್ಕರ ಹರೆಯದ ಹಾದಿಯ ಅನ್ನುವ ವೈದ್ಯೆ ಸ್ವಯಂ ಪ್ರೇರಿತಳಾಗಿ ಮತಾಂತರಗೊಂಡಿದ್ದೇನೆಂದು ಹೇಳುತ್ತಾಳೆ,ನಂತರ ಅದು ಸಂಬಂಧವಾಗಿ ಎಲ್ಲಾ ತಪಾಸಣೆಗೆ ಸಹಕರಿಸುತ್ತಾಳೆ,ಆದರೂ ಅರೇಂಜ್ಡ್ ಮದುವೆಯನ್ನು ರದ್ದುಮಾಡಿ ಹೆತ್ತವರ ಸುಪರ್ದಿಗೆ ಒಪ್ಪಿಸಲಾಗುತ್ತದೆ.ಅಲ್ಲಿಂದಲೂ ತನ್ನನ್ನು ಕಾಣಲು ಬಂದವರೊಂದಿಗೆ ಕಿಟಕಿ ಮೂಲಕ ಇಲ್ಲಿಂದ ನನ್ನನ್ನು ರಕ್ಷಿಸಿ ಎಂದು ಗೋಗರೆಯುತ್ತಾಳೆ.ಇದು ಡಿಜಿಟಲ್ ಇಂಡಿಯಾ ಎಂದು ಕರೆಯುವ ದೇಶದ ಸಂಪೂರ್ಣ ಸಾಕ್ಷರತೆ ಹೊಂದಿದ ಕೇರಳದ ಕಥೆ.
ಗೋವಿನ ಹೆಸರಲ್ಲಿ ನರಹತ್ಯೆಯನ್ನು ಸಕ್ರಮಗೊಳಿಸುವ ಮಂದಿ ಅರಿತಿರಬೇಕು ಇಸ್ಲಾಮಿನ ಪ್ರಾವಾದಿಯ ಸಂದೇಶ.
ನಲುವತ್ತರಷ್ಟು ಸತ್ಕರ್ಮಗಳಿವೆ ಅದರಲ್ಲಿ ಮಹೋನ್ನತವಾದದ್ದು ಒಬ್ಬ ಮುಸ್ಲಿಮನು ಹಸುವನ್ನು ಸಾಕಿ ಅದು ಹಾಲು ಕೊಡುವಷ್ಟು ಕಾಲ ಬಡವ ದರಿದ್ರನ ಮನೆಯಲ್ಲಿ ಬಿಟ್ಡು ನಂತರ ಹಿಂಪಡೆಯುವುದು (ಹಸಿವಿಗೆ ಏನೂ ಸಿಗದೇ ಇದ್ದಾಗ ಆ ಹಸುವಿನ ಹಾಲು ಕುಡಿದು ಅವರು ಹಸಿವು ನೀಗಿಸಲಿ ಎನ್ನುವ ಉದ್ದೇಶದಿಂದ)ಇದಕ್ಕೆ ಸ್ವರ್ಗ ಪ್ರತಿಫಲವಾಗಿರುತ್ತದೆ.

 ಇಸ್ಲಾಮಿನಲ್ಲಿ ಎಲ್ಲಾ ಹಂತದಲ್ಲೂ ಸಾಮಾಜಿಕ ಸೇವೆ ಮುಖ್ಯವಾಗುತ್ತದೆ.ವೃದ್ಧೆಯ ಭಾರವನ್ನು ಹೊತ್ತುಕೊಂಡು ನಡೆದ ಪ್ರವಾದಿ ಜನಸೇವೆಯನ್ನು ಸ್ವರ್ಗದ ದಾರಿ ಎಂದರು.ಖಲೀಪರು ಹಾಲು ಕರೆದು  ಅಸಹಾಯಕರಿಗೆ ಕುಡಿಸುವ, ವೃದ್ಧರನ್ನು ಆರೈಕೆ ಮಾಡುವ ಮಾದರಿ ತೋರಿದ್ದರು.
ದುರ್ಬಲರಿಗೆ  ತುತ್ತು ಅನ್ನ ಹೊತ್ತು ನಡೆದ,ರಾತ್ರಿಹೊತ್ತಲ್ಲಿ ಯಾರಿಗೂ ತಿಳಿಯದೇ ಬಡವರ ಮನೆಯಲ್ಲಿ ಆಹಾರದ ಗಂಟನ್ನು ಇಟ್ಟು ಬರುತ್ತಿದ್ದ ಪ್ರವಾದಿ ಕುಟುಂಬದವರ ಬಗ್ಗೆ ಚರಿತ್ರೆಯಲ್ಲಿ ಉಲ್ಲೇಖವಿದೆ.ರಿಫಾಯಿ (ರ) ರವರು ನಾಯಿಯನ್ನು ಪರಿಪಾಲಿಸಿದರೆ ,ಹಝ್ರತ್ ನಿಝಾಮುದ್ದೀನ್ (ರ)ರವರು ಬೀದಿಯಲ್ಲಿದ್ದವರ ಬಾಯಿಗೆ ರೊಟ್ಟಿ
ಇಟ್ಟು ಬರುತ್ತಾರೆ.
ಹಝ್ರತ್ ಇಬ್ರಾಹೀಂ(ಅ) ಒಂಟಿಯಾಗಿ ಆಹಾರ ಸೇವಿಸುತ್ತಿರಲಿಲ್ಲ.ಜೊತೆಯಾಗಿ ಯಾರನ್ನಾದರೂ ಸೇರಿಸಲು ಎರಡು ಕಿ.ಲೋ ಮೀಟರ್ ಹುಡುಕಿ ಹೋಗುತ್ತಿದ್ದರು.ಅದರಿಂದ ಅವರಿಗೆ ಅಬು ಲ್ಲೈಫಾನ್ ಎಂಬ ಕೀರ್ತಿಯೂ ಬಂದಿತ್ತು.ಒಂದು ದಿನ ಅವರು ಮಾಡಿದ ದಾನ ಬರೋಬ್ಬರಿ ಸಾವಿರ ಆಡುಗಳು! ಮನ್ನೂರಷ್ಟು ದನಗಳು!ನೂರರಷ್ಟು ಒಂಟೆಗಳು! ಇದನ್ನು ಕಂಡು ದೇವದೂತರು ಅಚ್ಚರಿಪಟ್ಟಾಗ ಅವರು ಹೇಳಿದ ಮಾತು  ದೈವ ಇಚ್ಚೆಗಾಗಿ ನಾನು ನನಗೊಂದು ಮಗನಿದ್ದರೆ ಅವನನ್ನೂ ಬಲಿ ಕೊಡುವೆ.ಅದರ ಸಾಕ್ಷಾತ್ಕಾರವಾಗಿತ್ತು ಮಗನ ಬಲಿಗೆ ಮುಂದಾದದ್ದು.ಆದರೂ ಹಝ್ರತ್ ಇಬ್ರಾಹಿಮರ (ಅ) ಆತ್ಮ ಸಮರ್ಪಣೆಯ ,ಮನೋ ಧೈರ್ಯ ದ ಮುಂದೆ ಬಲಿಕೊಡಬೇಕಾಗಲಿಲ್ಲ .ಬದಲಿಗೆ ಸ್ವರ್ಗದ ಆಡನ್ನು ಜಿಬ್ರೀಲ್ (ಅ) ಕರೆ ತಂದರು.ಅದು ಹಾಬೀಲ್ ಸಮರ್ಪಿಸಿದ ಕುರ್ಬಾನಿಯಾಗಿತ್ತು.
ಆದರೆ ಈ ಹಬ್ಬ ಯಾರಿಗೆ ಅನ್ವಯ?
ಅಧರ್ಮ ಚಟುವಟಿಕೆ ಮಾಡುವವರಿಗೋ?
ಅಮಲು ಪದಾರ್ಥ ಸೇವಕರಿಗೋ?
ಅನೈತಿಕವಾಗಿ ನಡೆದಾಡುವವರಿಗೋ?
ಅಕ್ರಮ ಸಂಪಾದನೆ ಮಾಡುವವರಿಗೋ?
ಅನ್ಯಾಯದ ಮಾರ್ಗದಲ್ಲಿ ನಡೆವವರಿಗೋ?
ಕಣ್ಣೆದುರಲ್ಲೆ ಮನೆ,ನೆಲೆ ಇಲ್ಲದೇ ಅನಾರೋಗ್ಯ ಪೀಡಿತ ಸಂಕಟ ಪಡುವವರನ್ನು ತಿರುಗಿನೋಡದ ಮಾನ್ಯರಿಗೋ?

ವರದಿ ಅಲ್ ಅಹ್ಸನ್ ಮಾಸಿಕ

No comments:

Post a Comment