ಅಭಿವ್ಯಕ್ತಿಯನ್ನು ಗುಂಡಿನ ಮೂಲಕ ಹತ್ತಿಕ್ಕಲಾಗದು.ಯಾಕೆಂದರೆ ರಕ್ತ ಅಧ್ಯಾಯವನ್ನು ವಿಚಾರಕ್ರಾಂತಿಯು ಎಲ್ಲಾ ಕಾಲದಲ್ಲಿ ಸೋಲಿಸಿದ್ದೇ ಇತಿಹಾಸ.

ಬಲವಂತವಾಗಿ ಹೇರಿದ್ದು ಹೆಚ್ಚು ಕಾಲ ಬಾಳದು

ಭಾಷಣ :ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು

ಅಭಿವ್ಯಕ್ತಿ ಯ ಬಗ್ಗೆ ಹೆಚ್ಚು ಗೌರವ ಕೊಡುವ ಧರ್ಮ ವಾಗಿದೆ ಇಸ್ಲಾಂ.
"ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ"(2:256) ಎಂದು ಕುರಾನ್ ಹೇಳುತ್ತದೆ.
ಸ್ವ ಇಚ್ಚೆಯಿಂದ ಅಲ್ಲದೇ ಯಾವನೇ ಒಬ್ಬನ ಇಸ್ಲಾಂ ಧರ್ಮ ಸ್ವೀಕಾರವನ್ನು ಪುರಸ್ಕರಿಸಲಾಗುವುದಿಲ್ಲ.ಇದು ಸಂಪೂರ್ಣ ಅಭಿವ್ಯಕ್ತಿ ಗೆ ಇಸ್ಲಾಂ ಕೊಟ್ಟ ಅಂಗೀಕಾರ ವಾಗಿದೆ.
ಪ್ರವಾದಿ( ಸ ) ರವರು ತನ್ನ ಚಿಕ್ಕಪ್ಪರಿಗೆ  ಅವರ ಕೊನೆಯ ಉಸಿರಿನ ತನಕ ಉಪದೇಶವನ್ನೇ ನೀಡಿದರು.ಹುದೈಬಿಯಾ ಸಂಧಾನ ಸಮಯ ವಿರೋಧಿ ಬಣದ ನಾಯಕ ಸುಹೈಲ್ ರವರು ಕಾರಾರು ಒಪ್ಪಂದ ಪತ್ರದಲ್ಲಿ *ಬಿಸ್ಮಿಲ್ಲಾಹಿ ಮತ್ತು ರಸೂಲುಲ್ಲಾ "ಎಂಬ ಎರಡು ಪದಗಳನ್ನು ತೆಗೆದು ಹಾಕಲು  ಹೇಳುತ್ತಾರೆ ಬದಲಿಗೆ ಬಿಸ್ಮಿಕಲ್ಲಾಹುಮ್ಮ ಎಂದೂ ಮುಹಮ್ಮದ್ ಬಿನ್ ಅಬ್ದುಲ್ಲಾಹಿ ಎಂದು  ಬರೆಯಲು ಅಪೇಕ್ಷಿಸುತ್ತಾರೆ.ಕಾರಣ ಇಷ್ಟೆ ನಿಮ್ಮನ್ನು ಅಲ್ಲಾಹನ ಪ್ರವಾದಿ ಎಂದು ನಾವು ಒಪ್ಪಿಕೊಂಡರೆ ನಮಗೂ ನಿಮಗೂ ಇರುವ ವ್ಯತ್ಯಾಸ ವೇನು? ಈ ಅಭಿಪ್ರಾಯವನ್ನು ರಸೂಲರು ಸಮ್ಮತಿಸುತ್ತಾರೆ. ಹಿಜರಿ ಆರನೆಯ ವರ್ಷ.ಅಹ್ಝಾಬ್ ಯುದ್ಧ ಬಳಿಕ ನಜಿದಿನ ಭಾಗಕ್ಕೆ ರಸೂಲರು ಸೈನ್ಯವನ್ನು ಕಳುಹಿಸುತ್ತಾರೆ.ಸೇನೆಯು ಮರಳಿ ಬರುವಾಗ ಬನೂ ಹನೀಫ್ ಗೋತ್ರ ನಾಯಕನನ್ನು ಸೆರೆ ಹಿಡಿದು ತರುತ್ತಾರೆ .ಪ್ರವಾದಿ ಕೆಳುತ್ತಾರೆ ಇದು ಯಾರೆಂದು ಗೊತ್ತಾ ?ಇದುವೇ ಸುಮಾಮತ್ ಇಬ್ನು ಉಸಾಲ್ !ಇವರನ್ನು ಚೆನ್ನಾಗಿ ಉತ್ತಮ ಸೆರೆಯಾಳಾಗಿ ನೋಡಿಕೊಳ್ಳಿ.ನಂತರ ತನ್ನ ಒಂಟೆಯ ಹಾಲನ್ನು ಕುಡಿಯಲು ನೆಬಿಯವರು ವ್ಯವಸ್ಥೆ ಗೊಳಿಸಿದ್ದರು.ಕೆಲ ದಿನಗಳ ಕಾಲ ಪ್ರವಾದಿಯವರು ಅವರಿಗೆ ಧರ್ಮದ ಬಗ್ಗೆ ಬೋಧನೆ ನೀಡುತ್ತಾರೆ.ಯಾವುದಕ್ಕೂ ಕಿವಿಗೊಡದ ಸುಮಾಮರನ್ನು ನೆಬಿಯವರು ಬಂಧನದಿಂದ ಮುಕ್ತಗೊಳಿಸುತ್ತಾರೆ.ಸೆರೆಯಿಂದ ಮುಕ್ತವಾದ ಸುಮಾಮ ಮಸೀದಿ ಬಳಿ ಇರುವ ಖರ್ಜೂರ ಮರ ಬಳಿ ಹೋಗಿ ಅಲ್ಲೆ ಇರುವ ನೀರಿನಲ್ಲ ಸ್ನಾನ ಮಾಡಿ ಸ್ವ ಇಚ್ಚೆಯಿಂದ ಮರಳಿ ಬಂದು ನಬಿ ಸಮ್ಮುಖದಲ್ಲಿ ಇಸ್ಲಾಮನ್ನು ಸ್ವೀಕರಿಸುತ್ತಾರೆ.

ಅನ್ಯವನ ಮೇಲೆ ಒತ್ತಡ ಹೇರದಂತೆ ಪ್ರತಿಯೊಬ್ಬರಿಗೂ ಅವರವರ ಅಭಿಮತವನ್ನು ಪ್ರಕಟಿಸುವ ಅವಕಾಶವಿದೆ.
ಅಂತಹಾ ಸ್ವಾತಂತ್ರ್ಯ ವನ್ನು ಪ್ರಬಲವಾಗಿ ಪ್ರತಿಪಾದಿಸಿದ ದೇಶ ನಮ್ಮದು.ಅದು ಸರ್ವರಿಗೂ ಸ್ವತಂತ್ರವಾಗಿ ಚಿಂತಿಸಲು ಮತ್ತು ಅದನ್ನು ಆಚರಿಸಲು ಅನುವು ಮಾಡಿ ಕೊಡುತ್ತದೆ. ದೇಶದ ಸಾಂವಿಧಾನಿಕ ಅಡಿಪಾಯವೂ ಅದಾಗಿದೆ.ಈ ಮಹತ್ವದ ಹಕ್ಕನ್ನು ಕಸಿದುಕೊಂಡು ಅಘೋಷಿತ ಸಿದ್ದಾಂತ ಗಳನ್ನು ಒಪ್ಪಿಕೊಂಡು ಸುಮ್ಮನಿರಬೇಕೆಂಬ ಸಂದೇಶಗಳನ್ನು ಕೆಲವು ಹಿತಾಸಕ್ತಿಗಳು ಬರ್ಬರತೆ ಯ ನೆರಳಲ್ಲಿ ಸಾರುತ್ತಿರುವುದನ್ನು ನಾವು ನೋಡುತ್ತಿದ್ದೇವೆ.ನಾರಿಯರಿಗೆ ವಿಶೇಷವಾದ ಸ್ಥಾನ ?ಪ್ರಾಣಿಗಳಿಗೆ ಪರಮವಾದ ಮಾನ ? ಅಭಿವ್ಯಕ್ತಿ ಗೆ ಕಾನೂನಿನ ರಕ್ಷೆ ?ಹೀಗಿದ್ದೂ ಪ್ರಾಣ ರಕ್ಷಾಣಾರ್ಥವಾಗಿ ಯಾವುದನ್ನು ಒಲ್ಲದ ಸವಕಲು ಜೀವವನ್ನು ನಿರ್ಭಯವಾಗಿ ಮನೆ ಬಾಗಿಲಲ್ಲೇ ಕೊಂದು ಹಾಕಲ್ಪಡುವಾಗ ನಷ್ಟವಾಗಿದ್ದು ಒಂದು ಜೀವ ಮಾತ್ರವಲ್ಲ. ಬದಲಾಗಿ ಈ ದೇಶದ ಜೀವಾಳವಾಗಿರು ಪ್ರಾಣವಾಯು ಅಭಿವ್ಯಕ್ತಿ ಯಾಗಿದೆ.ಈ ಗಾಯವು ಅಮೇರಿಕ,ಲಂಡನ್ ನಲ್ಲೂ ಚಲನವನ್ನುಂಟು ಮಾಡಿದೆ.ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದೆ.ಅನ್ಯಾಯ ಅಕ್ರಮವನ್ಮು ಎದುರಿಸುವ ಮನೋ ಧೈರ್ಯ ಬಲವಾಗುತ್ತಿದೆ.ಅದು ಸಾವಿರಾರು ಹೋರಾಟಗಾರರನ್ನು ಸೃಜಿಸಲಿದೆ.
ಜಗತ್ತಿನಲ್ಲಿ ನಡೆದ ಮಾನವ ಹತ್ಯಾಕಾಂಡದ ಅಧ್ಯಾಯಗಳು ಒಂದಲ್ಲ ಎರಡಲ್ಲ.ಸಾವಿರಾರು !ಅದರೆ ಎಲ್ಲಾ ದೌರ್ಜನ್ಯ ದಬ್ಬಾಳಿಕೆಯನ್ನು ಸಹಿಸಿ ಎದ್ದು ನಿಲ್ಲಲು ಮಾನವ ಸಮಾಜಕ್ಕೆ ಸಾಧ್ಯವಾಗಿದ್ದು ಸಮಾಜದೊಳಗೆ ಜಾಗ್ರತವಾಗುವ ವೈಚಾರಿಕತೆಯ ಫಲವಾಗಿದೆ.ಅದಿಲ್ಲದೇ ಹೋಗಿದ್ದರೆ ಜಗತ್ತಿನಲ್ಲಿ ದುಷ್ಟರೇ ತುಂಬಿಕೊಳ್ಳುತ್ತಿದ್ದರು.ಜಗತ್ತಿನಲ್ಲಿ ಇರುವ ಎಲ್ಲಾ ಅತ್ಯಾಧುನಿಕ ಆಯುಧಗಳನ್ನು ಸೋಲಿಸುವ ಪರಿಣಾಮಕಾರಿ ಆಯುಧ ವಿಚಾರ ಕ್ರಾಂತಿ.ಅದು ದುರುಳ ದುಷ್ಟರನ್ನು ಮಣ್ಣು ಮುಕ್ಕಿಸಿದೆ.ಬಲವಂತವಾಗಿ ಹೇರಲ್ಪಡುವ ಯಾವುದೇ ನಂಬಿಕೆ, ವಿಶ್ವಾಸಗಳು ಬಹುಕಾಲ ಉಳಿಯದು.ಖ್ಯಾತ ಚಿಂತಕರೋರ್ವರ ಮಾತು ಅಕ್ಷರಶಃ ಸತ್ಯ.
"ನಾನು ಬದುಕಿರೋ ತನಕ ನಿನ್ನ ಅಭಿಪ್ರಾಯವನ್ನು ಒಪ್ಪಲಾರೆ . ಆದರೆ ಅದನ್ನು ಪ್ರಕಟಗೊಳಿಸಲು ನಿನಗಿರುವ ಹಕ್ಕಿನ ರಕ್ಷಣೆಗೆ ದೇಹದ ಹನಿ ರಕ್ತ ಇರೋ ತನಕ ಹೋರಾಡುವೆ.
ಬಹು ರೀತಿಯ ಸಂಸ್ಕೃತಿಯೇ ಧರ್ಮ ವೆನ್ನುವವರು ಸಾಮಾನ್ಯ ಜನರ ಅಭಿವ್ಯಕ್ತಿಯನ್ನೇ ಕಸಿಯಲು ತಂತ್ರ ರೂಪಿಸುವುದು ಎಷ್ಡು ಸರಿ.?ಇಸ್ಲಾಮಿನ ತತ್ವ ಪ್ರಕಾರ ಬಲವಂತವಾಗಿ ಯಾರನ್ನೂ ಮುಸ್ಲಿಂ ಆಗಿ ಮಾಡಲಾಗದು ಕಾರಣ ಯಾವನೇ ಒಬ್ಬನನ್ನು ಮುಸಲ್ಮಾನ ಎಂದು ಪರಿಗಣಿಸಬೇಕಾದರೆ ಆತ ಸ್ವಯಂ ಪ್ರೇರಿತನಾಗಿ ನಂಬಿ,ವಿಶ್ವಾಸವಿರಿಸಿ ನಾಲಗೆಯ ಮೂಲಕ ಹೇಳಲೇ ಬೇಕಾಗುತ್ತದೆ.
ಹೀಗೆ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸಿದ ಧರ್ಮವಾಗಿದೆ ಇಸ್ಲಾಂ.
ಆಕಾರಣಗಳಿಂದಲೇ ಅರಬ್ ದೇಶಗಳಲ್ಲಿ ಇಂದಿಗೂ ನಲುವತ್ತು ಲಕ್ಷ ಕ್ಕಿಂತಲೂ ಅಧಿಕ ಮುಸ್ಲಿಮೇತರರು ಜೀವನ ಸಾಗಿಸುತ್ತಿದ್ದಾರೆ.
ಅದೇ ರೀತಿ ಮುಸಲ್ಮಾನರು ಆಡಳಿತ ನಡೆಸಿದ ಪ್ರದೇಶಗಳಲ್ಲಿ ಶತಶತಮಾನಗಳಲ್ಲಿ ಪರಮತ ಸಹಿಷ್ಣುತೆಯ ಉದಾತ್ತ ಮಾದರಿ ಉಳಿದಿದೆ.ಅದೇ ಕಾರಣಕ್ಕಾಗಿ ಭಾರತವೆಂಬ ಬ್ರಹತ್ತಾದ ಸಮಗ್ರವಾಗ ಧರ್ಮ ನಿರಪೇಕ್ಷ ಸಂವಿಧಾನವನ್ನು ಮುಸಲ್ಮಾನರು ಎದೆಗಪ್ಪಿಕೊಂಡು ಗೌರವಿಸುತ್ತಾರೆ.ಎಲ್ಲಿ ಯಾರು ಪರರ ಅಭಿವ್ಯಕ್ತಿ ಯನ್ನು ಗೌರವಿಸುವುದಿಲ್ಲವೋ ಅಲ್ಲಿ ಗುಲಾಮತನದ ಮತ್ತು ಜಾತಿ ಬೇಧ ದ ಸಂಹಾರ ನಡೆಯುತ್ತದೆ.ಮ್ಯಾನ್ಮಾರ್ ನಲ್ಲಿ ನಡೆವ ಹತ್ಯಾಕಾಂಡ ಮತ್ತು ನಮ್ಮ ದೇಶದಲ್ಲಿ ನಡೆಯುವ ಅಸಹಿಷ್ಣುತೆಯ ಹತ್ಯೆಗಳು ಇದರ ಪರಿಣಾಮವಾಗಿದೆ.ದಲಿತ,ಅಲ್ಪಸಂಖ್ಯಾತ, ಮತ್ತು ವಿಚಾರವಾದಿಗಳ ಕೊಲೆಗಳು ಇದನ್ನು ಸಾಬೀತು ಪ‌ಡಿಸುತ್ತದೆ.

🌅 ವರದಿ ಅಲ್ ಅಹ್ಸನ್ ಮಾಸಿಕ

No comments:

Post a Comment