ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳು ಲೂಟಿಯ ಅಡ್ಡೆಗಳಾಗುತ್ತಿರುವುದು ಜಗತ್ತಿನ ದುರಂತ.


ಮಿತಿಮೀರಿದ ಅನ್ಯಾಯ ಪ್ರಕೃತಿಯ ಮಹಾ ವಿಕೋಪಕ್ಕೆ ಕಾರಣವಾಗಬಹುದು 

ಭಾಷಣ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು.

   ವರದಿ "ಅಲ್ ಅಹ್ಸನ್" ಮಾಸಿಕ

     ಹಿಜರಿ ಹೊಸ ವರ್ಷ ಇಂದಿನಿಂದ ಆರಂಭವಾಗಿದೆ.ಮುಹರ್ರಮ್ ಹಿಜರಿಯ ಆರಂಭ ತಿಂಗಳು. ಈ ತಿಂಗಳ ವಿಶೇಷತೆಯನ್ನು ಕುರಾನ್ ಮತ್ತು ಹದೀಸು ಗಳಲ್ಲಿ ಧಾರಾಳವಾಗಿ ಕಾಣಬಹುದು.ಪ್ರವಾದಿ (ಸ) ರವರು ಈ ‌ಮಾಸ ಅಲ್ಲಾಹನ ಮಾಸವಾಗಿರುತ್ತದೆ.ರಂಝಾನ್ ನಂತರ ಉಪವಸಕ್ಕೆ ಯೋಗ್ಯವಾದ ಶ್ರೇಷ್ಠ ಮಾಸ.ಇಮಾಮ್ ಬುಖಾರಿ ರ  ವರದಿ ಮಾಡಿದ (೨೯೫೮) ಹದೀಸು ಹೀಗಿದೆ.ಅಬೂ ಬಕರತ್ ಹೇಳುತ್ತಾರೆ. ಒಂದು ವರ್ಷ ಹನ್ನೆರಡು ತಿಂಗಳಾಗಿರುತ್ತದೆ.ಅದರಲ್ಲಿ ನಾಲ್ಕು ನಿಷಿದ್ಧ ತಿಂಗಳುಗಳಿವೆ.ಮೂರು ಕ್ರಮವಾಗಿ  ದುಲ್ ಖಅದ್ ದುಲ್ ಹಜ್ಜ್ , ಮುಹರ್ರಂ, ಜುಮಾದ ಮತ್ತು  ಶಾಬಾನ್ ಮಧ್ಯವಿರುವ ಮುಳರ್ ರ ರಜಬ್.
ನಿಮ್ಮ ಶರೀರಗಳನ್ನು ಆ ತಿಂಗಳುಗಳಲ್ಲಿ ಅಕ್ರಮಿಸಬೇಡಿ
ಈ ಆಯತ್ತಿನ ವ್ಯಾಖ್ಯಾನದಲ್ಲಿ ಇಬ್ನು ಅಬ್ಬಾಸ್ (ರ) ಹೇಳುತ್ತಾರೆ ಎಲ್ಲಾ ತಿಂಗಳುಗಳಲ್ಲಿಯೂ ಅಕ್ರಮಿಸಬೇಡಿ.ಪ್ರತ್ಯೇಕವಾಗಿ ಈ ನಾಲ್ಕು ತಿಂಗಳಲ್ಲಿ ಅಕ್ರಮವೆಸಗಬೇಡಿ ಕಾರಣ ಪುಣ್ಯಗಳಿಗೆ ಪ್ರತಿಫಲವೂ ಹೆಚ್ಚು ಹಾಗೇ ಪಾಪಗಳಿಗೆ ಶಿಕ್ಷೆಯೂ ಅಧಿಕವಾಗಿರುತ್ತದೆ.ಇದೇ ಅಭಿಪ್ರಾಯವನ್ನು ಇಮಾಮ್ ಖತಾದಃ (ರ) ಹೇಳುತ್ತಾರೆ ನಂತರ ಮುಂದುವರೆಸಿ,ಅಲ್ಲಾಹನು ತನ್ನ ಸೃಷ್ಟಿಯಲ್ಲಿ ಪ್ರತ್ಯೇಕವಾಗಿ ಕೆಲವನ್ನು ಆಯ್ಕೆಮಾಡಿದ್ದಾನೆ.
ಮಲಕ್ಕುಗಳಲ್ಲಿ ಮತ್ತು ಜನರಲ್ಲಿ ಪ್ರವಾದಿಗಳನ್ನು,ಮಾತುಗಳಲ್ಲಿ ಆತನ ಸ್ಮರಣೆ ಯನ್ನು, ಭೂಮಿಯಲ್ಲಿ ಮಸೀದಿಗಳನ್ನು,ಮಾಸಗಳಲ್ಲಿ ರಮ್ಝಾನ್ ಮತ್ತು ಯುದ್ಧ ನಿಶಿಧ್ದವಾದ ತಿಂಗಳನ್ನು,ದಿವಸಗಳಲ್ಲಿ ಜುಮಾ ದಿನವನ್ನು, ರಾತ್ರಿಗಳಲ್ಲಿ ಲೈಲತುಲ್ ಖದರ್ ರಾತ್ರಿಯನ್ನು ಗೌರವಿಸಿದ್ದಾನೆ.ಆದ್ದರಿಂದ ಅಲ್ಲಾಹನು ಗೌರವಿಸಿದ್ದನ್ನು ಗೌರವಿಸಿ.ಬುದ್ದಿ ಮತ್ತು ವಿವೇಕ ಇರುವವರು ಆತನು ಗೌರವಿಸಿದ್ದನ್ನು ಗೌರವಿಸುತ್ತಾರೆ.
ಕುರಾನ್ ಹೀಗೆನ್ನುತ್ತದೆ.
ಅಲ್ಲಾಹನ ಧರ್ಮ ಚಿನ್ಹೆ ಗಳನ್ನು ಗೌರವಿಸಿ ಅದು ಹೃದಯದ ‌ಭಯಭಕ್ತಿಯಾಗಿದೆ.
ಮುಹರ್ರಂ ತ್ಯಾಗ ಮತ್ತು ವಿಜಯದ ದೃಢತೆಯನ್ನು ನಮಗೆ ನೀಡುತ್ತದೆ.
 ನೀವು ಅಕ್ರಮ ಎಸಗಬೇಡಿ ಎನ್ನುವುದು ಈ ತಿಂಗಳ ಪ್ರತ್ಯೇಕವಾದ ಆಹ್ವಾನವಾಗಿದೆ.

ಕಾಲ ಎಷ್ಡು ಕೆಟ್ಟಿದೆ ಎಂದರೆ ಸ್ವಂತ ತಾಯಿ ತನ್ನ ವ್ಯಸನಿ ಮಗನ ಲೈಂಗಿಗ ಕಿರುಕುಳ ತಾಳಲಾಗದೇ ಐವತ್ತು ಸಾವಿರ ಸುಪಾರಿ ಕೊಟ್ಟು  ಮಗನನ್ನು ಸಾಯಿಸುತ್ತಾಳೆ.
ಸಚ್ಚಾ ದೇರಾ ಸಮುಚ್ಚಯದಲ್ಲಿ ಸಿಕ್ಕಿದ್ದು ಬರೋಬ್ಬರಿ ಆರುನೂರು ಮಾನವ ಅಸ್ತಿಪಂಚರಗಳು ?ಅದೂ ದೇವರ ಹೆಸರಿನಲ್ಲಿ?
ಇನ್ನು ಮ್ಯಾನ್ಮಾರ್ ಹೆಸರು ಕೇಳುವಾಗ ಎದೆ ನಡುಗುತ್ತದೆ.ಅಲ್ಲಿಯ ಅಲ್ಪಸಂಖ್ಯಾತ ಜನ ತಮ್ಮ ಜೀವವನ್ನು ರಕ್ಷಿಸಲಾಗದೇ ಏನು ಮಾಡಬೇಕೆಂದೂ ತಿಳಿಯದೇ ಅಲೆದಾಡುವ ಅವಸ್ಥೆಯಲ್ಲಿದ್ದಾರೆ.ಬುದ್ದ ಸನ್ಯಾಸಿಗಳ ಅಥವಾ ಸೇನೆಯ ಕೈಗೆ ಸಿಕ್ಕರೆ ಜೀವಂತ ಸುಡುತ್ತಾರೆ.ದೇಹವನ್ನೇ ಛಿದ್ರ ಛಿದ್ರಗೋಳಿಸುತ್ತಾರೆ.ಮಣ್ಣಿನಲ್ಲಿ ಜೀವಂತ ಹೂಳುತ್ತಾರೆ. ರಕ್ಷಣಾತ್ಮಕವಾಗಿ ಓಡುತ್ತಾ ಜನರಿಂದ ತಪ್ಪಿಸಿಕೊಂಡರೆ ಒಂದೋ ನಫಿ ನದಿಗೆ ಬಿದ್ದು ಸಾಯಬೇಕು! ಅಥವ ಕಡಲಿಗೆ ಬೀಳಬೇಕು, ಕಡಲಿಗೆ ಬಿದ್ದರೆ ಒಂದೋ ಕಡಲುಗಳ್ಳರ ಸೆರೆ! ಇಲ್ಲವೇ ದೈತ್ಯ ಮೀನುಗಳಿಗೆ ಆಹಾರ! ಇವೆಲ್ಲವನ್ನೂ ಮೀರಿ ದಾಟಿ ಕಾಡು ಹತ್ತಿದರೆ ವನ್ಯ ಮೃಗಕ್ಕೆ ಬಲಿಯಾಗಬೇಕು! ಎಲ್ಲಾ ಮುಗಿದು ಹತ್ತಿರದ ದೇಶದ ತೀರ ತಲುಪಿದರೆ  ಅಲ್ಲಿಯ ಸೇನೆಯು  ಗನ್ನು ಹಿಡಿದು ಗುರಿಯಿಟ್ಟು ಕಾಯತ್ತಿರುತ್ತದೆ! ಇವರನ್ನು ಜನ ಕರೆಯೋದು ಭಯೋತ್ಪಾದಕರು!

ಹೀಗೇ ಅನ್ಯಾಯ ಮುಂದುವರಿದರೆ ಗಂಡಾಂತರ ತಪ್ಪಿದ್ದಲ್ಲ.ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮಹಾ ದುರಂತಕ್ಕೆ ಜನ ತುತ್ತಾಗಬಹುದು.
ಕುರಾನ್ ಎಚ್ಚರಿಸಿತ್ತದೆ.
ಅಕ್ರಮಿಗಳಲ್ಲಿ ಕೆಲವರನ್ನು ಮತ್ತೆ ಕೆಲವರ ಮೇಲೆ ಅಧಿಕಾರ ಚಲಾಯಿಸುವಂತೆ ಮಾಡುವೆವು,ಆ ಮೂಲಕ ಅವರಿಂದಲೇ ಅತಿಕ್ರಮಿಗಳನ್ನು ನಾಶ ಮಾಡುವೆವು.(ತಪ್ಸೀರು ಇಬ್ನು ಕಸೀರ್ (೩/೯೨)ಇದೇ ಆಯತ್ತಿನ ವ್ಯಾಖ್ಯಾನ ತಫ್ಸೀರ್ ರಾಝಿ ಯಲ್ಲಿ  ಹೀಗೇ ನೋಡಬಹುದು.
ಆಡಳಿತ ಅಧಿಕಾರಿಗಳು ಅಕ್ರಮಿಗಳಾದರೆ ಅವರ ಮೇಲೆ ಅಂತಹಾ ಅಕ್ರಮಿಗಳನ್ನೇ ಅಧಿಕಾರಿಗಳನ್ನಾಗಿ ಅಲ್ಲಾಹನು ಮಾಡುತ್ತಾನೆ (ತಫ್ಸೀರು ರ್ರಾಝಿ ೧೩/೨೯೪)

ಇಮಾಂ ಶಾಫಿ (ರ) ಕವಿತೆಯ ಸಾಲು ಜಗತ್ಪ್ರಸಿದ್ಧ ವಾಗಿದೆ.
"ನೀನು ಬಲಿಷ್ಟನಾಗಿದ್ದರೆ  ಯಾರಿಗೂ ಅನ್ಯಾಯ ಮಾಡಬೇಡ" "ಅನ್ಯಾಯ ಅದರ ಅಂತಿಮ ಫಲ ದುಖಃದೆಡೆಗೆ ಮರಳುತ್ತದೆ.'

ಅನ್ಯಾಯ ಕೊನೆಯಾಗಬೇಕೆನ್ನುದು ಆಯತ್ತಿನ ಸಂದೇಶ. ಸದಾ ಕಾಲದಲ್ಲಿಯೂ ನ್ಯಾಯ ,ಶಾಂತಿ ನೆಲೆಯಾಗಬೇಕಾಗಿದೆ.
ಕೌತುಕವೇ‌ನೆಂದರೆ ನಮ್ಮ ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳೇ ಲೂಟಿಯ ಅಡ್ಡೆಯಾಗಿದೆ.
ನಾನು ಖ್ಯಾತ ಡಾಕ್ಟರರೊಬ್ಬರ ಅದ್ಭುತ ಭಾಷಣ ಕೇಳಿದೆ.ಅವರ ಮಾತು ಕೇಳಿ ನನಗೆ ಅಚ್ವರಿ ಮತ್ತು ಗಾಬರಿ! ಡಾಕ್ಟರುಗಳು ಯಮನ ತಮ್ಮಂದಿರಂತೆ! ಯಮ ಜೀವ ಮಾತ್ರ ತಕೊಂಡು ಹೋಗ್ತಾನೆ.ಆದರೆ ವೈದ್ಯ ಹಣವನ್ನೂ ಒಯ್ತಾನಂತೆ
ಡಾಕ್ಟರುಗಳು ನಿಮ್ಮನ್ನು ಮಂಗ ಮಾಡ್ತಾರೆ?
(ನನಗಿದು ಸರಿ ಎಣಿಸಿತು ಒಂದು ನಾರ್ಮಲ್ ಹೆರಿಗೆ ಬಿಲ್ ೭೫,೦೦೦/-?ಒಂದು ದಿನದ ಮಗುವಿನ ಮದ್ದಿನ ಮಾತ್ರ ಚಾರ್ಜು ೧೨೦೦೦/-)
 ಟೆಸ್ಟು ಮೇಲೆ ಟೆಸ್ಟು ಚಕ್ಕಪ್ಪ್ ಮೇಲೆ ಚಕ್ಕಪ್ಪು  ಯಾಕೆ ?ಹಸಿದಾಗ ತಿನ್ನು, ಬಾಯಾರಿದಾಗ  ಕುಡಿ, ತಲೆ ಮೇಲೆ ಆಕಾಶ ಬೀಳದಿದ್ದರೆ ಸಾಯೋ ತನಕ ಬದುಕುತ್ತಿ?"
(i eat when i am hungry, i drink when i feel thirsty, if heaven does'nt fell down i will live till i die)
ದೇಹದ ಕ್ರಿಮಿ ಕೀಟಗಳನ್ನು ಕೊಲ್ಲಬಾರದು. ಈ ಮದ್ದಿನಿಂದ ಅದು ಸತ್ತು ಹೋಗಿದೆ.ಹಿಂದೆ ನಾವು ಉದ್ದುದ್ದ ಹುಳ ನೋಡುತ್ತಿದ್ದೆವು.
ಈಗ ಕ್ರಿಮಿ ಮಾಡಲು ಮದ್ದು ತಯಾರಾಗಿದೆ. ಅದು ಹೊಸ ಕಂಡು ಹಿಡಿತ . ಬೇರೆಯೊಬ್ಬನ ಮಲ! ಅದರ ಹಳದಿ ತೆಗೆದು ಅಮೇರಿಕದಲ್ಲಿ ಐದು ಡಾಲರಿಗೆ ಕ್ಯಾಪ್ಸೂಲ್ ಮಾಡಿ ಮಾರಲಾಗುತ್ತದೆ.ನಾಯಿ ಹೋಟ್ಟೆ ನೋವಾದರೆ ಹುಲ್ಲು ತಿನ್ನುತ್ತದೆ.ಆ ಅರಿವು ನಾಯಿಗಿದೆ . ಕೊಬ್ಬರಿ ಎಣ್ಣೆ ಮೇಲೆ  ಕೂತರೆ ನೊಣದ ಕಾಲಲ್ಲಿರೋ ಕ್ರಿಮಿ ಸಾಯ್ತಿತ್ತು.ಈ ಅರಿವು ನಮಗೂ ನಮ್ಮ ತಾತಂದಿರಿಗೂ ಇತ್ತು .ಯಾವತ್ತು ನಾವು ಡಿಗ್ರಿ ಕೋರ್ಸು ಮಾಡಿದೆವೋ ಆಗ ಅದೆಲ್ಲಾ ಹೊರಟು ಹೋಯ್ತು!. ಕೊನೆಗೆ ಆ ಡಾಕ್ಟರು ಹೇಳಿದ್ದು ಆರೋಗ್ಯಕ್ಕೆ ಇರೋ ಏಕ ಮಾರ್ಗ ಯಾರನ್ನೂ ದ್ವೇಷಿಸಬೇಡ.ಎಲ್ಲರನ್ನೂ ಪ್ರೀತಿಸು. ನೀನು ಸುಖವಾಗಿರಲು ವರ್ಷದಲ್ಲಿ ಎರಡು ದಿನವನ್ನು ಮರೆಯಬೇಕು. ಒಂದು ನಿನ್ನೆ.ಮತ್ತು ನಾಳೆ. ನಿನ್ನೆಗೆ ಕೊರಗಬೇಡ. ನಾಳೆಗೆ ಸಾಯಬೇಡ.ಏನೂ ಆಗಲ್ಲ ಅಗೋದು ಆಗಿಯೇ ಬಿಡುತ್ತದೆ.
ಆ ಡಾಕ್ಟರ್ ಯಾರು ಗೊತ್ತಾ. ಮಂಗಳೂರಿನ ಖ್ಯಾತ ವೈದ್ಯ ಬಿ ಎಂ ಹೆಗ್ಡೆ.
ಕುರಾನ್ ಎಚ್ಚರಿಸುತ್ತದೆ.
"ಅಲ್ಲಾಹನ ಭಯಾನಕ ಶಿಕ್ಷೆ ಎರಗುವ ಮೊದಲು ಅಲ್ಲಾಹನ ಕಡೆ  ಮರಳಿ"
(ಅಝ್ಝುಮರ್ : ೫೪)

No comments:

Post a Comment